ಏನಾಗಿದೆ ನನಗೆ ಯಾಕೀಗಾಗಿದೆ
ಮನಸ್ಸು ಎಲ್ಲಿದೆ ನನ್ನ ಧ್ಯಾನವೆಲ್ಲಿದೆ
ಓಡುತ್ತಿರುವುದು ಮನಸ್ಸು ನಿನ್ನ ಹಿಂದೆಯೆ
ಹಿಡಿದು ನಿಲ್ಲಿಸು ಅದನ್ನು ಪ್ರೀತಿಯಿಂದಲೇ
ಕನಸುಗಾರನಾಗಿ ನನ್ನ ಮಾಡಿದೆ
ನಿರ್ಜೀವ ದೇಹಕೆ ಉಸಿರು ತುಂಬಿದೆ
ತಾಳಲಾರೆನು ನಿನ್ನ ಮರೆಯಲಾರೆನು
ನಿನ್ನ ಸೇರದೆ ಹೋದರೆ ಬದುಕಲಾರೆನು
ಪ್ರೀತಿ ಪ್ರೇಮ ಬರೀ ಭ್ರಮೆ ಎಂದು ಕೊಂಡೆನು
ನಿನ್ನ ಕಣ್ಣ ನೋಟದಿ ನಿಜವೆಂದು ಕಂಡೆನು
ಎಲ್ಲಿ ನೋಡಿದರು ನಿನ್ನ ಚಹರೆ ಕಂಡಿಹೆನು
ನನ್ನೆದೆ ಗೂಡಲಿ ಸ್ಥಿರವಾಗಿರುವೆ ನೀನು
#ಅವಳ ನೆನಪಲ್ಲಿ #ಮನದ ಮಾತು ಬರಹದಲ್ಲಿ #ಎರಡು ಹೃದಯಗಳು #ಮೌನ ಮನದ ಪ್ರತಿಬಿಂಬ #ನನ್ನ ಪ್ರಪಂಚ ❣️

