#🔴BREAKING: ಕೋರ್ಟ್ ಆವರಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ🚨 ಥಾಣೆ: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್ಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ.ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್ಗಳು ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.ಕಾರಿನೊಳಗೆ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ ಮಹಿಳೆಗೆ ಕೇಕ್ನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಆಕೆಗೆ ತಿನ್ನಿಸಿ ಎಚ್ಚರ ತಪ್ಪಿಸಿ ಬಳಿಕ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಹೇಳಲಾಗಿದೆ. ಪ್ರಕರಣದ ಆರೋಪಿಗಳು ಯೂಟ್ಯೂಬರ್ ಎಂದು ಹೇಳಲಾಗಿದ್ದು, ಅವರ ವಿರುದ್ಧ ಈಗಾಗಲೇ ಸುಲಿಗೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.ಕಳೆದ ವರ್ಷ ಆಗಸ್ಟ್ 25 ರಂದು ಈ ಘಟನೆ ನಡೆದಿತ್ತು. ಪದೇ ಪದೇ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದ ನಂತರ, ಮಹಿಳೆ ಅಂತಿಮವಾಗಿ ಡಿಸೆಂಬರ್ 5 ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಮಾರು ಒಂದೂವರೆ ವರ್ಷದ ಹಿಂದೆ ಈ ಹಲ್ಲೆ ನಡೆದಿತ್ತು, ಆದರೆ ಆ ಮಹಿಳೆ ಭಯಭೀತಳಾಗಿದ್ದಳು ಮತ್ತು ಯಾರಿಗೂ, ತನ್ನ ಕುಟುಂಬದವರಿಗೂ ಸಹ ಹೇಳಿರಲಿಲ್ಲ. ಆದಾಗ್ಯೂ, ಕಳೆದ ತಿಂಗಳಿನಿಂದ, ಆರೋಪಿಗಳಲ್ಲಿ ಒಬ್ಬಾತ ಆಕೆಯನ್ನು ಮತ್ತೆ ಲೈಂಗಿಕಕ್ರಿಯೆಗೆ ಒತ್ತಾಯಿಸಿದ್ದ ಎಂದು ಆರೋಪಿಸಲಾಗಿದೆ. ಈ ನಿರಂತರ ಕಿರುಕುಳದ ನಂತರ, ಮಹಿಳೆ ಅಂತಿಮವಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್


