Ram Ajekar
ShareChat
click to see wallet page
@ajekarram
ajekarram
Ram Ajekar
@ajekarram
journalist
ದೇವಿ ದರುಶನ : ಸ್ವರ್ಣ ನದಿಯ ತಟದಲ್ಲಿ ಸೌಮ್ಯವಾಗಿ ವಾಸಿಸುವ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ತಾಯಿ, ಅಮ್ಮನಂತೆ ಮಮತೆಯ ರೂಪ, ದೇವಿಯಂತೆ ದಿವ್ಯ ಕರುಣೆಯ ರೂಪದಿಂದ ಎಲ್ಲರನ್ನು ಮೆರೆಯುತ್ತಾಳೆ. ಅವಳ ಸಾನ್ನಿಧ್ಯಕ್ಕೆ ಬರುವ ಪ್ರತಿಯೊಬ್ಬ ಭಕ್ತನೂ, “ನೀನು ಒಂಟಿಯಲ್ಲ, ನಿನ್ನ ತಾಯಿ ನನ್ನ ಜೊತೆಯಲ್ಲಿದ್ದಾಳೆ” ಎಂಬ ಭರವಸೆ ಪಡೆಯುತ್ತಾನೆ. ಅದೇ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ. ಅವಳ ಕಣ್ಣುಗಳಲ್ಲಿ ಕಾಣುವ ಮಮತೆಯೇ ತೇವ, ಆಪ್ತ ನಗು, ಪಾದದಲ್ಲಿ ಶಾಂತಿಯ ಸ್ಪರ್ಶ. ಅವಳು ಅಷ್ಟಭುಜಿಯಲ್ಲಿ ಶಕ್ತಿ, ಸಂಪತ್ತು, ಧೈರ್ಯ, ಜ್ಞಾನ, ಭಕ್ತಿ, ಸಂಯಮ, ಸೌಂದರ್ಯ ಮತ್ತು ಕರುಣೆಯ ದೀಪವನ್ನು ಹಿಡಿದಿರುವ ತಾಯಿ. ಭಕ್ತನು ಕಣ್ಣೀರು ಹಾಕಿದರೆ ಭಕ್ತನು ಬೇಡಿದರೆ ಇಷ್ಟಾರ್ಥವನ್ನು ಅನುಗ್ರಹಿಸುವಾಳೆ. ಅವಳ ಪಾದ ತಟ್ಟಿದ ಸ್ವರ್ಣ ನದಿ ತಾಯಿಯ ಮಹಿಮೆಯನ್ನು ಹೊತ್ತು ಹರಿಯುತ್ತಾ, ಉಡುಪಿ ಜಿಲ್ಲೆಯ ಜೀವನಾಡಿಯಾಗಿ ಹರಿಯುತ್ತದೆ. ಸ್ವರ್ಣದ ತೀರದಲ್ಲಿ ತಾಯಿ ಸದಾ ಪ್ರತಿಷ್ಠಿತಳಾಗಿ, “ಮಕ್ಕಳನ್ನು ರಕ್ಷಿಸುವ ತಾಯಿ” ಎಂಬ ಹೆಸರಿನಲ್ಲಿ ಪ್ರಸಿದ್ಧಳಾಗಿದ್ದಾಳೆ. ದೇವಾಲಯದ ಇತಿಹಾಸವೂ ತಾಯಿಯ ಕೃಪೆಯ ಸಾಕ್ಷಿಯಾಗಿದೆ. ಗೋಮಾಂತಕವನ್ನು ತೊರೆದು ಬಂದ ರಾಜಾಪುರ ಸಾರಸ್ವತ ಬ್ರಾಹ್ಮಣರು ತಮ್ಮ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು, 1891ರಲ್ಲಿ ಈ ಪವಿತ್ರ ಭೂಮಿಯಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಿದರು. ಆಗಿನಿಂದ ಇಂದಿನವರೆಗೂ, ತಾಯಿ ಲಕ್ಷ್ಮಿಯ ಸಾನ್ನಿಧ್ಯ ಈ ಭೂಮಿಯಲ್ಲಿ ಶಾಶ್ವತವಾಗಿದ್ದು, ಅನೇಕರಿಗೆ ಆಶ್ರಯ, ಸಮೃದ್ಧಿ ಮತ್ತು ಸಂತೋಷವನ್ನು ನೀಡುತ್ತಿದೆ. ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ತಾಯಿ – “ಬಂದವನು ನಿರಾಶನಾಗಿ ಹಿಂತಿರುಗುವುದಿಲ್ಲ, ಅಮ್ಮನ ದ್ವಾರದಲ್ಲಿ ಬೇಡಿದವನು ಖಂಡಿತ ಪ್ರಸನ್ನತೆಯನ್ನು ಪಡೆಯುತ್ತಾನೆ” ಎನ್ನುವುದು ಭಕ್ತರ ನಂಬಿಕೆ. ರಾಂ ಅಜೆಕಾರು ಕಾರ್ಕಳ #ನವರಾತ್ರಿ #ನವರಾತ್ರಿ ಹಬ್ಬದ ಶುಭಾಶಯಗಳು....p #💐ನವರಾತ್ರಿ ಹಬ್ಬದ ಶುಭಾಶಯಗಳು 🙏 #🙏🚩ನವರಾತ್ರಿ ಹಬ್ಬದ ಶುಭಾಶಯಗಳು🚩🚩🚩 #ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಮನೆಯದಸರಾ ಗೋಂಬೇಗಳು
ನವರಾತ್ರಿ - ShareChat
#🌞ಸೂರ್ಯಗ್ರಹಣ🌞🌇 ಮೀನುಗಾರರ ಬದುಕು ರಾಜ್ಯದಲ್ಲಿ ಸುಮಾರು 320 ಕಿಮೀ ಕರಾವಳಿ ಪ್ರದೇಶವಿದೆ.ಕರಾವಳಿಯ ಮೀನುಗಾರರ ಬದುಕು ಸಮುದ್ರದ ಅಲೆಗಳಂತೆ ಏರುಪೇರುಗಳಲ್ಲೇ ಸಾಗುತ್ತದೆ. ಬೆಳಗಿನ ನಸುಕಿನ ಕತ್ತಲಲ್ಲಿ ಅವರು ದೋಣಿಯನ್ನು ಸಮುದ್ರಕ್ಕೆ ಇಳಿಸುತ್ತಾರೆ. ಅಲೆಗಳ ನಾದವೇ ಅವರ ಸಂಗೀತ, ಗಾಳಿಯ ವೇಗವೆ ಅವರ ಪಥ ನಿರ್ಧರಿಸುವುದು. ಬದುಕು ಎಂದರೆ ಅವರಿಗೊಂದು ಬಲೆ, ಬಲೆಯೊಳಗೆ ಬರುವಷ್ಟು ಮೀನು ಅಷ್ಟೇ. ರೈತನಂತೆಯೆ ಮೀನುಗಾರಿಕೆಯು ಒಂದು ಕಷ್ಟದ ಬದುಕು. ಆದರೆ ಈ ಬದುಕು ಸುಲಭವಲ್ಲ. ಮಳೆಗಾಲ ಬಂದರೆ ಸಮುದ್ರವೇ ಬೀಗ ಹಾಕಿದಂತೆ. ಆ ಹೊತ್ತಿನಲ್ಲಿ ಬಲೆಯ ಬದಲು ಹೊಟ್ಟೆಯೊಳಗೆ ಹಸಿವಿನ ಅಲೆಗಳು ಎದ್ದಾಡುತ್ತವೆ. ತೂಫಾನು ಎದ್ದರೆ, ಸಣ್ಣ ದೋಣಿಗಳಲ್ಲಿ ಜೀವವನ್ನೇ ಪಣಕ್ಕಿಟ್ಟು ಸಮುದ್ರಕ್ಕೆ ಇಳಿಯುವವರು. ಗಾಳಿಯ ಹೊಡೆತದಲ್ಲಿ ದೋಣಿ ಆಡಾಡಿದಾಗ, ಪ್ರತಿ ಕ್ಷಣವೂ ಜೀವ-ಸಾವುಗಳ ಹೋರಾಟ. ಮೀನಿಲ್ಲದ ಒಂದು ದಿನವೆಂದರೆ ಅವರ ಮನೆಗೆ ಹೊಟ್ಟೆಪಾಡಿಲ್ಲದ ದಿನ. ಹೀಗೆ ಸಮುದ್ರದ ದಯೆಯ ಮೇಲೇ ಅವರ ಬದುಕು ಕಟ್ಟಿಕೊಂಡಿದೆ. ಹೊರಗಿಂದ ನೋಡುವವರಿಗೆ ಸಮುದ್ರ ಸುಂದರ, ಅಲೆಗಳು ಮನಮೋಹಕ, ಆದರೆ ಆ ಅಲೆಗಳ ಒಳಗಿರುವ ಮೀನುಗಾರನ ಬದುಕು ನೋವಿನ ಸಮುದ್ರವೇ. ಅವರ ಕೈಗಳಲ್ಲಿ ಬಲೆಯಿದ್ದರೂ, ಹೃದಯದಲ್ಲಿ ಹಂಬಲವಿದೆ , ಮಕ್ಕಳ ಹೊಟ್ಟೆತುಂಬಿಸಲು, ಕುಟುಂಬದ ಮುಖದಲ್ಲಿ ನಗುವು ಮೂಡಿಸಲು. ಮಳೆ, ಗಾಳಿ, ಅಲೆಗಳೊಂದಿಗೆ ಹೋರಾಡುತ್ತಾ ಸಾಗುತ್ತದೆ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/09/21/daily-stories-10/ #ಶುಭ ರವಿವಾರ #ರವಿವಾರ....ರಜಾವಾರ.... ##💐ಶುಭ ರವಿವಾರ 🌄 #ಶುಭ ರವಿವಾರ ಶುಭೋದಯ #MalpeBeach #SeaBreeze #CoastalVibes #OceanWhispers #SunsetGlow #WaveChasing #BeachMood #FishermenLife #SeafoodLove #TravelMalpe #SandAndSea #OceanDiaries #CoastalCharm #BeachEscape #NatureCanvas #SeasideSoul #TideAndTime #BlueHorizon #ShoreStories #SereneShores
🌞ಸೂರ್ಯಗ್ರಹಣ🌞🌇 - RamAekaroricial RamAekaroricial - ShareChat
Read my thoughts on YourQuote app at https://www.yourquote.in/ram-ajekar-d2xl/quotes/geddvniguu-sthaan-sootvniguu-sthaanvide-aadre-bdiylli-nintu-cxecg9 #🙏🙏 ಜೈ ಶ್ರೀ ಶನಿ ದೇವ 🙏🙏 #🙏ಶನಿ ದೇವಾಯ ನಮಃ #ಶುಭ ಶನಿವಾರ #ಶುಭ ಶನಿವಾರ #ಶನಿವಾರ
🙏🙏 ಜೈ ಶ್ರೀ ಶನಿ ದೇವ 🙏🙏 - ಗೆದ್ದವನಿಗೂ ಸ್ಥಾನ; ಸೋತವನಿಗೂ ಸ್ಥಾನವಿದೆ  ಬದಿಯಲ್ಲಿ ఆదెరి ನೋಡುತ್ತಿದ್ದು  నింశు ನಗುತ್ತಿರುವನಿಗೆ   ಚರಿತ್ರೆಯಲ್ಲೇ ಜಾಗವಿಲ್ಲ . Ram Ajekar Your uote.in ಗೆದ್ದವನಿಗೂ ಸ್ಥಾನ; ಸೋತವನಿಗೂ ಸ್ಥಾನವಿದೆ  ಬದಿಯಲ್ಲಿ ఆదెరి ನೋಡುತ್ತಿದ್ದು  నింశు ನಗುತ್ತಿರುವನಿಗೆ   ಚರಿತ್ರೆಯಲ್ಲೇ ಜಾಗವಿಲ್ಲ . Ram Ajekar Your uote.in - ShareChat
ತುಳುನಾಡಿನ ಸಂಸ್ಕೃತಿಯ ಹೊಳಪು ಅಂಡಾರು ಕೊಡಮಣಿತ್ತಾಯ ಕಂಬಳದ ಜೋಗಿ ಪುರುಷ ತುಳುನಾಡು ಸಂಸ್ಕೃತಿಗಳ ತೊಟ್ಟಿಲು ಎನ್ನುವುದು ಅತಿಶಯೋಕ್ತಿ ಅಲ್ಲ. ಇಲ್ಲಿನ ಮಣ್ಣು, ಮಳೆ, ನದಿ, ಹಳ್ಳಿ ಮತ್ತು ಹಬ್ಬ ಒಟ್ಟಿಗೆ ಬೆರೆತು ಬದುಕಿನ ಬಣ್ಣಬಣ್ಣದ ಸಂಸ್ಕೃತಿಯನ್ನು ರೂಪಿಸಿವೆ. . ಪ್ರತಿಯೊಂದು ಹಳ್ಳಿ, ಪ್ರತಿಯೊಂದು ನದಿ ತೀರವು ತನ್ನದೇ ಆದ ವಿಶೇಷ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದು, ಇಂದಿಗೂ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿದೆ. ಅದರಲ್ಲೂ ಕಂಬಳ ಒಂದು ವಿಶಿಷ್ಟ ಪರಂಪರೆ. ಕೇವಲ ಕೋಣಗಳ ಓಟ ಎನ್ನುವುದಕ್ಕಿಂತಲೂ ಇದು ಮಣ್ಣಿನ, ಮಳೆಯ, ಕೃಷಿಯ ಮತ್ತು ದೇವರೊಂದಿಗೆ ಬೆಸೆಯಾದ ಉತ್ಸವ. ತುಳುನಾಡಿನ ಪ್ರತಿಯೊಂದು ಭಾಗದಲ್ಲಿಯೂ ಕಂಬಳಕ್ಕೆ ಸ್ವಲ್ಪಸ್ವಲ್ಪ ವೈಶಿಷ್ಟ್ಯವಿದ್ದು, ಅದರ ಆಚರಣೆಯ ಶೈಲಿ ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅಂಡಾರು ಗ್ರಾಮದಲ್ಲಿರುವ ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಡೆಯುವ ಕಂಬಳ ಇದಕ್ಕೆ ಒಂದು ಸುಂದರ ಸಾಕ್ಷಿ. ಇಲ್ಲಿನ ಕಂಬಳವು ಕೇವಲ ಕ್ರೀಡೆ ಅಥವಾ ಹಬ್ಬವಲ್ಲ, ಇದು ನಂಬಿಕೆಯ, ನಿಷ್ಠೆಯ ಹಾಗೂ ಭಕ್ತಿಯ ಹಬ್ಬ. ಅಂಡಾರಿನ ಕಂಬಳವನ್ನು ನೋಡಿದವರು ಆ ಸಂಸ್ಕೃತಿಯ ತೀವ್ರತೆಯನ್ನು ಹೃದಯದಿಂದ ಅನುಭವಿಸುತ್ತಾರೆ. ಈ ಕಂಬಳದ ವಿಶೇಷ ಆಕರ್ಷಣೆಯೆಂದರೆ ಜೋಗಿ ಪುರುಷ ವೇಷ. ತಲೆಗೆ ಮುಂಡಾಸು, ದೇಹಕ್ಕೆ ಬಿಳಿಯ ವಸ್ತ್ರ ಧರಿಸಿ ಗದ್ದೆಯಲ್ಲಿ ಹೆಜ್ಜೆ ಹಾಕುವ ಆ ವೇಷಧಾರಿ ಕೇವಲ ಕಲಾವಿದನಲ್ಲ, ದೈವದ ರೂಪವೇ ಆಗಿ ಕಾಣುತ್ತಾನೆ. ಆತನ ನಡೆ-ನುಡಿ, ಮುಖಭಾವ, ಕೈಚಳವಳಿಗಳಲ್ಲಿ ಒಂದು ದೈವಿಕತೆ ತುಂಬಿಕೊಂಡಿದೆ. . ಕಂಬಳದ ಗದ್ದೆಯ ಸುತ್ತಮುತ್ತಲಿನ ಪ್ರಕೃತಿಯೂ ಅದನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ಹಿಂಬದಿಯಲ್ಲಿ ವಾಲಿಕುಂಜ ಬೆಟ್ಟ ಹಸಿರು ಹೊದಿಕೆಯೊಡ್ಡಿಕೊಂಡು ನಕ್ಕಂತೆ ಕಾಣುವುದು. ಗದ್ದೆಯ ಸುತ್ತಲಿನ ಹಚ್ಚಹಸಿರು ಹೊಲಗಳು, ಮಣ್ಣಿನ ಸುಗಂಧ, ನದಿಯ ತಂಪು ಸೇರಿ ಅಸಾಧಾರಣ ಸೌಂದರ್ಯವನ್ನು ರಚಿಸುತ್ತವೆ. ಆ ಸನ್ನಿವೇಶದಲ್ಲಿ ಕಂಬಳ ನಡೆಯುವಾಗ, ಅದು ಕೇವಲ ಹಬ್ಬವಲ್ಲದೆ ಒಂದು ಜೀವಂತ ಮೂಡಿ ಬರುತ್ತದೆ. ಕಂಬಳದ ಸಮಯದಲ್ಲಿ ವಾದ್ಯಗಳ ಘರ್ಜನೆ, ತಾಸೆಯ ನಾದ, ದೈವದ ಬಂಟರ ಪೌರಾಣಿಕ ಹೆಜ್ಜೆಗಳು ಗದ್ದೆಯಲ್ಲಿ ಮೂಡಿಸುವ ಆ ಕಲೆ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಅಚ್ಚಳಿಯದ ಅನುಭವವನ್ನು ನೀಡುತ್ತದೆ. ಈ ಕ್ಷಣಗಳಲ್ಲಿ ಪ್ರತಿಯೊಬ್ಬರೂ ತಮ್ಮನ್ನು ದೇವರ ದರ್ಶನಕ್ಕೆ ಬಂದ ಭಕ್ತರಂತೆ ಭಾಸಪಡುತ್ತಾರೆ. ಈ ಕಂಬಳವು ಸಾಮಾನ್ಯವಾಗಿ ನವೆಂಬರ್ ತಿಂಗಳ ಕೊಡಿತಿಂಗಳಲ್ಲಿ ನಡೆಯುತ್ತದೆ. ಆ ಕಾಲದಲ್ಲಿ ಹಸಿರು ಹೊಲಗಳ ನಡುವೆ, ಹೊಳೆಗಳ ಒಡಲಲ್ಲೇ ಹಬ್ಬದ ಸಂಭ್ರಮ ಮೂಡುತ್ತದೆ. ರೈತರು, ಭಕ್ತರು, ಹಳ್ಳಿಯ ಜನ ಒಟ್ಟಿಗೆ ಸೇರಿ ಈ ಸಂಸ್ಕೃತಿಯನ್ನು ಸಂಭ್ರಮಿಸುತ್ತಾರೆ. ಈ ಹಬ್ಬವು ಇಂದಿಗೂ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿದ್ದು, ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಮರುಕಳಿಸುತ್ತಿದೆ. ಕಾಲ ಬದಲಾದರೂ, ಜೀವನ ಶೈಲಿ ಬದಲಾಗಿದರೂ, ಕಂಬಳದಂತಹ ಪರಂಪರೆಗಳು ಜನಮನದಲ್ಲಿ ಅಚ್ಚಳಿಯದ ನಂಬಿಕೆ ಮತ್ತು ಗೌರವವನ್ನು ತುಂಬುತ್ತಿವೆ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/09/20/daily-stories-9/ #ಸಂಸ್ಕೃತಿ #ನಮ್ಮ ಸಂಸ್ಕೃತಿ ##ಹಿಂದೂ ಸಂಸ್ಕೃತಿ #ನಮ್ಮ ಸಂಸ್ಕೃತಿ ##ಭಾರತದ ಹೆಣ್ಣು ಮಕ್ಕಳ ಸಂಸ್ಕೃತಿ
ಸಂಸ್ಕೃತಿ - Ram Ajekar official Ram Ajekar official - ShareChat
##ದಿನಕ್ಕೊಂದು_ಶುಭನುಡಿ #ದಿನಕ್ಕೊಂದು_ಶುಭನುಡಿ #👏ದಿನಕ್ಕೊಂದು ಮುತ್ತಿನ ನುಡಿ #ದಿನಕ್ಕೊಂದು ಕಥೆ ನಾ ನಿಮ್ಮ ಜೊತೆ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು_ಪ್ರಶ್ನೆ #ಮನಸ್ಸು #ಮಧುರ #ಪ್ರೀತಿಬರಹ #ಪ್ರೀತಿಯಮಾತು #ರಾಂಅಜೆಕಾರು #ಪ್ರೇಮ Read my thoughts on YourQuote app at https://www.yourquote.in/ram-ajekar-d2xl/quotes/cinte-shj-aadre-deevru-kotttt-priiti-sneehvee-adnnu-shaashvt-cxd3wo
#ದಿನಕ್ಕೊಂದು_ಶುಭನುಡಿ - Your uotein ಚಿಂತೆ ಸಹಜ, oe3 ఆదెరి దవెరు ಅದನ್ನು ಪ್ರೀತಿ-ಸ್ನೇಹವೇ   ಮರೆಮಾಡುವ ಶಾಶ್ವತ ಆಸ್ತಿ ಎಂದರು ತಪ್ಪಲ್ಲ Ram Ajekar Your uotein ಚಿಂತೆ ಸಹಜ, oe3 ఆదెరి దవెరు ಅದನ್ನು ಪ್ರೀತಿ-ಸ್ನೇಹವೇ   ಮರೆಮಾಡುವ ಶಾಶ್ವತ ಆಸ್ತಿ ಎಂದರು ತಪ್ಪಲ್ಲ Ram Ajekar - ShareChat
Read my thoughts on YourQuote app at https://www.yourquote.in/ram-ajekar-d2xl/quotes/cinte-shj-aadre-deevru-kotttt-priiti-sneehvee-adnnu-shaashvt-cxd3wo Read my thoughts on YourQuote app at https://www.yourquote.in/ram-ajekar-d2xl/quotes/cinte-shj-aadre-deevru-kotttt-priiti-sneehvee-adnnu-shaashvt-cxd3wo #ಸ್ಪೂರ್ತಿ ಸೆಲೆ #ಸ್ಪೂರ್ತಿ ಚಿಲುಮೆ #🙏ರವಿ. ಡಿ.ಚನ್ನಣ್ಣನವರ್ IPS ಆಫೀಸರ್ ಯುವಕರ ಸ್ಪೂರ್ತಿ🙏🙏 #ಇದು ನಿಜವಾದ ಕ್ರೀಡಾ ಸ್ಪೂರ್ತಿ
ಸ್ಪೂರ್ತಿ ಸೆಲೆ - Your uotein ಚಿಂತೆ ಸಹಜ; ३०६३ ఆదరి దివెరు అదెన్ను ಪ್ರೀತಿ-ಸ್ನೇಹವೇ  మెరిమోడువె రార్టికె ఆస్తి ಎಂದರು ತಪ್ಪಲ್ಲ Ram Ajekar] Your uotein ಚಿಂತೆ ಸಹಜ; ३०६३ ఆదరి దివెరు అదెన్ను ಪ್ರೀತಿ-ಸ್ನೇಹವೇ  మెరిమోడువె రార్టికె ఆస్తి ಎಂದರು ತಪ್ಪಲ್ಲ Ram Ajekar] - ShareChat
ಪ್ರಕೃತಿಯಂತೆ, ಬದುಕಿನಂತೆ, ಹಂಚಿಕೊಳ್ಳುವ ಮನೋಭಾವನೆ ಹೊಂದಿದಾಗಲೇ ಶಾಶ್ವತ ಬದುಕು ಸಾಧ್ಯ/!!! ಅದೊಂದು ತೆಂಗಿನಮರ. ಮನುಜರ ಮಧ್ಯೆ ಬೆಳೆದಿದ್ದರೂ, ಅವನಿಂದ ತನ್ನಿಗೆ ಯಾವುದೇ ಲಾಭವಿಲ್ಲವೆಂದು ಅದು ಅರಿತುಕೊಂಡಿತ್ತು. ಏಕೆಂದರೆ ಮನುಜನು ಸದಾ ಸ್ವಾರ್ಥಪರ, ತನ್ನ ಅಗತ್ಯ ಪೂರೈಸದಿದ್ದರೆ ಮರವನ್ನು ಕೊಚ್ಚಿ ಹಾಕುವವನೇ. ಆ ಕಾರಣದಿಂದ ಮರವು ನದಿಯತ್ತ ವಾಲಿಕೊಂಡಿತು. ಮರದ ಹಠ ಅಷ್ಟೇನೋ, ತನ್ನ ತೆಂಗಿನಕಾಯಿ ಮನುಜನ ಕೈಗೂ ಸೇರಬಾರದು, ಪ್ರಾಣಿಗಳ ಬಾಯಿಗೂ ಸೇರಬಾರದು. ಆದರೆ ಆ ಹಠದ ನಡುವೆಯೇ ಮರದ ಕೊಂಬೆಗಳ ಮೇಲೆ ಗೂಡು ಕಟ್ಟಿದ್ದ ಹಕ್ಕಿಗಳ ಮೊಟ್ಟೆಗಳು ನದಿಗೆ ಬಿದ್ದುಹೋಗುತ್ತಿರುತ್ತವೆ. ಮರ ತನ್ನ ಬದುಕಿನ ತವಕದಲ್ಲಿ, ಇತರರ ಜೀವವನ್ನೇ ಅಪಾಯಕ್ಕೆ ತಳ್ಳುತ್ತಿತ್ತು. ಮರವು ತನ್ನ ಅಸ್ತಿತ್ವಕ್ಕಾಗಿ ದಿನವೂ ಬೇರುಗಳನ್ನು ನದಿಯತ್ತ ಸಾಗಿಸುತ್ತಿತ್ತು. ಮಳೆಗಾಲದಲ್ಲಿ ಭೋರ್ಗರೆವ ನದಿ, ಬೇಸಗೆಯಲ್ಲಿ ಒಣಗುತ್ತಿತ್ತಾದರೂ ಅದರ ನಂಬಿಕೆ ನದಿಯಲ್ಲೇ. ಬದುಕಬೇಕೆಂಬ ಹಂಬಲದಲ್ಲಿ ಅದು ನಿರಂತರ ನದಿಯತ್ತ ತಲೆಬಾಗುತ್ತಲೇ ಇತ್ತು. ಆದರೆ ಕಾಲ ಬದಲಾಯಿತು. ಒಮ್ಮೆ ಭೀಕರ ಮಳೆಯಾಗಿ, ನದಿಗೆ ಪ್ರವಾಹವಾಯಿತು. ನದಿಯ ಸೆಳೆತದಲ್ಲಿ ಮರದ ಕೆಳಭಾಗದ ಮಣ್ಣು ಕೊಚ್ಚಿಕೊಂಡು ಹೋಯಿತು. ಮರವು ತನ್ನ ಹಠದೊಂದಿಗೆ ಕೊನೆಗೂ ನೆಲ ಕಳೆದುಕೊಂಡು ಬಿದ್ದು, ಸಮುದ್ರ ಸೇರಿ ಅಳಿದುಹೋಯಿತು. ಮರದ ಬದುಕಿನ ಹಂಬಲ, ಅದರ ಹಠ, ಕೊನೆಯಲ್ಲಿ ಅದನ್ನೇ ನಾಶಮಾಡಿತು. ಜೀವನದಲ್ಲಿ ಹಠ, ಸ್ವಾರ್ಥ, ಕೇವಲ ನನ್ನ ಅಸ್ತಿತ್ವವೇ ಮುಖ್ಯ ಎಂಬ ಮನೋಭಾವವು ಕೊನೆಗೆ ನಾಶಕ್ಕೆ ಕಾರಣವಾಗುತ್ತದೆ. ರಾಂ‌ ಅಜೆಕಾರು ಕಾರ್ಕಳ http://ramajekar.travel.blog/2025/09/19/daily-stories-8/ #ಕ್ಯಾಪ್ಟನ್ಸಿಯಲ್ಲಿ ತಮ್ಮ ಸ್ಪೂರ್ತಿ ಯಾರೆಂದು ತಿಳಿಸಿದ ಶುಭಮನ್ ಗಿಲ್ #🙏ರವಿ. ಡಿ.ಚನ್ನಣ್ಣನವರ್ IPS ಆಫೀಸರ್ ಯುವಕರ ಸ್ಪೂರ್ತಿ🙏🙏 #ಸ್ಪೂರ್ತಿ ಚಿಲುಮೆ #ಇದು ನಿಜವಾದ ಕ್ರೀಡಾ ಸ್ಪೂರ್ತಿ #ಸ್ಪೂರ್ತಿ ಸೆಲೆ
ಕ್ಯಾಪ್ಟನ್ಸಿಯಲ್ಲಿ ತಮ್ಮ ಸ್ಪೂರ್ತಿ ಯಾರೆಂದು ತಿಳಿಸಿದ ಶುಭಮನ್ ಗಿಲ್ - @Ram Aekaroficial @Ram Aekaroficial - ShareChat
Read my thoughts on YourQuote app at https://www.yourquote.in/ram-ajekar-d2xl/quotes/taayi-tndey-bennelubin-shrm-surid-bevrin-hni-nerllu-haagu-cxdwr2 #🕉️ ಶುಭ ಶುಕ್ರವಾರ #ಶುಭ ಶುಕ್ರ ವಾರ 🌸🌸🌸🌸 #ಶುಕ್ರ ಗೌರಿ 🙏🙏 #ಶುಕ್ರ ಗೌರೀ ಶುಭಾಶಯ #ಶುಭ ಶುಕ್ರ ವಾರ 🙏🏻
🕉️ ಶುಭ ಶುಕ್ರವಾರ - ತಾಯಿ-ತಂದೆಯ ಬೆನ್ನೆಲುಬಿನ ಶ್ರಮ; ಸುರಿದ ಬೆವರಿನ ಹನಿ, ನೆರಳು ೊ ನಿಮ್ಮ ? పయిత్నెదె నార్షి - బిన్నపింది ಹಾಗು ಸವೆದ ಚಪ್ಪಲಿ ಮಾತ್ರವೇ ಅಲ್ಲ . ಮಾತನಾಡುವವರಿಗೆ Ram Ajekar] Your uotein ತಾಯಿ-ತಂದೆಯ ಬೆನ್ನೆಲುಬಿನ ಶ್ರಮ; ಸುರಿದ ಬೆವರಿನ ಹನಿ, ನೆರಳು ೊ ನಿಮ್ಮ ? పయిత్నెదె నార్షి - బిన్నపింది ಹಾಗು ಸವೆದ ಚಪ್ಪಲಿ ಮಾತ್ರವೇ ಅಲ್ಲ . ಮಾತನಾಡುವವರಿಗೆ Ram Ajekar] Your uotein - ShareChat
#💐ಗುರುವಾರದ ಶುಭಾಶಯಗಳು ತುಳುನಾಡಿನ ಬದಲಾಗುತ್ತಿರುವ ಶ್ರಮ ಸಂಸ್ಕೃತಿ ಒಂದಾನೊಂದು ಕಾಲದಲ್ಲಿ ತುಳುನಾಡಿನ ಪ್ರತಿಯೊಂದು ರೈತರ ಮನೆಯ ಕೊಟ್ಟಿಗೆಯಲ್ಲೂ , ಕೋಣಗಳು ಹಸುಗಳ ನಾದ ಕೇಳಿಬರುತ್ತಿತ್ತು. ತೊಂಬತ್ತರ ದಶಕದಲ್ಲಿ ಕೃಷಿ ಜೀವನವೇ ಜನರ ಶ್ವಾಸವಾಗಿತ್ತು. ಪಶುಸಂಗೋಪನೆಯೂ ಅದರ ಅವಿಭಾಜ್ಯ ಅಂಗವಾಗಿತ್ತು. ಆಗ ಸಾಕುಪ್ರಾಣಿಗಳೆಂದರೆ , ಕೋಣಗಳೇ ಎಮ್ಮೆಗಳು ,ಹಸುಗಳು ಪ್ರಮುಖ. ಉಳುಮೆ, ಬಿತ್ತನೆ, ಇವೆಲ್ಲವೂ ಜಾನುವಾರುಗಳ ಸಹಾಯವಿಲ್ಲದೆ ಅಸಾಧ್ಯವಾಗಿತ್ತು. ಮಳೆಗಾಲ ಬಂದರೆ ಹಟ್ಟಿಗಳಲ್ಲಿ ಹಸಿರು ಸೊಪ್ಪು ತರಲು, ಬೇಸಿಗೆ ಬಂದರೆ ಮರದಿಂದ ಉದುರಿದ ತರಗಲೆಗಳನ್ನು ಸಂಗ್ರಹಿಸಿ ಕೊಟ್ಟಿಗೆಯಲ್ಲಿ ಹಾಕಿ ಗೊಬ್ಬರ ಪಡೆಯಲು ಕುಟುಂಬದ ಪ್ರತಿಯೊಬ್ಬರೂ ಕೈಜೋಡಿಸುತ್ತಿದ್ದರು. ಹೀಗೆ ಕೊಟ್ಟಿಗೆಯಲ್ಲಿ ತುಂಬಿದ ಜಾನುವಾರುಗಳ ಕಿರುಚಾಟ, ಅವುಗಳ ಆರೈಕೆ ಮಾಡಿದವರ ಕಾಳಜಿ ಈ ಎಲ್ಲವು ಮನೆಯನ್ನು ಜೀವಂತವಾಗಿಟ್ಟಿದ್ದವು. ಆದರೆ ಕಾಲ ಬದಲಾಗಿದೆ. ಇಂದು ಅದೆಲ್ಲವೂ ನೆನಪುಗಳಾಗಿವೆ. ಯಂತ್ರೀಕರಣ ಕೃಷಿಯನ್ನು ಹಿಡಿದಿದ್ದರಿಂದ ಎತ್ತುಗಳ ಬೆನ್ನು ನಂಬಿ ಹೊಲಕ್ಕೆ ಇಳಿಯುವ ರೈತರ ದೃಷ್ಯ ಕಣ್ಮರೆಯಾಗಿದೆ. ಮನೆಮನೆಗೆ ಜಾನುವಾರು ಸಾಕುವುದು ಕಷ್ಟಕರವಾದ ಹೊಣೆಗಾರಿಕೆಯಾಗಿದೆ. ಇವತ್ತಿನ ಮಕ್ಕಳಿಗೆ ಕೋಣಗಳ ಉಳುಮೆಯೇ ತಿಳಿಯದ ಸ್ಥಿತಿ. ಪಠ್ಯಪುಸ್ತಕದಲ್ಲಿ ಬರುವ ಉಳುಮೆಯ ಪಾಠವನ್ನು ಶಿಕ್ಷಕರು ವಿವರಿಸಲು ಹರಸಾಹಸ ಪಡುತ್ತಿದ್ದಾರೆ. ಶ್ರಮವೇ ಸಂಸ್ಕೃತಿ ಎಂದು ಬೆಳೆದ ಪೀಳಿಗೆ ಈಗ ನಿಧಾನವಾಗಿ ಅಳಿದುಹೋಗುತ್ತಿದೆ. ಹಟ್ಟಿಯ ಹಸಿರು ಸೊಪ್ಪು ಕತ್ತರಿಸುವ ಕತ್ತಿಯ ಸದ್ದು, ಕೊಟ್ಟಿಗೆಯ ಸುಗಂಧ, ಜಾನುವಾರುಗಳ ಕಣ್ಣುಗಳಲ್ಲಿ ಕಂಡ ಪ್ರೀತಿ ಈಗ ಕೇವಲ ನೆನಪು. ರೈತನ ಬದುಕಿಗೆ ಅಜರಾಮರವಾದ ಆ ಶ್ರಮ ಸಂಸ್ಕೃತಿ ಇಂದು ಮರೆಯಾಗುತ್ತಿದೆ. ಇಂದು ತುಳುನಾಡಿನಲ್ಲಿ ಕಂಬಳದ ಕೋಣಗಳೇ ಉಳಿದಿವೆ. ಅವು ಸಹ ಸಂಪ್ರದಾಯವನ್ನು ಉಳಿಸಿಕೊಂಡು ಬದುಕುತ್ತಿರುವ ಪ್ರತೀಕಗಳಷ್ಟೇ. ಜೀವನಶೈಲಿಯ ಬದಲಾವಣೆಯೊಂದಿಗೆ ಹಳ್ಳಿ ಸಂಸ್ಕೃತಿಯೂ ಬದಲಾಗಿದೆ. “ಒಂದು ಕಾಲ ಇತ್ತು” ಎಂದು ನೆನಪು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ನಮ್ಮ ಹೃದಯವನ್ನು ಕವಿಯುವ ಸತ್ಯ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/09/18/daily-stories-7/ #ಗುರುವಾರ #ಶುಭ ಗುರುವಾರ #ಶುಭ ಗುರುವಾರ #ಶುಭ ಗುರುವಾರ
💐ಗುರುವಾರದ ಶುಭಾಶಯಗಳು - Ajekar ofic Ajekar ofic - ShareChat
#🙏ಶನಿವಾರದ ಭಕ್ತಿ ಸ್ಪೆಷಲ್ ನೆರಳಾದ ಮರಗಳ ಕಥೆ ಹಳ್ಳಿಯೊಂದರ ಮಧ್ಯೆ ಹಾದು ಹೋಗುವ ಆ ಟಾರು ರಸ್ತೆ, ನೂರಾರು ಕನಸುಗಳನ್ನು ಹೊತ್ತಿದೆ. ರಸ್ತೆ ಎರಡೂ ಬದಿಯಲಿ ಬೊವಿನ ಎತ್ತರದ ಹಸಿರು ಮರಗಳು, ನೋಡುವವರ ಮನಸ್ಸಿಗೆ ಅದೊಂದು ಅಹ್ಲಾದತೆ ತುಂಬಿದೆ. . ಹಳ್ಳಿ ಜನರಿಗೂ, ಹೊರಗಿನಿಂದ ಬರುವ ಅತಿಥಿಗಳಿಗೂ ಈ ರಸ್ತೆ ಕೇವಲ ಸಂಚಾರದ ದಾರಿ ಯಾಗಿದ್ದರು ಬದುಕಿನ ಕಥೆಗಳ ಸಾಕ್ಷಿಯಾದ ಹಾದಿಯಂತಾಗಿದೆ. ಪ್ರತಿ ದಿನ ಈ ರಸ್ತೆಯಲ್ಲಿ ನೂರಾರು ಅಗಂತುಕರು, ಪರಿಚಿತರು ಸಂಚರಿಸುತ್ತಾರೆ. ಕೆಲವರು ತಮ್ಮ ಬದುಕಿನ ಕನಸುಗಳನ್ನೊಯ್ಯಲು ಈ ದಾರಿಯನ್ನು ಹಾದು ಹೋಗುತ್ತಾರೆ, ಇನ್ನೂ ಕೆಲವರು ಬಿಸಿಲಿನ ಹಟದಿಂದ ಬಳಲಿದಾಗ ಈ ಮರಗಳ ನೆರಳಲ್ಲಿ ಆಶ್ರಯ ಪಡೆದು ತಂಪಿನ ಉಸಿರು ಬಿಡುತ್ತಾರೆ. ಹಸಿರು ಮರಗಳ ನೆರಳಲ್ಲಿ ನಿಂತು ಮಾತುಕತೆ ನಡೆಸಿದ ಅಜ್ಜಿ-ಅಜ್ಜರ ಕಥೆಗಳು, ಮುತ್ತಿನಂತಹ ನೆನಪುಗಳಾಗಿ ಉಳಿದಿವೆ. ಈ ರಸ್ತೆಯಲ್ಲಿ‌ನಿತ್ಯ ನೂರಾರು ಹಸುಗಳು ಕೂಡ ‌ಮಲಗಿ ದಣಿವಾರಿಸಿಕೊಳ್ಳುತ್ತವೆ. ಆ ಮರಗಳು ಅದೆಷ್ಟೊ ಪುಣ್ಯ ಮಾಡಿವೆಯೇನೋ! ಕೆಲವು ಬಿಟ್ಟ ಹಸುಗಳು ರಾತ್ರಿ ಇಲ್ಲೆ ಮರಗಳ ಕೆಳಗೆ ಆಶ್ರಯ ಪಡೆಯುತ್ತವೆ.ಮೈ ದೇಹಕ್ಕೆ ಹುಳು ಹುಪ್ಪಟೆಗಳಿದ್ದರು ಹೋಗಿ‌ ಮರಕ್ಕೆ ಮೈ ಉಜ್ಜಿ ಸಂತ್ವಾನವನ್ನು ಪಡೆಯುತ್ತವೆ‌.ಇಲ್ಲದಿದ್ದರೆ ಹತ್ತಿರ ಮರದಲ್ಲಿ ಗೂಡುಕಟ್ಟಿದ್ದ ಕಾಗೆ ರಾಯ ಬಂದು ಹುಳು ಹುಪ್ಪಟೆಗಳನ್ನು ಅಹಾರವಾಗಿ ಸೇವಿಸುತಿದ್ದ . ಮಳೆಯ ಕಾಲ ಬಂದಾಗ ಈ ರಸ್ತೆ ತನ್ನದೇ ಸ್ವರೂಪ ಪಡೆದುಕೊಳ್ಳುತ್ತದೆ. ಮರಗಳ ಎಲೆಗಳ ಮೇಲಿನ ಮಳೆ ಹನಿಗಳು ಬಿದ್ದು ತಣಿವ ನಾದವನ್ನು ಸೃಷ್ಟಿಸುವಾಗ, ಹಳ್ಳಿಯ ಹೃದಯವನ್ನು ಹಬ್ಬಿಸುವ ಸಂಗೀತವೇ ನುಡಿಯುತ್ತಿರುವಂತೆ ಅನಿಸುತ್ತದೆ. ಆದರೆ, ಈ ಮರಗಳು ಗೆಲ್ಲು ಬೀಳುವ ಅಪಾಯವಿದೆ ಎಂಬ ಹೆಸರಿನಲ್ಲಿ ಕೆಲವೊಮ್ಮೆ ಅರಣ್ಯ ಇಲಾಖೆ ಅವುಗಳನ್ನು ಕಡಿದುಹಾಕುವ ಯತ್ನ ನಡೆಸುತ್ತದೆ. ಸ್ಥಳೀಯ ಪರಿಸರ ಹೋರಾಟಗಾರರು ಮರಗಳ ಮಹತ್ವವನ್ನು ಅರಸಿ ಅವುಗಳನ್ನು ಉಳಿಸುವ ಹೋರಾಟ ಮಾಡುತ್ತಾರೆ. ಒಮ್ಮೆ, ಪರಿಸರ ವಿರೋಧಿಯೊಬ್ಬನು ಈ ಮರಗಳನ್ನು ಕಡಿಯಿರಿ ಎಂದು ಹೇಳಿದ ಸಂದರ್ಭ, ಅದೇ ರಸ್ತೆಯಲ್ಲಿ ಸಾಗುತ್ತಿದ್ದಾಗ ಆತನ ಕಾರು ಹೊಂಡಕ್ಕೆ ಬೀಳುವ ಪರಿಸ್ಥಿತಿ ಎದುರಾದಿತ್ತು. ಆದರೆ, ಮರಗಳ ಬೇರು ಹಿಡಿದಿದ್ದ ಮಣ್ಣೇ ಕಾರನ್ನು ತಡೆದು ಅವನ ಜೀವ ಉಳಿಸಿತು. ಆ ಕ್ಷಣದಲ್ಲಿ ಮರಗಳ ಜೀವ ಉಳಿಸುವ ಶಕ್ತಿಯನ್ನು ಆತನು ತಾನೇ ಅನುಭವಿಸಿದ. ಇನ್ನೊಂದು ಬದಿಯಲ್ಲಿ ಮರ ವ್ಯಾಪಾರಿಗಳು ಈ ಬೊವಿನ ಮರಗಳನ್ನು ಹಣದ ಲೆಕ್ಕಾಚಾರದಿಂದ ನೋಡುವರು. ಅವು ಬೆಲೆಬಾಳುವ ಮರಗಳು, ಕಡಿದು ಮಾರಿದರೆ ಲಾಭವಾಗುತ್ತದೆ ಎನ್ನುವ ಲೆಕ್ಕದಲ್ಲಿ ತೊಡಗುತ್ತಾರೆ. ಆದರೆ, ಹಳ್ಳಿಯ ಜನರಿಗೆ ಈ ಮರಗಳು ಕೇವಲ ವ್ಯಾಪಾರದ ವಸ್ತುಗಳಲ್ಲ. ಅವರ ಬದುಕಿನ ಉಸಿರು, ದೈನಂದಿನ ಜೀವನದ ಸಂಗಾತಿಗಳು. ರಸ್ತೆ ಬದಿಯಲ್ಲಿ ಸಾಗುವವರು, ಅತಿಥಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಎಲ್ಲರೂ ಈ ಮರಗಳ ಕೆಳಗೆ ನಿಂತು ವಿಶ್ರಾಂತಿ ಪಡೆಯುತ್ತಾರೆ. ಮರದ ನೆರಳಿನಲ್ಲಿ ದೊರಕುವ ಆ ಮಧುರ ತಂಪು, ಯಾವುದೇ ದ್ರವ್ಯದ ಬೆಲೆಗೆ ಅಳತೆಯಾಗುವುದಿಲ್ಲ. ಈ ರಸ್ತೆ ಹಳ್ಳಿ ಸಂಸ್ಕೃತಿ, ಪ್ರಕೃತಿ ಮತ್ತು ಬದುಕಿನ ತತ್ವಗಳನ್ನೇ ಒಟ್ಟುಗೂಡಿಸಿದೆ. ಮರಗಳ ನೆರಳಲ್ಲಿ ಬೆಳೆದ ಸ್ನೇಹಗಳು, ಕೇಳಿಬಂದ ಕಥೆಗಳು, ಉಳಿದ ನೆನಪುಗಳು ಹಳ್ಳಿಯ ಜೀವಾಳವನ್ನು ಕಟ್ಟಿಕೊಡುತ್ತವೆ. ಹೀಗಾಗಿ, ಈ ಮರಗಳನ್ನು ಉಳಿಸುವುದು ಕೇವಲ ಪರಿಸರ ಹೋರಾಟವಲ್ಲ; ಅದು ಹಳ್ಳಿಯ ಬದುಕನ್ನು, ಕನಸುಗಳನ್ನು, ನೆನಪುಗಳನ್ನು ಉಳಿಸುವ ಸತ್ಯ ಹೋರಾಟ. ಹಳ್ಳಿಯ ಈ ಟಾರು ರಸ್ತೆ ನಮಗೆ ಸಾರುವುದು ಏನೆಂದರ ಪ್ರಕೃತಿ ನಮ್ಮ ಬದುಕಿನ ಅಸ್ತಿತ್ವವನ್ನು ಕಾಯುವ ಅಮ್ಮನಂತೆ. ಮರಗಳನ್ನು ಉಳಿಸಿದರೆ ಮಾತ್ರ ಬದುಕಿನ ಹಾದಿಯೂ ಹಸಿರಾಗಿ ಉಳಿಯುತ್ತದೆ. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/09/12/daily-stories-6/ #ದಿನಕ್ಕೊಂದು ನುಡಿಮುತ್ತು #ದಿನಕ್ಕೊಂದು ಕವನ. 🌻🎭 #🎬 Good Morning ಸ್ಟೇಟಸ್ #💪 ಜೈ ಹನುಮಾನ್ 🚩
🙏ಶನಿವಾರದ ಭಕ್ತಿ ಸ್ಪೆಷಲ್ - Qeo Qeo - ShareChat