ಬ್ರಿಟಿಷರು ಮಹಾತ್ಮಾ ಗಾಂಧೀಜಿಯವರನ್ನು ಆಘಾಕಾನ್ ಅರಮನೆಯಲ್ಲಿ ವಾಸಿಸುವಂತೆ ಮಾಡಿ ವಿಪರೀತ ಹಿಂಸೆ ಕೊಡುತ್ತಿದ್ದ ಸಮಯವದು.
ಅದೇ ಸಮಯದಲ್ಲಿ 'ನ್ಯುಮೋನಿಯಾ ಖಾಯಿಲೆಗೆ ತುತ್ತಾಗಿದ್ದ ಮಹಾತ್ಮಾ ಗಾಂಧಿಯವರ ಪತ್ನಿ ಕಸ್ತೂರ್ಬಾ ಅವರು 'ಇನ್ನು ಬದುಕುಳಿಯುವುದೇ ಕಷ್ಟ' ಎನ್ನುವ ಹಂತ ತಲುಪಿದರು :-(
ಚಿಕಿತ್ಸೆಗಾಗಿ ಅರಮನೆಗೆ ಬಂದ ವಿಶೇಷ ವೈದ್ಯರು ಕಸ್ತೂರ್ಬಾ ಅವರಿಗೆ ಪೆನ್ಸಿಲಿನ್ ಅನ್ನು ಶಿಫಾರಸು ಮಾಡಿದರು. ಕ್ರೋಧಗೊಂಡ ಮಹಾತ್ಮಾ ಗಾಂಧೀಜಿಯವರು ಪೆನ್ಸಿಲಿನ್ ಒಂದು ವಿದೇಶೀ ಔಷಧವೆಂದೂ, ಅದರ ಬದಲು ಪ್ರಾರ್ಥನೆ ಮಾತ್ರವೇ ಸಾಕೆಂದೂ ತಿಳಿಸಿ ತಮ್ಮ ಪತ್ನಿಗೆ ಪೆನ್ಸಿಲಿನ್ ಚಿಕಿತ್ಸೆ ಮಾಡಕೂಡದು ಎಂದು ಹೇಳಿ ವೈದ್ಯರನ್ನು ವಾಪಸ್ ಕಳಿಸಿದರು.
ಅದಾಗಿ ಕೆಲವೇ ದಿನಗಳಲ್ಲಿ ಕಸ್ತೂರ್ಬಾ ಅವರು ತೀರಿಕೊಂಡರು.
ಆದರೆ ಈ ಎಲ್ಲಾ ಬೆಳವಣಿಗೆಗಳಿಂದ ಒಂದಿಷ್ಟೂ ವಿಚಲಿತಗೊಳ್ಳದ ಮಹಾತ್ಮಾ ಗಾಂಧೀಜಿ ಅಮೇರಿಕ ಮೂಲದ Studebaker President ಕಾರು ಹತ್ತಿ ಮತ್ತೆ ಸ್ವಾತಂತ್ರ್ಯ ಚಳುವಳಿಗೆ ಹೊರಟೇಬಿಟ್ಟರು!
"ಪೆನ್ಸಿಲಿನ್ ಒಂದು ವಿದೇಶೀ ಔಷಧ" ಎನ್ನುವ ಕಾರಣವೊಡ್ಡಿ ಕಸ್ತೂರ್ಬಾ ಎನ್ನುವ ಮುಗ್ಧ ಮಹಿಳೆಯನ್ನು ಮರಳಿ ಬಾರದೂರಿಗೆ ಕಳಿಸಿದ ಮಹಾತ್ಮಾ ಗಾಂಧೀಜಿಯವರ ಸೊಂಟದಲ್ಲಿ ನೇತಾಡುತ್ತಿದ್ದ ದುಬಾರಿ ಬೆಲೆಯ ಜೆನಿತ್ ಸ್ವಿಸ್ ವಾಚು ಗಹಗಹಿಸಿ ನಗುತ್ತಿತ್ತು!
ಮುಂದೊಂದು ದಿನ ಸ್ವತಃ ಮಹಾತ್ಮಾ ಗಾಂಧೀಜಿಯವರಿಗೆ ಮಲೇರಿಯಾ ಬಂದಾಗ ವಿದೇಶೀ ಮೂಲದ ಕ್ವಿನೈನ್ (Quinine) ತೆಗೆದುಕೊಳ್ಳುವಾಗಲೂ ಯಾವ ವಿದೇಶೀಯತೆಯೂ ಅಡ್ಡಿಯಾಗಲಿಲ್ಲ ಎನ್ನುವುದು ಇತಿಹಾಸ!
#🎬 Good Morning ಸ್ಟೇಟಸ್ #⚖️ ಡಾ.ಬಿ ಆರ್ ಅಂಬೇಡ್ಕರ್ #🙏ನಮಸ್ಕಾರ #😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔