ShareChat
click to see wallet page
search
#ಆಷಾಢ ಮಾಸ 2025 *ಆಷಾಡ ಮಾಸದ ವಿಶೇಷತೆಗಳು** ನಾಳೆ ದಿನಾಂಕ 26-6-2025 ರಿಂದ ಆಷಾಢ ಮಾಸ ಶುರುವಾಗುವುದು. ತನ್ನಿಮಿತ್ತ ಆಷಾಢ ಮಾಸದ ವಿಶೇಷತೆಗಳ ಬಗ್ಗೆ ತಿಳಿಸಲು ಈ ಲೇಖನ.*** *ಆಷಾಢ ಮಾಸದ ಮಹತ್ವಗಳೇನು? ಇದರ ಹಿಂದಿರುವ ಕಾರಣಗಳು.* ಹಿಂದೂ ಜ್ಯೋತಿಷ್ಯದ ಪ್ರಕಾರ ಇದು ಅಶುಭ ಮಾಸ. ಹೀಗಾಗಿ ಆಷಾಢ ಮಾಸ ಪ್ರಾರಂಭವಾದ ಬಳಿಕ ಮದುವೆ, ಗೃಹಪ್ರವೇಶ,ಉಪನಯನಾದಿ ಶುಭಕಾರ್ಯಗಳು, ವಾಹನ ಮತ್ತು ಜಮೀನು ಕೊಳ್ಳುವುದು,ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳನ್ನು ಯಾರೂ ಮಾಡುವುದಿಲ್ಲ. ಈ ವರ್ಷ ಜೂನ್ 26 ರಿಂದ ಆಷಾಢ ಮಾಸ ಆರಂಭವಾಗಿ,ಜುಲೈ 24 ಕ್ಕೆ ಮುಗಿಯುತ್ತದೆ. ಚಾಂದ್ರಮಾನದ ಆಚರಣೆ ಮಾಡುವವರಿಗೆ ಆಷಾಢ ಶೂನ್ಯ ಮಾಸ. ಸೌರಮಾನದವರಿಗೆ ಕರ್ಕಾಟಕ ಮಾಸ ಶೂನ್ಯ. ಈ ವರ್ಷ ತಾ 17-7-25 ಗುರುವಾರದಿಂದ ಆಷಾಢದ ಅಂತ್ಯ 24-7-25ರವರೆಗೂ ಕರ್ಕಾಟಕ ಮಾಸವೂ ಇರುತ್ತದೆ. ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಪೂಜೆ, ವ್ರತಗಳನ್ನು ಮಾಡಬಹುದು. ಆಷಾಢ ಅಶುಭ ಮಾಸ ಎನ್ನಲು ಹಲವಾರು ಕಾರಣಗಳು ಇವೆ. ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ, ಶುಭ ಕಾರ್ಯಗಳನ್ನು ಇಟ್ಟುಕೊಂಡರೆ ಬಂದು ಹೊಗುವ ಬಂಧು-ಬಳಗ, ಇಷ್ಟ-ಮಿತ್ರರಿಗೆ ಕಷ್ಟವಾಗುವುದು.ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಆಷಾಢದಲ್ಲಿ ಅತ್ತೆ- ಸೊಸೆ, ಅತ್ತೆ-ಅಳಿಯ ಒಟ್ಟಿಗೆ ಇರಬಾರದು ಎಂದು ಸಾಮಾನ್ಯವಾಗಿ ಹೆಂಡತಿಯನ್ನು ತವರುಮನೆಗೆ ಕಳಿಸುವರು. ಇದರ ಹಿಂದಿನ ಸಿದ್ಧಾಂತ ಬೇರೆ ಇದೆ. ಈ ಅವಧಿಯಲ್ಲಿ ಹೆಣ್ಣು ಗರ್ಭ ತಾಳಿದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬಿರುಬೇಸಿಗೆ ಕಾಲದಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ.ಬೇಸಿಗೆಯ ಅವಧಿಯಲ್ಲಿ ಆಕೆಗೆ ಹೆಚ್ಚು ತೊಂದರೆಯಾಗಬಹುದೆಂದು ಜನರು ಇದನ್ನು ಸಹ ನಂಬಲು ಆರಂಭಿಸಿದರು. ಮದುವೆಯಾದ ವರ್ಷದಲ್ಲಿ ಆಷಾಢದಲ್ಲಿ ಅತ್ತೆ ಸೊಸೆ ಬೇರೆ ಬೇರೆ ಇರುತ್ತಾರೆನ್ನುವುದಕ್ಕೆ ಸರಿಯಾದ ಕಾರಣ ಇಲ್ಲವಾದರೂ,ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು,ಇದರಿಂದ ಅವರಿಬ್ಬರಲ್ಲಿ ಕುಟುಂಬದ ಸಾಮರಸ್ಯ, ಅನ್ಯೋನ್ಯತೆಗೆ ಧಕ್ಕೆಯಾಗಬಹುದು, ಜಗಳಕ್ಕೆ ಕಾರಣ ಆಗಬಹುದು, ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು. *ಪೂಜೆಗಳು ಹಾಗೂ ವ್ರತಗಳು*. ಇದು ಆಷಾಢ ಮಾಸದ ಮತ್ತೊಂದು ಮಹತ್ವ. ಈ ಅವಧಿಯಲ್ಲಿ ಪುರಿ ಜಗನ್ನಾಥನ ರಥ ಯಾತ್ರೆ, ಚಾರ್ತುಮಾಸ ಯಾತ್ರೆ, ಪಾಲ್ಕಿ ಯಾತ್ರೆ, ದಕ್ಷಿಣಾಯನ ಪುಣ್ಯಕಾಲ, ಪ್ರಥಮೈಕಾದಶಿ (ಶಯನೈಕಾದಶಿ) ಪೂಜೆ ಹಾಗೂ ವ್ರತಗಳು ಆಷಾಢ ಮಾಸದಲ್ಲಿ ಜನಪ್ರಿಯವಾಗಿದೆ.ಆಸ್ತಿಕರು ಈ ಪೂಜೆ, ವ್ರತಗಳನ್ನು ಭಕ್ತಿಯಿಂದ ಆಚರಿಸುತ್ತಾರೆ. *ಶಯನೈಕಾದಶಿಯಂದು* ಶೇಷಶಾಯಿಯಾಗಿ ಯೋಗನಿದ್ರೆಯಲ್ಲಿ ಪವಡಿಸುವ ಶ್ರೀಮಹಾವಿಷ್ಣುವು ಕಾರ್ತಿಕ ಶುದ್ಧ ದ್ವಾದಶಿ *ಉತ್ಥಾನದ್ವಾದಶಿಯ* ದಿನ ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ವಿಷ್ಣುವಿನ ಯೋಗನಿದ್ರಾಕಾಲದ ಈ ನಾಲ್ಕು ತಿಂಗಳು ಯಾರೂ ಮಂಗಳಕಾರ್ಯವನ್ನು ಮಾಡುವುದಿಲ್ಲ. ಯುಗದ ಪ್ರಭಾವ ಮತ್ತು ಶುಭ ಮುಹೂರ್ತಗಳು ಕಡಿಮೆ ಇರುವುದರಿಂದ ಈಗ ಜನರು ವರ್ಷದ ಹನ್ನೆರಡು ತಿಂಗಳೂ ಮಂಗಳಕಾರ್ಯವನ್ನು ಮಾಡುತ್ತಿದ್ದಾರೆ,ಇದು ಬೇರೆ ಮಾತು. ಆಷಾಢ ಮಾಸದಲ್ಲಿಯೇ ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಉಪದೇಶಿಸಿದ್ದನು. ದೇವಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದ ಶುಕ್ಲ ಏಕಾದಶಿಯ ದಿನ.ಆ ದಿನವನ್ನು *ಭಾಗೀರಥೀ ಹಬ್ಬ* ಎಂದು ಅನೇಕರು ಆಚರಿಸುವರು. ಮಹಾಪತಿವ್ರತೆಯಾದ ಅತ್ರಿಮಹರ್ಷಿಯ ಪತ್ನಿ ಅನಸೂಯಾದೇವಿ ಈ ಮಾಸದ ನಾಲ್ಕು ಸೋಮವಾರ ಶಿವವ್ರತವನ್ನು ಮಾಡಿದ್ದಳು. ಅಮರನಾಥದ ಹಿಮಲಿಂಗದ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ. ಪ್ರಥಮ ಏಕಾದಶಿ ವ್ರತ, ಆರಾಧನೆ ಬರುವುದು ಆಷಾಢದಲ್ಲಿ. ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ.ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಈ ಆಚರಣೆ ನಡೆಯುತ್ತದೆ. ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು, ಇಂದ್ರನು ಗೌತಮರಿಂದ ಶಾಪ ಪಡೆದುದು, ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದಿದ್ದು ಆಷಾಢ ಮಾಸದಲ್ಲಿಯೇ. ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ದೀಪವನ್ನು ಹೊತ್ತಿಸಿಟ್ಟು *ಜ್ಯೋತಿರ್ಭೀಮೇಶ್ವರ* ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆಯ ದಿನ *ಗುರುಪೂರ್ಣಿಮೆ/ವ್ಯಾಸಪೂರ್ಣಿಮೆ* ಯನ್ನು ಎಲ್ಲಾ ಮಠ ಮಂದಿರಗಳಲ್ಲಿ ವ್ಯಾಸಪೂಜೆ ಮಾಡಿ ಅಂದಿನಿಂದ ಯತಿಗಳು, ಮಠಾಧಿಪತಿಗಳು ನಾಲ್ಕು ತಿಂಗಳ ಅವಧಿಯ ಚಾತುರ್ಮಾಸ್ಯ ವ್ರತವನ್ನು ಆರಂಭಿಸುತ್ತಾರೆ. ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನವಾದ *ಚಾಮುಂಡೇಶ್ವರಿಜಯಂತಿಯು* ಆಷಾಢ ಬಹುಳ ಸಪ್ತಮಿ ಈ ವರ್ಷ *ತಾ 17-7-25 ಗುರುವಾರ* ಬರುವುದು ಈ ಮಾಸದಲ್ಲಿಯೇ. ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು *ದೇವಶಯನಿ ಏಕಾದಶಿ,ಶಯನೈಕಾದಶಿ* (ದೇವರ ನಿದ್ರೆಯ ಏಕಾದಶಿ) ಎಂದು ಹೇಳುತ್ತಾರೆ. ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು *ಕಾಮಿಕಾ ಏಕಾದಶಿ* ಎನ್ನುತ್ತಾರೆ. *ಪೌರಾಣಿಕ ಹಿನ್ನಲೆ.* ಹಿಂದೆ ದೇವ ಮತ್ತು ದಾನವರ ನಡುವೆ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ *ಮೃದುಮಾನ್ಯ* ಎಂಬುವನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಅದರಿಂದ ಅವನು ಬ್ರಹ್ಮ, ವಿಷ್ಣು, ಶಿವನೂ ಸೇರಿ ಎಲ್ಲ ದೇವತೆಗಳಿಗೆ ಅಜೇಯ ನಾದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಮೇಲೆ ಇರುವ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಅಂದು ಆಷಾಢ ಏಕಾದಶಿಯಾಗಿದ್ದು ಕಾಕತಾಳೀಯವಾಗಿ ಅವರಿಗೆ ಉಪವಾಸ ಮಾಡುವಂತಾಯಿತು. ದಾರಾಕಾರದ ಮಳೆಯ ನೀರಿನಲ್ಲಿ ತೊಯ್ದು ಸ್ನಾನವೂ ಆಯಿತು.ಆಗ ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಗಿ,ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ದೇವತೆಗಳಿಗಾಗಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ಅಧಿದೇವತೆಯಾಗಿದ್ದಾಳೆ. *ಪ್ರಥಮೈಕಾದಶಿಯ ಮಹತ್ವ* ೧) ಆಷಾಢ ಏಕಾದಶಿಯ ವ್ರತದಲ್ಲಿ ಎಲ್ಲ ದೇವತೆಗಳ ತೇಜಸ್ಸು ಒಂದಾಗಿರುತ್ತದೆ. ೨) ಕಾಮಿಕಾ ಏಕಾದಶಿಯು ಮನೋಕಾಮನೆಯನ್ನು ಪೂರ್ಣಗೊಳಿಸುವ ಏಕಾದಶಿಯಾಗಿದ್ದು ಇದು ಪುತ್ರದಾಯೀ ಸತ್ಪುತ್ರನನ್ನು ಕೊಡುವ ಏಕಾದಶಿಯಾಗಿದೆ. *ಏಕಾದಶಿ ವ್ರತ ಮಾಡುವ ಕ್ರಮ.* ಮೊದಲನೆಯ ದಿನ ಅಂದರೆ ಏಕಾದಶಿಯ ಹಿಂದಿನ ದಿನವಾದ ದಶಮಿಯದಿನ ಏಕಭುಕ್ತರಾಗಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಿ,ಪೂರ್ಣದಿವಸ ಉಪವಾಸದಿಂದಿರಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಿ ಆಷಾಢ ಶುಕ್ಲ ದ್ವಾದಶಿಯಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು,ಪ್ರಾತಃಸ್ನಾನ, ಸಂಧ್ಯೋಪಾಸನೆ ಮಾಡಿ, ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು *ಶ್ರೀಧರ* ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ನಂದಾದೀಪವನ್ನು ಉರಿಸಬೇಕು. *ಪಂಢರಪುರದ ಯಾತ್ರೆ (ವಾರಕರಿ)* ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. *ವಾರಕರಿ* (ವಿಠಲನ ಭಕ್ತರು) ಸಂಪ್ರದಾಯವು ವೈಷ್ಣವ ಸಂಪ್ರದಾಯದಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಈ ಸಂಪ್ರದಾಯದಲ್ಲಿ ವಾರಿಕರಿ ದೀಕ್ಷೆ ಪಡೆದಂತೆ ವಾರ್ಷಿಕ,ಅರ್ಧವಾರ್ಷಿಕ ಹೀಗೆ ಪಡೆದಿರುವ ದೀಕ್ಷೆಯ ವಿಧಕ್ಕನುಸಾರವಾಗಿ ಪಂಢರಪುರಕ್ಕೆ ಯಾತ್ರೆ ಮಾಡುತ್ತಾರೆ. ಈ ಯಾತ್ರೆಯನ್ನು ಕಾಲ್ನಡಿಗೆಯಿಂದ ಮಾಡಿದರೆ ಶಾರೀರಿಕ ತಪಸ್ಸಾಗುತ್ತದೆ ಎಂಬ ನಂಬಿಕೆ ವಿಟ್ಠಲನ ಭಕ್ತರಲ್ಲಿದೆ. ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವವು ಮುಂದಿನಂತಿದೆ. ಈ ತಿಥಿಯಂದೇ ಏಕಾದಶೀದೇವಿಯ ಉತ್ಪತ್ತಿಯಾಯಿತು. ಈ ತಿಥಿಯಿಂದ ಚಾತುರ್ಮಾಸ್ಯವು ಆರಂಭವಾಗುತ್ತದೆ. ಇದೇ ದಿನ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಪವಡಿಸಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ. ಇದೇ ತಿಥಿಯಂದು ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನು. ಆಷಾಢ ಏಕಾದಶಿಯು ಕಾಲಕ್ಕೆ ಸಂಬಂಧಿಸಿದೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ನಾಲ್ಕು ತಿಂಗಳುಗಳಲ್ಲಿ ದಕ್ಷಿಣಾಯನವು ನಡೆಯುತ್ತಿರುತ್ತದೆ. ಆದ್ದರಿಂದ ಈ ಕಾಲಾವಧಿಯು ದೇವತೆಗಳ ನಿದ್ರೆಯ ಕಾಲಾವಧಿಯಾಗಿದೆ ಎಂದು ಹೇಳಲಾಗಿದೆ. ಈ ಕಾಲಾವಧಿಯಲ್ಲಿ ದೇವತೆಗಳ ಸಗುಣ-ನಿರ್ಗುಣ ತತ್ತ್ವಗಳ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯವು ಅಪ್ರಕಟ ಸ್ವರೂಪದಲ್ಲಿರುತ್ತದೆ. ಆದುದರಿಂದ ಭೂಮಂಡಲದ ಕಡೆಗೆ ಅವುಗಳ ಪ್ರಕ್ಷೇಪಣೆಯ ಪ್ರಮಾಣವು ಕಡಿಮೆಯಿರುತ್ತದೆ. ಈ ಅವಧಿಯಲ್ಲಿ ದೇವತೆಗಳ ತತ್ತ್ವಗಳು ಅಪ್ರಕಟ ಸ್ವರೂಪದಲ್ಲಿರುವುದರಿಂದ ವಾಯುಮಂಡಲ ಮತ್ತು ಬ್ರಹ್ಮಾಂಡ ಮಂಡಲಗಳಲ್ಲಿ, ಹಾಗೆಯೇ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರ ಪರಿಣಾಮವು ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಮುಂತಾದವುಗಳನ್ನು ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ಕಡಿಮೆಯಾಗುತ್ತದೆ. ಆಷಾಢ ಶುಕ್ಲ ಏಕಾದಶಿಯ ದಿನ ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ,ಇಡೀ ರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚಿಡುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ. ಮಾಧ್ವ ಮತಾನುಯಾಯಿಗಳು ಸ್ತ್ರೀ ಪುರುಷ ಎಂಬ ಭೇದವಿಲ್ಲದೆ, ಮಾಧ್ವ ಮಠದ ಸ್ವಾಮಿಗಳಿಂದ ದೇಹದ ಹಣೆ,ತೋಳು,ಎದೆ,ಹೊಟ್ಟೆ ಮುಂತಾದ ಭಾಗಗಳ ಮೇಲೆ ಶಂಖ,ಚಕ್ರ,ವಿಷ್ಣು ಪಾದ,ತ್ರಿನಾಮದ ಸಂಕೇತಗಳ *ತಪ್ತ ಮುದ್ರಾ ಧಾರಣೆ* ಮಾಡಿಸಿಕೊಳ್ಳುತ್ತಾರೆ. (ಸಂಗ್ರಹ) ========================== *ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ...🙏🏻😍🚩* ಸನಾತನವೊಂದೇ ವಿಶ್ವ ಧರ್ಮ...🙏🏻😍🚩 ಸನಾತನ ರಾಷ್ಟ್ರಕ್ಕಾಗಿ, ಸನಾತನ ಧರ್ಮಕ್ಕಾಗಿ..... *ಸನಾತನ ರಾಷ್ಟ್ರಭಕ್ತರು🚩* ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಆಷಾಢ ಮಾಸ 2025 - ASHADA MASAM The Pious Month DrJyoti D.Vora YA ASHADA MASAM The Pious Month DrJyoti D.Vora YA - ShareChat