ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ತೆರೆ : ಭೇಟಿ ಕೊಟ್ಟವರೆಷ್ಟು.? ಹಣ ಸಂಗ್ರಹ ಎಷ್ಟು.?
ಹಾಸನ : ಹಾಸನಾಂಬೆ (Hasanamba) ದೇಗುಲ ಗರ್ಭಗುಡಿ ಮುಚ್ಚಲು ಕ್ಷಣಗಣನೆ ಶುರುವಾಗಿದೆ. 13ನೇ ದಿನವಾದ ಇಂದು ಕೂಡ ಸಾವಿರಾರು ಜನ ಮಳೆ ನಡುವೆ ಕಿಲೋ ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತು ಶಕ್ತಿದೇವತೆ ದರ್ಶನ ಪಡೆದಿದ್ದಾರೆ.
ಕೊನೆ ದಿನವಾದ ಇಂದೂ ಕೂಡ ಸ್ಯಾಂಡಲ್ ವುಡ್ ಮಂದಿ, ರಾಜಕಾರಣಿಗಳು ಸೇರಿ ಗಣ್ಯರ ದಂಡೇ ಹರಿದು ಬಂದಿತ್ತು.
ನಟ ಧ್ರುವಸರ್ಜಾ, ನಟಿ ಮಿಲನಾ ನಾಗರಾಜ್, ಸಚಿವ ರಾಮಲಿಂಗಾರೆಡ್ಡಿ, ಅವಧೂತ ಅರ್ಜುನ್ ಗುರೂಜಿ ದರ್ಶನ ಪಡೆದು ಪುನೀತರಾಗಿದ್ದಾರೆ.
ಹಾಸನಾಂಬೆ ಹುಂಡಿ ತುಂಬಿಸಿದ ಭಕ್ತಗಣ:
ಈ ಬಾರಿ ಬರೋಬ್ಬರಿ 26 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಟಿಕೆಟ್ ಮಾರಾಟದಿಂದಲೇ 22 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ 17 ಲಕ್ಷ 46 ಸಾವಿರ ಜನ ದೇವಿ ದರ್ಶನ ಪಡೆದಿದ್ರು. ಕಳೆದ ವರ್ಷ ಕೇವಲ 9 ಲಕ್ಷ 68 ಸಾವಿರ ರೂಪಾಯಿ ಸಂಗ್ರಹವಾಗಿತ್ತು.
ಒಟ್ಟು 13 ದಿನ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದ್ದು, ಇಂದು ಸಂಜೆ 7 ರಿಂದಲೇ ಸಾರ್ವಜನಿಕ ದರ್ಶನ ಬಂದ್ ಆಗಿದೆ. ಗರ್ಭಗುಡಿ ಮುಚ್ಚಿ ಸಂಜೆ 7 ರಿಂದ ತಾಯಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗುತ್ತಿದೆ. ಮತ್ತೆ ಮಧ್ಯರಾತ್ರಿ 12ಕ್ಕೆ ದೇಗುಲ ಓಪನ್ ಮಾಡಲಾಗುತ್ತದೆ. ಸ್ಥಳೀಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ . ಸಿದ್ದೇಶ್ವರ ಕೊಂಡ ಹಾಯುವ ಕಾರ್ಯಕ್ರಮ ಇರುತ್ತದೆ.
ದೀಪಹಚ್ಚಿ ಗರ್ಭಗುಡಿ ಬಂದ್ ಮಾಡಲಾಗುತ್ತೆ. ನಾಳೆ ಮಧ್ಯಾಹ್ನ 2ಕ್ಕೆ ಅಭಿಜಿನ್ ಮುಹೂರ್ತದಲ್ಲಿ ದೇಗುಲ ಬಂದ್ ಆಗಲಿದೆ. ಮುಂದಿನ ವರ್ಷದವರೆಗೂ ಹಚ್ಚಿದ ದೀಪ, ಅಲಂಕಾರದ ಹೂವು ಇಡ್ತಾರೆ. ಆದ್ರೆ ದೀಪ ನಂದುವುದಿಲ್ಲ, ಹೂವು ಬಾಡುವುದಿಲ್ಲ.
ಯಾವ ದಿನ ಎಷ್ಟು ಜನರಿಂದ ದರ್ಶನ.?
ಯಾವ ದಿನ ಎಷ್ಟು ಜನರು ದರ್ಶನ ಪಡೆದಿದ್ದಾರೆ ಅಂತ ನೋಡುವುದಾದರೆ..
1.ಅಕ್ಟೋಬರ್ 10 ರಂದು 58 ಸಾವಿರ ಜನ.
2.ಅಕ್ಟೋಬರ್ 11 ರಂದು 2 ಲಕ್ಷದ 8 ಸಾವಿರ ಜನ.
3.ಅಕ್ಟೋಬರ್ 12 ರಂದು 1 ಲಕ್ಷದ 45 ಸಾವಿರ ಜನ.
4.ಅಕ್ಟೋಬರ್ 13 ರಂದು 2 ಲಕ್ಷದ 29 ಸಾವಿರ ಜನ.
5.ಅಕ್ಟೋಬರ್ 14 ರಂದು 2 ಲಕ್ಷದ 44 ಸಾವಿರ ಜನ.
6.ಅಕ್ಟೋಬರ್ 15 ರಂದು 2 ಲಕ್ಷದ 47 ಸಾವಿರ ಜನ.
7.ಅಕ್ಟೋಬರ್ 16 ರಂದು 2 ಲಕ್ಷದ 58 ಸಾವಿರ ಜನ.
8.ಅಕ್ಟೋಬರ್ 17 ರಂದು 3 ಲಕ್ಷದ 62 ಸಾವಿರ ಜನ.
9.ಅಕ್ಟೋಬರ್ 18 ರಂದು 2 ಲಕ್ಷದ 17 ಸಾವಿರ ಜನ.
10.ಅಕ್ಟೋಬರ್ 19 ರಂದು 1 ಲಕ್ಷದ 27 ಸಾವಿರ ಜನ.
11.ಅಕ್ಟೋಬರ್ 20 ರಂದು 2 ಲಕ್ಷದ 2 ಸಾವಿರ ಜನ.
12.ಅಕ್ಟೋಬರ್ 21 ರಂದು ಒಂದೂವರೆ ಲಕ್ಷ ಜನ.
13.ಅಕ್ಟೋಬರ್ 22 ರಂದು 1 ಲಕ್ಷದ 60 ಸಾವಿರ
ಜನ ಹಾಸನಾಂಬೆ ದರ್ಶನ ಪಡೆದಿದ್ದಾರೆ.
#LATEST #HASANAMBATEMPLE #DOORCLOSED #ADIDEVATHE #DARSHANAEND


