ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯ ಶುಭಾಶಯಗಳು
ಕಾಯಕಯೋಗಿ ಬಸವಣ್ಣನವರ ಅನುಯಾಯಿ, ನಾಡಿನ ಶ್ರೇಷ್ಠ ತತ್ವಜ್ಞಾನಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಮಾಜ ಸುಧಾರಕ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ವಾಸ್ತವ ಪರವಾದ ಚಿಂತನೆ, ಆಧ್ಯಾತ್ಮಿಕ, ವಿಡಂಬನೆ, ಸೃಷ್ಟಿಯ ಕ್ರಮ ಈ ಎಲ್ಲ ವಿಶೇಷತೆಗಳನ್ನು ಅವರ ವಚನಗಳಲ್ಲಿ ಕಾಣಬಹುದು.
#jai ambigara chidaya #jai ambigara chidaya #ambigara
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಶುಭವಾಗಲಿ.
#🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️
ಸಮಸ್ತ ಜನತೆಗೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಈ ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹೊಸಬೆಳಕನ್ನು ತರಲಿ,ಎಲ್ಲೆಡೆ ಸುಖ,ಸಂತೋಷ,ನೆಮ್ಮದಿ ಹಾಗೂ ಸುಭಿಕ್ಷತೆ ನೆಲೆಸಲಿ ಎಂದು ಹಾರೈಸುತ್ತೇವೆ.
#ಹೊಸ ವರ್ಷದ ಶುಭಾಶಯಗಳು #ಹೊಸ
ಸ್ವಾತಂತ್ರ್ಯ ಚಳುವಳಿಯ ಅಗ್ರೇಸರ, ಸ್ವಾತಂತ್ರ್ಯಾನಂತರ ದೇಶದ ಉಪಪ್ರಧಾನಿ-ಗೃಹಸಚಿವರಾಗಿ ಗಣರಾಜ್ಯ ಸ್ಥಾಪನೆ, ಏಕೀಕರಣದಲ್ಲಿ ಮಹತ್ತರ ಪಾತ್ರವಹಿಸಿದ್ದ ಉಕ್ಕಿನ ಮನುಷ್ಯ, ಭಾರತರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವದ ನಮ್ಮ ನಮನಗಳು. ಅವರ ಚಿಂತನೆಗಳು, ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಭಾರತದ ಪ್ರಗತಿ ಪಥದಲ್ಲಿ ಅಜರಾಮರ.
#ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಸ್ಮರಣೆ
ಮಹಿಳಾ ಶಿಕ್ಷಣ, ರೈತ ಕಲ್ಯಾಣ ಮತ್ತು ಅಸ್ಪೃಶ್ಯತೆಯ ವಿರುದ್ಧ ದಣಿವರಿಯದೆ ದುಡಿದ ಧೀಮಂತ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ನಮ್ಮ ಅಗಣಿತ ನಮನಗಳು.
#ಜ್ಯೋತಿಭಾ ಫುಲೆ ಅವರ ಪುಣ್ಯಸ್ಮರಣೆ
ದೃಢ ಸಂಕಲ್ಪ, ಅಚಲ ಧೈರ್ಯ ಮತ್ತು ನಿರ್ಣಾಯಕ ನಾಯಕತ್ವದ ಪ್ರತೀಕವಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಗೌರವದ ನಮನಗಳು.
ದಿಟ್ಟ ಹಾಗೂ ಕ್ರಾಂತಿಕಾರಕ ನಿರ್ಧಾರಗಳ ಮೂಲಕ ದೇಶದ ಭದ್ರತೆ ಮತ್ತು ಪ್ರಗತಿಗೆ ದೃಢ ಬುನಾದಿ ಹಾಕುವುದರ ಜೊತೆಗೆ, ರೈತರು–ಶೋಷಿತರು–ಬಡಜನರ ಬಗ್ಗೆ ತೋರಿದ ಕಾಳಜಿ, ಅವರ ಬದುಕಿನ ಸುಧಾರಣೆಗೆ ಕೈಗೊಂಡ ಧೈರ್ಯಶಾಲಿ ಕ್ರಮಗಳು ದೇಶಕ್ಕೆ ನೂತನ ದಿಕ್ಕನ್ನು ನೀಡಿದವು.
ಪೋಕ್ರಾನ್ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಭಾರತವನ್ನು ಅಣ್ವಸ್ತ್ರ ಸಾಮರ್ಥ್ಯವುಳ್ಳ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ ಅವರ ಕೊಡುಗೆ ಅಪ್ರತಿಮ.
ದೇಶದ ಸಮಗ್ರ ಅಭಿವೃದ್ಧಿಗೆ ಇಂದಿರಾ ಗಾಂಧಿಜಿಯವರ ಸೇವೆ ಎಂದಿಗೂ ಸ್ಮರಣೀಯ.
#ಇಂದಿರಾ ಗಾಂಧಿ ಜನ್ಮದಿನ
ಭಾರತದ ಹೆಮ್ಮೆಯ ವೀರ ನಾರಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ
ಜನ್ಮದಿನದಂದು ಗೌರವಪೂರ್ವಕ ನಮನಗಳು.
#ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನ #ಝಾನ್ಸಿ ರಾಣಿ ಲಕ್ಷ್ಮೀಬಾಯಿ #ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜಯಂತಿ #ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಗೌರವ ಪೂರ್ಣ ನಮನಗಳು. #ಜಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನ
"ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ.ಅದರ ಪ್ರಾಪ್ತಿಗೆ ಹೋರಾಟ ಬಲಿದಾನ ಅಗತ್ಯ " ಎಂದ ಪಂಜಾಬ್ ಕೇಸರಿ ಲಾಲ್ ಲಜಪತ್ ರಾಯ್ ಅವರ ಸ್ಮೃತಿದಿನದಂದು ನಮ್ಮ ನಮನಗಳು
##ಲಾಲ ಲಜಪತರಾಯ ಸ್ಮೃತಿದಿನ













