#🌼 ಗಾಂಧಿ ಜಯಂತಿ 🌼 #MahatmaGandhi ಗಾಂಧಿ ತಾತನಿಗೆ ಪ್ರೀತಿಯ ನಮಸ್ಕಾರಗಳು...ಇಂದು ನಿನ್ನ ಜನುಮ ದಿನ.ಈ ಹೊತ್ತು ನೀನು ಬದುಕಿದ್ದರೆ, ನಿನಗೆ 150 ರ ತುಂಬು ಪ್ರಾಯ...ಮಾನವ ಜೀವ ವಿಜ್ಞಾನದ ನೆಲೆಯಲ್ಲಿ ನೋಡಿದರೆ ಒಬ್ಬ ಮನುಷ್ಯ ಜೀವಂತವಿರುವ ಅವಾಸ್ತವ ಪ್ರಾಯ...ಆದರೂ ಇವತ್ತಿನ ದಿನ ನೀನು ನೆನಪಾಗುತ್ತಿ ಅಜ್ಜಾ...ನಿನ್ನನ್ನು ಕಳೆದುಕೊಂಡ ಭಾರತದಲ್ಲಿ 70 ವಸಂತಗಳು ಕಳೆದಿವೆ...ನಿನ್ನ ಹೆಸರು ಹೇಳಿಕೊಂಡು,ಈ ದೇಶವನ್ನು ಕೆಲವರು ಆರು ದಶಕ ಆಳಿ,ತಮ್ಮ ಐವತ್ತು ತಲೆಮಾರಿಗೆ ಆಗುವಷ್ಟು ಸಂಪಾದನೆ ಮಾಡಿಕೊಂಡರು.ಇನ್ನು ಕೆಲವರು ನಿನ್ನ ಹೆಸರಿನಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದುಕೊಂಡು ಬದುಕು ಕಟ್ಟಿಕೊಂಡರು.ನಿನ್ನ ಫಿಲಾಸಫೀ,ನಿನ್ನ ತತ್ವ ಸಿದ್ಧಾಂತ ಎಂದುಕೊಂಡು ರೇಜಿಗೆ ಹುಟ್ಟುವಷ್ಟು ವೇದಿಕೆಯಲ್ಲಿ ಕೊರೆಯುವ ಮಂದಿ ಹೆಜ್ಜೆಗೆ ಒಬ್ಬರಂತೆ ಸಿಕ್ಕರೂ,ನಿನ್ನ ಸಿದ್ಧಾಂತ ನನಗಿನ್ನೂ ಅರ್ಥವೇ ಆಗಿಲ್ಲ ತಾತ...!!!!
ಬಾಲ್ಯದಲ್ಲಿ ಅಧ್ಯಾಪಕರು,ಗಾಂಧಿ ತಾತನನ್ನು ಗೋಡ್ಸೆಯೆಂಬ ಹಂತಕ ಗುಂಡಿಕ್ಕಿ ಕೊಂದನೆಂದು ಪಾಠ ಮಾಡುತ್ತಿದ್ದಾಗ ನನ್ನ ಎಳೆಯ ಹ್ರದಯ ಮಮ್ಮಲ ಮರುಗುತ್ತಿತ್ತು...ಜನವರಿ ತಿಂಗಳ ದೆಹಲಿಯ ಕೊರೆಯುವ ಚಳಿಯಲ್ಲಿ ನಿನ್ನ ಪಾರ್ಥಿವ ಶರೀರ ಅಗ್ನಿಗಾರ್ಪಿತವಾಯಿತೆಂಬ ಶೀರ್ಷಿಕೆ ಇದ್ದ ಚಿತ್ರವನ್ನೊಮ್ಮೆ ಪತ್ರಿಕೆಯಲ್ಲಿ ನೋಡಿದ್ದೆ...ಆ ರಾತ್ರಿ ನನ್ನ ಮನಸ್ಸಿನಲ್ಲಿ ಆದ ಅವ್ಯಕ್ತ ನೋವು,ನನ್ನನ್ನೇ ಸುಟ್ಟಂತೆ ಭಾಸವಾಗುತ್ತಿತ್ತು.ಆದರೆ ಅಜ್ಜಾ,ನಾನು ಬೆಳೆಯುತ್ತಾ ಬಂದಂತೇ ನೀನು ನನ್ನ ದೇಶವನ್ನು ಸ್ವಾತಂತ್ರಗೊಳಿಸಲು ಪಟ್ಟ ಶ್ರಮ ಮತ್ತು ತ್ಯಾಗದ ಜೊತೆಗೆ,ಹಲವಾರು ವಿಚಾರಗಳು ನಿನ್ನ ಬಗ್ಗೆ ಪ್ರಶ್ನಾರ್ಥಕವಾಗಿ ಉಳಿದು ಹೋಗಿವೆ..ಒಮ್ಮೆ ಕನಸಿನಲ್ಲಿ ಬಂದಾದರೂ ನನ್ನ ಸಂಶಯಗಳನ್ನು ದೂರ ಮಾಡುತ್ತೀಯಾ ತಾತಾ....!!!?
ನೀನು ಭಾರತೀಯ ಸ್ವಾತಂತ್ರಾ ಯಾತ್ರೆಯಲ್ಲಿ ಬ್ರಿಟಿಷರ ವಿರುದ್ಧ ಸಂಪೂರ್ಣ ತೊಡಗಿಸಿಕೊಂಡದ್ದು ಜಲಿಯನ್ ವಾಲಾ ಭಾಗ್ ದುರಂತದ ನಡೆದ ನಂತರ.ಅಲ್ಲಿಯವರೆಗೆ ನಿನ್ನ ಹೋರಾಟ ಏನಿದ್ದರೂ ಅಲ್ಪಾಂಶ...ಅಂದರೆ 1919 ರ ಹೊತ್ತಿಗೆ ನಿನಗೆ ಪ್ರಾಯ ಸುಮಾರು ಐವತ್ತು!..ನೀನು ಹುಟ್ಟುವ ಹನ್ನೆರಡು ವರ್ಷ ಮುಂಚೆಯೇ ಪಡಕೊಂಡ ಸ್ವಾತಂತ್ರ್ಯ ದ ರಣವೀಳ್ಯಕ್ಕೆ ಆಗ ಅರುವತ್ತೆರಡು ವರ್ಷ ಪ್ರಾಯವಾಗಿತ್ತು. ಆ ಹೊತ್ತಿಗಾಗಲೇ ಅದೆಷ್ಟೋ ಮಹಾನ್ ನಾಯಕರುಗಳು ಭಾರತಕ್ಕಾಗಿ ಪ್ರಾಣ ತೆತ್ತಿದ್ದರು...ಆದರೂ ನೀನೊಬ್ಬನೇ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಎನ್ನುವಂತೆ ಬಿಂಬಿಸಿಕೊಂಡೇ... ಯಾಕಜ್ಜಾ?
1908 ರಲ್ಲಿ ನೀನೊಮ್ಮೆ ದಕ್ಷಿಣ ಆಫ್ರಿಕಾ ಸರಕಾರದ ತೆರಿಗೆ ನೀತಿಯನ್ನು ವಿರೋಧಿಸಿ ಹೇಳಿಕೆ ನೀಡುವ ಸಂಧರ್ಭದಲ್ಲಿ,ಮುಸ್ಲಿಂ ಸಮುದಾಯಕ್ಕೆ ಅಸಹನೆ ಮೂಡುವಂತ ಹೇಳಿಕೆ ನೀಡಿದೆಯಂತೆ...ಅದರ ಫಲವಾಗಿ ಮೀರ್ ಆಲಂ ಎಂಬ ಮುಸ್ಲಿಂ ನಾಯಕನ ಮುಖಂಡತ್ವದಲ್ಲಿ ನಿನ್ನ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಯಿತಂತೆ...ಆ ಘಟನೆಯಿಂದ ಹೆದರಿದ ನೀನು ಆ ನಂತರ ಮುಸ್ಲಿಮರನ್ನು ವಿರೋಧಿಸುವ ಛಾತಿಯನ್ನು ಕಳೆದುಕೊಂಡೆಯಂತೆ.. ಮಾತ್ರವಲ್ಲ ಆ ನಂತರ ನೀನು ತಪ್ಪಿಯೂ ಮುಸ್ಲಿಮರ ಭಾವನೆಗಳ ವಿರುದ್ಧ ಹೇಳಿಕೆ ನೀಡುವಂತಹ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲಿಲ್ಲ ಎನ್ನುತ್ತಾರೆ.. ಹೌದೆ?
ಜೀವನದಲ್ಲಿ ಸರಳತೆ, ಬ್ರಹ್ಮಚರ್ಯ ಮತ್ತು ಅಹಿಂಸೆ ಪಾಲಿಸಬೇಕೆಂದು ದೇಶದ ಜನರಿಗೆ ನೀನು ಕರೆಕೊಡುವ ಹೊತ್ತಿಗೆ ನಿನಗೆ ಪ್ರಾಯ ಸುಮಾರು ಐವತ್ತು ಕಳೆದಿತ್ತು...ಸಾಮಾನ್ಯವಾಗಿ ಆ ಕಾಲಕ್ಕೆ ಭಾರತೀಯರ ಬದುಕುವ ಕ್ರಮ ಹಾಗೆಯೇ ಇತ್ತು...ಐವತ್ತು ಕಳೆದ ಮೇಲೆ ಇಂತಹುದನ್ನೆಲ್ಲ್ಲ ಪಾಲಿಸಬೇಕಾದ ಅನಿವಾರ್ಯತೆ ತನ್ನಿಂದಾಗಿಯೇ ಬರುವಂಥದ್ದು...ಆದರೆ ನೀನು ಯುವತನದ ಪ್ರಾಯದಲ್ಲಿ ಆಂಗ್ಲ ಜೀವನ ಶೈಲಿಯಲ್ಲಿ ಇಂಗ್ಲೆಂಡ್,ದಕ್ಷಿಣ ಆಫ್ರಿಕಾ ತಿರುಗಿ,ಸೂಟು ಬೂಟು ತೊಟ್ಟು ಸಂಭ್ರಮಿಸಿದೆ.. ಅಲ್ಲದೆ ನಿನ್ನ ಬದುಕಿನ ಯವ್ವನದ ಕಥೆಗಳು ಇನ್ನೂ ನಿಗೂಡ...ಯಾವತ್ತು ನಿನಗೆ ಇದೆಲ್ಲ ಬೇಡವೆಂದಾಯಿತೋ ಆಗ ಎಲ್ಲರೂ ಇನ್ನೂ ಮುಂದೆ ಸರಳವಾಗಿ ಬದುಕಿ ಎಂದು ಕರೆ ಕೊಟ್ಟೆ.. ನಿನಗೆ ಬೇಕಾದಷ್ಟು ಕಾಲ ಎಲ್ಲಾ ಸುಖಗಳನ್ನು ಅನುಭವಿಸಿದ ನೀನು, ನಿನಗೆ ಬೇಡವೆಂದಾಗುವ ವಯಸ್ಸಿನಲ್ಲಿ ಇನ್ನು ಅದು ಬೇರಾರಿಗೂ ಬೇಡ ಎಂದೆ...ಇದು ಸ್ವಲ್ಪ ಅತಿರೇಕ ಎನ್ನಿಸುವುದಿಲ್ಲವೇ ..?
ಸ್ವಾಮಿ ಶ್ರದ್ಧಾನಂದ ಎಂಬ ಆರ್ಯ ಸಮಾಜದ ಹಿರಿಯ ಚೇತನವನ್ನು,ಅಬ್ದುಲ್ ರಶೀದ್ ಎಂಬ ಮತಾಂಧ ಮುಸ್ಲಿಮ ಹತ್ಯೆ ಮಾಡಿದ...ಹಿಂದೆ ನಿನ್ನ ಮಗ ಹರಿಲಾಲ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದಾಗ,ನೀನು ಇದೆ ಸ್ವಾಮಿಗಳ ಬಳಿ ಮಗನನ್ನು ಮರಳಿ ಹಿಂದೂ ಧರ್ಮಕ್ಕೆ ತರಲು ಬೇಡಿಕೊಂಡೆಯಂತೆ....ಆದರೆ ಅವರ ಹತ್ಯೆ ಆದ ಬಳಿಕ,ಹಂತಕ ಅಬ್ದುಲ್ ರಶೀದ್ ನನ್ನು ಒಬ್ಬ ಮುಸ್ಲಿಂ ಸಮುಧಾಯದ ರಕ್ಷಕ ಎನ್ನುವಂತೆ ಹೇಳಿಕೆ ನೀಡಿದೆ..ಶ್ರಧಾನಂಧರ ಮುಸ್ಲಿಂ ವಿರೋಧಿ ಚಟುವಟಿಕೆಯೇ ಅವರ ಹತ್ಯೆಗೆ ಕಾರಣ ಎನ್ನುವಂತ ಹೇಳಿಕೆ ನೀಡುವ ಮಟ್ಟಕ್ಕೆ ಹಿಂದೆ ನಡೆದ ನಿನ್ನ ಮೇಲಿನ ಮುಸ್ಲಿಮರ ಹಲ್ಲೆ ಕೆಲಸ ಮಾಡೀತೇ ಅಜ್ಜಾ!!!!
ನಿನಗೆ "ರಾಷ್ಟ್ರಪಿತ " ಎನ್ನುವ ಗೌರವ,ಯಾವುದೇ ನಿನ್ನ ಕುರುಡು ಹಿಂಬಾಲಕರು ನೀಡಿದ್ದಲ್ಲ...ನಿನ್ನನ್ನು ಆ ರೀತಿ ಕರೆದವರು ಸುಭಾಸ್ಚಂದ್ರ ಭೋಸರು...1938 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರನ್ನೂ ನೀನು ವಿರೋಧಿಸಿದೆ...ಕಾಂಗ್ರೆಸ್ ಕಾರ್ಯ ನಿರ್ವಾಹಕ ಮಂಡಳಿ 1939 ಕ್ಕೆ ಅವರನ್ನು ಮುಂದುವರಿಸಲು ಸೂಚಿಸಿದಾಗ,ಪಟ್ಟಾಭಿ ಸೀತಾರಾಮಯ್ಯ ಎನ್ನುವ ನಿನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ...ಕೊನೆಗೆ ನಿನ್ನ ಅಭ್ಯರ್ಥಿ ಚುನಾವಣೆ ಸೋತಾಗ, ನೀನು ಸಭಾತ್ಯಾಗ ಮಾಡಿ ನಿನ್ನ ಅಸಹನೆ ತೋರ್ಪಡಿಸಿದೆ...ಕೊನೆಗೆ ನಿನ್ನ ಕೋಪ,ಭೋಸರನ್ನು ಪದವಿಗೆ ರಾಜೀನಾಮೆ ನೀಡುವ ಕೆಲಸ ಮಾಡಿಸಿತು.. ಅಲ್ಲಿಂದ ಆರಂಭ ಗೊಂಡ ನಿನ್ನ ಸುಭಾಷರ ಮೇಲಿನ ಕೋಪ ಅವರು ನಿಗೂಡ ಕಣ್ಮರೆ ಆಗುವ ತನಕ ಮುಂದುವರಿದು..ನೆಹರು ಮತ್ತು ಗಾಂಧಿ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟರೆಂದು ನೆಹರು ಹಿಂಬಾಲಕ ವರ್ಗ ತುತ್ತೂರಿ ಊದಲು ಕಾರಣವಾಯಿತು.. . ದೇಶಕ್ಕೆ ಸ್ವಾತಂತ್ರ್ಯ ನೀಡುವ ಕಾಯಕದಲ್ಲಿ ನೀನೇಕೆ ಏಕಮುಖ ಸನ್ನಿವೇಶ ಸ್ರಷ್ಟಿಸಿದೆ ಅಜ್ಜಾ?...ನೀನಲ್ಲದೆ ಇನ್ನೊಬ್ಬ ಜನಪ್ರೀಯತೆ ಹೊಂದುವುದು ನಿನಗ ಪಥ್ಯವಾಗಲಿಲ್ಲವೇ?....ನಿನ್ನ ನಿಸ್ವಾರ್ಥ ದೇಶ ಪ್ರೇಮದಲ್ಲಿ ಇದೊಂದು ಕಳಂಕ ಎಂದು ವ್ಯಾಖ್ಯಾನಿಸುವುದೇ?
"ಒಂದು ವೇಳೆ ಸುಭಾಸ್ಚಂದ್ರ ಭೋಸರು ಕೈಕೊಂಡ ದೇಶದ ಸ್ವಾತಂತ್ರ್ಯದ ಕಾಯಕದಲ್ಲಿ,ಅವರ ಭಾರತೀಯ ರಾಷ್ಟ್ರೀಯ ಸೇನೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರೆ ನಾನು ಬೋಸರ ವಿರುದ್ಧ ಕತ್ತಿ ಕಾಳಗವನ್ನೇ ಮಾಡುತ್ತೇನೆ" ಎಂದು ನಿಮ್ಮ ಪರಮಾಪ್ತ ನೆಹರು ಹೇಳಿಕೆ ನೀಡಿದರು. ಇದೊಂದು ಬೋಸರ ಬಗೆಗೆ ಬ್ರಿಟಿಷರಿಗಿಂತ ಹೆಚ್ಚಾಗಿ ನಿಮ್ಮವರಿಗಿದ್ದ ಅಸಹನೆಯ ಉದಾಹರಣೆ ..ಆಗ ನೀವ್ಯಾಕೆ ನೆಹರೂರವರನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ? ...ಇರಲಿ ಬಿಡಿ..ಕಾಟಾಚಾರಕ್ಕಾದರೂ ಒಮ್ಮೆ ಆತನನ್ನು ಬಯ್ದು ಸುಮ್ಮನಿರಲು ಹೇಳಬಹುದಿತ್ತಲ್ಲವೇ?..ರಾಷ್ಟ್ರ ಸೇವೆಗೆ ಕಟಿಬದ್ಧರಾದ ಎಲ್ಲಾ ದೇಶ ಭಕ್ತ ನಾಯಕರನ್ನು ಸೇರಿಸಿಕೊಂಡು ಹೋರಾಟ ಮಾಡಿದರೆ,ನಿಮ್ಮ ಜನಪ್ರೀಯತೆ ಕುಗ್ಗಬಹುದು ಎಂಬ ಆತಂಕ ನಿಮ್ಮಿಂದ ಈ ಕೆಲಸ ನೆಹರೂ ಮೂಲಕ ಮಾಡಿಸಿತೇ?....ಸ್ವಲ್ಪ ಹೇಳುತ್ತೀಯಾ ತಾತ?...
ಬ್ರಿಟಿಷರ ದುರಾಡಳಿತ,ಹಿಂಸೆಯಿಂದ ರೋಚಿಗೆದ್ದ ಜನರು ಚೌರಿ ಚೌರದಲ್ಲಿ 21 ಜನ ಪೊಲೀಸರನ್ನು ಕಡಿದು,ಹೊಡೆದು ಕೊಂದರು...ಒಂದು ರೀತಿಯಲ್ಲಿ ಆಂಗ್ಲರ ಜನ ವಿರೋಧಿ ಶಾಸನಗಳು,ಜನರನ್ನು ರಕ್ತ ಕ್ರಾಂತಿಯತ್ತ ಒಯ್ದಿದ್ದವು.ಆದರೆ ನೀವು ಮಾತ್ರ ದೇಶದ ಜನರು ಮಾಡಿದ ಈ ಹತ್ಯೆಯನ್ನು ವಿರೋಧಿಸಿ,ಬ್ರಿಟಿಷರ ವಿರುದ್ಧ ಕೈಕೊಂಡ ಅಸಹಕಾರ ಚಳುವಳಿಯನ್ನು ಕೈ ಬಿಟ್ಟಿರಿ...ಅಲ್ಲ ಅಜ್ಜ!ನಿಮ್ಮ ಚಳುವಳಿ ಯಾರ ವಿರುದ್ಧವಾಗಿ?...ಈ ದೇಶದ ಜನರ ವಿರುದ್ಧವೇ?...ಜನರ ಮನಸ್ಸಿನ ಭಾವನೆ,ಹತಾಶೆ ನಿಮಗೆ ಆವಾಗಲೇ ಅರ್ಥವಾಗಬೇಕಿತ್ತು...ನೀವೇಕೆ ಜಗತ್ತು ನಿಮ್ಮ ಜಳ್ಳು ಸಿದ್ಧಾಂತಕ್ಕೆ ಒಗ್ಗಿ ಕೊಳ್ಳಬೇಕೆಂದು ಆರಂಭದಿಂದಲೇ ತಯಾರಿ ಮಾಡಿಕೊಂಡಿರಿ?
ವ್ಯಕ್ತಿತ್ವವನ್ನು ಪೂಜಿಸಿ, ವ್ಯಕ್ತಿಯನ್ನಲ್ಲ ಎಂದು ಹೇಳುತ್ತಾ ಬಂದ ನೀವು ವ್ಯಕ್ತಿಪೂಜೆಯನ್ನು ಕಟ್ಟಾ ವಿರೋಧಿಸಿದವರು...ಆದರೆ ನೀವು ಜೀವಂತವಾಗಿದ್ದ ಸಮಯದಲ್ಲೇ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕುರ್ಡುವಾಡಿ ಎಂಬಲ್ಲಿ ನಿಮ್ಮದೊಂದು ಪ್ರತಿಮೆಯನ್ನು ಸ್ಟಾಪಿಸಲಾಯಿತು...
ಶಹಾದಾರ್ಸಿ ಜೀವನ ಭಾಯಿ ದೇಸಾಯಿ ಎಂಬವರು ನಿಮ್ಮ ಅಭಿಪ್ರಾಯ ಕೇಳಿಯೇ ಈ ಪ್ರತಿಮೆ ಸ್ಥಾಪಿಸಿದರಂತೆ.., ಮತ್ತು ಆಗಿನ ಮುಂಬೈ ಸಚಿವ ಮೊರಾರ್ಜಿ ದೇಸಾಯಿ ಮೂಲಕ ಅದನ್ನು ಅನಾವರಣಗೊಳಿಸಿದರೆಂದು ಎಲ್ಲೋ
ಓದಿದ ನೆನಪು...ಅಂದರೆ ನೀವು ಬದುಕಿರುವಾಗಲೇ ನಿಮ್ಮ ಧ್ಯೇಯ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡು ಹೋಗುವ ಯಾವ ಅನಿವಾರ್ಯತೆ ನಿಮಗಿತ್ತು ಎಂದು ಹೇಳಬಹುದೇ?....
ನಿಮ್ಮ ಬ್ರಹ್ಮಚರ್ಯವನ್ನು ಸ್ವತಹ ಪರೀಕ್ಷಿಸಿ ಕೊಳ್ಳಲು ನಾನಾ ಅಸಾಂಪ್ರದಾಯಿಕ ವಿಧಾನಗಳನ್ನು ಉಪಯೋಗಿಸಿಕೊಳ್ಳುತಿದ್ದಿರಂತೆ...ಪ್ರಾಪ್ತ ವಯಸ್ಸಿನ ಯುವತಿಯರನ್ನು ಬಳಿ ಇಟ್ಟುಕೊಂಡು ನಿಮ್ಮ ಪ್ರಯೋಗ ನಡೆಸುತ್ತಿದ್ದ ಬಗ್ಗೆ ಹಲವಾರು ಕಡೆ ಉಲ್ಲೇಖಗಳಿವೆ...ಅಂದ ಹಾಗೆ ಅಂತಹ ಒಂದು ಪ್ರಯೋಗ ಮಾಡಿ ನಿಮಗೆ ಯಾವ ವಿಶ್ವ ವಿಧ್ಯಾನಿಲಯದಲ್ಲಿ ಪಿ ಎಚ್ ಡಿ ಮಾಡಲಿಕ್ಕಿತ್ತೆಂದು ತಿಳಿಯಲಿಲ್ಲ..ಆ ವಯಸ್ಸಿನಲ್ಲಿ ಬ್ರಹ್ಮಚರ್ಯ ಪರೀಕ್ಷೆಗೆ ಒಳಗಾಗುವ ನಿಮ್ಮ ದರ್ದು,ನಿಮ್ಮ ಮನಸ್ಸಿನಲ್ಲಿರುವ ಅಳುಕನ್ನು ಮತ್ತು ಬಯಕೆಯನ್ನು ಒಟ್ಟಿಗೆ ತೋರಿಸುವುದಿಲ್ಲವೇ... ಇಂತಹ ಸಂಶೋಧನೆಗೂ, ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ಯಾವ ಸಂಬಂಧವೋ...!!! ಸ್ವಲ್ಪ ತಿಳಿಸ ಬಹುದೆ ಅಜ್ಜಯ್ಯಾ..!..
ಸ್ತ್ರೀಯರ ಬಗ್ಗೆ ನಿನಗಿದ್ದ ಬಲಹೀನತೆ,ನಿನ್ನನ್ನು ಸರಿಯಾಗಿ ಬಳಸಿಕೊಳ್ಳಲು ನೆಹರೂರವರಿಗೆ ಅನುಕೂಲವಾಯಿತೆಂದು ಕೆಲವು ಲೇಖಕರ ಅಭಿಪ್ರಾಯ...ಅಂತಹ ನಿಮ್ಮ ಹಲವಾರು ಗುಪ್ತ ಪ್ರಕರಣಗಳನ್ನು ಇಟ್ಟುಕೊಂಡು ನಿಮ್ಮನ್ನು ಬೆದರಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಒಂದು ವರ್ಗ,ನಿಮ್ಮೊಂದಿಗೆ ಇತ್ತು ಎಂದು ಇತ್ತೀಚೆಗ್ ವಿದೇಶಿ ಲೇಖನ ಒಂದರಲ್ಲಿ ಓದಿದ್ದೆ...(ಇಲ್ಲದಿದ್ದರೆ ನೆಹರು ಬಗ್ಗೆ ನಿಮಗೇನೂ ಒಳ್ಳೆಯ ಅಭಿಪ್ರಾಯ ಇರಲಿಲ್ಲ...ಮಾತ್ರವಲ್ಲ ಆ ಮನುಷ್ಯನ ಶೋಕಿ ಜೀವನ ಶೈಲಿ,ನಿಮ್ಮ ಸರಳ ಜೀವನದ ಸಿದ್ಧಾಂತಕ್ಕೆ ವಿರುದ್ಧವೆಂದು ತಾವು ತಿಳಿದೇ ಇದ್ದವರು)...ನಾನಂತೂ ಇಂತಹ ಲೇಖಕರ ಅಭಿಪ್ರಾಯಗಳನ್ನು ನಖ ಶಿಖಾಂತ ವಿರೋಧಿಸುತ್ತೇನೆ.
ವೃದ್ಧಾಪ್ಪ್ಯದ ಹೊತ್ತಿನಲ್ಲಿ ಇಂತಹ ಒಂದು ಕೆಲಸ ತಾವು ಮಾಡುವುದು ಸಾಧ್ಯವೂ ಇಲ್ಲ.ಮತ್ತು ತಾವು ಖಂಡಿತ ಮಾಡಿರಲಿಕ್ಕಿಲ್ಲ ಎಂದು ಭಾವಿಸಿದ್ದೆ.... ಆದರೆ ಕೆಲವು ವರ್ಷದ ಹಿಂದೆ, ರಾಜ್ಯವೊಂದರ ಘನವೆತ್ತ 82 ರ ಹರೆಯದ ರಾಜ್ಯಪಾಲರೊಬ್ಬರು ಲೈಂಗಿಕ ಹಗರಣ ಒಂದರಲ್ಲಿ ಬಹಿರಂಗವಾಗಿ ಸಿಕ್ಕಿಕೊಂಡ ಪ್ರಕರಣದ ನಂತರ,ನನ್ನ ಅಭಿಪ್ರಾಯವೂ ಬದಲಾಗಿದೆ...ಅಜ್ಜಾ ...ಹೀಗೆಯೂ ಇದ್ದಿರಬಹುದೇ?
ಕಾಂಗ್ರೆಸ್ ವರ್ಕಿಂಗ್ ಕಮೀಟಿಯಲ್ಲಿ ಸ್ವತಂತ್ರ ಭಾರತದ ಪ್ರಧಾನಿಯಾಗಿ ಸರ್ದಾರ್ ವಲ್ಲಭ ಭಾಯಿ ಪಟೇಲರನ್ನು ಆಯ್ಕೆ ಮಾಡಲಾಯಿತು...ಆದರೆ ಕೇವಲ ಬೆರಳೆಣಿಕೆಯ ಮತ ಪಡೆದ (ಬಹುಶಃ ಒಂದೇ ಮತ) ನೆಹರು ಅವರನ್ನು ಪ್ರಧಾನ ಮಂತ್ರಿ ಮಾಡಬೇಕೆಂದು ನೀನು ಹಟ ಹಿಡಿದೆ..ಕೊನೆಗೆ ನಿನ್ನ ಹಟಕ್ಕೆ ಬಲಿ ಬಿದ್ದು ಪಟೇಲರು ತಮ್ಮ ತಾತ್ವಿಕ ಒಪ್ಪಿಗೆ ನೀಡಿ ಹಿಂದೆ ಸರಿದರು....ನಿನ್ನ ಜಗ ಮೊಂಡುತನದ ಹಟ ಎಂಥಹ ಅನಾಹುತಕ್ಕೆ ಕಾರಣವಾಯಿತು ನೋಡಿದೆಯಾ ಅಜ್ಜಾ???!!!...ಇಂದಿನ ಕಾಶ್ಮೀರ ಸಮಸ್ಯೆ,ಆಂತರೀಕ ಭಯೋತ್ಪಾದನೆ,ಜನಸಂಖ್ಯಾ ಸ್ಪೋಟ,ಬಡತನ,ಗಡಿ ವಿವಾದ,ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಲಿಬಿದ್ದ ಅಲ್ಪಸಂಖ್ಯಾತರ ತುಷ್ಟೀಕರಣ.ಎಲ್ಲವೂ ನಿನ್ನ ಸಕಾಲಿಕ ತಪ್ಪು ನಿರ್ಣಯದ ದೈತ್ಯ ಕೊಡುಗೆಗಳು..
ನಿನ್ನೊಂದಿಗೆ ನಿನ್ನ ಸಿದ್ಧಾಂತ ಮತ್ತು ವೈಚಾರಿಕತೆಗಳನ್ನು ಪ್ರವಾಹದಲ್ಲಿ ಬಿಟ್ಟು ನೆಹರು ಈ ದೇಶವನ್ನು ಸುಧೀರ್ಘ ಬಡತನಕ್ಕೆ ಒಯ್ಯಬಹುದೆಂಬ ಕನಿಷ್ಟ ಕಲ್ಪನೆ ಇಲ್ಲದ ಮೌಢ್ಯ ನಿನ್ನನ್ನು ಆ ಹೊತ್ತಿಗೆ ಆವರಿಸಿಕೊಂಡಿತ್ತೆ???..
ಯಾವುದನ್ನು ಒಪ್ಪಿಕೊಂಡರೂ ಅಜ್ಜ ನಿನ್ನ ಮುಸ್ಲಿಂ ತುಷ್ಟೀಕರಣವನ್ನು ಮಾತ್ರ ಈ ದೇಶದ ಯಾವ ಪ್ರಜೆಯೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ...ಸ್ವಾತಂತ್ರ್ಯ ಪೂರ್ವದಲ್ಲಿ ಕೇರಳದ ಮಲಬಾರ್ ಪ್ರದೇಶದಲ್ಲಿರುವ ಮೋಪ್ಳಾ ಎಂಬಲ್ಲಿ ಮುಸ್ಲಿಮರು ನಡೆಸಿದ ಹಿಂದೂ ಹತ್ಯಾಕಾಂಡದಲ್ಲಿ ನೀನು ಹಿಂದೂ ಜನರ ಪರವಾಗಿ ನಿಲ್ಲದೆ ,ಮುಸ್ಲಿಮರ ಭಾವನೆಗೆ ಧಕ್ಕೆ ಬಾರದೆಂಬ ನೆಲೆಯಲ್ಲಿ ಅದನ್ನು ವಿರೋಧಿಸಲಿಲ್ಲ.
ಎಲ್ಲೋ ಇರುವ ಖಲೀಫನ ವಿಚಾರವಾಗಿ ನಮ್ಮ ದೇಶದ ಮುಸ್ಲಿಮರು ಖಿಲಾಫತ್ ಚಳುವಳಿ ನಡೆಸಿದಾಗ,ಅವರು ಕೇಳದೆಯ ನೀನು ಅವರೊಂದಿಗೆ ಸೇರಿಕೊಂಡು ನಿನ್ನ ಸಂಪೂರ್ಣ ಸಹಕಾರ ನೀಡಿದೆ....ಶ್ರದ್ಧನಂದರನ್ನು ಕೊಂದ ಪಾತಕಿಯ ಪರವಾಗಿ ಬ್ರಿಟಿಷರ ಬಳಿ ಆತನ ಜೀವ ಭಿಕ್ಷೆ ಬೇಡಿದ್ದೆ.... ಆದರೆ ನೀನು ದೇಶಭಕ್ತ ಭಗತ್ ಸಿಂಗ್,ಸುಖ್‌ದೇವ್ ಮತ್ತು ಚಂದ್ರಶೇಖರ್ ಆಜ಼ಾದ್ ರ ಬಗ್ಗೆ ಬ್ರಿಟಿಷರ ಬಳಿ ಕೇಳಿಕೊಂಡಿದ್ದರೆ,ಬಹುಶಃ ಅಪ್ರತಿಮ ದೇಶ ಭಕ್ತರನ್ನು ಉಳಿಸಿಕೊಂಡ ಕೀರ್ತಿ ನಿನ್ನ ಘನತೆಯನ್ನು ಹೆಚ್ಚಿಸುತ್ತಿತ್ತು...ಮಾತ್ರವಲ್ಲ ಅಂತಹ ಒಂದು ಮಧ್ಯಸ್ಥಿಕೆಗೆ ನೀನು ಮುಂದಾಗಿದ್ದರೆ, ಬ್ರಿಟಿಷ್ ಸರಕಾರ ಖಂಡಿತ ನಿನ್ನ ಮಾತಿಗೆ ಮನ್ನಣೆಯನ್ನೂ ನೀಡುತ್ತಿತ್ತು...ಆದರೆ ನಿನಗ್ಯಾಕೋ ಸ್ವಾತಂತ್ರ ಹೋರಾಟದ ಮುಂದಾಳುತ್ವದಲ್ಲಿ ಬೇರೊಬ್ಬರಿಗೆ ಮರ್ಯಾದೆ ಸಲ್ಲುವುದು ಬೇಡವಾಗಿತ್ತೇ?...ಅಲ್ಲಾ ಇದು ಒಂದು ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆಯುವ ಪರಿಪೂರ್ಣ ತಂತ್ರವೇ?...ನೀನೇ ಹೇಳಿದರೆ ಚೆನ್ನ...
ಜವಾಹರ್‌ಲಾಲ ನೆಹರು ಮತ್ತು ಮಹಮ್ಮಾದಲಿ ಜಿನ್ನಾಃ,ನನ್ನ ದೇಶವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಪಾಲು ಮಾಡಿಕೊಂಡರು...ನನ್ನ ಜೀವ ಇರುವ ತನಕ ದೇಶ ವಿಭಜನೆಗೆ ಒಪ್ಪಿಗೆ ನೀಡುವುದಿಲ್ಲ ಎಂದ ನೀನು,ಬಹುಸಂಖ್ಯೆಯ ಜನರ ವಿರೋಧದ ನಡುವೆಯೂ ವಿಭಜನೆಯ ಪ್ರಕ್ರಿಯೆಗೆ ಒಪ್ಪಿಗೆ ಕೊಟ್ಟೆ...ಆದರೆ ವಿಭಜನೆಯ ನಂತರ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿತು ಪಾಕಿಸ್ತಾನ...ಕಾಶ್ಮೀರಕ್ಕೆ ಸೇನೆ ನುಗ್ಗಿಸಿತು...ಪಾಕಿಸ್ತಾನದಲ್ಲಿರುವ ಬಹುಸಂಖ್ಯಾತ ಹಿಂದೂಗಳನ್ನು ಕಡಿದು,ತುಂಡರಿಸಿ ರೈಲಿನ ಭೋಗಿಗಳಲ್ಲಿ ತುಂಬಿಸಿ ಕಳುಹಿಸಿತು...ಒಂದು ಲೆಕ್ಖದಲ್ಲಿ ದೇಶ ವಿಭಜನೆ ಕಾರಣಕ್ಕೆ ನಡೆದ ಲಕ್ಷಾಂತರ ಜನರ ಹತ್ಯೆಯ ಪುಣ್ಯವೂ ನಿಮಗೆ ಸಲ್ಲ ಬೇಕು..ಬರಿಯ ಸ್ವಾತಂತ್ರ್ಯ ತಂದು ಕೊಟ್ಟ ಪುಣ್ಯ ಮಾತ್ರವಲ್ಲ..ನಿನ್ನ ಅವಿವೇಕಿ ನಿರ್ಣಯಗಳು ದೇಶವನ್ನು ಅಪಾಯಕ್ಕೆ ದೂಡಿದ್ದೇ ವಿನಹ; ಇದು ಜನರು ಬಯಸಿದ್ದಲ್ಲ.ಇಂತಹ ಪಾಕಿಸ್ತಾನದ ದುರಾಕ್ರಮಣ ನೀತಿಯಿಂದ ಬೇಸತ್ತ ಸರ್ದಾರ್ ಪಟೇಲರು,ಪಾಕಿಸ್ತಾನಕ್ಕೆ ನೀಡ ಬೇಕಾದ 55 ಕೋಟಿ ರೂಪಾಯಿ ನೀಡಲು ನಿರಾಕರಿಸಿದರು...ಆದರೆ ನೀನು ಮಾತ್ರ ನಿನ್ನ, ಉಪವಾಸ ಸತ್ಯಾಗ್ರಹದ ಬ್ಲ್ಯಾಕ್ ಮೇಲ್ ತಂತ್ರವನ್ನು ಅಲ್ಲೂ ಉಪಯೋಗಿಸಿಕೊಂಡೆ.. ಬಹುಸಂಖ್ಯಾತ ಜನರ ಆರಾಧ್ಯ ದೇವರಾದ ಸೋಮನಾಥ ಮಂದಿರದ ಪುನರ್‌ನಿರ್ಮಾಣಕ್ಕೆ ವಿರೋಧಿಸಿದ ನೀನು,ಗಲಭೆಯಲ್ಲಿ ಹಾನಿಗೊಳಗಾದ ದೆಹಲಿಯ ಮಸೀದಿಗಳನ್ನು ಸರಕಾರ ತನ್ನದೇ ಖರ್ಚಿನಲ್ಲಿ ರಿಪೇರಿ ಮಾಡಿಸಬೇಕೆಂದು ತಾಕೀತು ಮಾಡಿದೆ....ಇದೆಂತಹ ಅಪಬುದ್ಧ ನಿರ್ಣಯ ತಾತಾ?...ಇದಕ್ಕೇನಾದರೂ ಸಕಾರಣ ನೀಡ ಬಹುದೆ?...
ಇರಲಿ ಬಿಡಿ ಅಜ್ಜ.. ..ನನ್ನಲ್ಲಿ ಇಂತಹ ಕೇಳಬೇಕಾದ ಪ್ರಶ್ನೆಗಳು ನೂರಾರು ಇವೆ ..ಇಲ್ಲಿ ಕೇಳಿರುವುದು ಅತ್ಯಲ್ಪ....ನಿಮ್ಮ ಹೆಸರು ಹೇಳಿಕೊಂಡು ನಮ್ಮ ದೇಶದಲ್ಲಿ ಕೋಟಿಗಟ್ಟಲೆ ಜನ ಹೊಟ್ಟೆ ತುಂಬಿಸುವ ದಾರಿ ಕಂಡು ಕೊಂಡಿದ್ದಾರೆ. ನಿಮ್ಮ ಅಹಿಂಸೆ ಮತ್ತು ನಿಸ್ವಾರ್ಥ ಜೀವನವೇ ಅವರ ಮಾತಿನ ಬಂಡವಾಳ..ಇಂತಹ ಸೀನಿಕತೆಯ ಉಪಯೋಗದಲ್ಲಿ ದಶಕಗಳಿಂದ ಅವರು ಪ್ರಭುದ್ಧತೆಯನ್ನು ಪಡೆದಿದ್ದಾರೆ.....ನಿಮ್ಮ ಬಗ್ಗೆ ಒಂದು ಪುಟವೂ ಓದದ ಜನನಾಯಕರಿಗೆ ನಿಮ್ಮ ಖಾದಿ ಮತ್ತು ಟೊಪ್ಪಿಯೇ ರಾಜಕೀಯಕ್ಕೆ ರಹದಾರಿ ಆಗಿದೆ...ರಾಮರಾಜ್ಯದ ಕನಸು ಕಂಡ ನಿಮ್ಮದೇ ದೇಶದಲ್ಲಿ ರಾಮ ಒಬ್ಬ ಅಪಾಯಕಾರಿ ಸಿದ್ಧಾಂತಕ್ಕೆ ಪೂರಕ ದೇವರೆಂಬ ಹೆಸರು ಗಳಿಸಿದ್ದಾನೆ...ಜಾತ್ಯತೀತರ ಕೈಯಲ್ಲಿ ನೀವು ಒಂದು ಸದಾ ಉಪಯೋಗಿ ಟ್ರಂಪ್ ಕಾರ್ಡ್ ಆಗಿದ್ದೀರಿ...
ಆದರೆ ನನಗೇಕೋ ನಿಮ್ಮಲ್ಲಿ ಈ ಮಾತನ್ನು ಕೇಳಲೇ ಬೇಕೆನಿಸಿತು...ನಿಮ್ಮನ್ನು ವಿಮರ್ಶಿಸುವಷ್ಟು ಬುದ್ಧಿ ನನ್ನಲ್ಲಿ ಇಲ್ಲ ಅಜ್ಜಾ....ಆದರೆ ನನ್ನ ಕುತೂಹಲ ತಡೆಯುವುದಿಲ್ಲ...ಜಿಜ್ಞಾಸೆ ಅಜ್ಞಾನವಲ್ಲ...ಕುತೂಹಲ ಅಪರಾಧವಲ್ಲ ಎಂದು ಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದ್ದೇನೆ....ಎಲ್ಲಾದರೂ ನನ್ನ ಅಭಿಪ್ರಾಯಗಳು ಸ್ವಲ್ಪ ಅತಿರೇಕ ಎನಿಸಿದರೆ ಕ್ಷಮಿಸಿ ಬಿಡಿ....ನೀವೇರಿದ ಎತ್ತರ ನನ್ನ ಕಲ್ಪನೆಗೂ ಮಿಗಿಲಾದದ್ದು...... ಆದರೂ ಒಂದಂತೂ ಸತ್ಯ...ಒಂದು ವೇಳೆ ನೀವು ಈ ದೇಶದಲ್ಲಿ ನೂರು ವರ್ಷ ಬದುಕಿ ಉಳಿಯುತಿದ್ದರೆ, ಕೊನೆಗೆ ನೀವೂ ಏಕಾಂಗಿಯೇ ಆಗಬೇಕಿತ್ತು...ನಿಮ್ಮ ತತ್ವ ಸಿದ್ಧಾಂತದ ಆರಾಧಕರೋ ನಿಮ್ಮ ಬಳಿ ಸರಿಯುತ್ತಲೇ ಇರುತ್ತಿರಲಿಕ್ಕಿಲ್ಲ....
ತಾವು ಮತ್ತೊಮ್ಮೆ ನನ್ನ ದೇಶದಲ್ಲಿ ಹು......ಬ..... ಅಜ್ಜಾ.....ಜೈ ಹಿಂದ್...
ಅಧಿಕಾರ ಸಿಕ್ಕಿದೆ ಎಂದು ತನ್ನ ನಾಲ್ಕು ತಲೆಮಾರಿನ ವರೆಗೆ ಆಸ್ತಿ ಸಂಪಾದನೆ ಮಾಡುವ ರಾಜಕಾರಣಿಗಳು ದೊಡ್ಡ ದೊಡ್ಡ ಆಫೀಸರ್ಗಳು, ಸ್ವಾರ್ಥತೆ ತುಂಬಿರುವ ಜಗತ್ತಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆದರ್ಶವಾಗ ಬಲ್ಲರೇ!!
ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ?
1. ಕೃಷ್ಣರಾಜ ಸಾಗರ ಅಣೆಕಟ್ಟು
2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು
3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು
4. ಮಿಂಟೋ ಹಾಸ್ಪಿಟಲ್ , ಬೆಂಗಳೂರು
5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು
6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ
7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು
8. ಶಿವನಸಮುದ್ರ ಜಲವಿದ್ಯುತ್ ಯೋಜನೆ
9. ವಾಣಿವಿಲಾಸ ಅಣೆಕಟ್ಟು , ಚಿತ್ರದುರ್ಗ
10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ
11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ
13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ
14. ಯುವರಾಜ ಕಾಲೇಜು ಮೈಸೂರು ಮೈಸೂರ್
15. ಮೈಸೂರು ರಾಜ್ಯ ರೈಲ್ವೆ
16. ಮೈಸೂರು ಮೆಡಿಕಲ್ ಕಾಲೇಜ್
17 ಬೆಂಗಳೂರು ಟೌನ್ ಹಾಲ್
18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
19. ಮಂಡ್ಯ ಜಿಲ್ಲೆ ರಚನೆ
20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ
21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ
22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ
23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ
24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ
25. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್
26. ಬಾಲ್ಯವಿವಾಹ ನಿಷೇಧ
27. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ
28. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ
29. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ
30. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು ಸ್ಥಾಪನೆ
31. ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ ಸ್ಥಾಪನೆ
32. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ
33. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು
34. ಕೃಷ್ಣರಾಜನಗರ ಟೌನ್ ಸ್ಥಾಪನೆ
35. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು , ಸ್ಥಾಪನೆ
36. ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ
37. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ
38. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ
39.ಚೇಂಬರ್ ಆಫ್ ಕಾಮರ್ಸ್ , ಮೈಸೂರು
40. ಮೈಸೂರು ಶುಗರ್ ಮಿಲ್ಸ್ , ಮಂಡ್ಯ
41. ಮೈಸೂರ್ ಲ್ಯಾಂಪ್ಸ್ , ಬೆಂಗಳೂರು
42. ಮೈಸೂರ್ ಪೇಪರ್ ಮಿಲ್ಸ್ , ಭದ್ರಾವತಿ
43. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಭೂಮಿ ಕೊಡುಗೆ
44. ಮೈಸೂರು ಕೆಮಿಕಲ್ ಹಾಗೂ ಫರ್ಟಿಲೈಸರ್ಸ್ ಕಾರ್ಖಾನೆ
45. ಗ್ಲಾಸ್ ಹಾಗೂ ಪಿಂಗಾಣಿ ಕಾರ್ಖಾನೆ , ಬೆಂಗಳೂರು
46. ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ - ದೇಶದಲ್ಲೇ ಮೊದಲು
47. ಮೈಸೂರು ಪೈಂಟ್ಸ್ ಹಾಗೂ ವಾರ್ನಿಷ್ ಲಿಮಿಟೆಡ್ ಸ್ಥಾಪನೆ
ಮುಂತಾದವು ...
ಯೆಸ್ ...
🔸ಕರ್ನಾಟಕ ಹಾಗೂ ಭಾರತ ಕಂಡ ಅದ್ಭುತ ಆಡಳಿತಗಾರ
🔸 ಹಲವಾರು ಪ್ರಪ್ರಥಮಗಳ ಸರದಾರ
🔸 ತನ್ನ 11ನೇ ವರ್ಷದಲ್ಲಿ ಮೈಸೂರು ರಾಜ್ಯದ ಸಿಂಹಾಸನ ಏರಿದ ಮಹಾರಾಜ
🔸ದೇಶದ ಆಗಿನ ಸಮಯದ 2ನೇ ಶ್ರೀಮಂತ ರಾಜರು (ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮೈಸೂರು ಜಿಲ್ಲಾ ಘಟಕ )
ಶ್ರೀ #ನಾಲ್ವಡಿ_ಕೃಷ್ಣರಾಜ_ ಒಡೆಯರ್ ರವರಿಗೆ ನಮನಗಳು🙏🙏🌷🌷!!!!! #🔴Live: ಮೈಸೂರು ದಸರಾ🐘