ShareChat
click to see wallet page
search
ನವರಾತ್ರಿಯ #ಎರಡನೆಯ_ದಿನ #ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪವಾಗಿದೆ. ಶಿವನನ್ನು ಪಡೆಯಲು ಕಠಿಣ ತಪಸ್ಸು ಮಾಡಿ ಬ್ರಹ್ಮಚಾರಿಣಿಯಾದಳು. ಇವಳಿಗೆ #ತಪಶ್ವಾರಿಣಿ ಎಂಬ ಹೆಸರೂ ಕೂಡ ಇದೆ. ಇವಳ ರೂಪ ಪೂರ್ಣ ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ಬಿಳಿಸೀರೆ ಧರಿಸಿ, ಕೈಯಲ್ಲಿ ಜಪಮಾಲೆ, ಕಮಂಡಲ, ಮತ್ತೊಂದು ಕೈಯಲ್ಲಿ ಜಪಮಾಲೆಯನ್ನು ಧರಿಸಿ, ಬ್ರಹ್ಮಚಾರಿಣಿ ರೂಪದಲ್ಲಿ ಇರುತ್ತಾಳೆ. ಇವಳ ಉಪಾಸನೆಯಿಂದ ತ್ಯಾಗ, ವೈರಾಗ್ಯ, ಸಂಯಮ ವೃದ್ಧಿಯಾಗುತ್ತದೆ. ಇಂದು #ಯೋಗಿಗಳ ಮನಸ್ಸು ಸ್ವಾದಿಷ್ಟಾನ ಚಕ್ರದಲ್ಲಿ ಸ್ಥಿತವಾಗುತ್ತೆ.ಈ ದೇವಿಯನ್ನು ಪೂಜೆ ಮಾಡಿದರೆ ಸ್ವಚರಿತ್ರೆಯ ಪ್ರೇರಣೆ ಮತ್ತು ಬ್ರಹ್ಮಜ್ಞಾನ ಸಿಗುತ್ತದೆ. ಶಿವನನ್ನು ಮದುವೆಯಾಗಬೇಕೆಂದು ಬಯಸಿದ ಬ್ರಹ್ಮಚಾರಿಣಿ ದೇವಿಯು ಹಲವಾರು ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾಳೆ. ಮೊದಲು ಆಕೆ ಕೇವಲ ಹಣ್ಣುಗಳನ್ನು ಮಾತ್ರ ತಿಂದರೆ ಬಳಿಕ ಒಣಗಿದ ಬಿಲ್ವಪತ್ರೆಯ ಎಲೆಗಳನ್ನು ಸೇವಿಸುತ್ತಾಳೆ. ಅಂತಿಮವಾಗಿ ಸಂಪೂರ್ಣ ಆಹಾರವನ್ನು ತ್ಯಜಿಸಿ ತಪಸ್ಸಿನಲ್ಲಿ ಧಾನ್ಯಳಾದ ಬ್ರಹ್ಮಚಾರಿಣಿ ದೇವಿಯ ತಪಸ್ಸಿಗೆ ಒಲಿದ ಬ್ರಹ್ಮನು ಪ್ರತ್ಯಕ್ಷನಾಗಿ ಶಿವನನ್ನು ಮದುವೆಯಾಗು ಎಂದು ವರ ನೀಡುತ್ತಾನೆ. ನವರಾತ್ರಿ ದಿನದ ಬಣ್ಣ ಕಿತ್ತಳೆಯಾಗಿದೆ. ಕಿತ್ತಳೆ ಬಣ್ಣದ ದಿರಿಸನ್ನು ನೀವು ಈ ದಿನ ತೊಟ್ಟುಕೊಳ್ಳಬಹುದಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ. ಬ್ರಹ್ಮಚಾರಿಣಿ ದೇವಿ ಮಂತ್ರ : ದಾದಹಾನ ಕರ್ಪದಮಅಭಯಾಮಸ್ಕಮಲ ಕಾಮದಲು ದೇವಿ ಪ್ರಸಿದತು ಮಯಿ ಬ್ರಹ್ಮಚಾರಿಣಿಯಂತಮ.! 🚩🙏. #ನವರಾತ್ರಿ2025 #ವಿಶ್ವಗುರು_ಭಾರತ 🙏🚩 #ಮಹಾರಕ್ಷಕ್ Maharakshak🇮🇳🇮🇳🇮🇳 ##ಕೊಹಿನೂರ್ #ಮಹಾರಕ್ಷಕ್ #ಕೊಹಿನೂರ್ #KohiNoor
ಮಹಾರಕ್ಷಕ್ Maharakshak🇮🇳🇮🇳🇮🇳 - ಬ್ರಹ್ಮ ಚಾರಿಣಿ DAY2 ನವರಾತ್ರಿಯ ಎರಡನೆ ದಿನ chanduhort_1233  Chandrashekhar Azad Chandrashekhar Azad ಬ್ರಹ್ಮ ಚಾರಿಣಿ DAY2 ನವರಾತ್ರಿಯ ಎರಡನೆ ದಿನ chanduhort_1233  Chandrashekhar Azad Chandrashekhar Azad - ShareChat