ShareChat
click to see wallet page
search
#💔ಸಿನಿಮಾ ಹಿರಿಯ ನಟಿ ನಿಧನ😭💔 ಕೋಲ್ಕತ್ತ: ಹಿರಿಯ ಬಂಗಾಳಿ ನಟಿ ಬಸಂತಿ ಚಟರ್ಜಿ (88) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಸಂತಿ ಚಟರ್ಜಿ ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹಲವು ತಿಂಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪಶ್ಚಿಮ ಬಂಗಾಳದ ಮೋಷನ್ ಪಿಕ್ಚರ್ ಆರ್ಟಿಸ್ಟ್ಸ್ ಫೋರಮ್ ವಕ್ತಾರರು ತಿಳಿಸಿದ್ದಾರೆ.ಐದು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಚಟರ್ಜಿ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 'ಥಾಗಿನಿ', 'ಮಂಜರಿ ಒಪೇರಾ' ಮತ್ತು 'ಅಲೋ' ಚಿತ್ರಗಳ ಮೂಲಕ ಚಟರ್ಜಿ ಜನಪ್ರಿಯತೆ ಪಡೆದಿದ್ದರು. 'ಭೂತು', 'ಬೋರೋನ್', 'ದುರ್ಗಾ ದುರ್ಗೇಶರಿ', 'ಗೀತಾ ಎಲ್‌ಎಲ್‌ಬಿ' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿಯೂ ಅವರು ಅಭಿನಯಿಸಿದ್ದರು. ಜತೆಗೆ, ರಂಗಭೂಮಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. #📰ಇಂದಿನ ಅಪ್ಡೇಟ್ಸ್ 📲 #👩ನಟಿಯರು #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
💔ಸಿನಿಮಾ ಹಿರಿಯ ನಟಿ ನಿಧನ😭💔 - ShareChat
00:10