ShareChat
click to see wallet page
search
#ಕರುನಾಡುನಮ್ಮ ಬಂಗಾರದ ಬೀಡು #ನಾಗಲಮಡಿಕೆ_ಸುಬ್ರಹ್ಮಣ್ಯ_ಸ್ವಾಮಿ- ಆದಿ ಸುಬ್ರಹ್ಮಣ್ಯ, ಮಧ್ಯ ಸುಬ್ರಹ್ಮಣ್ಯ ಮತ್ತು ಅಂತ್ಯ ಸುಬ್ರಹ್ಮಣ್ಯ ಈ ಮೂರು ಸುಬ್ರಹ್ಮಣ್ಯ ದರ್ಶನ ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ಕೃತಕ ನಕ್ಷತ್ರದ ಸಂದರ್ಭದಲ್ಲಿ ಒಂದೇ ದಿನದಲ್ಲಿ ದರ್ಶನ ಉತ್ತಮ ಫಲ ದೊರೆಯುವುದು ಎಂಬ ನಂಬಿಕೆ ಪಾವಗಡ ತಾಲ್ಲೂಕಿನ ಮತ್ತೊಂದು ಸುಪ್ರಸಿದ್ದವಾದ ಪವಿತ್ರ ಪುಣ್ಯಕ್ಷೇತ್ರ ನಾಗಲಮಡಿಕೆ. ಇಲ್ಲಿರುವ ಸುಬ್ರಮಣ್ಯ ದೇವಾಲಯ ತನ್ನದೇ ಆದ ವಿಶೇಷತೆ ಹಾಗೂ ಇತಿಹಾಸದಿಂದ ಅಪಾರ ಭಕ್ತ ಸಮೂಹವನ್ನು ದಕ್ಷಿಣ ಭಾರತಾದ್ಯಂತ ಹೊಂದಿದೆ. ಈ ದೇವಾಲಯದ ಸನಿಹದಲ್ಲೇ ಉತ್ತರ #ಪುನಾಕಿನಿ ನದಿ ಹರಿಯುತ್ತದೆ. ಅಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿ ಪ್ರಸಿದ್ಧಿ ಪಡೆದಿವೆ. #ತಿಪ್ಪಯ್ಯನದುರ್ಗ ಬೆಟ್ಟದ ತಪ್ಪಲಲ್ಲಿದ್ದು, ಸುತ್ತಲೂ ಬೆಟ್ಟ ಪ್ರದೇಶಗಳಿಂದ ಕೂಡಿದೆ. ಈ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಹಿಂದೆ ಇದಕ್ಕೆ '#ಪೂಜ್ಯಾರನ ಹಳ್ಳಿ' ಎಂದು ಹೆಸರಿತ್ತು. ಮತ್ತೊಂದು ಐತಿಹಾಸಿಕ ಹಿನ್ನೆಲೆ ಪ್ರಕಾರ, #ಗುಟ್ಟಕಿಂದಗೊಲ್ಲಪಲ್ಲಿ (ಕನ್ನಡದಲ್ಲಿ ಗುಡ್ಡದ ಕೆಳಗಿನ ಗೋಲ್ಲರಹಳ್ಳಿ) 1800-1990 ರ ತನಕ ಮನೆ ಕಟ್ಟಿದ ಕುರುಹು ಕಂಡು ಬರುತ್ತಿತ್ತು. ಒಂದು ಕಾಲದಲ್ಲಿ #ತಿಪ್ಪೇರುದ್ರಸ್ವಾಮಿ ಇಲ್ಲಿ ವಾಸ ಮಾಡಿದ್ದರು. #ಪಾಳೆಗಾರ_ತಿಪ್ಪನಾಯಕ ಆಳುತಿದ್ದರು. ಇಲ್ಲಿ ಪ್ರತಿವರ್ಷವು ರಥೋತ್ಸವ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಡಿಸೆಂಬರ್ ಜನವರಿ ಮಾಹೆಯಲ್ಲಿ ನಡೆಯುತ್ತವೆ. ಕರ್ನಾಟಕ ಆಂದ್ರಪ್ರದೇಶ ತಮಿಳುನಾಡಿನ ವಿವಿಧ ಭಾಗಗಳ ಭಕ್ತರನ್ನು ಹೊಂದಿರುವ ಈ ದೇವಾಲಯವು ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಮಂಗಳ ವನ್ನುಂಟು ಮಾಡುವ ಪುಣ್ಯಸ್ಥಳವಾಗಿದೆ. ಇಲ್ಲಿ ಭಕ್ತಾದಿಗಳಿಗೆ ನಾಗಪೂಜೆ, ನಾಗಪ್ರತಿಷ್ಠೆ ಮುಂತಾದ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಈ ದೇವಾಲಯವು ಪಾವಗಡದಿಂದ 18 ಕಿ.ಮೀ ದೂರದಲ್ಲಿದೆ. ನಾಗಲಮಡಿಕೆ ಜಾತ್ರಾ ಸಂದರ್ಭದಲ್ಲಿ ಹೆಂಜಲು ಎಲೆಯನ್ನು ಹೊತ್ತ ಭಕ್ತಾದಿಗಳು ಪಿನಾದಿನಿ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳು ಇಂದಿಗೂ ಹಾಗೇ ಇವೆ. #🙏ಕುಕ್ಕೆ ಸುಬ್ರಮಣ್ಯ🌸 #🙏 ಸುಬ್ರಮಣ್ಯ ಸ್ವಾಮಿ 🙏 #🙏ಓಂ ಶ್ರೀ ಸುಬ್ರಮಣ್ಯ ಸ್ವಾಮಿ 💐 #ಶ್ರೀ ಸುಬ್ರಮಣ್ಯ ಸ್ವಾಮಿ.
ಕರುನಾಡುನಮ್ಮ ಬಂಗಾರದ ಬೀಡು - ShareChat