ಉತ್ತರಕಾಶಿ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ 15 ಕಾರ್ಮಿಕರನ್ನು ಹೊರಗೆ ಕರೆ ತರಲಾಗಿದೆ.ಕಳೆದ 17 ದಿನಗಳಿಂದ ಸಿಲ್ಕ್ಯಾರಾ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿದ್ದರು. ಅಂತಾರಾಷ್ಟ್ರೀಯ ಸುರಂಗ ತಜ್ಞರು ಅತ್ಯಾಧುನಿಕ ಆಗರ್ ಮಷಿನ್‌ನಿಂದ ಕಾರ್ಯಾಚರಣೆ ನಡೆಸಿದರು ರಕ್ಷಣೆ ಸಾಧ್ಯವಾಗಿರಲಿಲ್ಲ. ಕೊನೆಗೆ ನಿಷೇಧಿತ ಇಲಿ ರಂಧ್ರ ಗಣಿಗಾರಿಕೆಯಿಂದ ನಡೆದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. #😍ಉ. ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಯಶಸ್ವಿ


