#😍ಮದುವೆಯಾಗದೆ ತಾಯಿಯಾಗ್ತಿದ್ದಾರೆ ಖ್ಯಾತ ನಟಿ😱 ಬೆಂ ಗಳೂರು: ನಟಿ ಮತ್ತು ನರ್ತಕಿ, ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿರುವ ಭಾವನಾ ರಾಮಣ್ಣ ಅವರು ವಿವಾಹವಾಗದೆಯೇ ತಾಯಿಯಾಗುವ ಆಳವಾದ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಹೌದು ಭಾವನಾ ಅವರು ಈಗ ಆರು ತಿಂಗಳ ಗರ್ಭಿಣಿಯಾಗಿದ್ದು, 40 ರ ಹರೆಯದ ಒಂಟಿ ಮಹಿಳೆಯಾಗಿ ಐವಿಎಫ್(In vitro fertilization) ಮೂಲಕ ಗರ್ಭಧರಿಸಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.ಈ ಬಗ್ಗೆ ಭಾವನಾ ಅವರೇ ಫೋಟೋಗಳ ಸಮೇತ ಫೇಸ್ ಬುಕ್ ಪೋಸ್ಟ್ ಮಾಡಿದ್ದು ”ಹೊಸ ಅಧ್ಯಾಯ, ಹೊಸ ಲಯ. ನಾನು ಈ ವಿಚಾರ ಹೇಳಿಕೊಳ್ಳುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ಆದರೆ ,ಆರು ತಿಂಗಳ ಗರ್ಭಿಣಿಯಾಗಿ ಅವಳಿ ಮಕ್ಕಳೊಂದಿಗೆ ಕೃತಜ್ಞತೆಯಿಂದ ತುಂಬಿದ್ದೇನೆ.ನಾನು ತುಂಬಿದ ಮನೆಯಲ್ಲೇ ಯಾವಾಗಲೂ ಬೆಳೆದದ್ದು, ಪೋಷಕರು, ಒಡಹುಟ್ಟಿದ ಮೂವರು ಮತ್ತು ಸಂಬಂಧಿಕರು ಮತ್ತು ಸ್ನೇಹಿತರ ನಿರಂತರ ಸಾಂಗತ್ಯವಿತ್ತು. ಮಕ್ಕಳೊಂದಿಗೆ ಇರುವುದನ್ನು ನಾನು ಯಾವಾಗಲೂ ಇಷ್ಟಪಡುತ್ತಿದ್ದೆ, ಆದರೆ ನನ್ನದೇ ಆದ ಮಗು ಹೊಂದುವ ಆಲೋಚನೆ ನನ್ನ ಇಪ್ಪತ್ತರ , ಮೂವತ್ತರ ವಯಸ್ಸಿನಲ್ಲಿ ಸಾಧ್ಯವಾಗಲಿಲ್ಲ. ನಾನು ತಾಯ್ತನದ ಪ್ರೀತಿ ಅನುಭವಿಸಲು ಸಿದ್ಧಳಾಗಿದ್ದೆ, ಆದರೆ ಆಗಲೂ, ತಾಯ್ತನವು ನಾನು ಪರಿಗಣಿಸಿದ ವಿಷಯವಾಗಿರಲಿಲ್ಲ.ನನಗೆ 40 ವರ್ಷ ತುಂಬಿದಾಗ ಮಾತ್ರ ತಾಯಿಯಾಗುವ ಕರೆ ನಿರ್ಲಕ್ಷಿಸುವುದು ಅಸಾಧ್ಯ ಎನಿಸಿತು. ನನ್ನ ಆ ಆಳವಾದ ಆಸೆಯನ್ನು ಈಗ ಪೂರೈಸಿ ಕೊಂಡು ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇನೆ” ಎಂದು ಭಾವನಾ ಮಾತುಗಳನ್ನು ಬರಹರೂಪಕ್ಕೆ ಇಳಿಸಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲