INSTALL
@jmm_4_u
ಜಸ್ಟ್ ಮಾತ್ ಮಾತಲ್ಲಿ
@jmm_4_u
748
फॉलोअर्स
60
फॉलोइंग
210
पोस्ट
ಅನುಭವಗಳ ಅನಿಸಿಕೆಗಳು
Follow
ಜಸ್ಟ್ ಮಾತ್ ಮಾತಲ್ಲಿ
1.2K ने देखा
•
6 दिन पहले
ರೈಲಿನ ಪ್ರಯಾಣದಲ್ಲಿ ಒಂದು ಚಿನಕುರುಳಿ ಚಿಟ್ಟೆ 🦋 A shy smile, curious eyes, and a moment I’ll never forget. Some connections don’t need words.
#📖 ನನ್ನ ಓದು
#🖋️ ನನ್ನ ಬರಹ
#☺ಜೀವನದ ಸತ್ಯ
#📚ನೀತಿ ಕಥೆಗಳು
#🤔ನನ್ನ ಆಲೋಚನೆಗಳು
00:25
16
10
कमेंट
ಜಸ್ಟ್ ಮಾತ್ ಮಾತಲ್ಲಿ
460 ने देखा
•
6 दिन पहले
ರೈಲಿನಲ್ಲಿ ಚಿನಕುರುಳಿ ಚಿಟ್ಟೆ... 🦋 ನನಗಂತೂ ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಬಹಳ ಖುಷಿ, ಕಾರಣ ಆರಾಮದಾಯಕ ಮತ್ತು ಅಪರಿಚಿತರೊಡನೆ(strangers) ಪ್ರಯಾಣ. ಈ ಅಪರಿಚಿತರು ಪ್ರಯಾಣ ಮುಗಿಸುವಷ್ಟರಲ್ಲಿ ಅಪರಿಚಿತರಾಗಿಯೇ ಇರಬಹುದು ಅಥವಾ ಹಾಗೆ ಮಾತಾಡುತ್ತ/ ನೋಡುತ್ತಾ/ಮುಗುಳ್ನಗೆಯಲ್ಲಿ ಪರಿಚಿತರಾಗಬಹುದು. ನಾನು ಬೆಂಗಳೂರಿಂದ ಹಾಸನಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಚಳಿಗೆ ಎದ್ದು ಕೂರುವುದಕ್ಕಿಂತ ಮಲಗುವುದೇ ವಾಸಿ ಎಂದು ಮಲಗಿದರೆ ಯಾವುದೋ ಸಂದಿಯಿಂದ ಚಳಿಗಾಳಿ ನೇರವಾಗಿ ಮುಖಕ್ಕೆ ತಾಗಿ ಎದ್ದೇಳಿಸುತ್ತಿತ್ತು. ಅಯ್ಯೋ... ಎಂದು ಎದ್ದು ಮುಖದ ನೇರವಿರುವ ಕಿಟಕಿಯನ್ನು ಗಟ್ಟಿಮುಟ್ಟಾಗಿ ಹೊತ್ತಿ ಬಂದ್ ಮಾಡಿ ಮೊದಲು ಮಲಗಬೇಕೆಂದು ಮಲಗಿದೆ. ಹಾಗೆ ಮಲಗುತ್ತಾ ಕಾಲು ಚಾಚಿದೆ. ಪುನಃ ಕಾಲು ತಂಡಿಯಾದವು.. ಓ ದೇವರೇ..ಎಂದು ಹಾಗೆ ತಲೆಯೆತ್ತಿ ನೋಡಿದರೆ ಕಾಲ ಬಳಿ ಇರುವ ಕಿಟಕಿ ಕೇವಲ 10% ಮುಚ್ಚಲು ಕಾಯುತ್ತಿತ್ತು. ಮತ್ತೆ ತಲೆ ಎತ್ತುವುದರ ಜೊತೆ ದೇಹವನ್ನು ಎತ್ತಿ ಕೂತು ಆ ಕಿಟಕಿಯನ್ನು ಸಹ ಶ್ರಮಪಟ್ಟು ಬಂದ್ ಮಾಡಿ ಕಿಟಕಿಯನ್ನು ಮಲಗಿಸುವುದರ ಜೊತೆ ನಾನು "ಜೈ ಶ್ರೀ ಕೃಷ್ಣ ಬೋಲೋ ಜೈ ರಾಧೆ " ಎನ್ನುವ ಭಜನೆಯನ್ನು ಕಿವಿಗೆ ಸಿಕ್ಕಿಸಿಕೊಂಡು ಖುಷಿಯಿಂದ ಆಹ್ಲಾದಿಸುತ್ತಾ ಮಲಗಿದೆ... ಕೆಲವೇ ಹೊತ್ತಿಗೆ ಯಾರೋ ನನ್ನ ನೋಡುತ್ತಿರುವ ಹಾಗೆ ಇದ್ಯಲ್ಲಾ ಎಂದು ಕಿರುಗಣ್ಣಿನಿಂದ ನೋಡಿದರೆ ಆಗಾಗಲೇ ಸೂರ್ಯ ಕಿಟಕಿಯ ಸಂದಿಗಳಲ್ಲಿ ಇಣುಕಿ ನನ್ನ ನೋಡುವುದರ ಜೊತೆ ಮೈ ಸ್ಪರ್ಶಿಸುತ್ತಿದ್ದನು..."ನೀನು ಮಲಗಲು ಬಿಡಲ್ವಾ ಎಂದುಕೊಂಡು ಎದ್ದು ಕೂತೆ"... ಹಾಗೆ ಅಕ್ಕಪಕ್ಕದವರನ್ನೆಲ್ಲಾ ಕಣ್ಣಾಡಿಸುತ್ತಿರುವಾಗ ಒಂದು ಚಿನಕುರಳಿ ಚಿಟ್ಟೆ ನಲಿದಾಡುತ್ತಿತ್ತು/ಓಡಾಡುತ್ತಿತ್ತು... ಎಲ್ಲರಿಗೂ ಇದರ ಲವಲವಿಕೆ ಮುದ್ದಾಗಿ ಕಾಣಿಸುತ್ತಿತ್ತು . ಅಲ್ಲ.. ಅಲ್ಲ. ಮುದ್ದು ಮಾಡುವಂತ್ತಿತ್ತು. ಇದಕ್ಕೆ ಮನಸೋತು ನನ್ನ ಗಮನವೆಲ್ಲ ಆ ಕಡೆಯೇ ಸೆಳೆದಿತ್ತು. ಹಾಗೆಯೇ ಆ ಪುಟಾಣಿಯ ಕಡೆ ನೋಡುತ್ತಿರುವಾಗ ಆ ಮುದ್ದಾದ ಕಣ್ಣುಗಳಿಗೆ ನಾನು ತುತ್ತಾಗಿಬಿಟ್ಟೆ ಅಂದರೆ ಆ ಪುಟಾಣಿ ನನ್ನ ನೋಡಿದಳು, ನೋಡುತ್ತಲೇ ಇದ್ದಳು... ಆ ಪುಟಾಣಿಗಿಂತ ನನಗೆ ನಾಚಿಕೆಯಾಗಿ ಕತ್ತು ತಗ್ಗಿಸಿಬಿಟ್ಟೆ, ತಲೆ ತಗ್ಗಿಸಿ ಹಾಗೆ ಯೋಚಿಸಿದೆ..."ಅವಳು ಇದ್ಯಾವ ಪ್ರಾಣಿ ಎಂದು ಹಾಗೆ ನೋಡಿದಳಾ? ಇದ್ಯಾರು ವಿಚಿತ್ರವಾಗಿರುವನಲ್ಲಾ ಎಂದು ನೋಡಿದಳಾ??" ಎಂದು ತಲೆಕೆಡಿಸಿಕೊಂಡು ನನ್ನ ಪಾಡಿಗೆ ಕುಳಿತೆ.. ಆದರೂ ಆ ಪುಟಾಣಿ ಕಣ್ಮುಂದೆಯೇ ನಲಿದಾಡುತ್ತಿದ್ದಳ್ಳಾದ್ದರಿಂದ ಹಾಗೆ ಮತ್ತೊಮ್ಮೆ ನೋಡಿದೆ. ಆಕೆ ಪುನಃ ನನ್ನೇ ನೋಡುತ್ತಿದ್ದಾಳೆ!! ಹೋಗಿ ಬಂದು ನನ್ನೇ ನೋಡುತ್ತಿದ್ದಾಳೆ!! ಇಣುಕಿಣಕಿ ನನ್ನೇ ನೋಡುತ್ತಿರುವಳು!! "ಅಯ್ಯೋ ಹೇಗೋ ಇದ್ದೇನೆ ಎಂದು ತಲೆ ಕೆಡಿಸಿಕೊಳ್ಳದೆ ಅವಳನ್ನೇ ಮುದ್ದಾಗಿ ದಿಟ್ಟಿಸಿದರೆ.. ಏನು ಎಂದು ಉಬ್ಬಾರಿಸುತ್ತಿದ್ದಾಳೆ. ನನಗೆ ಆ ಧೈರ್ಯವಿಲ್ಲವೇ ಎಂದುಕೊಳ್ಳುತ್ತಾ ಇದ್ದಂತೆಯೇ. ..ನನ್ನ ಸ್ನೇಹಿತನ ಕರೆ ಬಂದಿತ್ತು...ಕರೆ ಸ್ವೀಕರಿಸಿ, ಆ ಚಿಟ್ಟೆಯನ್ನು ನೋಡುತ್ತಾ, ಇವನೊಂದಿಗೆ ಮಾತು ಶುರುವಾಗಿತ್ತು...(ಪುಟಾಣಿಯ ನೋಟ ಬಹಳ ಮುದ್ದಾಗಿ, ಒಂದೊಳ್ಳೆ ಸೆಳೆತ ಹೊಂದಿತ್ತು...) ಅಷ್ಟರಲ್ಲೇ ಜಾಹೀರಾತಿನಂತೆ (advertisement) ತೃತೀಯಾ ಲಿಂಗದಾಕೆಯ ಆಗಮನ ನಮ್ಮ ನೋಟದ ನಡುವೆ ಬಂದಿತ್ತು. ಒಂದು ಕಡೆ ಕರೆಯಲ್ಲಿ, ಮತ್ತೊಂದು ಕಡೆ ನೋಟದ ಕೆರೆಯಲ್ಲಿದ್ದ ನನಗೆ...ಇವರ ಹಣ ಕೇಳುವ ಧ್ವನಿಯು ಮೃಧುವಾಗಿ ಕೇಳಿಸಿತು...ಆದರೆ ಕಿಸೆಯಲ್ಲಿ 50ರೂ ನಾ ಒಂದು ನೋಟಷ್ಟೇ ಇದ್ದ ಕಾರಣ ಹಣ ಕೊಡುವ ನಿರಾಕರಣೆಯನ್ನು ಮೊದಲೇ ತೀರ್ಮಾನಿಸಾಗಿತ್ತು. ನಾನು: " ನಾನು ಮೊದಲೇ ಮೆಜೆಸ್ಟಿಕ್ ನಲ್ಲಿ ಕೊಟ್ಟುಬಿಟ್ಟೆ" ತೃತೀಯ ಲಿಂಗದವರು: "ಸುಳ್ಳು ಹೇಳಬೇಡ ಈ ಟ್ರೈನ್ ಮೆಜೆಸ್ಟಿಕ್ ಗೆ ಹೋಗಲ್ಲ" (ಎಲಹಂಕ - ಯಶವಂತಪುರ - ಹಾಸನ ) ನಾನು: (ಎಂಥಾ ಸುಳ್ಳು ಹೇಳಿಬಿಟ್ಟೆ ಎಂದು ಮನಸಲ್ಲೇ ಗುನುಗುತ್ತಾ...) ಅಲ್ಲಾ ಯಶವಂತಪುರದಲ್ಲಿ ಕೊಟ್ಟೆ. ಅವರು : ನಾನು ಕಿವಿಗೆ ಹೂ ಮುಡಿಸಿಕೊಳ್ಳಲು ಬಂದಿಲ್ಲ... ನಾನು : ಅದೇ ಯಶವಂತಪುರದಲ್ಲೇ ಕೊಟ್ಟೆ... ಎಂದು ಹೇಳಿ ಹೇಗೋ ತಪ್ಪಿಸಿಕೊಂಡೆ. ಅಷ್ಟರಲ್ಲಿ ನನ್ನ ಸ್ನೇಹಿತನ ಜೊತೆ ಮಾತುಕತೆ ಮುಗಿದಿತ್ತು... ಈ ಪುಟ್ಟ ಚಿಟ್ಟೆ ಉಬ್ಬಾರಿಸುತ್ತಿದ್ದಳು. ಎಷ್ಟರಮಟ್ಟಿಗೆ ಎಂದರೆ.. ಅವಳನ್ನು ನೋಡುವವರೂ ಕೂಡ ಸಣ್ಣ ಆಶ್ಚರ್ಯವಾಗಿ ಯಾರನ್ನು ನೋಡುತ್ತಿದ್ದಾಳೆಂದು ಹಿಂದೆ ತಿರುಗಿ ನನ್ನ ನೋಡುತ್ತಿದ್ದರು.. ಬರೀ ಅವಳನ್ನು ನೋಡುವುದು ಬಿಟ್ಟರೆ ಮಾತಾಡಿಸುವ ಧೈರ್ಯ (ಬೆಳಗ್ಗಿನ ಉಪಹಾರ ಆಗದಿದ್ದ ಕಾರಣ😁) ನನಗೆ ಇರಲಿಲ್ಲ.. ಇದನ್ನು ಬರೆದು ಹಂಚಿಕೊಳ್ಳಬೇಕೆಂದು ಅನಿಸಿದ ನನಗೆ ಪೆನ್ನು ಪುಸ್ತಕ ಹಿಡಿದು ಕೂತೆ... ಅವರ ಸಂಬಂಧಿಕರು ಯಾರೋ ನನ್ನ ಬಾಜಿನ ಸೀಟಿನಲ್ಲಿ ಬಂದು ಮೊಬೈಲ್ ನೋಡಲು ಆರಂಭಿಸಿದ್ದರು.. ಇದನ್ನೇ ಒಳ್ಳೆಯ ಅವಕಾಶ ಮಾಡಿಕೊಂಡು ಆ ಪುಟಾಣಿ ಅಲ್ಲಿಂದ ಇವರ ಬಳಿ ಬಂದು ಮಾತಾಡಲು/ ಆಟವಾಡಲು ಆರಂಭಿಸಿದಳು.. ಆದರೆ ಇದಲ್ಲ ವಿಷಯ... ಇನ್ನೂ ಹತ್ತಿರದಿಂದ ನೋಡಲು, ಕಣ್ಸನ್ನೆ ಮಾಡಲು ಆರಂಭಿಸಿದಳು... ನಾನು ಆ ಪುಟಾಣಿಯ ಮುದ್ದಾದ ನೋಟದಲ್ಲಿ / ತುಂಟತನದಲ್ಲಿ ಮುಳುಗಿದ್ದರಿಂದ ನಾನು ಉಬ್ಬಾರಿಸಿದೆ.. ಆದರೆ ಪುನಃ ನನಗೆ ಉಬ್ಬರಿಸುತ್ತಾಳೆ..... ಹಾಗಾಗಿ ಒಂದೇ ಸಲ ಮೂರ್ನಾಲ್ಕು ಬಾರಿ ಉಬ್ಬಾರಿಸಿದೆ... ಅರೇ... ನಾಚಿಕೊಂಡು ಮುಗುಳ್ನಗುತ್ತ ತಲೆ ತಗ್ಗಿಸಿದಳು ಪುಟಾಣಿ.. ಅಬ್ಬಾ !! ನೋಡ್ರಿ ನಂಗೂ ಚೂರು ಧೈರ್ಯ ಬಂತು... "ಎಂಥಾ ಹೆಸರು?" ಎಂದು ಕೇಳಿದೆ . ಲಾಸ್ಯ ಎಂದಳು... ಇನ್ನೂ ಮಾತಾಡಿಸುವ ಮನಸ್ಸು ಇತ್ತು... ಆದರೆ ಕೇವಲ ಹೆಸರು ಕೇಳುವಾಗಲೇ ಧೈರ್ಯ ಮುಗಿದುಹೋಗಿತ್ತು.. ಸ್ವಲ್ಪ ಹೊತ್ತಿನ ಬಳಿಕ ಅವಳು ಕಣ್ಣು ಹೊಡೆಯುವುದೇ..??😦😳 ಅಯ್ಯೋ ನನಗೆ ನೋಡಲು, ಉಬ್ಬಾರಿಸಲು ಬಿಟ್ಟರೆ ಏನೂ ಬರುವುದಿಲ್ಲ... ಹಾಗಾಗಿ ಸುಮ್ಮನಾಗಿಬಿಟ್ಟೆ... ಮತ್ತೊಮ್ಮೆ ಧೈರ್ಯ ಮಾಡಿ ಮಾತಾಡಿಸುವ ಎಂದು.. "ಬಾ" ಎಂದು ಕೈಸನ್ನೆ ಮಾಡಿದೆ.. ಅವಳು ತಲೆ ತಗ್ಗಿಸಿ, ಬರಲ್ಲ ಎಂದು ತಲೆ ಅಲ್ಲಾಡಿಸಿ ನಿರಾಕರಿಸಿದರು..☹️.. ಅಯ್ಯೋ ...ನನಗೆ ಹೇಗಾಗಬೇಡ.. ಇರದ ಧೈರ್ಯ ಬರಿಸಿಕೊಂಡು ಬರ್ಬಾದ್ ಆಗಿಬಿಟ್ಟೆ.. ಕೊನೆಗೆ ಪುನಃ ಅನಿಸಿದ್ದು,, "ನಾನೇನಾದ್ರೂ ವಿಚಿತ್ರವಾಗಿ ಕಾಣಿಸುತ್ತಿದ್ದೇನಾ ? ಇದ್ಯಾವ ಪ್ರಾಣಿ ಎಂದು ಇಷ್ಟೋವರೆಗೂ ನೋಡಿದಳ ಎಂದು??" 🙂🙃 ಹೇಗಿದೆ??
#☺ಜೀವನದ ಸತ್ಯ
#🖋️ ನನ್ನ ಬರಹ
#🤔ನನ್ನ ಆಲೋಚನೆಗಳು
#📚ನೀತಿ ಕಥೆಗಳು
#📖 ನನ್ನ ಓದು
12
16
कमेंट
ಜಸ್ಟ್ ಮಾತ್ ಮಾತಲ್ಲಿ
26.4K ने देखा
•
21 दिन पहले
ನನಗಂತೂ New Year ಇಲ್ಲ! 💔 Middle Class Life Reality
#☺ಜೀವನದ ಸತ್ಯ
#new year
00:05
185
395
कमेंट
ಜಸ್ಟ್ ಮಾತ್ ಮಾತಲ್ಲಿ
743 ने देखा
•
3 महीने पहले
Daily Quotes 190: ಚಾಣಕ್ಯ ✨
#😍 ನನ್ನ ಸ್ಟೇಟಸ್
#📚ನೀತಿ ಕಥೆಗಳು
#🖊ಬದುಕಿನ ಕೋಟ್ಸ್📜
#☺ಜೀವನದ ಸತ್ಯ
#✍ಟ್ರೆಂಡಿಂಗ್ ಕೋಟ್ಸ್📜
00:04
9
13
कमेंट
Your browser does not support JavaScript!