🏹 ಕೃಷ್ಣ ಚೇತನ 🦋
ShareChat
click to see wallet page
@krishnachetana
krishnachetana
🏹 ಕೃಷ್ಣ ಚೇತನ 🦋
@krishnachetana
🙏 ಶ್ರೀ ಗುರುಭ್ಯೋ ನಮಃ ಹರಿಃ ಓಂ 🚩
ಪರ್ವ ವಿರೋಧ ಕಟ್ಟಿಕೊಂಡು, ಎಂದ. ಮಳೆಗಾಲ ಮುಗಿದು ಸಂಚಾರ ಸುಗಮವಾದ ಮೇಲೆ ಅವನ ಗೂಢಚಾರರೂ ಸುದ್ದಿ ತರತೊಡಗಿದರು. ಯುದ್ಧವಾಗುವುದು ಖಚಿತ. ಭೀಷ್ಮ ದ್ರೋಣರು ದುರ್ಯೋಧನನ ಪರ ನಿಂತು ಕಾದುತ್ತಾರಂತೆ. ಆರ್ಯಾವರ್ತದ ಬಹುತೇಕ ಇತರ ರಾಜರು ಕೂಡ. ಯಾದವರ ಕೃಷ್ಣನೊಬ್ಬ ಪಾಂಡವರ ಕಡೆಗಂತೆ. ಉಳಿದವರೆಲ್ಲ, ಕೃಷ್ಣನ ಅಣ್ಣ ಬಲರಾಮ ಕೂಡ, ದುರ್ಯೋಧನನಿಗೆ ಸಹಾಯ ಮಾಡಲು ದೂರದ ದ್ವಾರಕೆಯಿಂದ ಹೊರಟಿ ದ್ದಾರೆ. 'ಅಪ್ಪ, ಭೀಷ್ಮನಿಗಿಂತ ಧರ್ಮವನ್ನು ಬಲ್ಲವರಿಲ್ಲ ಅಂತ ನೀನೇ ದಿನಕ್ಕೆ ಹತ್ತು ಬಾರಿ ಅನ್‌ತೀಯ. ಈಗ ಅವನೇ ದುರ್ಯೋಧನನ ಪರ ಅಂದರೆ ಧರ್ಮ. ಎತ್ತ ಇದೆ ಅರ್ಥ ಮಾಡಿಕೊ.' 'ಪಾಂಡವರಿಗೆ ಮಾತು ಕೊಟ್ಟಾಯಿತಲ್ಲ ನಾನು.' ಅಪ್ಪನ ಮನಸ್ಸ ಫಜೀತಿಯಲ್ಲಿದೆ ಎಂಬುದು ಮಗನಿಗೆ ಗೊತ್ತು. ವಜ್ರ ಮತ್ತು ಅಜಯರು ಒಂದು ಪರಿಹಾರ ಸೂಚಿಸಿದರು: 'ಅವರೇನು ನಮ್ಮನ್ನು ಕೇಳಿ ಜೂಜಾಡಲಿಲ್ಲ. ಈಗ ನಮ್ಮನ್ನು ಕೇಳಿ ಯುದ್ದ ನಿಶ್ಚಯ ಮಾಡಲಿಲ್ಲ. ನಾವು ಯಾರ ಪರ ಸೇರುವುದೂ ಬೇಡ. ತಟಸ್ಥರಾಗಿದ್ದು ಬಿಡೋಣ.' ಆ ಕ್ಷಣಕ್ಕೆ ಅದೇ ಸರಿ ಎಂದು ರುಕ್ಷ್ಮರಥನಿಗೂ ಕಂಡಿತು. ಶಲ್ಯನೂ ಒಪ್ಪಿಕೊಂಡ. ಎಲ್ಲರಿಗೂ ಮನಸ್ಸು ಹಗುರವಾಯಿತು. ಕೃಷಿಕರು ಬಿಲ್ಲುಬಾಣಗಳ ಅಭ್ಯಾಸಕ್ಕೆ ಬರಬೇಕಿಲ್ಲವೆಂದು ರುಸ್ಮರಥನು ಹಳ್ಳಿಹಳ್ಳಿಗೆಲ್ಲ ಸುದ್ದಿ ಕಳಿಸಿದ. ಜನರು ಸಮಾಧಾನದ ನಿಟ್ಟುಸಿರಿಟ್ಟರು. ಆ ಬಾರಿಯ ಮೊಳಕೆ ಚೆನ್ನಾಗಿ ಒಡೆದಿತ್ತು. ಕಳೆ ಕೀಳುವುದು ಬೇಲಿ ಹಾಕುವುದು ದನಕರುಗಳ ಪೋಷಣೆಗಳಲ್ಲಿ ಎಲ್ಲರೂ ನಿರತ ರಾದರು. ರುಕ್ಷ್ಮರಥನಿಗಂತೂ ಆಡಳಿತದಲ್ಲಿ ಹೊತ್ತು ಕಳೆಯುತ್ತಿತ್ತು, ಸೈನಿಕರ ಸಿದ್ಧತೆಯ ಹೊಣೆ ಬಿದ್ದಿದ್ದ ವಜ್ರ ಅಜಯರಿಗೆ ಈಗ ಅದೂ ತಪ್ಪಿತು. ಸಮೃದ್ಧವಾಗಿ ಅಕ್ಕಿಯ ಮದ್ಯ ವಿತ್ತು. ಹಾಸಿಗೆಯಲ್ಲಿ ಮೇಲೆ ಬಿದ್ದು ಸೆಣೆಸುವ ಸುಂದರಿಯರಾದ ರಸಿಕ ದಾಸಿಯರಿದ್ದರು. ಆದರೆ ನಾಲ್ಕಾರು ದಿನಗಳಲ್ಲಿಯೇ ಅವರಿಗೆ ಲಂಪಟತೆಯು ಬೇಸರ ತಂದಿತು. ಬಿಲ್ಲುಹುರಿಯನ್ನು ಠೇಂಕರಿಸುತ್ತಾ, ಓಡುವುದು, ಓಡುವ ರಥದಿಂದ ಗುರಿಯಿಟ್ಟು ಹೊಡೆಯುವುದು, ಆನೆಯ ಮೇಲೆ ಕುಳಿತು ಕಾಡುಗಳ ಮುಳ್ಳು ಗಂಟುಗಳನ್ನು ಸವರಿ ನುಗ್ಗಿ ದುಷ್ಟ ಮೃಗಗಳಿಗೆ ಗುರಿ ಇಟ್ಟು ಕೊಲ್ಲುವ ರೋಮಾಂಚದ ಮುಂದೆ ಹಾಸಿಗೆಯದು ಸಪ್ಪೆ ಸುಖವೆನಿಸಿತು. ಒಂದು ದಿನ ಇಬ್ಬರೂ ಎದ್ದು ಮಾತನಾಡಿಕೊಂಡು ರಥ ಹತ್ತಿ ಅಭ್ಯಾಸದ ಬಯಲಿಗೆ ಹೋದರು. ಆದರೆ ಅಲ್ಲಿ ಯಾರೂ ಇಲ್ಲ. ಕ್ಷತ್ರಿಯರು ಕೂಡ. ಸಿಟ್ಟಿನಿಂದ ಯೋಧರಿಗೆ ಹೇಳಿಕಳಿಸಿದರು. ಒಬ್ಬೊಬ್ಬರಾಗಿ ಬಂದ ಸೈನಿಕರು ಗೌರವದಿಂದ ಕೈ ಮುಗಿದು ಬಿನ್ನವಿಸಿಕೊಂಡರು: 'ಯುದ್ದವೇ ಇಲ್ಲದ ಮೇಲೆ ಬರೀ ಅಭ್ಯಾಸವನ್ನ ಎಷ್ಟು ದಿನ ಮಾಡಿದರೂ ಅಷ್ಟೆಯೇ ಬೇಟೆಗೀಟೆಯಾದರೆ ಆಡಬಹುದು.' ಅವರ ಮಾತು ನಿಜವೆನ್ನಿಸಿತು. ಆನೆಗಳನ್ನು ಕರೆದುಕೊಂಡು ಬಿಲ್ಲು ಬಾಣ, ಭರ್ಜಿ ಕತ್ತಿ. ಬಲೆಗಳೊಡನೆ ಕಾಡಿಗೆ ನುಗ್ಗಿದರು. ಮಳೆಯನ್ನು ತುಂಬಿಕೊಂಡ ಕಾಡು, ಹಸುರಿನಿಂದ ಸಮೃದ್ಧವಾಗಿತ್ತು. ಜಿಂಕೆ ಮೊಲ ಮೊದಲಾಗಿ ಮಾಂಸದ ಪ್ರಾಣಿಗಳೂ ಸಿಕ್ಕಿದವು. ಎರಡು. ಚಿರತೆ, ಒಂದು ಹುಲಿಯೂ ಬಿದ್ದವು. ಎಲ್ಲರಿಗೂ ರೋಮಾಂಚದ ಸುಖ ಸಿಕ್ಕಿತು. ಮರುದಿನ ಮುಂದಿನ ಕಾಡು, ಇನ್ನೊಂದು ದಿನ ಅದರ ಪಕ್ಕದ್ದು, ಹೀಗೆ ಹದಿನೈದು ದಿನದಲ್ಲಿ ಮದ್ರ ದೇಶಕ್ಕೆ ಸೇರಿದ ಕಾಡುಗಳನ್ನೆಲ್ಲ ಶೋಧಿಸಿಯಾಯಿತು. ಇನ್ನು ಮುಂದೆ ಒಂದು ತಿಂಗಳಾದರೂ ಯಾವ ಬೇಟೆಯೂ ಸಿಕ್ಕುವುದಿಲ್ಲ. ಮುಂದೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಸೈನಿಕರು ಕೂಡ ಮರದಿಂದ ಇಳುಕಿದ ಹೆಂಡ ಮತ್ತು ತಮಗಾಗಿಯೇ ನಿಯೋಜಿತರಾಗಿದ್ದ ಹೆಂಗಸರಲ್ಲಿ ಮಗ್ನರಾದರು. ವಜ್ರ ಅಜಯರಂತೂ ಸರಿಯೇ ಸರಿ. ಆದರೆ ಮತ್ತೆ ಬೇಸರ. ಕಸುಬಿನ ಬೇಸರ ಕಳೆದುಕೊಳ್ಳಲು ಹೆಂಗಸರಿದ್ದರೆ ಚನ್ನ; ಹೆಂಗಸರೇ ಕಸುಬಿನ ಕೇಂದ್ರವಾದರೆ ಅದಕ್ಕಿಂತ ಹೆಚ್ಚಿನ ಬೇಸರವಿಲ್ಲವೆಂದು ಅವರು ಬಹುಬೇಗ ಅರ್ಥಮಾಡಿಕೊಂಡರು. ಮತ್ತೆ ಬೇಟೆಗೆ ನುಗ್ಗಿದರು. ಬೇರೆ ದೇಶಗಳ ದೂರದ ಕಾಡುಗಳಿಗೆ ಓಡಿಹೋಗಿರುವ ಮೃಗಾದಿಗಳು ಇನ್ನೂ ಹಿಂತಿರುಗಿಲ್ಲವೆಂಬುದು ಗೊತ್ತಿದ್ದರೂ ನಿರಾಶರಾಗಿ ಹಿಂತಿರುಗಿದರು. ಅಜಯ ವಜ್ರನಿಗೆ ಹೇಳಿದ: 'ಅಣ್ಣ, ಶಸ್ತ್ರಾಭ್ಯಾಸ ಮಾಡಿ ಉಳಿದಂತೆ ನಮಗೂ ಕೃಷಿ ಕೆಲಸವಿದ್ದರೆ ಚನ್ನ ಅಲ್ಲವೆ?' 'ಕೃಷಿ ಮಾಡುವುದಾದರೆ ನಾವು ಸೈನಿಕರು ಹೇಗಾದೇವು? ಶಸ್ತ್ರಾಭ್ಯಾಸ, ಯುದ್ಧ, ಉಳಿ ದಂತೆ ಸುಖ, ಇವಿಷ್ಟೇ ಸೈನಿಕನಿಗೆ ಇರಬೇಕಾದುದು.' 'ಯುದ್ಧ ನಡೆಯುತ್ತಿದ್ದರೆ ಸರಿ, ಇಲ್ಲದಿದ್ದರೆ, ಮೈ ಪರಚಿಕೊಳ್ಳುವ ಹಾಗಾಗುತ್ತೆ ನೋಡು.' 'ಅದಕ್ಕೆ ಯುದ್ಧ ಆಗುವ ಹಾಗೆ ಮಾಡಬೇಕು. ಇಲ್ಲದಿದ್ದರೆ ನಮಗೆ ಸುಖವೂ ಇಲ್ಲ. ಇನ್ನೊಂದು ವಿಷಯ ನೋಡು: ಆಗಾಗ್ಗೆ ಯುದ್ಧ ಆಗದೆ ಇದ್ದರೆ ರಾಜನು ನಮ್ಮನ್ನು ಯಾಕೆ ಸುಖವಾಗಿ ಸಾಕಿಯಾನು? ನಿಮ್ಮದೇನು ಹೆಚ್ಚು, ನೀವೂ ಕೃಷಿಕರ್ಮ ಮಾಡಿ ಅಂತ ಇಳಿಸಿ ಕಳಿಸುತಾನೆ. ಮಣ್ಣು ಮುಟ್ಟಿ ನಾವು ಕೂಡ, ಅಷ್ಟೇ ಅಲ್ಲ, ಯೋಧ ಅನ್ನೂ ಗೌರವ ಕೂಡ ಇಲ್ಲದ ಹಾಗಾಗುತ್ತೆ.' ಅಜಯ ಸುಮ್ಮನಾದ: ಅಣ್ಣನ ಮಾತನ್ನು ಒಪ್ಪಿಕೊಂಡ. ಇದಕ್ಕೆ ಬೇರೆ ಏನು ದಾರಿ ಎಂದು ಇಬ್ಬರೂ ಮೌನವಾಗಿ ಯೋಚಿಸತೊಡಗಿದರು. ವಜ್ರ ಹೊಸತೊಂದನ್ನು ಕಂಡು ಹಿಡಿದವನಂತೆ ಧ್ವನಿ ತಗ್ಗಿಸಿ ಹೇಳಿದ: 'ಮಿತವಾಗಿದ್ದರೆ ಹೆಂಗಸರನ್ನು ಸೋಲಿಸುತ್ತಿರಬಹುದು. ಅತಿಗೆ ಹೋದರೆ ನಾವೇ ಸೋಲಬೇಕಾಗುತ್ತೆ. ವೀರನಿಗೆ ಈ ಅವಮಾನಕ್ಕಿಂತ ಯುದ್ಧದಲ್ಲಿ ಸಾಯುವುದು ಮೇಲು ಅಲ್ಲವೆ?' ಅಜಯ ಸೂಕ್ಷ್ಮವಾಗಿ ಕತ್ತು ಹಾಕಿ ಎಂದ: 'ಸೈನಿಕರೂ ಇದೇ ಹೇಳುತ್ತಾರೆ.' ರುಕ್ಷ್ಮರಥನಿಗೆ ಈ ತೆರನಾದ ಸಮಸ್ಯೆ ಇರಲಿಲ್ಲ. ಆಡಳಿತವೇ ಸಾಕಷ್ಟು ಸಮಯವನ್ನು ತಿನ್ನುತ್ತಿತ್ತು. ತೀರ ಕೆಲಸವೇ ಇಲ್ಲದಾಗ ಬೇಟೆಗೆ ಹೋಗುತ್ತಿದ್ದ. ನೆರೆಯ ಯಾವುದಾದರೂ ರಾಜರೊಡನೆ ಜೂಜಾಡುತ್ತಿದ್ದ. ಹೆಂಗಸರ ಕಡೆಗೆ ಮನಸ್ಸು ಹರಿಯುವ ವ್ಯವಧಾನವೇ ಕಡಿಮೆ. ಅಲ್ಲದೆ ಅವನಿಗಾಗಲೇ ಐವತ್ತಕ್ಕೆ ಹತ್ತಿರ ಹತ್ತಿರದ ವಯಸ್ಸು, ಯುದ್ಧದಲ್ಲಿ ತಟಸ್ಥರಾಗಿರು ವುದೆಂದು ತಂದೆ ಮಗ ತಮ್ಮಂದಿರು ತೀರ್ಮಾನಿಸಿದ್ದರೂ ರುಕ್ಷ್ಮರಥನ ಮನಸ್ಸು ಅಲಿಪ್ತ ವಾಗಿರಲಿಲ್ಲ. ರಾಜನಾಗಿದ್ದುದರಿಂದ ದೇಶದೇಶಗಳ ಸುದ್ದಿಯನ್ನು ಸಂಗ್ರಹಿಸುವುದು ಅವನಿಗೆ ಅಗತ್ಯವಾಗಿತ್ತು. ಗೂಢಚಾರರು ಒಬ್ಬರಾದ ಮೇಲೆ ಒಬ್ಬರಂತೆ ಸುದ್ದಿ ತರುತ್ತಲೇ ಇದ್ದರು. -: ಬೇಸಗೆಯಲ್ಲಿ ಹೊರಗೆ ಹೋದ ಎಷ್ಟೋ ಜನ ಮಳೆಗಾಲದಲ್ಲಿ ಹೊರಗೆ ಉಳಿದಿದ್ದರು. ಈಗ ಒಬ್ಬೊಬ್ಬರಾಗಿ ಹಿಂತಿರುಗುತ್ತಿದ್ದಾರೆ. ಹಸ್ತಿನಾವತಿಯಿಂದಲೂ ಬಂದಿದ್ದಾರೆ. ಪಾಂಡವರು ಅಭಿವೃದ್ಧಿ ಪಡಿಸಿಕೊಂಡು ಬದುಕಿ ಎಂದು ಧೃತರಾಷ್ಟ್ರನು ಪಾಂಡವರಿಗೆ ಬಿಡಾರ ಹೂಡಿ ಯುದ್ಧಸಿದ್ಧತೆಯ ಕೇಂದ್ರ ಮಾಡಿಕೊಂಡಿದ್ದ ಉಪಪ್ಲಾವ್ಯದಿಂದಲೂ ಹಿಂತಿರುಗಿದ್ದಾರೆ. ದೂರದ ಕಾಶಿಯತನಕ ಹೋಗಿ ಬಂದವರಿದ್ದಾರೆ. ಕೆಲವರು ಆ ಕಡೆಗೆ ಕೆಲವರು ಈ ಕಡೆಗೆ ಇರಬಹುದು. ಆದರೆ ಈ ಯುದ್ಧದಲ್ಲಿ ಯಾವ ಕಡೆಗೂ ಸೇರದೆ ತಟಸ್ಥ ವಾಗಿರುವ ಯಾವ ರಾಜ್ಯವೂ ಇಲ್ಲ. ಕಿರಾತ, ರಾಕ್ಷಸ, ನಾಗ ಮುಂತಾದ ಎಷ್ಟೋ ಆರ್ಯೇತರ ಜನಗಳು ಕೂಡ ಈ ಯುದ್ಧಕ್ಕೆ ಧುಮುಕುತ್ತಾರಂತೆ. ಬಕ, ಹಿಡಿಂಬ ಮೊದಲಾಗಿ ಭೀಮನು ಕೆಲವು ರಾಕ್ಷಸರನ್ನು ಕೊಂದಿದ್ದನಂತೆ. ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಇಬ್ಬರ ಸಂಬಂಧಿಗಳು ಈಗ ದುರ್ಯೋಧನನ ಕಡೆಗೆ ಬಂದಿದ್ದಾರಂತೆ. ನೀವು ಸೊಗೆ ಿಹಾದರೂ ಹಳ್ಳಿಯ ಪ್ರದೇಶವನ್ನು ಕೊಟ್ಟು ಕಳಿಸಿದ್ದನಲ್ಲ, ಅದರ ಸುತ್ತಿನ ಕೆ. ಕೃಷಿಯ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳುವಾಗ ಆ ಕಾಡುಗಳಲ್ಲಿದ್ದ ನಾಗರು ವಿರೋಧಿಸಿ ದ್ದರಂತೆ. ಸಿಟ್ಟಿನಿಂದ ಅರ್ಜುನನು ಬೇಸಗೆಯಲ್ಲಿ ಆ ಕಾಡುಗಳಿಗೆಲ್ಲ ಸುತ್ತಲೂ ಒಂದೇ ಸಲಕ್ಕೆ ಬೆಂಕಿ ಹಾಕಿಸಿದ್ದನಂತೆ. ಎಷ್ಟೋ ನಾಗರು ಸತ್ತು, ಉಳಿದವರು ತಪ್ಪಿಸಿಕೊಂಡು ಹೋಗಿದ್ದರು. ಈಗ ಅವರನ್ನು, ಇತ್ತ ತ್ರಿಗರ್ತ, ಗಾಂಧಾರಗಳ ಕಡೆಯ ನಾಗರುಗಳನ್ನೆಲ್ಲ ಕರೆಸಿ, ಅರ್ಜುನ ನನ್ನು ಕೊಲ್ಲಲು ನಿಮಗೆ ಸುಸಂಧಿ ಎಂದು ದುರ್ಯೋಧನನು ಹೇಳಿದನಂತೆ. ಅವರೆಲ್ಲ ತಮ್ಮದೇ ಆದ ಒಂದು ಸೈನ್ಯ ರಚಿಸಿಕೊಂಡು ದುರ್ಯೋಧನನ ಪರ ಬೀಡುಬಿಟ್ಟಿದ್ದಾರಂತೆ. ಹಿಡಿಂಬನ ತಂಗಿಯ ಹೊಟ್ಟೆಯಲ್ಲಿ ಭೀಮನಿಗೆ ಹುಟ್ಟಿದ ಘಟೋತ್ಕಚ ಎಂಬ ರಾಕ್ಷಸನಿದ್ದಾನಂತೆ. ಅವನ ಸಹಾಯ ಕೇಳಲು ಪಾಂಡವರು ಭೀಮನನ್ನೇ ಕಳಿಸಿದ್ದರಂತೆ. ಒಂದೇ ವರ್ಷ ತನ್ನೊಡನಿದ್ದು ಬಿಟ್ಟು ಹೋಗಿದ್ದರೂ ಹಿಡಿಂಬೆಗೆ ಭೀಮನ ಮೇಲಿನ ಮಮತೆ ಹೋಗಿಲ್ಲವಂತೆ, ತನ್ನ ರಾಕ್ಷಸ ಅನುಯಾಯಿಗಳೊಡನೆ ಘಟೋತ್ಕಚನು ಬಂದಿದ್ದಾನಂತೆ. ಬಕ ಹಿಡಿಂಬರ ಸಾವಿನ ಸೇಡಿಗೆ ದುರ್ಯೋಧನನ ಕಡೆ ಬಂದ ರಾಕ್ಷಸರಿಗೆ ಪ್ರತಿಯಾಗಿ ಪಾಂಡವರು ಈ ಘಟೋತ್ಕಚನನ್ನು ತಂದು ನಿಲ್ಲಿಸಿದ್ದಾರೆ. ಒಬ್ಬೊಬ್ಬರೂ ತಂದ ಸುದ್ದಿಗಳನ್ನು ಜೋಡಿಸಿ ರುಕ್ಷ್ಮರಥನು ಕಟ್ಟುವ ಚಿತ್ರ ದೊಡ್ಡದಾಗಿ ಬೆಳೆಯುತ್ತಿದೆ. ವಿವರಗಳು ಸ್ಪುಟಗೊಂಡು ಅವುಗಳ ಒಳಸಂದುಗಳು ಕಲ್ಪನೆಗೆ ಹೊಳೆಯುತ್ತವೆ. ಒಟ್ಟಿನಲ್ಲಿ ಇದುವರೆಗೆ ಇಷ್ಟು ದೊಡ್ಡ ಪ್ರಮಾಣದ ಯುದ್ದವು ಎಂದೂ ನಡೆದಿಲ್ಲ. ಎಲ್ಲಿಯೂ ಕೇಳಿದ ನೆನಪು ಯಾರಿಗೂ ಇಲ್ಲ. ರುಕ್ಷ್ಮರಥನಿಗೆ ಈ ಚಿತ್ರದಲ್ಲಿ ಆಸಕ್ತಿ ಹುಟ್ಟಿದೆ. ಎಷ್ಟೊಂದು ಸೈನಿಕರು, ಎಷ್ಟು ರಥಗಳು, ಎಷ್ಟು ಕುದುರೆಗಳು, ಎಂತೆಂತಹ ಕೈಚಳಕ, ಯುದ್ಧವ್ಯೂಹಗಳು. ಅಲ್ಲಿ, ಕುದುರೆಯ ಮೇಲೆ ಕೂತು ಓಡಿಸಿದರೆ ಐದು ಪಯಣದ ಹತ್ತಿರದಲ್ಲಿ ಇಂತಹ ಭಾರಿ ಯುದ್ಧ, ಸಮಸ್ತ ಆರ್ಯರು ಹಲವು ಆರ್ಯೇತರರು ಸೇರಿ ಮಾಡುವ ಯುದ್ಧ ನಡೆಯು ವಾಗ ತಾನು ತಟಸ್ಥನಾಗಿ ಬಾಗಿಲು ಬಡಿದುಕೊಂಡು ಕೂರುವುದೆಂದರೆ ಏನು ಸಾರ್ಥಕ? ಈ ಯುದ್ಧ ಹೀಗೆ ನಡೆಯಿತಂತೆ ಎಂದು ಮುದಿವಯಸ್ಸಿನಲ್ಲಿ ಮರಿಮಕ್ಕಳಿಗೆ ಹೇಳುವಾಗ ನೀನೇಕೆ ಹೋಗಲಿಲ್ಲ ಎಂದು ಅವು ಕೇಳಿದರೆ ಏನು ಉತ್ತರ ಕೊಡುವುದು ಎನ್ನಿಸಿತು, ತಾನು ಭಾಗ ವಹಿಸುವುದಿಲ್ಲವೆಂದು ಅಪ್ಪನೊಡನೆ ಮಾತಾಗಿದೆ. ಬರೀ ನೋಟ ನೋಡುವ ಜಾಗವಲ್ಲ ರಣರಂಗ. ಪ್ರೇಕ್ಷಕನಿಗೆ ಅಲ್ಲಿ ಮರ್ಯಾದೆಯೂ ಇರುವುದಿಲ್ಲ ಎಂಬ ಪುನಃಪುನಃ ಆಲೋಚನೆ ಯಿಂದ ಉತ್ಸುಕತೆಯನ್ನು ಕಡಿಮೆ ಮಾಡಿಕೊಂಡ. ಒಂದು ದಿನ ಸಭೆಯಲ್ಲಿ ಕುಳಿತು ಆಡಳಿತ ಕಾರ್ಯ ಮಾಡುತ್ತಿರುವಾಗ ಬಡಗಿಗಳ ಮುಖ್ಯ ನಾದ ನಂದಕ ಬಂದ: 'ಯುದ್ಧಕ್ಕೆ ಅಂತ ಸಡಿಲಾದ ರಥಗಳನ್ನೆಲ್ಲ ಸರಿ ಮಾಡಬೇಕು, ಹೊಸ ತಾಗಿ ಇನ್ನೂರು ಯುದ್ಧದ್ದರಥ ಮಾಡಬೇಕು, ಸಾಮಾನು ಸಾಗಿಸುವ ಐನೂರು ಹೊಸ ಗಾಡಿ-ಬೇಕು ಎಂದು ಅಪ್ಪಣೆಯಾಗಿತ್ತು. ಹಳ್ಳಿಹಳ್ಳಿಗಳಿಂದ ಬಡಗಿಗಳನ್ನು ಕರೆಸಿದ್ದ. ಈಗ ಯುದ್ಧಕ್ಕೆ ಹೋಗುವುದೇ ಇಲ್ಲ, ಸುಮ್ಮನೆ ಅವೆಲ್ಲ ಯಾಕೆ ಅಂತ ಮಂತ್ರಿಗಳು ಹೇಳಿದರು. ಹಳ್ಳಿಗಳಲ್ಲಿ ಸಿಕ್ಕುವ ಬೇರೆ ಕೆಲಸವನ್ನೆಲ್ಲ ಬಿಟ್ಟು ಬಂದಿದೀವಿ. ಇಡೀ ವರ್ಷದ ಕೆಲಸದ ಕಾಲ ನಷ್ಟವಾಗಿದೆ. ನೀವು ಕೆಲಸ ಮಾಡಿಸದಿದ್ದರೂ ನಮ್ಮ ಕೂಲಿ ಕೊಡಿ ಅಂತ ಅವರೆಲ್ಲ ಕೇಳುತ್ತಿದ್ದಾರೆ.' ಕೊಡುವುದಿಲ್ಲವೆನ್ನುವಂತಿಲ್ಲ. ಕೊಟ್ಟ ಮೇಲೆ ಕೆಲಸ ಮಾಡಿಸಿಡಬೇಕು. ಮಾಡಿಸಿಟ್ಟರೆ ಹಳೆಯದಾಗಿ ಕುಟ್ಟಿ ಹಿಡಿಯುತ್ತವೆ. ಅವರ ಕೂಲಿ ಎಂದು ಭಂಡಾರದ ದಿನಸಿ ಕಂಬಳಿಗಳನ್ನು ಹಂಚಿದರೆ ಕೃಷಿಕರಿಗೆ ಇನ್ನಷ್ಟು ತೆರಿಗೆ ಹಾಕಬೇಕು. ನಾಳೆ ತೀರ್ಮಾನ ಹೇಳುವುದಾಗಿ ಅವನಿಗೆ ಹೇಳಿಕಳಿಸಿದ. ಅದೇ ದಿನ ಮಧ್ಯಾಹ್ನ ಕಮ್ಮಾರ ಬಂದ. ಅವನದೂ ಇದೇ ಸಮಸ್ಯೆ, ಬಾಣಕ್ಕೆ ಲೋಹದ ಚುಚ್ಚುಮೂತಿ, ಖಡ್ಗ, ಭರ್ಜಿಯ ಮೊನೆ, ಮೊದಲಾದ ಕೆಲಸ ಆರಂಭವಾಗಿದೆ. ಎಷ್ಟು ಮಾಡಿಸಬೇಕು, ಇನ್ನಷ್ಟು ಜನ ಕಮ್ಮಾರರನ್ನು ಕರೆಸಲೆ, ಎಂದು ಕೇಳುತ್ತಿದ್ದಾನೆ. ಅವನಿಗೆ ಕೂಡ ನಾಳೆ ಬರುವಂತೆ ಹೇಳಿ ಕಳಿಸಿದ. ಭೂಮಿಯಲ್ಲಿ ಚೆನ್ನಾದ ಬೆಳೆ ಬಂದಿದೆ. ಭತ್ತದ ಸಸಿಗಳು ತೆನೆಯೊಡೆದಿವೆ. ಇತರ ಕಾಳು. ಗಿಡಗಳೂ ಹೂಬಿಟ್ಟಿವೆ. ಹೊಲಗಳಲ್ಲೆಲ್ಲ ಸುಂಕು, ನೀಳವಾಗಿ ಉಸಿರೆಳೆದುಕೊಳ್ಳುವ ಬಯಕೆ ಯಾಗುವ ಸುಂಕು. ಧಾನ್ಯವು ಬಲಿಯುವ ಚುರುಕು ಬಿಸಿಲು. ಶಲ್ಯರಾಜ ಕುದುರೆ ಏರಿ ಪಟ್ಟಣದ ಹೊರಗೆ ಹೋಗುತ್ತಾನೆ. ಜೊತೆಗೆ ನಾಲ್ವರು ಬೆಂಗಾವಲಿನವರು. ಯಾವುದೋ ಒಂದು ಹೊಲದ ಬದುವಿನ ಹುಲ್ಲಿನ ಮೇಲೆ ಕಾಲು ನೀಡಿ ಕೂರುತ್ತಾನೆ. ಚಿಕ್ಕ ಹುಡುಗನಿಂದ ತಾನು ಪ್ರೀತಿಸಿರುವ ಸುಂಕು ಹಸಿರುವಾಸನೆ ಇದು. ಹಸಿದವನಂತೆ ಅದನ್ನು ಮೂಸಿ ಮೂಸಿ ಎಳೆದುಕೊಳ್ಳುತ್ತಾನೆ. ಹೀಗೆ ಎಷ್ಟು ಸಂವತ್ಸರ ಕಳೆದಿದೆಯೋ! ಒಂದು ತೆರನಾದ ಆಕರ್ಷಣೆ - ಒಂದು ತೆರನಾದ ವಿಕರ್ಷಣೆ. ಈ ಹಸಿರು ವಾಸನೆಯನ್ನು ಮೂಸುವಾಗ ಎಷ್ಟು ವರ್ಷ ವಾದರೂ ಬದುಕಬೇಕೆನಿಸುತ್ತದೆ. ಆದರೆ ಅದಕ್ಕೆ ಹೊಂದಿಕೊಂಡೇ ತಾನು ಬದುಕಿರುವ ಇಷ್ಟು ವರ್ಷದ ನೆನಪಾಗುತ್ತದೆ. ಸುಂಕು ವಾಸನೆಯು ನಿಂತ ನೀರಿನ ನೆನಪು ತರಿಸುತ್ತದೆ. ಯಾಕೆಂಬುದು ತಿಳಿಯುತ್ತಿಲ್ಲ. ಉತ್ಸಾಹವೇ ಹೊರಟುಹೋಗಿದೆ. ಅರಮನೆ, ರುಚಿಯಾದ ಭೋಜನ, ಸೇವೆ ಮಾಡುವ ದಾಸಿಯರು, ಮಕ್ಕಳು ಮೊಮ್ಮಕ್ಕಳು- ಇವೆಲ್ಲ ನಿಂತ ನೀರಾಗಿ ಭಾಸವಾಗುತ್ತವೆ, ಇನ್ನೆಷ್ಟು ವರ್ಷ ಬದುಕಬಹುದು ತಾನು? ಭೀಷ್ಮನಿಗೆ ನೂರ ಇಪ್ಪತ್ತಂತೆ. ತಾನೂ ಅಷ್ಟು ವರ್ಷ ಬದುಕಬಹುದು. ಆದರೆ ಅವನು ಆಜನ್ಮ ಬ್ರಹ್ಮಚಾರಿ. ಬ್ರಹ್ಮಚಾರಿಗೆ ಆಯುಷ್ಯ ಹೆಚ್ಚೆ? ಎಂದು ತನ್ನನ್ನು ತಾನೇ ಕೇಳಿಕೊಳ್ಳುತ್ತಾನೆ. ಆಯುಷ್ಯ ಹೆಚ್ಚಾಗಲಿ ಅಂತಲೇನೂ ಅವನು ಬ್ರಹ್ಮಚರ್ಯದ ಶಪಥ ಮಾಡಲಿಲ್ಲವಂತೆ. ತಾನೂ ಅಷ್ಟು ವರ್ಷ ಬದುಕಬಹುದು. ಬದುಕಿ ಮಾಡುವುದೇನು? ರಾಜ್ಯದ ಹೊಣೆ ಹೊರುವ ಅಗತ್ಯವಿಲ್ಲ, ಮನಸೂ ಇಲ್ಲ. ಮದ್ಯದ ಎಳೆತವಿಲ್ಲ. ಹೆಂಗಸಿನ ಆಕರ್ಷಣೆ, ಆಕರ್ಷಣೆಗೆ ಬೇಕಾದ ಮೂಲ ಶಕ್ತಿ ಬತ್ತಿ ಎಷ್ಟೋ ವರ್ಷಗಳಾದುವು. ಈ ನಡುವೆ ಯುದ್ಧದ ಉತ್ಸುಕತೆ ಹುಟ್ಟಿತ್ತು. ಅದಕ್ಕೆ ಹೋಗಕೂಡದೆಂದು ತೀರ್ಮಾನವೂ ಆಯಿತಲ್ಲ. ಕಾಳು ಒಡೆಯುವ ಚುರುಕು ಬಿಸಿಲಿನ ಸುಂಕುವಾಸನೆಯನ್ನು ದೀರ್ಘವಾಗಿ ಎಳೆದುಕೊಳ್ಳುತ್ತಾನೆ. ಕುದುರೆ ಹತ್ತಿ ಖಡ್ಗ ಹಿಡಿದು, ರಥ ಏರಿ ಬಿಲ್ಲು ಹೊಡೆದು, ಕ್ಷತ್ರಿಯನಿಗೆ ಧಾನ್ಯ ಬಲಿಯುವ ವಾಸನೆ ಎಂಥದು ಎಂದುಕೊಂಡು ಹಾಗೆಯೇ ಬದುವಿನ ಮೇಲೆ ಅಂಗಾತ ಮಲಗುತ್ತಾನೆ. ಬೆಂಗಾವಲಿನ ಸೇವಕರು ವಸ್ತ್ರ ಹಾಸಲು ಬರು ತ್ತಾರೆ. ಬೇಡವೆಂದು ಅವರಿಗೆ ಸನ್ನೆ ಮಾಡಿ ಹಾಗೆಯೇ ಮಲಗುತ್ತಾನೆ ನಿಂತ ಬಿಸಿಲಿಗೆ ಮುಖ ಕೊಟ್ಟು, ಭೀಷ್ಮನೇ ದುರ್ಯೋಧನನ ಕಡೆಯ ಸೇನಾಪತಿಯಂತೆ. ವೀರ ಅಂದರೆ ವೀರ. ಎಷ್ಟು ವಿಶಾಲವಾದ ಎದೆಕಟ್ಟು. ಈ ವಯಸ್ಸಿನ ನನಗೆಂಥ ಸೇನಾಪತ್ಯ, ಕಾಡಿಗೆ ಹೋಗಿ ತಪಸ್ಸು ಮಾಡುತ್ತೇನೆ ಅಂತ ಯಾಕೆ ಅನ್ನಲಿಲ್ಲ? ತಪಸ್ಸಿಗೂ ಪ್ರಸಿದ್ಧವಾದ ವಂಶ ಅದು. ಹಾಗೆಯೇ ಕಣ್ಣು ಮುಚ್ಚುತ್ತಾನೆ. ಪ್ರಪಂಚವೆಲ್ಲ ನಸುಕೆಂಪು ಬಣ್ಣದ ಮಬ್ಬಾಗುತ್ತದೆ. ರೆಪ್ಪೆಯ ಸಂದು ತೆರೆದಾಗ ಏಳು ಬಣ್ಣದ ಬೆಳಕಿನ ಕಿರಣಗಳು ಯುದ್ಧದ ಬಾಣಗಳಂತೆ ಓಡಿ ಬಂದು ಚುಚ್ಚುತ್ತವೆ. ಶಲ್ಯರಾಜ ತಕ್ಷಣ ಎದ್ದು ಕೂರುತ್ತಾನೆ. ಎದ್ದು ನಡೆದು ದಾರಿಯ ಹತ್ತಿರವಿರುವ ತನ್ನ ಕುದುರೆಯನ್ನು ಸಮೀಪಿಸುತ್ತಾನೆ. ಬೆಂಗಾವಲಿನ ಆಳುಗಳು ಕುದುರೆ ಯನ್ನು ಸರಿಯಾಗಿ ಹಿಡಿದುಕೊಳ್ಳುತ್ತಾರೆ. ನಿಧಾನವಾಗಿ ಹತ್ತಿ ಸರಿಯಾಗಿ ಕುಳಿತು ಊರ ಹೊರದಿಕ್ಕಿಗೆ ಓಡಿಸುತ್ತಾನೆ. ಆಳುಗಳ ಕುದುರೆಗಳನ್ನು ಹಿಂದೆ ಹಾಕಿ ಓಡುತ್ತದೆ ಅವನ ಬಿಳಿಗುದುರೆ. ಹಿಡಿತ ತಪ್ಪದೆ, ಬೀಳದೆ, ಅಯಾಸವೂ ಆಗದೆ ಓಡಿಸುತ್ತಾನೆ. ಆಳುಗಳಿಗೆ ಧೂಳು ಮಾತ್ರ ಕಾಣುತ್ತದೆ. ಕುದುರೆ ಕಾಣುವುದಿಲ್ಲ. ರಾಜನಿಗೆ ಉತ್ಸಾಹ ಹುಟ್ಟುತ್ತದೆ. ಸ್ವಲ್ಪ ಹೊತ್ತಿಗೆ ಕುದುರೆಯೂ ಬೆವರುತ್ತದೆ, ಅವನೂ ಬೆವರುತ್ತಾನೆ. ಬೇಸರ ನೀಗುತ್ತದೆ. ರುಕ್ಷ್ಮರಥ ಜೂಜಾದರೂ ಆಡೋಣವೆಂದು ಯೋಚಿಸುತ್ತಾನೆ. ತಮ್ಮಂದಿರಾದ ವಜ್ರ ಅಜಯರೊಡನೆ ಆಡಿದರೆ ತೃಪ್ತಿ ಸಿಗುವುದಿಲ್ಲ. ತನ್ನದೇ ವಸ್ತುಗಳನ್ನು ತಮ್ಮಂದಿರಿಂದ ಗೆದ್ದು ಕೊಂಡರೂ ಅಷ್ಟೆ, ತನ್ನ ಮನೆಯವರಾದ ಅವರಿಗೆ ಸೋತರೂ ಅಷ್ಟೆ. ತನ್ನದೇ ಆದ ಕಾಡು ಗಳಲ್ಲಿ ಬೇಟೆಯಾಡಹೊರಟರೂ ಉತ್ಸಾಹ ಹುಟ್ಟುವುದಿಲ್ಲ. ಆಡಳಿತದ ಮೇಲ್ವಿಚಾರಣೆ ಕಳೆದ ಹತ್ತು ವರ್ಷದಿಂದ ಮಾಡುತ್ತಿದೇನೆ. ಅದಕ್ಕೆ ಮುನ್ನ ಅಪ್ಪನ ಸಹಾಯಕನಾಗಿ ಮಾಡಿ ದ್ದೇನೆ. ಉತ್ಸಾಹವಿಲ್ಲ. ಸ್ನೇಹದ ನೆರೆ ರಾಜರೊಡನೆ ಜೂಜಾಡಿದರೆ ಆಟದ ರುಚಿ ಹತ್ತುತ್ತದೆ. ದಾಳಗಳು ಉರುಳಿ ನಿಂತಾಗ ಉಸಿರು ಹಿಡಿದು ನೋಡುವಂತಾಗುತ್ತದೆ. ಆದರೆ ಈಗ ಎಲ್ಲರೂ ಯುದ್ಧಸಿದ್ಧತೆಯಲ್ಲಿದ್ದಾರೆ. ಯುದ್ಧದ ಮಾತೇ ಆಡುತ್ತಾರೆ. ಯಾರಿಗೂ ಜೂಜಿನಲ್ಲಿ ಲಹರಿ ಇಲ್ಲ. ತಾವು ದುರ್ಯೋಧನನ ಪರವೋ ಪಾಂಡವರ ಪರವೋ ಎಂಬುದರ ಮೇಲೆ ಎಲ್ಲ ರಾಜರೂ ಪರಸ್ಪರ ಶತ್ರು ಅಥವಾ ಮಿತ್ರರಾಗಿ ವಿಂಗಡಿಸಿಹೋಗಿದ್ದಾರೆ. ಶತ್ರುವೂ ಅಲ್ಲದೆ ಮಿತ್ರನೂ ಅಲ್ಲದೆ ಸಂಬಂಧ ಇಟ್ಟುಕೊಳ್ಳುವುದು ಕ್ಷತ್ರಿಯನಿಗೆ ಸಾಧ್ಯವಿಲ್ಲವೆಂದು ತನಗೆ ತಾನೆ ಹೇಳಿಕೊಳ್ಳುತ್ತಾನೆ. ಸುಶರ್ಮನೊಡನೆ ವಿರೋಧವನ್ನು ತಪ್ಪಿಸಿಕೊಂಡಂತಾಯಿತು. ಆದರೆ ಮೊದಲಿನ ನಿಕಟ ಸ್ನೇಹವು ಈಗ ಒಣಗುತ್ತಿದೆ ಎಂದು ಅವನ ಮನಸ್ಸೇ ಹೇಳುತ್ತಿದೆ. ಕೊನೆಗೆ ಪಾಂಡವರ ಕಡೆಯೇ ಆಗಲಿ, ಯುದ್ಧಕ್ಕೆ ಹೋಗಿಬಿಡಬೇಕೆಂದು ಮನಸ್ಸಿನ ಆಳದ ಒಂದು ಮೂಲೆಯು ಸೂಚಿಸುತ್ತದೆ. ಒಂದು ದಿನ ದುರ್ಯೋಧನ ಚಕ್ರವರ್ತಿಯ ತಮ್ಮ ದುಶ್ಯಾಸನನೇ ಬಂದ. ಪಟ್ಟಣದ ಹೊರಗೆ ಇಳಿದು ತನ್ನ ಆಗಮನವನ್ನು ದೂತರ ಸಂಗಡ ಹೇಳಿಕಳಿಸಿದ. ರುಕ್ಷ್ಮರಥನು ತಮ್ಮ ವಜ್ರನನ್ನು ರಥದೊಡನೆ ಕಳಿಸಿ ರಾಜಗೌರವದಿಂದ ಸ್ವಾಗತಿಸಿ ಸತ್ಕರಿಸಿದ. ಮೊದಲು ಶಲ್ಯ ರಾಜನ ಪಾದ ಮುಟ್ಟಿ ನಮಸ್ಕರಿಸಿ ಮಾವ ಎಂದು ಸಂಬೋಧಿಸಿ ಆಶೀರ್ವಾದ ಪಡೆದ ನಂತರ ದುಶ್ಯಾಸನನು ತನಗೆ ಹೆಚ್ಚು ಸಮಯವಿಲ್ಲವೆಂಬ ಪೀಠಿಕೆಯೊಡನೆ ಮಾತನ್ನು ಆರಂಭಿಸಿದ. 'ಮಾವ, ಪಾಂಡವರು ನಿನಗೆ ಸೋದರಳಿಯರು ನಿಜ. ಆದರೆ ನಾವೂ ಸೋದರಳಿಯರು ತಾನೆ. ಪಾಂಡುವಿಗೆ ಕೊಟ್ಟ ನಿನ್ನ ತಂಗಿ ಯಾವ ಸುಖಪಟ್ಟಳು ಹೇಳು. ಅವಳ ಸಾವಿಗೆ ನಾವು ಕಾರಣರಲ್ಲ, ಅವಳು ಕಾಡಿಗೆ ಹೋಗಲು ನಾವು ಕಾರಣರಲ್ಲ. ನಿನ್ನ ತಂಗಿಯ ಮಕ್ಕಳಿಗೆ ರಾಜ್ಯ ಬೇಕು ಅಂತ ನೀನು ಬಯಸಿದರೆ ಬೇರೆಯ ಮಾತು. ನಾವು ಅವರಿಗೆ ಅಂತ ಬಿಟ್ಟುಕೊಟ್ಟರೂ ಅವರಿಗೆ ಮಾತ್ರ ಕುದುರೆ ಉಜ್ಜುವ ಹಣೆಬರಹ ತಪ್ಪುವುದಿಲ್ಲ. ಹಿರಿ ಹೆಂಡತಿಯ ಮಕ್ಕಳು ಏರುವ ಕುದುರೆಯ ಲದ್ದಿ ಬಾಚುವುದು ಅವರ ಪಾಡಾಗಿರುವಾಗ ನೀನು ಆ ಹಿರಿ ಹೆಂಡತಿಯ ಮಕ್ಕಳಿಗೆ ಯಾಕೆ ಸಹಾಯ ಮಾಡಬೇಕು ? ಯುದ್ಧದಲ್ಲಿ ನಾವು ಗೆದ್ದರೆ ನಿನ್ನ ತಂಗಿಯ ಇಬ್ಬರು ಮಕ್ಕಳಿಗೂ ಖಂಡಿತ ಆ ರಾಜ್ಯವನ್ನು ಕೊಡುತ್ತೇವೆ. ಇದು ದುರ್ಯೋಧನನ ಆಣೆ ಮಾತು ಅಂತ ತಿಳಿದುಕೊ, ನಮಗೆ ಜಗಳವಿರುವುದು ಹಿರಿಯ ಮೂವರಲ್ಲಿ, ಕಿರಿಯ ಸಾಧು ಗಳೊಡನೆಯಲ್ಲ.' ಶಲ್ಯರಾಜನಿಗೆ ಪಾಂಡವಪಂಚರೊಡನೆ ಇದ್ದ ಸಮಷ್ಟಿ ಸ್ನೇಹ ಒಡೆದಂತಾಯಿತು. ದುಶ್ಯಾಸನ ರುಕ್ಷ್ಮರಥನಿಗೆ ಹೇಳಿದ: 'ಯುದ್ಧ ಅಂದರೆ ಹಣ ಬೇಕು, ಸೈನಿಕರಿಗೆ ವಸ್ತ್ರ, ಆಹಾರ, ಇತರ ಸುಖಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಸುಮ್ಮಸುಮ್ಮನೆ ಜೀವ ಕೊಟ್ಟು ಕಾಯುತ್ತಾ ರೆಯೆ? ನನ್ನ ಸಂಗಡ ಸಾವಿರ ಕಂಬಳಿ, ಸಾವಿರ ಜೋಡಿ ಮೇಲ್ವಾಸು, ಒಂದು ತಪ್ಪಲೆ ನಿಷ್ಕ ಗಳನ್ನು ತಂದಿದ್ದೇನೆ. ನಿನ್ನ ಸೈನ್ಯಕ್ಕೆ ಬಹುಮಾನ ಅಂತ ಅಲ್ಲ. ಹಿರೀಕನಾದ ಮಾವನಿಗೆ ಸಲ್ಲಿಸ ಬೇಕಾದ ಕಪ್ಪ ಅಂತ. ನೀನು ಹೊರಟ ದಿನದಿಂದ ಅಲ್ಲಿಗೆ ತಲುಪಿ ಯುದ್ಧ ಮುಗಿದು ಹಿಂತಿರುಗಿ ಊರು ಸೇರುವ ತನಕ ನಿನ್ನ ಸಮಸ್ತ ಸೈನ್ಯಕ್ಕೂ ವಸತಿಯ ಚಪ್ಪರ, ಸುಗ್ರಾಸ ಭೋಜನ, ಆನೆ ಕುದುರೆಗಳ ಮೇವು ನಮ್ಮ ಹೊಣೆ. ಎಷ್ಟು ಹಾಲು, ತುಪ್ಪ, ಹಿಟ್ಟು, ಅಕ್ಕಿ ಬೇಕು ಈಗಲೇ ಹೇಳಿಬಿಡು. ಅದರ ಎರಡರಷ್ಟು ಸರಬರಾಜು ಆಗುತ್ತದೆ. ಹಸ್ತಿನಾಪುರದ ಅರಸರ ಪ್ರೀತಿ ದೊಡ್ಡದಾಗಿರುವಂತೆ ಅಡಿಗೆಯವರ ಕೈಯೂ ದೊಡ್ಡದು.' ಶಲ್ಯ ಮಾತನಾಡಲಿಲ್ಲ. ರುಕ್ಷ್ಮರಥನ ಮುಖ ನೋಡಿಯೇ ಅವನ ಮನಸ್ಸನ್ನು ದುಶ್ಯಾಸನ ಗ್ರಹಿಸಿದ. ತಾನೇ ಎಂದ: 'ಇನ್ನೂ ಒಂದು ಮಾತು. ಈ ಯುದ್ಧ ಆಗಿಯೇ ಆಗುತ್ತೆ ಅಂತ ತಿಳಿಯಬೇಡ. ಪಾಂಡವರು ಆ ಕೃಷ್ಣನ ಮಾತು ಕೇಳಿಕೊಂಡು ನಮ್ಮನ್ನು ಬೆದರಿಸಿದರು. ನಮಗೆ ಅವರ ಬೆಂಬಲವಿದೆ ಇವರ ಬೆಂಬಲವಿದೆ ಅಂತ ಜೋರು ಮಾಡಿದರು. ನಮಗೂ ಬೆಂಬಲಿಗರಿದ್ದಾರೆ ತೋರಿಸ್‌ತೀವಿ ಬನ್ನಿ ಅಂದೆವು. ಈಗ ಅವರ ಕಡೆಯವರು ಬರುತ್ತಾರಂತೆ. ನಾವೆಲ್ಲ ಒಂದು ಕಡೆ ಸೇರಿ ಅವರ ಎದುರುಗೊಳ್ಳೋಣ. ಬಲವನ್ನು ಪ್ರಯೋಗಿಸುವ ಬದಲು ಪ್ರದರ್ಶಿಸೋಣ. ಆಗ ಅವರು ನ್ಯಾಯಕ್ಕೆ ಬರುತ್ತಾರೆ. ಧರ್ಮ ಇದ್ದಂತೆ ತೀಲ್ಮಾನ ವಾಗಲಿ, ರಾಜಪೀಠದಲ್ಲಿ ನಾವು ಮುಂದುವರಿಯುವುದು, ಬಿಡುವುದು ಮುಖ್ಯವಲ್ಲ. ಧರ್ಮ ಗೆಲ್ಲುವುದು ಮುಖ್ಯ. ಧರ್ಮ ಸೋತರೆ ಪ್ರಜೆಗಳ ಹಿತ ಸಾಧನೆಯಾಗುತ್ತೆಯೆ? ದುರ್ಯೋಧನ ರಾಜ್ಯ ಆಳುತ್ತಿರುವುದು ಪ್ರಜೆಗಳಿಗಾಗಿ. ನೀನೇ ಹಸ್ತಿನಾವತಿಗೆ ಬಂದು ನೋಡು.' ಮುಂದುವರೆಯುತ್ತದೆ... ( 📑 26 ರಿಂದ 32 📌 ಒಟ್ಟು ಪುಟಗಳು 657 ) 💛 ಫೇಸ್ಬುಕ್ ಗ್ರೂಪ್ ಲಿಂಕ್... https://www.facebook.com/groups/822079466827754/?ref=share&mibextid=NSMWBT ❤️ ನನ್ನ ಟೆಲಿಗ್ರಾಂ ಪೇಜ್ ನಲ್ಲಿಯು ಸಹ ಇರುತ್ತದೆ ! https://t.me/krishnachetanaloka1/26323 📙 *ಪರ್ವ* 📖 ✒️ `ಎಸ್.ಎಲ್. ಭೈರಪ್ಪ``` 🏹 ~ಕೃಷ್ಣ ಚೇತನ~ 📒 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ५१८८ 58   ಎಸ್ಎಲ್ ಭ್ತಿಟ್ಟ ५१८८ 58   ಎಸ್ಎಲ್ ಭ್ತಿಟ್ಟ - ShareChat
👁️‍🗨️ ಅಧ್ಯಾಯ - 13 🤔 ಶ್ರೀಕೃಷ್ಣ ಸಂಧಾನ - ಜಗದೀಶ್ ಶರ್ಮಾ ಸಂಪ ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ... https://t.me/krishnachetanaloka1/26656 🏹 ಕೃಷ್ಣ ಚೇತನ 🎧 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ಮುಣಭಾರತಗ್ ರಲ್ಲಗಳಂ FULL EPISODE ಶ್ರೀ ಕೃಣ್ಣ ಸಂಧಾನ విదానా జగేదిఃశ ಮುಣಭಾರತಗ್ ರಲ್ಲಗಳಂ FULL EPISODE ಶ್ರೀ ಕೃಣ್ಣ ಸಂಧಾನ విదానా జగేదిఃశ - ShareChat
ಧರ್ಮ ಸಂಸ್ಥಾಪನಾರ್ಥದ ಸಲುವಾಗಿ ದೇವರು ಇನ್ನೊಂದು ಅವತಾರವೆತ್ತುತ್ತಾನೋ ಇಲ್ಲವೋ ಗೊತ್ತಿಲ್ಲ... ಆದರೆ ನಮ್ಮ ದೇಶದ ಸಿಪಾಯಿಗಳು, ಪೊಲೀಸರು ಅವಕಾಶ ದೊರೆತಾಗೆಲ್ಲ ತಮ್ಮ ಉಕ್ಕುಪಾದಗಳ ನಡುವೆ ಉಗ್ರವಾದಿಗಳನ್ನು ಹೊಸಕಿ ಹಾಕುತ್ತಿದ್ದಾರೆ. ಆ...ದ...ರೂ...ನಾಯಿಕೊಡೆಗಳೇ ಟೆರರಿಸ್ಟ್‌ಗಳು. 📙 ```ಮಾಯೆ``` ✒️ *ಸೂರ್ಯದೇವರ ರಾಮಮೋಹನರಾವ್* 📝 _ಎಸ್.ಡಿ. ಕುಮಾರ್_ 🏹 ~ಕೃಷ್ಣ ಚೇತನ~ 📚 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ರಾರಿವೆಯತ್ತಾೊೋಇಲವೋ ಧಿಮಂತಣ್ಾಊಾಥದಿ&ಲವಾನಿದೇದಿರಇೋದಿು ಗೊಳಿಲಲ ದೇಕದರವಾಯಿಗೀಎಟೊ ಆಝು ಅಎಣಣದೊರೆತಾಗೆಲತಮ್ಮೆ ಉಣ್ಕಾದಿಗಳ5 663 ಆದರ ಈಡುವೆಉಗಣಐಗಳಖು ಹೊೋಕಿಣಾದತ್ತಿನಾರೆ : ಊೂಷಣಾಯಕೊಡಗ ಕಂಡೆಂರಳಿಗ ು. (৮ ೪.' ಮಾಯೆ సయందిలవరి రామమాలునిరాట ಐಮಾರ రృష్ణజితన 0Meta ರಾರಿವೆಯತ್ತಾೊೋಇಲವೋ ಧಿಮಂತಣ್ಾಊಾಥದಿ&ಲವಾನಿದೇದಿರಇೋದಿು ಗೊಳಿಲಲ ದೇಕದರವಾಯಿಗೀಎಟೊ ಆಝು ಅಎಣಣದೊರೆತಾಗೆಲತಮ್ಮೆ ಉಣ್ಕಾದಿಗಳ5 663 ಆದರ ಈಡುವೆಉಗಣಐಗಳಖು ಹೊೋಕಿಣಾದತ್ತಿನಾರೆ : ಊೂಷಣಾಯಕೊಡಗ ಕಂಡೆಂರಳಿಗ ು. (৮ ೪.' ಮಾಯೆ సయందిలవరి రామమాలునిరాట ಐಮಾರ రృష్ణజితన 0Meta - ShareChat
ಪರ್ವ 'ಪಾಂಡವರ ವಿರುದ್ಧ ಯುದ್ಧವಾಗುತ್ತಿರುವಾಗ ನಾನು ಬಿಟ್ಟರೆ ಕ್ಷತ್ರಿಯ ಧರ್ಮಕ್ಕೆ ಎರಡು ಬಗೆದ ಹಾಗೆ. ನಿನಗೇ ಗೊತ್ತಲ್ಲ, ವಿರಾಟನಗರದ ಉತ್ತರ ಭಾಗದಲ್ಲಿ ಅವನ ಹಸುಗಳ ಹಿಂಡನ್ನು ದೋಚಿ ತರುವುದಕ್ಕೆ ನಾನು ಹೋಗಿದ್ದೆ. ಹಾಳು ಪಾಂಡವರು ಅಲ್ಲೇ ಇದ್ದರು. ಇಲ್ಲದಿದ್ದರೆ ಅಷ್ಟೊಂದು ಹಸುಗಳು ನನಗೆ ಸಿಕ್ಕುತ್ತಿದ್ದುವು. ಸಿಕ್ಕದಿದ್ದರೆ ಬೇಡ ಅವರಿಂದ ಸೋತ ಅಪಮಾನವಾಯಿತು ನನಗೆ, ಅವರು ಅಲ್ಲಿರುತ್ತಾರೆ ಅಂತ ಗೊತ್ತಿದ್ದರೆ ಜಾಸ್ತಿ ಸೈನ್ಯದೊಡನೆ ಹೋಗುತ್ತಿದ್ದೆ. ಒಟ್ಟಿನಲ್ಲಿ ಅಪಮಾನಕ್ಕೆ ಪ್ರತೀಕಾರ ಮಾಡದವನು ಕ್ಷತ್ರಿಯ ಹೇಗಾಗ್‌ತಾನೆ?' ಮತ್ತೆ ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದರು. ರುಕ್ಷ್ಮರಥ ಕೇಳಿದ: 'ಪಾಂಡವರನ್ನು ದ್ವೇಷಿಸಲು ನಿನಗೆ ಈ ಕಾರಣವಿದೆ. ನಾನು ಹೇಗೆ ಅವರನ್ನ ದ್ವೇಷಿಸಲಿ, ಅದೂ ತಂಗಿಯ ಮಕ್ಕಳು ಅಂತ ನಮ್ಮಪ್ಪ ಎದೆಗೆ ಅವಚಿಕೊಳ್ಳಲು ಹೊರಟಿರುವಾಗ?' 'ನಿನ್ನ ಸ್ನೇಹಿತನಾದ ನಾನು ಅವರನ್ನು ದ್ವೇಷಿಸುವುದಕ್ಕಿಂತ ಬೇರೆ ಕಾರಣ ಬೇಕೆ ನಿನಗೆ?' ರುಕ್ಷ್ಮರಥನಿಗೆ ತುಂಬ ಇಕ್ಕಟ್ಟಾಯಿತು. ಬೇಕು ಎಂದು ಸ್ನೇಹಿತನ ಎದುರಿಗೆ ಹೋಗಲಿ, ತನ್ನ ಮನಸ್ಸಿನಲ್ಲಿ ಕೂಡ ಹೇಳಿಕೊಳ್ಳಲಾರ. ಸಮವಯಸ್ಕ, ಅಲ್ಲದೆ ಆರ್ಯಾವರ್ತದ ಜನರ ಸಮಕ್ಕೆ ತಮ್ಮ ಮಾನ ಮರ್ಯಾದೆ ಆಚಾರವಿಚಾರಗಳನ್ನು ಏರಿಸಿಕೊಳ್ಳಬೇಕೆಂದು ಜೊತೆಯಲ್ಲಿ ಕನಸು ಕಂಡಿರುವ ಗೆಳೆಯ. ಮಗಳ ಸ್ವಯಂವರದ ಅದ್ಧೂರಿಗೆ ಬೇಕಾದ ಸಹಾಯ ಮಾಡುವು ದಾಗಿ ತಾನಾಗಿಯೇ ಆಶ್ವಾಸನೆ ಇತ್ತಿದ್ದಾನೆ. ಅವನ ದ್ವೇಷಿಯು ತನ್ನ ದ್ವೇಷಿಯೂ ಆಗದೆ ಇರುವುದು ಹೇಗೆ? ಇದ್ದಕ್ಕಿದ್ದಂತೆಯೇ ಅಪ್ಪನ ಮೇಲೆ ಸಿಟ್ಟು ಬಂತು. ರಾಜ್ಯಾಡಳಿತದ ಹೊಣೆಯನ್ನು ತನ್ನ ಮೇಲೆ ಬಿಟ್ಟು ಪಟ್ಟಾಭಿಷೇಕವನ್ನೂ ಮಾಡಿರುವ ಅಪ್ಪ ಇಂತಹ ಮುಖ್ಯ ವಿಷಯದಲ್ಲಿ ಇನ್ನೂ ಯಾಕೆ ತಲೆಹಾಕುತ್ತಾನೆ, ಎನ್ನಿಸಿತು. ಹಾಗೆಂದು ಅವನ ಎದುರು ನಿಂತು ಕೇಳುವ ಮನಸ್ಸಾಗಲಿ ಧೈರ್ಯವಾಗಲಿ ಇಲ್ಲ. ಇಷ್ಟು ಯೋಚಿಸುವಲ್ಲಿ ಸುಶರ್ಮನೇ ಎಂದ: *ಅವರವರ ಜಗಳ ನಮಗೇನು ಅಂತ ನಾವು, ಅಂದರೆ ಮದ್ರರು, ತ್ರಿಗರ್ತರು, ಹೀಗೇ ಇನ್ನು ಕೆಲವರು ಸುಮ್ಮನೆ ಯಾಕಿರಬಾರದು ಅಂತ ನೀನು ಕೇಳಬಹುದು. ಕೇಕಯರು ಪಾಂಡವರ ಕಡೆಗೆ ಸೇರುತ್ತಾರೆಂಬ ಸುದ್ದಿ. ಗಾಂಧಾರರು ಮಾತ್ರ ದುರ್ಯೋಧನನ ಕಡೆಯೇ, ಈ ಯುದ್ಧ ದಲ್ಲಿ ಹೆಚ್ಚು ಕಡಿಮೆ ಆರ್ಯ ಪ್ರಪಂಚದ ಎಲ್ಲರೂ ಒಂದಲ್ಲ ಒಂದು ಪಕ್ಷವಹಿಸಿಯೇ ವಹಿಸು ತ್ತಾರೆ. ನಾವು ಯಾವ ಪಕ್ಷವೂ ಬೇಡ ಅಂತ ಸುಮ್ಮನಿದ್ದು ಬಿಟ್ಟರೆ ಹೇಡಿಗಳು ಅನ್ನಿಸಿಕೊಳ್ಳು ವುದಿಲ್ಲವೆ? ಅಲ್ಲಿ ಯುದ್ಧವಾಗುವಾಗ ಇಲ್ಲಿ ಸುಮ್ಮನೆ ಸುಂದರಿ ದಾಸಿಯರ ತೋಳಿನಲ್ಲೋ, ಸೋಮದ ಅಮಲಿನಲ್ಲೋ ಅಥವಾ ದಾಳದ ಉರುಟಿನಲ್ಲೋ ಇರಲು ಹೇಗೆ ಸಾಧ್ಯ ಈ ಕ್ಷತ್ರಿಯ ರಕ್ತಕ್ಕೆ?...' ರುಕ್ಷ್ಮರಥ ಮಧ್ಯದಲ್ಲಿ ನಿಲ್ಲಿಸಿ ಕೇಳಿದ: 'ಈ ಯುದ್ಧದಲ್ಲಿ ಯಾರು ಗೆಲ್ಲುತಾರೆ ಅಂತೀಯ ನೀನು?' 'ದುರ್ಯೋಧನ, ಸಂಶಯ ಬೇಡ ನಿನಗೆ' - ಎಂದು ಸಿದ್ಧಪಡಿಸಿಟ್ಟಂತೆ ಹೇಳಿದ ನಂತರ, ಸ್ವಲ್ಪ ಯೋಚಿಸಿ ನಿಧಾನವಾಗಿ ಎಂದ: 'ಹೇಗೆ ಅಂತೀಯೋ? ಒಂದು, ಪಾಂಡವರು ಹೊಟ್ಟೆ ಬಟ್ಟೆಗಿಲ್ಲದೆ ಹದಿಮೂರು ವರ್ಷ ಹಣ್ಣಾಗಿದ್ದಾರೆ. ಎರಡು, ದುರ್ಯೋಧನನ ಕಡೆಗೆ ಬರು ವಷ್ಟು ದೊರೆಗಳು ಪಾಂಡವರ ಕಡೆಗೆ ಬರುವುದಿಲ್ಲ. ಅವನೆಷ್ಟಾದರೂ ಅಧಿಕಾರದಲ್ಲಿರುವ ರಾಜ್ಯ ರಾಜಭಂಡಾರ ಕೈಲಿದೆ. ಸೈನ್ಯಕ್ಕೆ ಎಷ್ಟಾದರೂ ಖರ್ಚುಮಾಡಬಲ್ಲ, ಕಾಡಿನಲ್ಲಿ ಇಷ್ಟು ದಿನ ತೀರ್ಥಯಾತ್ರೆ, ಸತ್ಸಂಗ ಅಂತ ಇದ್ದು ತರಕಲು ಗಡ್ಡ ಬೆಳೆಸಿರುವ ಪಾಂಡವರಿಗೆ ಯಾರಾದರೂ ನಮಸ್ಕಾರ ಮಾಡಬಹುದು. ಬಲ, ಬೆಂಬಲ ಕೊಡುವುದಿಲ್ಲ.' 'ಹಿಂದೆ ರಾಜಸೂಯ ಮಾಡಿದ ದೊಡ್ಡ ದೊರೆಗಳಲ್ಲವೆ ಅವರು?' 34/670 'ಹಿಂದಿನ ವೈಭವದ ನೆನಪಿನಿಂದಲ್ಲ ರಾಜಕಾರಣದ ಶಕ್ತಿ, ಬರೂದ ಸೂತ್ರದಿಂದ. ಕಳೆದ ಹದಿಮೂರು ವರ್ಷದಿಂದ ದುರ್ಯೋಧನ ಅಧಿಕ ಕೊಂಡು ಪಾಂಡವರ ಹೆಸರೇ ಮರೆಯುವ ಹಾಗೆ ಮಾಡಿದಾನೆ. ಅವರು ಕಟ್ಟಿದ ಇಂದ್ರಪ್ರಸ್ಥದ ಪ್ರದೇಶದಲ್ಲಿ ಕೂಡ ಮರೆಯುವ ಹಾಗೆ. ಪಾಂಚಾಲರ ದಾಕ್ಷಿಣ್ಯಕ್ಕೆ ಅಲ್ಲೊಬ್ಬರು ಇನ್ನೊಬ್ಬರು ಇವರ ಕಡೆ ಬಂದ ಶಾಸ್ತ್ರ ಮಾಡಬಹುದು. ಸೋಲುವ ಎತ್ತಿನ ಬಾಲ ನೀನೇಕೆ ಹಿಡೀತೀಯ, ಬಲಶಾಲಿಯಾದ ಎತ್ತು ಗೆದ್ದ ನಂತರ ನಿನ್ನ ಮೇಲೆ ನುಗ್ಗಿ ಮುಗಿಸದೆ ಇರುತ್ತೆಯೆ? ನಿನ್ನ ತಂದೆ ವಿವೇಕಿ. ಆದರೆ ವೃದ್ದಾಪ್ಯ.' ಇಬ್ಬರೂ ಸಂಜೆಯ ತನಕ ಮಾತನಾಡುತ್ತಿದ್ದರು. ಅಷ್ಟು ಹೊತ್ತಿಗೆ ಮಳೆ ಬಂತು. ಎಲ್ಲ ಹೊರಗೆ ಹೊರಡಲಿಲ್ಲ. ರುಕ್ಷ್ಮರಥ ತನ್ನ ತಮ್ಮಂದಿರನ್ನು ಕರೆಸಿದ. ಅವರೊಡನೆಯೂ ಸುಶರ್ಮ ಕೌರವರ ಪರವಾಗಿ ಮಾತನಾಡಿದ. ರಾತ್ರಿ ಪ್ರಾಯದ ಹೋರಿಯನ್ನು ಕಡಿದು ಔತಣ ಮಾಡಿದ್ದರು. ಊಟವಾದ ಮೇಲೆ ತನಗಾಗಿ ಸಿದ್ದಪಡಿಸಿದ್ದ ಹಾಸಿಗೆಯ ಮೇಲೆ ಕುಳಿತು ಸುಶರ್ಮ ರುಕ್ಷ್ಮರಥನನ್ನು ಕೇಳಿದ: 'ನಿನ್ನ ಮಗಳನ್ನು ಪಾಂಡವರ ಹಿರಿಯ ಮಗನಿಗೆ ತಂದು. ಕೊಳ್ಳುವುದಾಗಿ ಪಾಂಚಾಲದ ಚಾಣಾಕ್ಷ ಪುರೋಹಿತ ಅಂದ ಅಂತೀಯ. ನಿನ್ನ ಮಗಳಿಗೆ ಐದು ಜನ ಗಂಡಂದಿರಾಗುತ್ತಾರೆ. ಇದು ಆರ್ಯ ಧರ್ಮವೋ ಗುಡ್ಡಗಾಡು ಜನದ ಪದ್ದತಿಯೋ? ಆರ್ಯ ಜನಾಂಗದಿಂದ ನೀನು ಬಹಿಷ್ಕೃತನಾಗಬೇಕಷ್ಟೆ.' "ಹ್ಯಾಗೆ?' 'ಪಾಂಡವರು ಐದು ಜನ ಕೂಡಿ ತಾನೆ ದೌಪದಿಯನ್ನು ಮದುವೆಯಾದದ್ದು? ಅವಳ ಹೊಟ್ಟೆಯಲ್ಲಿ ಹುಟ್ಟಿದ ಯಾವ ಮಗು ಯಾರಿಗೆ ಆಯ್ತು ಅಂತ ಅವರಿಗೂ ಗೊತ್ತಿಲ್ಲ. ಅವಳಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಹಿರಿಯನ ಹೆಸರು, ನಿನ್ನ ಮಗಳನ್ನು ಮಾಡಿಕೊಂಡರೂ ನಮ್ಮ ಮನೆಯ ಪದ್ಧತಿ, ಐದು ಜನವೂ ನಿನ್ನನ್ನು ಹಂಚಿಕೊಡ್ತೀವಿ ಅಂತ ಬಲವಂತ ಮಾಡಿ ದರೆ ನಿನ್ನ ಮಗಳು ಏನು ಮಾಡಬೇಕು? ನೀನೇನು ಮಾಡ್ತೀಯ?' ರುತ್ಮರಥನಿಗೆ ಇದು ಹೊಳೆದೇ ಇರಲಿಲ್ಲ. ಈಗ ಬುದ್ದಿ ಗತ್ತಲೆ ಹಿಡಿದಂತಾಯಿತು. ಅಪ್ಪನಿಗೆ ವೃದ್ಧಾಪ್ಯ ಎಂದು ಖಚಿತವಾಯಿತು. ಗೆಳೆಯನಿಗೆ ಉತ್ತರ ಹೇಳಲಾರದೆ ಸುಮ್ಮನೆ ಕುಳಿತ. ಮೂರು ಸಲ ಆಕಳಿಸಿದ ಮೇಲೆ ಸುಶರ್ಮ ತಾನಾಗಿಯೇ ಹೇಳಿದ: 'ನಿನ್ನ ಮಗಳು ದೊಡ್ಡ ರಾಜ್ಯದ ರಾಜ್ಞೆಯಾಗಬೇಕು ಅಂತ ನನಗೂ ಬಯಕೆ ಇದೆ. ದುರ್ಯೋಧನನ ಹಿರೀಮಗೆ ಸ್ವಯಂವರಕ್ಕೆ ಬರುವ ಹಾಗೆ ನಾನು ಮಾಡ್ತೀನಿ. ಯುದ್ಧ ಕಳೀಲಿ ಸುಮ್ಮನಿರು.' ರುಕ್ಷ್ಮರಥ ಎದ್ದು ನಿಂತ. ನೀನು ಮಲಗು ಎಂದು ಹೇಳಿ ಅಲ್ಲಿಂದ ಹೊರಕೋಣೆಗೆ ಬಂದಾಗ, ಮೈಗೆ ಶ್ರೀಗಂಧ ಲೇಪಿಸಿಕೊಂಡು ಬಣ್ಣ ಬಣ್ಣದ ಹೂವಿನ ಹಾರ ಧರಿಸಿದ ಎಳೆ ಪ್ರಾಯದ ಹತ್ತು ಜನ ದಾಸಿಯರು ನಿಂತಿದ್ದರು. ನಡುವೆ ನಿಂತವಳ ಕೈಯಲ್ಲಿ ಅಕ್ಕಿಯಿಂದ ಮಾಡಿದ ಮದ್ಯದ ಪಾತ್ರೆಯಿತ್ತು. ಅವನಿಗೆ ಮರೆತೇಹೋಗಿತ್ತು. ಒಳಗೆ ನಡೆದು ಸ್ನೇಹಿತನಿಗೆ ಹೇಳಿದ: 'ಎದ್ದು ನೋಡು. ನಿನ್ನ ಸೇವೆಗೆ ಹತ್ತು ಜನ ಇದ್ದಾರೆ. ಎಷ್ಟು ಜನ ಬೇಕಾದರೂ ಅಥವಾ ಯಾರನ್ನು ಬೇಕಾದರೂ ಆರಿಸು. ಆದರೆ ಎಚ್ಚರಿಕೆ. ನಮ್ಮ ಮದ್ರ ದೇಶದ ಹೆಂಗಸರು ಎಂಥ ಗಂಡಸನ್ನೂ ಬಳಲಿಸಿಬಿಡುತ್ತಾರೆ. ನಿನಗೂ ಐವತ್ತು ವರ್ಷವಾಗಿದೆಯಲ್ಲವೆ?' ಸ್ನೇಹಿತರು ಜೊತೆಯಲ್ಲಿ ಕುಳಿತರು. ಹೆಂಗಸರು ಕೊಟ್ಟ ಮದ್ಯವನ್ನು ಇಬ್ಬರೂ ಕುಡಿದರು. ಸ್ವಲ್ಪ ಹೊತ್ತಿನ ನಂತರ ರುಕ್ಷ್ಮರಥನು ಎದ್ದು ತನ್ನ ನಿವಾಸಕ್ಕೆ ನಡೆದ. ಒಬ್ಬ ಸುಂದರಿಯು ಅವನ ತೋಳು ಹಿಡಿದು ನಡೆಸಿ ರಾಣಿಯ ಹಾಸಿಗೆಗೆ ತಂದು ಬಿಟ್ಟು ಹಿಂತಿರುಗಿದಳು. ಹೊರಗೆ ಮಳೆ ಸುರಿಯುತ್ತಿತ್ತು. ಮದ್ಯವನ್ನು ಸೇವಿಸಿದ್ದ ರಾಣಿಗೆ ಮಬ್ಬು ಬಂದಿತ್ತು. ಪಕ್ಕದಲ್ಲಿ ಗಂಡ ಬಂದು ಮಲಗಿದ ಅರಿವೂ ಆಗಲಿಲ್ಲ. ರುಕ್ಷ್ಮರಥನಿಗೆ ಪಾನದಿಂದ ಬರಬೇಕಾದ ನಿದ್ದೆ ಬರಲಿಲ್ಲ. ಬ್ರೌಪದಿಗೂ ಹೀಗೆಯೇ ಆಯಿತಂತೆ, ಸ್ವಯಂವರದಲ್ಲಿ ಅರ್ಜುನನೇನೋ ಗೆದ್ದ. ಅನಂತರ ಹಿರಿಯನಾದ ಧರ್ಮನು ದ್ರುಪದನ ಹತ್ತಿರ, ನಾವು ಗೆದ್ದ ಮೇಲೆ ಹೆಣ್ಣನ್ನು ಹೇಗಾದರೂ ಹಂಚಿಕೊಳ್ಳುತ್ತೇವೆ, ಕೇಳುವ ಅಧಿಕಾರ ನಿನಗೇನಿದೆ ಅಂದನಂತೆ. ಹಿರಣ್ಯವತಿಗೂ ನಾಳೆ ಹೀಗೆಯೇ ಹೇಳಿದರೆ! ಭಯವಾಯಿತು. ಆರ್ಯಧರ್ಮವನ್ನು ಕಡೆಗಣಿಸಿದ ಇವರಿಗೆ ಯಾರೂ ಸಹಾಯ ಮಾಡುವುದಿಲ್ಲ ಎನ್ನಿಸಿತು. ಮಾಡಕೂಡದು ಎಂದು ನಿಶ್ಚಯಿಸಿದ. ಸ್ನೇಹಿತ ಸುಶರ್ಮನ ವಿಷಯದಲ್ಲಿ ಕೃತಜ್ಞತೆ ಹುಟ್ಟಿತು. ಎಷ್ಟು ಹೊರಳಿದರೂ ನಿದ್ದೆ ಬಾರದು. ಅಪ್ಪನದು ಅವಿವೇಕ. ಅವನಿಗೆ ತಿಳಿಯಹೇಳಬೇಕು. ಅಷ್ಟರಲ್ಲಿ ಯಾರ ಸಂಗಡವಾದರೂ ಮಾತನಾಡುವ ಬಯಕೆ. ಪಕ್ಕದಲ್ಲಿ ಗಟ್ಟಿಯಾಗಿ ಉಸಿರೆಳೆದು ಬಿಡುತ್ತಿದ್ದ ಹೆಂಡತಿಯ ಭುಜ ಅಲುಗಿಸಿದ. ಅವಳು ಆ ಎಂದಳು. ಮತ್ತೆ ಉಸಿರೆಳೆಯಲು ಶುರುಮಾಡಿದಳು. ನಾಲ್ಕಾರು ಸಲ ಹೊರಳಿಸಿದಮೇಲೆ ಎಚ್ಚರಗೊಂಡಳು. 'ನೋಡು, ನಾವು ಯೋಚಿಸಿಯೇ ಇರಲಿಲ್ಲ. ಹಿರಣ್ಯವತಿಯನ್ನು ಪಾಂಡವರ ಮಗನಿಗೆ ಕೊಟ್ಟಿದ್ದರೆ ಹೀಗಾಗುತ್ತಿತ್ತು'– ಎಂದು ಬಿಡಿಸಿ ಹೇಳಿದ: 'ಎಂತಹ ಅನಾಹುತ!' ಅವಳು ಮತ್ತೆ ಮಂಪರಿಗೆ ಇಳಿದಿದ್ದಳು. 'ನೋಡು, ಎಷ್ಟು ಗಂಭೀರ ವಿಷಯ ಹೇಳಿ, ದೀನಿ. ನೀನು ನಿದ್ದೆ ಮಾಡ್ತಿದೀಯ. ಮಾತಾಡು.' ಅವಳು ಮಾತನಾಡಲಿಲ್ಲ. ಪುನಃ ಭುಜ ಅಲುಗಿಸಿ ಎಚ್ಚರ ಮಾಡಿ ಮೊದಲಿನಿಂದ ಎಲ್ಲವನ್ನೂ ವಿವರಿಸಿ, ಮಾತಾಡುವಂತೆ ಬಲವಂತ ಮಾಡಿದ. 'ಐದು ಜನರನ್ನು ಕರೆದುಕೊಳ್ಳುವ ಶಕ್ತಿ ಅವಳಿಗಿದ್ದರೆ ಮಾಡಿಕೊಳ್ಳಲಿ' - ಎಂದು ತೊದಲಿದಳು. 'ಏನಂದೆ?' – ಎಂದು ಇವನು ಕೇಳುವ ಹೊತ್ತಿಗೆ ಅವಳು ನಿದ್ದೆಯ ಉಸಿರೆಳೆ ಯುತ್ತಿದ್ದಳು. ಸುಶರ್ಮ ಮರುದಿನವೇ ಪ್ರಯಾಣ ಮಾಡಿದ. ತಾನೂ ಬೆಂಗಾವಲಿನವರೊಡನೆ ನದಿಯ ತನಕ ಹೋಗಿ ಗೌರವದಿಂದ ಕಳಿಸಿ ಹಿಂತಿರುಗಿದ ತಕ್ಷಣ ರುಕ್ಷ್ಯರಥನು ಅಪ್ಪನ ಅರಮನೆಗೆ ಹೋದ. ಉದ್ಯಾನದಲ್ಲಿ ಸಂಜೆಯ ವಾಲು-ಬಿಸಿಲಿಗೆ ಮಿನುಗುವ ಬಿಳಿಗೂದಲಿನ ತಲೆಯನ್ನು ಬಗ್ಗಿಸಿಕೊಂಡು ಹೊಸದಾಗಿ ಒಡೆಯುತ್ತಿದ್ದ ನೆಲಸಂಪಿಗೆಯ ಹೂವನ್ನು ನೋಡುತ್ತಿದ್ದ ಶಲ್ಯ ರಾಜ, 'ಸುಖ ಪ್ರಸ್ಥಾನವಾಯಿತೊ?' ಎಂದು ಕೇಳಿದ. ಹೊರಡುವ ಮುನ್ನ ಸುಶರ್ಮ ಹಿರಿಯನಲ್ಲಿಗೆ ಬಂದು ನಮಸ್ಕರಿಸಿ ಹೋಗಿದ್ದ. ರುಕ್ಷ್ಮರಥ ನೇರವಾಗಿ ಅಪ್ಪನಲ್ಲಿ ಪ್ರಸ್ತಾಪಿಸಿದ. ಐವರಿಗೆ ಒಬ್ಬ ಹೆಂಡತಿ, ಅಂಥವರ ಹಿರಿಯ ಮಗನಿಗೆ ನಮ್ಮ ಹುಡುಗಿ ಕೊಟ್ಟರೆ ಅವರು ದ್ರುಪದನಿಗೆ ಹೇಳಿದ ಉತ್ತರವನ್ನೇ ಹೇಳಬಹುದಲ್ಲವೆ? ನಮ್ಮ ಆರ್ಯಧರ್ಮವೇ ಇದು? ವೃದ್ಧರಾಜನಿಗೂ ಇದು ಸರಿ ಎನ್ನಿಸಲಿಲ್ಲ. ಇದೆಲ್ಲವನ್ನೂ ಮಗನಿಗೆ ಹೇಳಿಕೊಡುವವನು ಆ ತ್ರಿಗರ್ತದವನು ಎಂದು ಅವನಿಗೆ ಗೊತ್ತಿತ್ತು. ನಡೆದಿರುವುದನ್ನೆಲ್ಲ ತಪ್ಪೆಂದು ಕರೆದು ತಾವು ಹೊಸತು ಮಾಡಬೇಕೆಂದು ಈ ಗೆಳೆಯರಿಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. ತಕ್ಷಣ ಹೊಳೆ ದದ್ದನ್ನು ಮುದುಕ ಹೇಳಿದ: 'ಅದು ಅಧರ್ಮವೇ ಆಗಿದ್ದರೆ ಭೀಷ್ಮ ಒಪ್ಪುತ್ತಿದ್ದನೆ? ಆರ್ಯ ಧರ್ಮವನ್ನು ಭೀಷ್ಮನಿಗಿಂತ ಹೆಚ್ಚು ತಿಳಿದ ಯಾರಿದ್ದಾರೆ?' ಮಗನ ಬಾಯಿ ಕಟ್ಟಿತು. ಹೌದು. ಭೀಷ್ಮ ದ್ರೋಣ ಇವರೆಲ್ಲ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ಇಂಥ ಮದುವೆಯಾದ ಪಾಂಡವರ ರಾಜಸೂಯಕ್ಕೆ ಸಮಸ್ತ ಆರ್ಯ ರಾಜರೂ, ಆರ್ಯ ಪುರೋಹಿತರೂ ಹೋಗಿದ್ದಾರೆ. ಬೇಡದಿದ್ದರೆ ತನ್ನ ಮಗಳನ್ನು ಆ ಮನೆಗೆ ಕೊಡು ವುದು ಬೇಡ, ಆದರೆ ಪಾಂಡವರ ಮದುವೆಯನ್ನು ತಪ್ಪು ಎನ್ನುವಂತಿಲ್ಲ. ಅವನು ಹೇಳಿ ಕೊಟ್ಟನೋ ಈ ಸಿಗುರನ್ನ ನಿನ್ನ ಸ್ನೇಹಿತ?'- ಅಪ್ಪ ಕೇಳಿದ. ಗೆಳೆಯನಿಗೆ ನಿಂದೆಯನ್ನು ತಗುಲಿಸಿದ್ದಕ್ಕೆ ರುಕ್ಷ್ಮರಥನಿಗೆ ಸಿಟ್ಟೇನೋ ಬಂತು. ಆದರೆ ಮೂಲಪ್ರಶ್ನೆಯನ್ನು ಕುರು ಪಾಂಚಾಲರಾದಿಯಾಗಿ ಸಮಸ್ತರೂ ಒಪ್ಪಿಕೊಂಡಿರುವಾಗ, ತನಗೆ ಹೇಳಿಕೊಟ್ಟವನು ಗೆಳೆಯನೇ ಅಲ್ಲವೆ, ತಲೆಯಲ್ಲಿ ಗೊಂದಲವಾಯಿತು. ಆದರೆ ಇದುವರೆಗೆ ನಮ್ಮ ಆರ್ಯರಲ್ಲಿ ಎಲ್ಲಾದರೂ ನಡೆದಿದೆಯೆ ಇಂಥಾ ಮದುವೆ, ನಡೆದಿತ್ತೆ?'- ಎಂದು ಮರುಪ್ರಶ್ನೆ ಹಾಕಿದ. ಅಪ್ಪನಿಗೂ ತಕ್ಷಣ ಹೊಳೆಯಲಿಲ್ಲ. ಅಲ್ಲಿ ನಿಂತು ಮಾತನ್ನು ಮುಂದುವರಿಸುವುದು ಬೇಡವಾಗಿದ್ದುದರಿಂದ ಮಗನು ತನ್ನ ನಿವಾಸಕ್ಕೆ ನಡೆದ. ರಾತ್ರಿ ನಿದ್ರೆಯಲ್ಲಿ ಏನೋ ಹೇಳಿದಳು, ಈಗ ಹೆಂಡತಿಯ ಕೈಲಿ ನಿಧಾನವಾಗಿ ಮಾತನಾಡಬೇಕು ಎನ್ನಿಸಿತು. ಆರ್ಯರ ರೀತಿ ನೀತಿಗಳನ್ನು ಶಲ್ಯನು ತಿಳಿಯದವನಲ್ಲ. ಆದರೆ ಒಬ್ಬ ಹೆಂಗಸನ್ನು ಅಣ್ಣ ತಮ್ಮಂದಿರೆಲ್ಲ ಒಟ್ಟಿಗೆ ಮದುವೆಯಾಗುವುದನ್ನು ಅವನು ಕೇಳಿಯೂ ಅರಿಯ. ಅಧರ್ಮವೇ ಆಗಿದ್ದಲ್ಲಿ ಭೀಷ್ಮಾದಿಗಳು ಹೇಗೆ ಒಪ್ಪಿಕೊಂಡರು, ಇತರ ರಾಜರು, ದೇಶದೇಶಗಳ ಆಚಾರ ವಿಚಾರಗಳ ಪಂಡಿತರು ಹೇಗೆ ರಾಜಸೂಯಕ್ಕೆ ಬಂದರು? ಆದ್ದರಿಂದ ಆ ಮದುವೆ ಧರ್ಮದ್ದೆ, ಹೇಗೆ ಎಂಬುದು ಮಾತ್ರ ತನಗೆ ಗೊತ್ತಿಲ್ಲ, ಗೊತ್ತಾಗದಿದ್ದರೆ ಏನಾಗಬೇಕು ಎಂದು ಮನಸ್ಸನ್ನು ಸಮಾಧಾನಪಡಿಸಿಕೊಂಡು ಬೆಂಗಾವಲಿನವನೊಡನೆ ರಥವೇರಿ ಶಸ್ತ್ರಾಭ್ಯಾಸ ದಅಂಗಳಕ್ಕೆ ಹೋದ. ಮಳೆ ಶುರುವಾದ ಮೇಲೆ ಅಭ್ಯಾಸದ ಬಿರುಸು ಕಡಿಮೆಯಾಗಿತ್ತು. ತಾನು ಕೂಡ ಇತ್ತ ಕಡೆ ಬಂದಿಲ್ಲ. ರಥದ ಗಾಲಿ ನೆಲದಲ್ಲಿ ಹೂತುಕೊಳ್ಳುತ್ತಿದೆ. ಕುದುರೆಗಳು ಬಿಚ್ಚು ಧೈರ್ಯದಿಂದ ಓಟದ ಹೆಜ್ಜೆ ಎಸೆಯುತ್ತಿಲ್ಲ. ಒಟ್ಟು ಐವತ್ತು ಜನ ಕ್ಷತ್ರಿಯ ಯುವಕರು ಬಿಲ್ಲಿನ ಗುರಿಯನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಉಳಿದ ಸುಮಾರು ಇಪ್ಪತ್ತು ಜನರು ಭರ್ಜಿ ಎಸೆಯು ತಿದ್ದರು. ದೊಡ್ಡ ರಾಜ ಬಂದದ್ದರಿಂದ ಅವರು ಪರಸ್ಪರ ಮಾತನಾಡಿಕೊಳ್ಳುವುದನ್ನು ನಿಲ್ಲಿಸಿ ಶಿಸ್ತಿನಿಂದ ಅಭ್ಯಾಸದಲ್ಲಿ ತೊಡಗಿದರು. ಎಲ್ಲರ ಬೆವರಿದ ಮೈಗಳೂ ಎಣ್ಣೆ ಬಳಿದಂತೆ ಹೊಳೆಯುತ್ತಿದ್ದುವು. ಶಲ್ಯರಾಜನಿಗೆ ದಾಸಿಯಲ್ಲಿ ಹುಟ್ಟಿದ ಶಲಾಕನು ಅಭ್ಯಾಸದ ಮೇಲ್ವಿಚಾ ರಕನಾಗಿದ್ದ. ಅವನು ಹತ್ತಿರ ಬಂದು ಕೇಳಿದ: 'ಅಪ್ಪ, ಯುದ್ಧಕ್ಕೆ ಹೊರಡುವುದೆಂದು?' 'ಇನ್ನೂ ಗೊತ್ತಿಲ್ಲ ಮಗು, ಅವರು ಹೇಳಿಕಳಿಸುತ್ತಾರೆ." 'ನಾನು ಯಾಕೆ ಕೇಳಿದೆ ಅಂದರೆ ಯುದ್ಧ ಯಾವತ್ತು ನಡೆಯುತ್ತೋ, ನಡೆಯುತ್ತೋ ಇಲ್ಲವೋ, ಅದಕ್ಕೆ ನಾವು ಯಾಕೆ ಸುಮ್ಮಸುಮ್ಮನೆ ದಿನಾ ಅದನ್ನೇ ಅಭ್ಯಾಸ ಮಾಡಿ ಮಾಡಿ ದಣಿದು ಬೇಸರ ತಂದುಕೊಬೇಕು ಅಂತ ಇವರೆಲ್ಲ ಗೊಣಗ್ತಾರೆ.' 'ಯುದ್ಧವಿರಲಿ ಇಲ್ಲದಿರಲಿ, ಅಭ್ಯಾಸ ನಿಲ್ಲಿಸಕೂಡದು ಅಂತ ನಿನಗೆ ಗೊತ್ತಿಲ್ಲವೆ?' 'ಆದರೆ ಇಷ್ಟೊಂದು ಯಾಕೆ ಅಂತ ಇವರು ಕೇಳೂದು.' ಮಹಾರಾಜ ಉತ್ತರ ಹೇಳಲಿಲ್ಲ. ಮಳೆಗಾಲ ಕಳೆಯುವ ತನಕವಂತೂ ಯುದ್ಧವಿಲ್ಲ. ಅದು ಅವರಿಗೂ ಗೊತ್ತಿದೆ. ಬಾಯಿ ಬಿಟ್ಟು ಹೇಳದೆ ಅವನೇ ರಥವನ್ನು ನಡೆಸಿಕೊಂಡು ಮುಂದೆ ನಡೆದ, ಬಯಲಿನಲ್ಲಿ ಜೋರಿನಿಂದ ಓಡಿಸಿದ. ಗಕ್ಕನೆ ನಿಲ್ಲಿಸಿದ. ಸರಕ್ಕನೆ ತಿರುಗಿಸಿದ. ಹೊಸ ಕುದುರೆಗಳು, ಕೆಸರು ನೆಲ. ಆದರೂ ತನಗೆ ಬಗ್ಗುತ್ತವೆ, ಶಲ್ಯನಲ್ಲವೆ ನಾನು ಎಂದುಕೊಂಡು ಒಂದು ಮೂಲೆಗೆ ಹೋಗಿ ರಥವನ್ನು ನಿಲ್ಲಿಸುವಾಗ ಅಕ್ಕ ತಂಗಿಯರನ್ನೆಲ್ಲ ಒಬ್ಬ ಮಾಡಿಕೊಳ್ಳು ವುದೇನೋ ಕೇಳಿಬಲ್ಲೆ, ಆದರೆ ಅಣ್ಣ ತಮ್ಮಂದಿರನ್ನೆಲ್ಲ ಒಬ್ಬಳು ಮಾಡಿಕೊಳ್ಳುವುದನ್ನು ಎಲ್ಲಿಯೂ ಕೇಳಿಲ್ಲವಲ್ಲ ಎನ್ನಿಸಿತು. ಸ್ವಲ್ಪ ಹೊತ್ತು ರಥದ ಮೇಲೆಯೇ ಕುಳಿತ. ಸಂಜೆ ಯಾಗುತ್ತಿತ್ತು. ಮಳೆ ಬರುವ ಸೂಚನೆ ಕಂಡಿತು. ತಾನೇ ನಡೆಸಿಕೊಂಡು ಅರಮನೆಗೆ ವಾಪಸಾದಾಗ ಅಗ್ನಿಗೆ ತುಪ್ಪವನ್ನು ಸುರಿಯುವ ಹೋಮದ ವಾಸನೆ ಅಡರಿತ್ತು. ಸ್ನಾನ ಮಾಡಿ ತಾನೂ ಹೋಗಿ ಹೋಮದಲ್ಲಿ ಪಾಲುಗೊಂಡ. ಅನಂತರ ಪುರೋಹಿತನನ್ನು ಹತ್ತಿರ ಕರೆದು ತನ್ನ ಸಮಸ್ಯೆಯನ್ನು ಕೇಳಿದ: 'ಪಾಂಚಾಲ ಹಸ್ತಿನಾವತಿಗಳ ವೇದಜ್ಞರೆಲ್ಲ ಒಪ್ಪಿದ ರೆಂದರೆ ಧರ್ಮಸಮ್ಮತವೇ ಅಲ್ಲವೆ?' ಅವನು ಉತ್ತರ ಹೇಳಿದ. ರಾಜನಿಗೆ ಮತ್ತೆ ಪ್ರಶ್ನಿಸುವುದೇನೂ ಕಾಣಲಿಲ್ಲ. ಅಪ್ಪ ಮಗನಲ್ಲಿ ಸ್ವಲ್ಪ ವಾಗ್ವಾದ ನಡೆಯಿತು. ಭೀಷ್ಮಾದಿಗಳೇ ಒಪ್ಪಿದ್ದಾರೆ ಎಂಬುದಕ್ಕಿಂತ ಹೆಚ್ಚಿನದನ್ನು ಅಪ್ಪ ಹೇಳಲಿಲ್ಲ. ದುರ್ಯೋಧನ ಮೊದಲಾಗಿ ಹಸ್ತಿನಾವತಿಯವರು, ಇತ್ತ ತ್ರಿಗರ್ತರು ಅತ್ತ ದುರ್ಯೋಧನನನ್ನು ಸಮರ್ಥಿಸುವ ಎಲ್ಲ ದೊರೆಗಳೂ ಅದನ್ನು ಅಪಹಾಸ್ಯ ಮಾಡುತ್ತಿದ್ದಾರೆಂದು ಮಗ ಹೇಳಿದ. ಅಣ್ಣ ತಮ್ಮಂದಿರೆಲ್ಲ ಒಬ್ಬಳನ್ನೇ ಹಂಚಿಕೊಳ್ಳುವುದು ಕೆಲವು ಕಾಡು ಜನರ ಪದ್ಧತಿ ಎಂದು ಅವರು ಕೇಳಿದ್ದರು. ಕಾಡಿನಲ್ಲೇ ಹುಟ್ಟಿ ಬೆಳೆದು ಪ್ರಾಯದಲ್ಲೂ ಆ ಜನಗಳ ಒಡನಾಡಿದ ಪಾಂಡವರು ಆರ್ಯಧರ್ಮವನ್ನೇ ನೀರು-ಪಾಲು ಮಾಡಿದ್ದಾರೆಂದು ಮಗ ವಾದಿಸಿದ. ನನ್ನ ಮಗಳನ್ನು ಅವರಿಗೆ ಕೊಡುವುದಂತೂ ಸಾಧ್ಯವಿಲ್ಲ, ಇನ್ನು ಅವರಿಗೆ ಸಹಾಯ. ಏಕೆ ಮಾಡಬೇಕು ದುರ್ಯೋಧನನಂತಹ ಸಿರಿವಂತ ರಾಜನ ಮುಂದುವರೆಯುತ್ತದೆ... ( 📑 20 ರಿಂದ 25.5 📌 ಒಟ್ಟು ಪುಟಗಳು 657 ) 💛 ಫೇಸ್ಬುಕ್ ಗ್ರೂಪ್ ಲಿಂಕ್... https://www.facebook.com/groups/822079466827754/?ref=share&mibextid=NSMWBT ❤️ ನನ್ನ ಟೆಲಿಗ್ರಾಂ ಪೇಜ್ ನಲ್ಲಿಯು ಸಹ ಇರುತ್ತದೆ ! https://t.me/krishnachetanaloka1/26323 📙 *ಪರ್ವ* 📖 ✒️ `ಎಸ್.ಎಲ್. ಭೈರಪ್ಪ``` 🏹 ~ಕೃಷ್ಣ ಚೇತನ~ 📒 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ేసో ಬೈಿರಪ್ಪ ಎನ್ ಎಲ್ ేసో ಬೈಿರಪ್ಪ ಎನ್ ಎಲ್ - ShareChat
👁️‍🗨️ ಅಧ್ಯಾಯ - 12 🤔 ಯುದ್ಧ ಪೂರ್ವ ಪರ್ವ - ಜಗದೀಶ್ ಶರ್ಮಾ ಸಂಪ ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ_ಕೃಷ್ಣ ಚೇತನ.mp3 https://t.me/krishnachetanaloka1/26547 🏹 ಕೃಷ್ಣ ಚೇತನ 🎧 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ದ]ಹಾಭಗವ ಗಹಸ್ಗಳ] FULL EPISODE యడ్మ్ిప? అధ్యాయి 12 ಪೂರ್ವ ವಿದ್ವಾನ್ ಜಗದೀಶ ಶರ್ಮಾ ಸಂಪ ದ]ಹಾಭಗವ ಗಹಸ್ಗಳ] FULL EPISODE యడ్మ్ిప? అధ్యాయి 12 ಪೂರ್ವ ವಿದ್ವಾನ್ ಜಗದೀಶ ಶರ್ಮಾ ಸಂಪ - ShareChat
ಇದಾದ ಮರುದಿನ ಶಲ್ಯಮಹಾರಾಜನನ್ನು ಕಾಣಲು ಒಬ್ಬ ದೂತ ಬಂದ. ಐವರು ಕುದುರೆಯಾಳುಗಳ ಸಂಗಡ ಬಂದ ಆತನನ್ನು ನೋಡಿದರೆ ರಾಜದೂತ ಬ್ರಾಹ್ಮಣನೆಂದು ಸ್ಪಷ್ಟವಾಗಿ ಕಾಣುತ್ತಿತ್ತು. ಮಹಾರಾಜನು ಆತನನ್ನು ಸಭಾಭವನದಲ್ಲಿ ಸ್ವಾಗತಿಸಿದ. ಜೊತೆ ಯಲ್ಲಿ ಹಿರಿಯ ಮಗ ರುಕ್ಷ್ಮರಥ, ಅವನ ತಮ್ಮಂದಿರಾದ ವಜ್ರ ಮತ್ತು ಅಜಯರು. ಪುರೋಹಿತ ಹೋಮದತ್ತನೂ ಉಪಸ್ಥಿತನಿದ್ದ. ದೂತನಾಗಿ ರಾಜನನ್ನು ಅಭಿವಾದಿಸಿ, ಬ್ರಾಹ್ಮಣನಾಗಿ ಆಶೀರ್ವದಿಸಿ ಮಧುಪರ್ಕಾದಿಗಳನ್ನು ಸ್ವೀಕರಿಸಿ ಅಸನದಲ್ಲಿ ಮಂಡಿಸಿದ ಮೇಲೆ ಅವನು ತನ್ನ ಪರಿಚಯದ ವಿವರಗಳನ್ನು ಹೇಳಿದ. ವಿರಾಟನ ಊರಿನಲ್ಲಿ ಅಜ್ಞಾತ ವಾಸವನ್ನು ಮುಗಿಸಿದಮೇಲೆ ಪಾಂಡವರಲ್ಲಿ ಮೂರನೆಯವನಾದ ಅರ್ಜುನನ ಮಗನಿಗೆ ವಿರಾಟನ ಕಿರಿಮಗಳನ್ನು ಕೊಟ್ಟು ಮದುವೆಯಾಗಿದೆ. ಈಗ ಸದ್ಯಕ್ಕೆ ಅವರೆಲ್ಲ ವಿರಾಟರಾಜ್ಯದ ಉತ್ತರಭಾಗಕ್ಕಿರುವ ಉಪಪ್ಲಾವ್ಯ ಪಟ್ಟಣದಲ್ಲಿ ಬಿಡಾರ ಹೂಡಿ ತಮ್ಮ ಕಾರ್ಯಾಗಾರ ಮಾಡಿಕೊಂಡಿದ್ದಾರೆ. ಅವರ ಪಾಲಿನ ರಾಜ್ಯವನ್ನು ಕೊಡುವುದಿಲ್ಲವೆಂದು ದುರ್ಯೋಧನನು ಖಡಾಖಂಡಿತ ಹೇಳಿದ್ದಾನೆ. ಅವನು ಎಂಥಾ ಅಧರ್ಮಿ ಎಂದು ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ. ಪಾಂಡವರು ಹೇಗೂ ಶಲ್ಯರಾಜನಿಗೆ ಸೋದರಳಿಯಂದಿರು. ಅವರೇ ಸ್ವತಃ ಬಂದು ಮಾವನ ಚರಣಗಳನ್ನು ಸ್ಪರ್ಶಿಸಿ ಅಭಯ ಯಾಚನೆ ಮಾಡಲು ಹೊರಟಿದ್ದರು. ಆದರೆ ಯುದ್ಧ ಸಿದ್ಧತೆಯ ಇತರ ಕೆಲಸಗಳಿಂದ, ಅಲ್ಲದೆ ಹೇಗೂ ನಮ್ಮ ಮಾವ, ಅವನು ಎಂದೂ ನಮ್ಮಿಂದ ಬರಿಯ ಸಂಪ್ರದಾಯದ ನಡತೆಯನ್ನು ಬಯಸುವುದಿಲ್ಲ ಎಂಬ ಕಾರಣದಿಂದ ಸ್ವತಃ ಬರಲಾಗದೆ ನನ್ನನ್ನು ಕಳಿಸಿಕೊಟ್ಟಿದ್ದಾರೆ. ನಿಮ್ಮ ಕಾಲಾಳು, ಅಶ್ವ, ರಥಗಳ ವೀರರು, ಆನೆ ಗಳಲ್ಲದೆ ಸ್ವತಃ ನೀವೇ ಬಂದು ರಣದ ನಾಯಕತ್ವವನ್ನು ವಹಿಸಿ ಗೆಲ್ಲಿಸಬೇಕು ಎಂದು ಬಿನ್ನವಿಸಿದ. 'ಬ್ರಾಹ್ಮಣ, ನಿನ್ನ ಮೂಲಸ್ಥಳವಾವುದು?' - ಹೋಮದತ್ತ ಪ್ರಶ್ನಿಸಿದ. 'ಕಾಂಪಿಲ್ಯ.' ದಕ್ಷಿಣ ಪಾಂಚಾಲದ ದ್ರುಪದನ ಊರು. ಪಾಂಡವರ ಬೀಗರ ಕಡೆಯವನು ಎಂದು ಶಲ್ಯ ಮತ್ತು ಅವನ ಮಕ್ಕಳು ತಕ್ಷಣ ಗ್ರಹಿಸಿದರು. ಆದರೆ ಆತನ ಭಾಷೆ, ಆತ್ಮಗೌರವಕ್ಕೆ ಊನ ಬರದಂತೆ ಪ್ರಕಟಿಸಿದ ಮಾತಿನ ವಿನಯ, ನಡುವೆ ಸಂಬಂಧವನ್ನು ಜಿನುಗಿಸಿದ ರೀತಿ ಗಳಿಗೆ ತಲೆ ತೂಗಿದ ಹೋಮದತ್ತನು ಕುರುಪಾಂಚಾಲ ನಾಡಿನ ಉಚ್ಚ ಭಾಷೆ ಮತ್ತು ಸಂಸ್ಕೃತಿಯನ್ನು ಮೆಚ್ಚುವುದರಲ್ಲಿ ಮಗ್ನನಾದ. 'ಯಾವ ಯಾವ ರಾಜರು ನಿಮ್ಮ ಸಹಾಯಕ್ಕೆ ಇದ್ದಾರೆ?'- ರುರಥ ಕೇಳಿದ. 'ಪಾಂಚಾಲರು, ಮತ್ಸರಂತೂ ಪಾಂಡವರ ಬೀಗರು, ಯಾದವರು ನಮ್ಮ ಕಡೆಯೇ. ಐದು ಜನ ಕೇಕಯರು, ಚಿತ್ರಾಯುಧ, ಚೇಕಿತಾನ, ಸತ್ಯಧೃತಿ, ವ್ಯಾಘ್ರದತ್ತ, ಚಂದ್ರಸೇನ, ಮಹಾರಥಿ ಕಾಶೀರಾಜ, ಸೋದರಮಾವ ಮತ್ತು ಅವನ ಮಕ್ಕಳಾದ ನೀವು, ವಿವರಿಸಿ ಹೇಳು ವುದೇನು, ಇಡೀ ಆರ್ಯಾವರ್ತ ಬ್ರಹ್ಮಾವರ್ತಗಳೆಲ್ಲ ಪಾಂಡವರ ಪರ ಇವೆ. ಪಾಂಡವರ ಪರ ಅಂತ ಮಾತ್ರವಲ್ಲ, ಧರ್ಮದ ಪರ; ರಾಜಸೂಯ ಮಾಡಿದ ಪುಣ್ಯದ ಪರ. ವೇದಜ್ಞರು, ಧರ್ಮಾಭಿಲಾಷಿಗಳೆಲ್ಲರೂ ಪಾಂಡವರ ಪರವೇ. ಹಸ್ತಿನಾವತಿಯಲ್ಲಿ ಕೂಡ ಆಚಾರ್ಯ ದ್ರೋಣ, ಕೃಪಾದಿಗಳು, ಸ್ವಯಂ ಭೀಷ್ಮನು ಯಾವಾಗಲೂ ಪಾಂಡವರನ್ನು ಆಶೀರ್ವದಿಸು ತಿರುವ ಸಂಗತಿಯನ್ನ ಸೂಕ್ಷ್ಮಮತಿಗಳಾದ ನಿಮಗೆ ನಾನು ಅರಿಕೆ ಮಾಡುವ ಅಗತ್ಯವಿಲ್ಲ.' ಈ ಮಾತಿಗೆ ಶಲ್ಯನು ಸಂತೋಷಪಟ್ಟ. ಹೋಮದತ್ತನು ಮಾತಿನ ರೀತಿಯನ್ನು ಮೆಚ್ಚಿದು ರುಕ್ಷ್ಮರಥ ಕೂಡ ಮೆಚ್ಚಿದ. ಆದರೆ ಒಂದು ನಿಮಿಷದನಂತರ ಕೇಳಿದ: 'ಅಂದರೆ ಇಷ್ಟು ಜನರನ್ನು ಬಿಟ್ಟು ಉಳಿದವರೆಲ್ಲ ಧಾರ್ತರಾಷ್ಟ್ರನ ಕಡೆ ಅಂದ ಹಾಗಾಯಿತು. ವಿರಾಟನಗರದ ಉತ್ತರಗೋಗ್ರಹಣದಲ್ಲಿ ದುರ್ಯೋಧನನ ಕಡೆಗಿದ್ದ ತ್ರಿಗರ್ತದ ಐವರು ಸೋದರರು, ಕೋಸಲದ ರಾಜ ಬೃಹದ್ಬಲ, ಸೋದರಮಾವ ಶಕುನಿ, ಗಾಂಧಾರದ ಕಡೆಯ ಎಲ್ಲ ರಾಜರು ಗಳು, ರಾಜಪೌರವ, ಜಲಸಂಧ, ಬಾಹೀಕದ ರಾಜರುಗಳು, ಅಲಂಬುಷ, ಪ್ರಾಗೈತಿಷ ಪುರದ ಭಗದತ್ತ, ಅಚಲ, ವೃಷಕ, ಇಷ್ಟು ಮಾತ್ರವಲ್ಲ, ಹಸ್ತಿನಾವತಿಯಲ್ಲಿರುವ ಆಚಾರ್ಯ ದ್ರೋಣ ಕೃಪಾದಿಗಳಿಗೆ ಪಾಂಡವರ ಮೇಲೆ ಪ್ರೀತಿ ಇದೆಯಾದರೂ ಯುದ್ಧವೇ ಆಗುವು ದಾದರೆ ಅವರು ತಮ್ಮ ದಣಿ ದುರ್ಯೋಧನನ ವಿರುದ್ಧ ಹೋಗುವ ಭರವಸೆ ಇಲ್ಲ. ಕರ್ಣ ನಂತೂ ಅತಿರಥಿ, ಅವನ ಮಗ ವೃಷಸೇನನೇನೂ ಕಡಿಮೆಯವನಲ್ಲ.' ಪಾಂಡವರ ದೂತನ ಮುಖವು ಸ್ವಲ್ಪ ಭಿನ್ನವಾಯಿತು. ಆದರೆ ತಕ್ಷಣ ಅದನ್ನು ಸರಿ ಪಡಿಸಿಕೊಂಡು ಹೇಳಿದ: 'ರಾಜ, ನೀನು ಹೇಳುವ ಇವರೆಲ್ಲ ಇನ್ನೂ ಪಾಂಡವರ ಕಡೆ ಸೇರಿಲ್ಲ ನಿಜ. ಹಾಗೆಂದು ದುರ್ಯೋಧನನ ಕಡೆಯೂ ವಾಲಿಲ್ಲ. ದುರ್ಯೋಧನನ ಜೀತದ ಆಳು ಕರ್ಣನನ್ನು ಬಿಟ್ಟರೆ ನೀನು ಹೇಳಿದ ಉಳಿದವರೆಲ್ಲ ಪಾಂಡವರ ಕಡೆ ಸೇರಿಯೇ ಸೇರುತ್ತಾರೆ. ಮೀನು ನೀರಿಗೆ ನೆಗೆಯುತ್ತದೆಯೋ ಮರಳಿಗೆ ನೆಗೆಯುತ್ತದೆಯೋ? ಆರ್ಯರು ಧರ್ಮ ವನ್ನನುಸರಿಸುವರೋ ಅಧರ್ಮವನ್ನೊ? ಶಲ್ಯಮಹಾರಾಜ, ವೃತ್ತಿಯಲ್ಲಿ ನಾನು ಬ್ರಾಹ್ಮಣ ನಾದರೂ ಜ್ಞಾನದಲ್ಲಿ ನೀನು ಹಿರಿಯ. ಆರ್ಯಧರ್ಮವನ್ನು ಕುರಿತು ನೀನು ಹೇಳು.' ಶಲ್ಯನು ಗಂಟಲನ್ನು ಕೊಸರಿದ, ಏನೋ ಉತ್ತರ ಕೊಡಲು ಹೊರಟಿದ್ದ ರುಕ್ಷ್ಮರಥನು ಅಷ್ಟಕ್ಕೇ ತಡೆದುಕೊಂಡ. ಶಲ್ಯ ಎಂದ: 'ದುರ್ಯೋಧನನು ಪಾಂಡವರಿಗೆ ಅವರ ರಾಜ್ಯ ವನ್ನು ಹಿಂತಿರುಗಿಸದಿದ್ದರೆ ಈ ಶಲ್ಯನ ತೋಳು, ಗದೆ, ರಥ, ತುರುಗ, ಆನೆ, ಕಾಲಾಳುಗಳೆಲ್ಲ. ದುರ್ಯೋಧನನ ಮೇಲೆ ಬೀಳುತ್ತವೆ. ಹೆಚ್ಚು ಮಾತಿಲ್ಲ.' 'ನಿನ್ನ ಸೋದರಳಿಯಂದಿರು ಕೃತಾರ್ಥರು. ನಿನ್ನ ಆಶೀರ್ವಾದವೊಂದೇ ಧರ್ಮವನ್ನು ಗೆಲ್ಲಿಸುತ್ತದೆ.' ರುಕ್ಷರಥನು ಮತ್ತೆ ಮಾತನಾಡಲು ಪ್ರಯತ್ನಿಸಿದ. ಮಹಾರಾಜನು ತನ್ನ ಬಲಗೈಯನ್ನು ಎತ್ತಿ ಅಡ್ಡ ಹಿಡಿದು, 'ನಾನು ಮಾತು ಕೊಟ್ಟು ಆಯಿತು' ಎಂದ. ಅನಂತರ ತಾನೇ, 'ಪುರೋಹಿತ, ಹೋಗಿ ನನ್ನ ಅಳಿಯಂದಿರಿಗೆ ಹೇಳು. ಯಾವ ದಿನ ಇಲ್ಲಿಂದ ಹೊರಡಬೇಕು ಎಲ್ಲಿಗೆ ತಲುಪಬೇಕು ಅಂತ ಅವರು ಹೇಳಿಕಳಿಸುತ್ತಾರೋ, ಅವತ್ತು ನಾನು ನನ್ನ ಮಕ್ಕಳು ಸೈನ್ಯವು ಒಟ್ಟಾಗಿ ಹೊರಡುತ್ತೇವೆ.' ಬ್ರಾಹ್ಮಣನು ಆ ಮಾತನ್ನು ಅಲ್ಲಿಗೆ ನಿಲ್ಲಿಸಿದ. ಸೋದರಮಾವನ ಗೃಹಕೃತ್ಯದ ಕುಶಲವನ್ನು ವಿಚಾರಿಸಿದ. 'ಮೊಮ್ಮಗಳಿಗೆ ಸ್ವಯಂವರ ಮಾಡುತ್ತೀಯಂತೆ, ಪಾಂಡವರಿಗೇ ಐವರು ವೀರಾಧಿವೀರ ಪುತ್ರರಿದ್ದಾರೆ. ಅವರಲ್ಲಿ ಹಿರಿಯನಿಗೆ ನಿನ್ನ ಮೊಮ್ಮಗಳು ಮಾಲೆ ಹಾಕಿದರೆ ಅವನು ಪುಣ್ಯವಂತ, ನಾನೇ ಅವನಿಗೆ ವೇದಾಧ್ಯಯನ ಮಾಡಿಸಿ ಬಿಲ್ಲುವಿದ್ಯೆ ಕಲಿಸಿದ್ದೇನೆ. ಹೇಗೂ ಸ್ವಯಂವರಕ್ಕೆ ಎಲ್ಲರೂ ಬರುತ್ತೇವಲ್ಲ' ಎಂದದ್ದಕ್ಕೆ ರುಕ್ಷ್ಮರಥನೂ ಸ್ವಲ್ಪ ಪ್ರಸನ್ನನಾದ. ಮದ್ರದ ಇತರ ರಾಜ್ಯಗಳಿಗೂ ದೌತ್ಯ ನಿಮಿತ್ತ ಹೋಗಬೇಕಾಗಿದ್ದುದ ರಿಂದ ಬ್ರಾಹ್ಮಣನು ಮರುದಿನವೇ ತಂಪುಹೊತ್ತಿನಲ್ಲಿ ಬೆಂಗಾವಲಿನವರೊಡನೆ ಹೊರಟು ಹೋದ. ಪಾಂಚಾಲ ದೇಶದ ಪುರೋಹಿತನು ಪಾಂಡವರ ಪರವಾಗಿ ಬಂದು ಶಲ್ಯನ ಮನಸ್ಸು ಸೈನ್ಯದ ಸಹಾಯಗಳನ್ನು ಗೆದ್ದುಕೊಂಡು ಹೋದ. ಯುದ್ಧವಾಗುವುದು ಖಂಡಿತ. ಯಾವಾಗ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ದೊಡ್ಡ ಯುದ್ಧವೇ ನಡೆಯುತ್ತದೆ. ಎರಡು ಕಡೆಗಳವರೂ ಸಹಾಯ ಯಾಚಿಸಿ ಆರ್ಯ ಜಗತ್ತಿನ ಎಲ್ಲ ರಾಜರುಗಳಲ್ಲಿಯೂ ತಮ್ಮ ದೂತರನ್ನು ಕಳಿಸುತ್ತಿದ್ದಾರೆ. ಸಹಾಯದ ಆಶ್ವಾಸನೆಯಾಗಬೇಕು, ಸೈನ್ಯ ಸೇನಾಸಾಮಗ್ರಿ ಗಳ ಸಿದ್ಧತೆಯಾಗಬೇಕು. ಇನ್ನು ಎರಡು ಮೂರು ವಾರಗಳಲ್ಲಿ ಮಳೆಗಾಲ ಆರಂಭವಾಗು ಇದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತವೆ. ಝರಿ, ಹೊಳೆ ನದಿಗಳಲ್ಲಿ ನರೆ ಬರುತ್ತದೆ. ಉಕ್ಕಿ ಹರಡುವ ನೀರು ಹಳ್ಳಿಪಟ್ಟಣಗಳಿಗೆ ನುಗ್ಗಿ ಸುತ್ತುವರೆಯುತ್ತದೆ. ಆರ್ಯಜನಗಳ ವಸತಿಗಳೆಲ್ಲ ಹೊಳೆ, ನದಿಗಳ ದಡದಲ್ಲಿಯೇ, ಮಳೆಗಾಲದಲ್ಲಿ ಸಂಚಾರವಂತೂ ಸಾಧ್ಯವಿಲ್ಲ. ನಡೆಗೆಗೇ ಕಷ್ಟವಾಗುವಾಗ ರಥಗಳ ಗಾಲಿ ಹೂತುಹೋಗುತ್ತವೆ. ಆನೆಗಳು ಜಾರುತ್ತವೆ. ಸೈನ್ಯ ಬೀಡುಬಿಡುವ ಒಣನೆಲವೆಲ್ಲಿ, ಬೀಡಿನಲ್ಲಿ ಅಡಿಗೆ ಮಾಡುವ ಒಣಕಟ್ಟಿಗೆ ಎಲ್ಲಿಂದ ಹೊಂದಿಸುವುದು? ಒಟ್ಟಿನಲ್ಲಿ ಯುದ್ಧ ಆಗುವುದೇ ಇದ್ದರೆ ಮಳೆಗಾಲ ಕಳೆದ ನಂತರ ; ಭಾದ್ರಪದ ಆಶ್ವಯುಜದ ನಂತರ. ಅಲ್ಲಿಯ ತನಕ ಸಿದ್ಧತೆ ನಡೆಯಬಹುದು. ಹೀಗೆಯೇ ದೂತರು ರಾಜ್ಯರಾಜ್ಯಗಳಿಗೆ ಸಂಚರಿಸಿ ಕುದುರೆ ಏರಿ, ಹರಿಗೋಲು ಮೀಟಿ, ಈಜಿ, ನಡುವೆ ಸುಳಿಗೆ ಸಿಕ್ಕಿ - ಅದೂ ಪೂರ್ತಿ ಸಾಧ್ಯವಿಲ್ಲ. ಶಲ್ಯರಾಜನೇನೋ ಸಿದ್ಧವಾಗಿರುವಂತೆ ತನ್ನ ಸೇನೆಗೆ ಅಪ್ಪಣೆ ಮಾಡಿದ. ಬಡಗಿಗಳು ರಥ ಗಳ ಭಾಗಗಳನ್ನು ಕುಟ್ಟಿ ಪರೀಕ್ಷಿಸಿದರು. ಗಾಲಿ, ಗುಂಬ, ಇರಚಿ, ಆಸನ, ಮೂಕಿಗಳಲ್ಲಿ ಟೊಳ್ಳು ಬಂದಿದ್ದುವನ್ನು ತೆಗೆದು ಬೇರೆ ಹಾಕಿದರು. ಹೊಸ ಹಗ್ಗ ಹೊಸೆದರು. ಲೋಹಕಾರರು ಬಾಣದ ತುದಿಯ ಮೊನಚುಗಳನ್ನು ತಯಾರಿಸಿ ಮಸೆಮಸೆದು ತುಂಬಲು ಆರಂಭಿಸಿದರು. ಚಮ್ಮಾರರು ಚಕ್ಕಳದ ಮೈ-ಅಂಗಿ, ಗುರಾಣಿಗಳ ಸಿದ್ಧತೆಯಲ್ಲಿ ತೊಡಗಿದರು. ಮಾವುತರು ತಮ್ಮಟೆ, ಶಂಖ, ನಗಾರಿಗಳ ಸದ್ದನ್ನು ಆನೆಗಳಿಗೆ ಪುನಃ ಅಭ್ಯಾಸ ಮಾಡಿಸಿದರು. ಮದ್ರವು ಯುದ್ಧಕ್ಕೆ ಹೆಸರು ವಾಸಿಯಾದ ದೇಶವಲ್ಲ. ಇತ್ತೀಚೆಗೆ ಅಂತಹ ದೊಡ್ಡ ಯುದ್ಧ ನಡೆದೇ ಇಲ್ಲ. ಸೈನಿಕರಿಗೆಲ್ಲ ವಿಶೇಷ ತರಬೇತಿಯಾಗಬೇಕು. ಎಂಭತ್ತರ ಮೇಲೆ ನಾಲ್ಕು ಕಳೆದ ಶಲ್ಯರಾಜನೇ ಮುಂದೆ ನಿಂತು ಎಲ್ಲ ಸಿದ್ಧತೆಗಳ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದ. ಕೆಲಸಕ್ಕೆ ಬಳಸದ ಲೋಹದಂತೆ ಯುದ್ಧವಿಲ್ಲದ ಕ್ಷತ್ರಿಯರು ತುಕ್ಕು ಹಿಡಿದು ಹೋಗುತ್ತಾರೆಂದು ತನಗೆ ತಾನೇ ಹೇಳಿಕೊಳ್ಳು ತಿದ್ದ. ದಿನಾ ಬೆಳಗ್ಗೆ ಸಂಜೆ ಎರಡು ಹೊತ್ತೂ ರಥವೇರಿ ತಾನೇ ಕುದುರೆಗಳ ಕಡಿವಾಣ ಹಿಡಿದು ಓಡಿಸುತ್ತಿದ್ದ. ಅಶ್ವರಹಸ್ಯವನ್ನು ಬಲ್ಲವನೆಂಬ ತನ್ನ ಹಳೇ ಖ್ಯಾತಿಯನ್ನು ಉಜ್ಜಿ ತೊಳೆದು ಮತ್ತೆ ಬೆಳಗುವ ಉತ್ಸಾಹದಲ್ಲಿದ್ದ. ಯುದ್ಧವಾಗುತ್ತದೆ. ತಾವೆಲ್ಲ ಹೋ ಎಂದು ಗಟ್ಟಿ ಯಾಗಿ ಸಮೂಹದಲ್ಲಿ ಮೊಳಗಿಕೊಂಡು ಮುನ್ನುಗ್ಗುತ್ತೇವೆ ಎಂಬ ಉತ್ಸಾಹವು ಸೈನಿಕರಲ್ಲ ಉಕ್ಕಿತ್ತು; ಬೇಸಿಗೆಯಾದ್ದರಿಂದ ಹೊಲಗೆಲಸವಿರಲಿಲ್ಲ. ಕೃಷಿಕ ವೃತ್ತಿಯ ವೈಶ್ಯರು ಕೂಡ ಬಿಲ್ಲುಗುರಿಯ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಪಾಂಚಾಲದ ಪುರೋಹಿತ ಬಂದು ರುಕ್ಷ್ಮರಥನನ್ನೂ ಗೆದ್ದುಕೊಂಡು ಹೋಗಿದ್ದ. ಅವನ ಮನಸ್ಸಿನಲ್ಲಿದ್ದ ಸ್ವಯಂವರದ ವಿಚಾರವನ್ನು ಅನುಮೋದಿಸಿದ್ದ. ಅದಕ್ಕೆ ತಾವೆಲ್ಲ ಬರುವುದಾಗಿ ಪಾಂಚಾಲರೇ ಅಲ್ಲದೆ ಪಾಂಡವರ ಪರವಾಗಿ ಹೇಳಿದ್ದ. ತಾನೇ ವೇದ ಮತ್ತು ಯುದ್ಧ ವಿದ್ಯೆ ಯನ್ನು ಕಲಿಸಿದ್ದ ಪಾಂಡವರ ಹಿರೀಮಗನಿಗೆ ಮಾಲೆ ಹಾಕಿದರೆ ಅವನು ಪುಣ್ಯವಂತನೆಂದು ಸೂಚಿಸಿದ್ದ. ರುಕ್ಷ್ಮರಥನ ಮನಸ್ಸು ಈಗ ಪಾಂಡವರ ಪರ ತಿರುಗಿತು. ರಾಜಸೂಯ ಮಾಡಿ ಆರ್ಯಜಗತ್ತಿನಲ್ಲೆಲ್ಲ ವೈಭವ ಖ್ಯಾತಿಗಳನ್ನು ಗಳಿಸಿಕೊಂಡವರು. ಅಂಥವರ ಹಿರಿಯ ಮಗನಿಗೆ ತನ್ನ ಮಗಳು ಹಿರಿಯರಸಿಯಾದರೆ! ಹೆಂಡತಿಯ ಕೈಲಿ ಹೇಳಿದ. ಅವಳೂ ಒಪ್ಪಿದಳು. ಉಬ್ಬಿ ದಳು. ಮಗಳನ್ನು ಕರೆದು ಹೇಳಿದ. 'ನಿನ್ನ ಅಜ್ಜನ ತಂಗಿಯ ಮೊಮ್ಮಗ. ಅವನಿಗೇ ಮಾಲೆ ಹಾಕು. ಮುಂದೆ ರಾಜಸೂಯಕ್ಕೊ ಅಶ್ವಮೇಧಕ್ಕೊ ಕಂಕಣ ಕಟ್ಟಿಸಿಕೊಳ್ಳುವ ಭಾಗ್ಯ ನಿನ್ನದು' ಎಂದ. 'ಹುಡುಗ ಸುದೃಢನಾಗಿ ಸುಂದರನಾಗಿದ್ದಾನಾ? ನೀನು ನೋಡಿದ್ದೀಯ ಅಪ್ಪ?' – ಮಗಳು ಕೇಳಿದಳು. 'ಪಾಂಡವರ ಮಗ ಸುದೃಢನಾಗಿರದೆ ಉಂಟೆ?' ಮಗಳ ಮುಖವು ತೆಳು ಬಿರಿಯಿತು. ರುಕ್ಷ್ಯರಥನು ತಮ್ಮಂದಿರಾದ ವಜ್ರ, ಅಜಯರೇ ಅಲ್ಲದೆ ತನ್ನ ಗಂಡುಮಕ್ಕಳನ್ನೂ ಯುದ್ಧಾಭ್ಯಾಸದಲ್ಲಿ ತೊಡಗಿಸಿದ. ಇವರು ನಿರೀಕ್ಷಿಸಿದಂತೆ ಬಾನಿನಲ್ಲಿ ಮೋಡಗಳು ಕವಿದುವು. ಮೈಬೆವರು ಕಿತ್ತು ಸುರಿಯಿತು. ದಗೆಯ ಶಖೆಯು ಬೆವರಿನ ಕಾವಾಯಿತು. ಒಂದು ರಾತ್ರಿ ಎಲ್ಲರೂ ಮಾಳಿಗೆಯ ಮೇಲೆ, ಉದ್ಯಾನದಲ್ಲಿ, ಹೊರ ಅಂಗಳದಲ್ಲಿ ಮಲಗಿದ್ದಾಗ ಪಟಪಟನೆ ಮಳೆ ಬಿದ್ದಿತು. ಎಲ್ಲರೂ ಎದ್ದು ಕುಳಿತರು... ಯೋ ವರ್ಧನ ಓಷಧೀನಾಂ ಯೋ ಅಪಾಂ। ಯೋ ವಿಶ್ವಸ್ಯ ಜಗತೋ ದೇವ ಈಶೇ, ಹೇಳಿಕೊಳ್ಳತೊಡಗಿದರು. ಸ್ವಲ್ಪ ಹೊತ್ತು ಪಟಗುಟ್ಟುತ್ತಿದ್ದ ಹನಿಗಳು ಅನಂತರ ಧೋಧೋ ಎಂದು ಸುರಿಯತೊಡಗಿತು. ತನ್ನ ಅರಮನೆಯ ಉದ್ಯಾನದಲ್ಲಿದ್ದ ವೃದ್ಧ ರಾಜನು ಮಲಗಿದ್ದಲ್ಲಿಗೆ ಎಲ್ಲರೂ ಓಡಿಹೋದರು. ಮನೆಯ ಪುರೋಹಿತ ಹೋಮದತ್ತನೂ ತನ್ನ ಹೆಂಡತಿಯ ಸಮೇತ ಬಂದ. ರುಕ್ಷ್ಮರಥ, ವಜ್ರ, ಅಜಯರ ಹೆಂಡತಿಯರು ಮಕ್ಕಳೆಲ್ಲ ಕೂಡಿದರು. ಹೋಮ ದತ್ತನ ಗಟ್ಟಿಕಂಠವನ್ನನುಸರಿಸಿ ಎಲ್ಲರೂ ಗಟ್ಟಿಯಾಗಿ ಮಳೆಯ ಅಧಿಪತಿ ಪರ್ಜನ್ಯನ ಸ್ತುತಿ ಯನ್ನು ಹಾಡಿದರು. ಸುರುಗುಟ್ಟುವ ಹನಿಗಳ ಸದ್ದನ್ನು ಭೇದಿಸಿಕೊಂಡು ಮೋಡಕ್ಕೆ ಏರಿ ಕೇಳಿಸುವಂತೆ ಇದಂ ವಚಃ ಪರ್ಜನ್ಯಾಯ ಸ್ವರಾಜೇ ಹೃದೋ ಅಂತರಂ ತಜ್ಞ ಜೋಷತ್ ಮಯೋ ಭುವಃ ದೃಷ್ಟಯಃ ಸೂತ್ವಸ್ಥ ಸುಪಿಪ್ಪಲಾ ಓಷಧೀರ್ದೇವ ಗೋಪಾಃ ಸ್ತುತಿ ಮುಗಿದ ಮೇಲೆ ವೃದ್ಧ, ಬಾಲ, ಗಂಡುಹೆಣ್ಣುಗಳೆಲ್ಲರೂ ತಮ್ಮ ಮೇಲುವಸ್ತ್ರಗಳನ್ನು ತೆಗೆದೆಸೆದು ಬೇಸಿಗೆಯ ಗುಳ್ಳೆಗಳೆದ್ದಿದ್ದ ಬೆನ್ನು ಭುಜ ಎದೆಗಳನ್ನು ವರ್ಷದ ಮೊದಲ ಮಳೆಗೆ ಆನಿಸಿ ಚದುರಿದರು. ಪರ್ಜನ್ಯಮಂತ್ರವನ್ನು ತಮಗೆ ಇಷ್ಟ ಬಂದ ಲಯದಲ್ಲಿ ಹೇಳಿಕೊಂಡು ಕುಣಿಯಲು ಆರಂಭಿಸಿದರು. ಮಳೆಯೂ ನಿಲ್ಲಲಿಲ್ಲ. ಯಾರೂ ಒಳಗೆ ಹೋಗಲಿಲ್ಲ. ಬಿಚ್ಚಿದ ತಲೆಯ ಕೂದಲಿನಿಂದ ಮೈಮೇಲೆಲ್ಲ ಕಣ್ಣು ಮೂಗು ತುಟಿಗಳ ಮೇಲೆಲ್ಲ ಹರಿಯುವ ನೀರಿನ ಉತ್ಸಾಹದಿಂದ ಶಲ್ಯರಾಜನೂ ಗಟ್ಟಿಯಾಗಿ ಹಾಡಿದ. ಗಟ್ಟಿಯಾಗಿ ಕುಣಿದ. ಮಳೆ ಬಿದ್ದ ಮೇಲೆ ವೈಶ್ಯರೆಲ್ಲ ಕೃಷಿಗೆಲಸಕ್ಕೆ ತಿರುಗಿದರು. ಆದರೆ ರಾಜವಂಶದವರು ಮಾತ್ರ ಅಭ್ಯಾಸವನ್ನು ನಿಲ್ಲಿಸಲಿಲ್ಲ. ಒಂದು ವಾರಕ್ಕೂ ಮೀರಿ ದಿನಾ ಮೂರು ನಾಲ್ಕು ಬಾರಿ ಮಳೆ ಸುರಿಯಿತು. ಕಾಯ್ದ ಭೂಮಿ ನೀರು ಕುಡಿದು ಕಾವು ಹೊರಗೆ ಬಂದು ಮತ್ತೆ ಮಳೆಗೆ ತಂಪು ತಿರುಗಿ ಮತ್ತೆ ಸೇದಿಕೊಂಡು ಮತ್ತೆ ಮಳೆಯನ್ನು ಹೀರಿ ಕುಡಿದು ಕುಡಿದು ನೆಲವು ಹದ ವಾಯಿತು. ವೈಶ್ಯರಿಗೆ ಹಿಗ್ಗೋ ಹಿಗ್ಗು, ಜನರ ಮನಸ್ಸಿನಿಂದ ಯುದ್ಧದ ಉತ್ಸಾಹ ಕಡಿಮೆ ಯಾಯಿತು. ಮಳೆ ನಿಂತು ಮತ್ತೆ ಬಿಸಿಲಿನ ಬೆವರು ಕಾವು ಏರುತ್ತಿರುವಾಗ ಒಂದು ದಿನ ತ್ರಿಗರ್ತದ ಐವರು ದೊರೆಗಳಲ್ಲಿ ಒಬ್ಬನಾದ ಸುಶರ್ಮ ಶಾಕಲಪಟ್ಟಣಕ್ಕೆ ಬಂದ, ಮಹಾರಾಜ ಶಲ್ಯನಿಗೆ -ಗೌರವದಿಂದ ನಮಸ್ಕರಿಸಿ ಮಧುಪರ್ಕಗಳನ್ನು ಸ್ವೀಕರಿಸಿದ. ಅವನು ತನ್ನ ಮಗ ರುಕ್ಷ್ಮರಥನ ಸ್ನೇಹಿತ, ಅವನ ಸಮವಯಸ್ಕನೆಂಬುದು ಶಲ್ಯನಿಗೆ ಗೊತ್ತು. ಬೆಂಗಾವಲಿನವರಿಗೆ ಊಟ, ಕುದುರೆಗಳಿಗೆ ಮೇವುಗಳನ್ನು ಕೊಡುವಂತೆ ಆಳುಗಳಿಗೆ ಹೇಳಿದ ಮೇಲೆ ಅವನು ಎಂದ: 'ರುಸ್ಮರಥ ಈಗ ಅಭ್ಯಾಸ ಕಣದಲ್ಲಿದ್ದಾನೆ. ಕರೆಸ್‌ತೀನಿ. ಅಲ್ಲಿಯವರೆಗೆ ವಿಶ್ರಮಿಸಿಕೊ.' ರುಕ್ಷ್ಮರಥನ ಮನೆಗೆ ಹೊಂದಿಕೊಂಡ ಅತಿಥಿಗೃಹದಲ್ಲಿ ಸುಶರ್ಮ ಸ್ನಾನಾದಿಗಳನ್ನು ಮುಗಿಸಿ ವಿಶ್ರಮಿಸಿಕೊಳ್ಳುತ್ತಿರುವಾಗ ರುಕ್ಷ್ಮರಥ ಬಂದ. ಗೆಳೆಯರು ಒಬ್ಬರನ್ನೊಬ್ಬರು ತಬ್ಬಿಕೊಂಡರು. ಅಲ್ಲಿಗೇ ತರಿಸಿಕೊಂಡು ಊಟಮಾಡಿದರು. 'ನೀನು ಬರುವ ಹೊತ್ತಿಗಾಗಲೇ ಅಡಿಗೆಯಾಗಿತ್ತು. ನಿನ್ನ ಗೌರವಕ್ಕೆಂದು ರಾತ್ರಿಗೆ ದೊಡ್ಡ ಹೋರಿಯನ್ನೇ ಕಡಿದು ಮಾಡುತ್ತಾರೆ. ಕಡೆಗಣಿಸಿದರು ಅಂತ ಸಿಟ್ಟು ಮಾಡಿಕೊ ಬೇಡ' – ಎಂದು ರುಸ್ಮರಥ ಉಪಚಾರ ಹೇಳಿದ. ಸುಶರ್ಮ ಆಡಿನ ಮಾಂಸದ ಚೂರನ್ನು ಕೈಲಿ ಹಿಡಿದು ಚೀಪುತ್ತಿರುವಾಗ ರುಕ್ಷ್ಮರಥ ಕೇಳಿದ: 'ಎಲ್ಲಿಂದ ಬಂದೆ?' 'ನಮ್ಮ ಊರಿಂದ.' 'ಸುಳ್ಳು. ನಿನ್ನ ಊರಿಂದ ಬಂದಿದ್ದರೆ ಚಂದ್ರಭಾಗಾ ನದಿಯ ಕಡೆಯಿಂದ ಬರಬೇಕಿತ್ತು. ನೀನು ಬಂದದ್ದು ಶತದೃ ಕಡೆಯಿಂದ.' 'ನಿನ್ನ ಗೂಢಚರ್ಯ ವ್ಯವಸ್ಥೆ ತುಂಬ ಚುರುಕಾಗಿದೆ.' 'ಅಂದರೆ ಹಸ್ತಿನಾವತಿಗೆ ಹೋಗಿದ್ದೆಯಾ?' 🙏 ಪರ್ವ 'ನಿನ್ನಿಂದ ಏನೂ ಮುಚ್ಚಿಡುಕ್ಕೆ ಅಗುಲ್ಲ, ಸ್ನೇಹಿತನ ಹತ್ತಿರ ಮುಚ್ಚುಮರೆ ಏನಿಲ್ಲ. ಊಟ. ವಾಗಲಿ' ಎಂದ. - ಬಡಿಸುತ್ತಿದ್ದ ಚಿಕ್ಕ ವಯಸ್ಸಿನ ಸುಂದರಿಯರೆದುರು ಮಾತನಾಡದಂತಹ ವಿಷಯವೆಂದು ರುಕ್ಷರಥ ಅರ್ಥಮಾಡಿಕೊಂಡು ತ್ರಿಗರ್ತದ ಕಡೆಯ ಮಳೆಯ ವಿಷಯ ಕೇಳಿದ. ಊಟವಾದ ನಂತರ, 'ಬಡಿಸುತ್ತಿದ್ದ ಈ ಹೆಂಗಸರಲ್ಲಿ ಈಗ ನಿನ್ನ ವಿಶ್ರಾಂತಿಗೆ ಯಾರು ಬೇಕು?' ಎಂದು. ಕೇಳಿದ. 'ಅದೆಲ್ಲ ರಾತ್ರಿಗೆ. ಈಗ ಮಾತಾಡೋಣ.' ದಾಸಿಯರನ್ನೆಲ್ಲ ಕಳಿಸಿ ಒಳಭಾಗದಲ್ಲಿ ನಯವಾದ ಹಲಗೆಯ ಅಟ್ಟಣೆಯ ಮೇಲೆ ಹಾಕಿದ್ದ ಅಗಲವಾದ ಹಾಸಿಗೆ ದಿಂಬುಗಳ ಹತ್ತಿರಕ್ಕೆ ಅತಿಥಿಯನ್ನು ಕರೆದೊಯ್ದ, ಹತ್ತಿರವೇ ಜೂಜಿನ ದಾಳಗಳಿದ್ದುವು. 'ಆಟ ಶುರು ಮಾಡಿದರೆ ನಾನು ಬಂದ ಮಾತು ಮರೆತುಹೋದೀತು, ಅದೂ ನಿನ್ನ ಕೈಲಿ. ಆಡುವಾಗ' – ಸುಶರ್ಮ ಹಾಸಿಗೆಯ ಮೇಲೆ ಕೂತು ಬಲತೋಳಿನಿಂದ ದಿಂಬು ಒರಗಿ ಹೇಳಿದ: “ನೋಡು, ನಾನು ನೀನು ಸ್ನೇಹಿತರು. ಇದುವರೆಗೆ ಯಾವ ವಿಷಯದಲ್ಲೂ ಜಗಳವಲ್ಲ ಜಗಳದ ಭಾವ ಕೂಡ ಮನಸ್ಸಿನಲ್ಲಿ ಹುಟ್ಟಿಲ್ಲ ಆಟದಲ್ಲಿ ಬೇಟೆಯಲ್ಲಿ ಜೂಜಿನಲ್ಲಿ, ಹೆಂಗಸರ ವಿಷಯದಲ್ಲಿ. ಯಾವುದರಲ್ಲೂ. ಈಗ ನೋಡು ಅದೃಷ್ಟ ಒಬ್ಬರ ವಿರುದ್ಧ ಒಬ್ಬರನ್ನು ನಿಲ್ಲಿಸು. ತಿರುವ ಹಾಗೆ ಕಾಣುತ್ತಿದೆ. ಮನುಷ್ಯ ಪ್ರಯತ್ನವನ್ನೆಲ್ಲ ಮುಗಿಸದೆ ಅದೃಷ್ಟದ ಮೇಲೆ ತಪ್ಪು ಹಾಕಬಾರದು ಅಲ್ಲವೆ?' ರುಕ್ಷ್ಮರಥ ನಾಲ್ಕು ಬಾರಿ ಉಸಿರೆಳೆದು ಬಿಡುವತನಕ ಸುಮ್ಮನಿದ್ದ. ಅಷ್ಟರಲ್ಲಿ ಅವನಿಗೆ ಸ್ನೇಹಿತನ ಮಾತಿನ ಆಶಯ ಅರ್ಥವಾಯಿತು. ಮತ್ತೆ ಎಂಟು ಹತ್ತು ಸಲ ಉಸಿರೆಳೆದು ಬಿಟ್ಟ ನಂತರ ನಿಧಾನವಾಗಿ ಎಂದ: 'ಪಾಂಡವರ ಪರವಾಗಿ ಪಾಂಚಾಲದಿಂದ ಒಬ್ಬ ಪುರೋಹಿತ ಬಂದಿದ್ದ.' 'ಗೊತ್ತಾಯಿತು. ಅವರು ಎಲ್ಲೆಲ್ಲಿಗೆ ಯಾರು ಯಾರನ್ನು ಕಳಿಸುತ್ತಾರೆ ಎನ್ನುವುದೆಲ್ಲ ದುರ್ಯೋಧನನಿಗೆ ತಿಳಿಯುತ್ತೆ,' 'ನಮ್ಮಪ್ಪನಿಗೆ ಅವರು ತಂಗಿಯ ಮಕ್ಕಳು ಅಂತ ವಿಶೇಷ ಮೋಹವಿದೆ. ಮೊಮ್ಮಗಳಿಗೆ ಸ್ವಯಂವರ ಮಾಡಿ, ನಾವೆಲ್ಲ ಬರ್‌ತೀವಿ, ಪಾಂಡವರ ಹಿರಿಯ ಮಗನಿಗೆ ನಿಮ್ಮ ಹುಡುಗಿ, ಮಾಲೆ ಹಾಕಿದರೆ ಅವನು ಅದೃಷ್ಟವಂತ ಅಂದ. ತಕ್ಷಣ, ಅಪ್ಪ, ನಾನು ನನ್ನ ಮಕ್ಕಳು ನನ್ನ ಸೈನ್ಯ ಪಾಂಡವರಿಗೆ ಮೀಸಲು ಅಂದುಬಿಟ್ಟ. ನನಗೆ ಮಾತಾಡುವುದಕ್ಕೆ ಅವಕಾಶ ಕೊಡಲಿಲ್ಲ. ಅವನ ಸ್ವಭಾವ ಎಂಥದು ಅಂತ ನಿನಗೇ ಗೊತ್ತಿದೆ.' ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಅನಂತರ ಸುಶರ್ಮ ಕೇಳಿದ: 'ಹಾಗಂತ ನಾನು ನೀನು ಒಬ್ಬರ ಮೇಲೊಬ್ಬರು ಕಾಯುವುದು ನ್ಯಾಯವೆ?' 'ಛೇ, ಛೇ. ಅದನ್ನ ತಪ್ಪಿಸಬೇಕು. ನನಗೆ ಒಂದು ಹೊಳೆಯುತ್ತೆ. ಅಪ್ಪ ಮಾತ್ರ ಅವನ ಹಟ ಬಿಡೋದಿಲ್ಲ. ಬಿಡದಿದ್ದರೆ ತಾನೆ ಏನು, ತೊಂಬತ್ತು ಹತ್ತಿರವಾಗುತ್ತಿರುವ ಮುದುಕ ಒಂದಿಷ್ಟು. ಸೈನ್ಯದ ಜೊತೆಗೆ ಹೋಗಲಿ. ನಾನು ಏನೋ ಒಂದು ನೆಪ ಒಡ್ಡಿ ತಪ್ಪಿಸಿಕೊತೀನಿ. ತಮ್ಮಂದಿರೂ ತಪ್ಪಿಸಿಕೊಳ್ಳೋ ಹಾಗೆ ಮಾಡ್ತೀನಿ, ಹಾಗೆಯೇ ನೀನೂ ಹೊರಳಿಕೊಂಡುಬಿಡು, ಯಾರ. ಪರ್ವ ಯಾರದೋ ಜಗಳದಲ್ಲಿ ನಮಗೇನು ಭಾಗ?' ಮುಂದುವರೆಯುತ್ತದೆ... ( 📑 15 ರಿಂದ 20.5 📌 ಒಟ್ಟು ಪುಟಗಳು 657 ) 💛 ಫೇಸ್ಬುಕ್ ಗ್ರೂಪ್ ಲಿಂಕ್... https://www.facebook.com/groups/822079466827754/?ref=share&mibextid=NSMWBT ❤️ ನನ್ನ ಟೆಲಿಗ್ರಾಂ ಪೇಜ್ ನಲ್ಲಿಯು ಸಹ ಇರುತ್ತದೆ ! https://t.me/krishnachetanaloka1/26323 📙 *ಪರ್ವ* 📖 ✒️ ```ಎಸ್.ಎಲ್. ಭೈರಪ್ಪ``` 🏹 ~ಕೃಷ್ಣ ಚೇತನ~ 📚 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ತಯಬ ದ್ கசஸல் నీసం ಭೈರಪ್ಪ ఎనా ఎలా ಮ ತಯಬ ದ್ கசஸல் నీసం ಭೈರಪ್ಪ ఎనా ఎలా ಮ - ShareChat
👁️‍🗨️ ಅಧ್ಯಾಯ - 11 🤔 ಅಜ್ಞಾತ ವಾಸದ ದಿನಗಳು ಪಾಂಡವರ ಅಜ್ಞಾತವಾಸ ಆರಂಭ - ಜಗದೀಶ್ ಶರ್ಮಾ ಸಂಪ ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ https://t.me/krishnachetanaloka1/26464 🏹 ಕೃಷ್ಣ ಚೇತನ 🎧 #ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ಮಹಾಭಾರತದ ರಹಸ್ಯಗಳು FULL EPISODE అధ్యాయి 11 ಅಜ್ಞಾತವಾಸದ ದಿನಗಳು Sens nbrs =050 ಮಹಾಭಾರತದ ರಹಸ್ಯಗಳು FULL EPISODE అధ్యాయి 11 ಅಜ್ಞಾತವಾಸದ ದಿನಗಳು Sens nbrs =050 - ShareChat