ShareChat
ಲಾಕ್‌ಡೌನ್: ಸಮಯ ಕಳೆಯಲು ವಿಭಿನ್ನ ಕಾರ್ಯಗಳು ದೇಸಿ ಆಟಕ್ಕೆ ಮೊರೆ ಹೋದ ಜನರು ಕೋಟಕಲ್ ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಗೃಹ ಬಂಧನದಲ್ಲಿದ್ದಾರೆ. ಹೀಗಾಗಿ ಸಮಯ ಕಳೆಯಲು ದೇಸಿ ಆಟಗಳ ಮೊರೆ ಹೋಗುತ್ತಿದ್ದಾರೆ. ಮನೆಯ ಹೊರಗೆ ಕಾಲಿಟ್ಟರೆ ಬೇಸಿಗೆಯ ಉರಿ ಬಿಸಿಲು ನೆತ್ತಿ ಸುಡುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು, ಹಿರಿಯರು ಸೇರಿ ಆಟವಾಡುತ್ತಾರೆ. ಕೆಲ ಹುಡುಗರು ಗ್ರಾಮೀಣ ಪ್ರದೇಶದ ಬಾವಿ, ನದಿಗಳಲ್ಲಿ ಈಜು ಕಲಿಯುತ್ತಾ ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಟಿವಿ, ಮೊಬೈಲ್‌ಫೋನ್‌ ವ್ಯಾಪಕವಾಗಿರದ ಸಂದರ್ಭದಲ್ಲಿ ಹಳೆಯ ತಲೆಮಾರಿನ ಆಟಗಳಾದ ಚೌಕಾಬಾರ, ಆಣೆಕಲ್ಲು ಸೇರಿದಂತೆ ಹುಣಸೆ ಬೀಜಗಳನ್ನು ಬಳಸಿ 25 ಚೌಕ ಕಾಣೆ ಮಾಡಿ ಚಕ್ಕ ಆಟ ಹಿರಿಯರು ಮಕ್ಕಳಿಗೆ ದೇಸಿ ಆಟ ಹೇಳಿಕೊಡುತ್ತಾ ದಿನವಿಡೀ ಸಮಯ ಕಳೆಯುತ್ತಿದ್ದಾರೆ. ಇತ್ತ ಮಕ್ಕಳು ಕೇರಂ ಬೋರ್ಡ್, ಹಾವು ಏಣಿ, ಕಳ್ಳ ಪೊಲೀಸ್, ಗೋಲಿ ಬಳಸಿ ಆಡುವ ಆಟಗಳು, ಚದುರಂಗ, ವಿಡಿಯೊ ಗೇಮ್‌ಗಳ ಮೊರೆ ಹೋಗಿದ್ದಾರೆ. ವಯಸ್ಕರು ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ನೆರವಾಗುವ ಕಾರ್ಡ್‌ ಗೇಮ್‌ಗಳನ್ನು ಆಡುತ್ತಿದ್ದಾರೆ. ಆದರೂ ಒಳಾಂಗಣ ಆಟಗಳು ಕೇವಲ ಸಮಯವನ್ನು ಕಳೆಯುವುದಲ್ಲದೇ ಮಾನಸಿಕ ಶಾಂತಿ ಮತ್ತು ಏಕಾಗ್ರತೆ ಹೆಚ್ಚಿಸಿ, ಮನುಷ್ಯನ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತಿವೆ. ಕುಟುಂಬದ ಸದಸ್ಯರೆ ಲ್ಲರೂ ಮನೆಯಲ್ಲಿದ್ದು ಸಮಯದ ಸದುಪಯೋಗ ಪಡಿಸಿ ಕೊಳ್ಳುತ್ತಿರುವುದಲ್ಲದೇ, ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸುವಲ್ಲಿ ಈ ಆಟಗಳು ನೆರವಾಗುತ್ತಿವೆ. ಅಲ್ಲದೇ ಆಟಗಳು ಕುಟುಂಬದಲ್ಲಿ ಪ್ರೀತಿ ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಲಾಕ್‌ಡೌನ್‌ಗೂ ಮುಂಚೆ ಕೆಲಸದ ಒತ್ತಡದ ಜೊತೆಗೆ ಬಿಡುವಿಲ್ಲದೇ ಚಟುವಟಿಕೆಗಳಿಂದ ಮಾನಸಿಕ ಒತ್ತಡ ಆಗುತ್ತಿತ್ತು. ಈಗ ಸಮಯ ಕಳೆಯಲು ಬಾಲ್ಯದಲ್ಲಿ ಆಡಿದ ಆಟಗಳ ಆಡುತ್ತಿರುವುದು ಸಂತಸ ನೀಡುತ್ತಿದೆ. ಅಲ್ಲದೇ, ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುತ್ತಿರುವುದು ಬಾಲ್ಯದ ನೆನಪುಗಳನ್ನು ಮರಳಿ ತರುತ್ತಿವೆ. ಆಟಗಳು ಬಾಂಧವ್ಯ ವೃದ್ಧಿಸುವ ಜೊತೆಗೆ ಸೃಜನಾತ್ಮಕ ಚಿಂತನೆ ಬೆಳೆಸುತ್ತವೆ ಎಂದು ಗುಂಡಪ್ಪ ಕೋಟಿ ತಮ್ಮ ಬಾಲ್ಯ ನೆನಪಿಸಿಕೊಂಡರು. ಗ್ರಾಮೀಣ ಭಾಗದಲ್ಲಿ ಆಟವಾಡಲು ಬೇಕಾದ ವಸ್ತುಗಳು ಇರುವುದಿಲ್ಲ, ಕೇರಂಬೋರ್ಡ್ ಆಡಲು ಕ್ರಿಕೆಟ್ ಆಡಲು ಬ್ಯಾಟ್ ಇರುವುದಿಲ್ಲ ಮನೆಯಲ್ಲಿ ಹಳೆಯ ಪಳಿಗಳ ಕೊರೆದು ಬ್ಯಾಟ್‌ಗಳ ಮಾಡಿಕೊಂಡು ಆಟವಾಡುತ್ತಿರುವುದು ವಿಶೇಷ. ಗುಂಡಪ್ಪ ಕೋಟಿ ಕೋಟಕಲ್ ಸಮಾಜ ಸೇವೆಕ #💖 Love You