@laxmisanju
@laxmisanju

🎭" ಸಂಜೀವ. ಎಸ್. " 💕

ಕಣ್ಣೀರು ಬತ್ತಿ ಹೋಗಿದೆ ಮುದ್ದು ಹೃದಯ ಬಡಿತ ನಿಲ್ಲಿಸು ಬಾ

ಆಳವಾಗಿ ಕಾಡುವ ನಿನ್ನೊಲವ ನೆನಪುಗಳು ಬಿಟ್ಟುಬಿಡದೆ ಆವರಿಸಿ ಹೈರಾಣಾಗಿಸಿಬಿಡುತ್ತವೆ ನನ್ನ ತನು-ಮನವನ್ನು. ಮರೆಯಲೆತ್ನಿಸಿದಷ್ಟು ಮರುಕಳಿಸಿ ಕಾಡೋ ನಿನ್ನ ಅನುರಾಗದ ಕವಿತೆಗಳು ಸೋಲಿಸಿ ಬಿಡುತ್ತವೆ ನನ್ನ ಧೃಢ ನಿರ್ಧಾರವನ್ನು. #💖ಕವನಗಳು
ಗಿಡ ಬಾಡಿದರೆ ನೀರು ಬಿಡುವೆನು . ಹೃದಯ ಬಾಡಿದರೆ ಕಣ್ಣೀರು ಬಿಡುವೆನು. ನೀವು ಬಾಡಿದರೆ ಜೀವವನ್ನೇ ಬಿಡುವೆನು. ನೀವು ಖುಷಿಯಾಗಿರಲು ಆಗಾಗ ಈ ಥರ. ಸಣ್ಣ ‘ರೀಲ್‘ ಬಿಡುವೆನು.... !! #ಶುಭರಾತ್ರಿ 💐💐💐💐 #🌃ಶುಭರಾತ್ರಿ
ಶೀತ ಇದಿಯಾ? ಹೌದು... ಕೆಮ್ಮು ಇದಿಯಾ? ಹಾ ಹೌದು. ತಲೆನೋವು ಇದೆಯಾ? ಹೌದಪ್ಪ ಹೌದು ಹಾಕ್ರಿ ಕ್ವಾರಂಟೈನ್‌ ಗೆ 😝😝 #ಶುಭರಾತ್ರಿ #✏️ನನ್ನ ಬರಹ
ನಿನ್ನ ಆ ತುಂಟ ನಗು ... ಕೊನೆವರೆಗೂ ನನ್ನ ಅಳುವಂತೆ ಮಾಡಿದೆ ಇನ್ನೊಮ್ಮೆ ನಕ್ಕುಬಿಡು ಗೆಳತಿ ಈ ಕಣ್ಣಲ್ಲಿ ತುಂಬಿರುವ ನಿನ್ನ ಅಂದ ಕಣ್ಣೀರಾಗಿ ಹೊರ ಹೋಗಲಿ #ಶುಭರಾತ್ರಿ🌷🌷 #💖ಕವನಗಳು
ಮೆಚ್ಚದ ಪ್ರಾಮುಖ್ಯತೆ ನೀಡದ ಯಾರೊಂದಿಗಾದರೂ ಉಳಿಯುವುದೊಂದು ಮೂರ್ಖತನ. ದಕ್ಕದ, ಅನಾಥವಾದ, ಒಡೆದ ಪ್ರೀತಿಯನ್ನು ಕ್ರಮೇಣ ಮರೆತು ಬಿಡುವುದೇ ಉತ್ತಮ. (ಚಿತ್ರ ನೋಡಿ ಅನಿಸಿದಂತ ಸಾಲುಗಳು.) #💓ಲವ್ ಸ್ಟೇಟಸ್
೧೯ ಮಾತ್ರೆಯ ಗಝಲ್ #ಗಝಲ್( ಬೆಹರ್) ಸುಂದರ ನೆನಪದು ಅನುದಿನ ಬಳಿಗಿದೆ ಗೆಳತಿ ಚಂದಿರ ಬಾನಲಿ ಹೊಳೆಯುತ ಬೆಳಗಿದೆ ಗೆಳತಿ ನೋಡುತ ಮನದಲಿ ಸಂತಸ ಗುನುಗಿದೆ ಗೆಳತಿ ಬಾಡಿದ ಮೊಗದಲಿ ನಗುವದು ಮಿನುಗಿದೆ ಗೆಳತಿ ಕಡಲಿನ ಆಳವ ಈಜುತ ಮುಳುಗಿದೆ ಗೆಳತಿ ಒಡಲ ಪ್ರೀತಿಯು ಅಮೃತದಿ ಹುದುಗಿದೆ ಗೆಳತಿ ಬಿಂಬವು ಕಾಣದೆ ಕಂಗಳ ಒಳಗಿದೆ ಗೆಳತಿ ಅಂಬರದಾಚೆಗೆ ಕಹಳೆಯು ಮೊಳಗಿದೆ ಗೆಳತಿ ಅಭಿನವ ಬರೆದಿಹ ಕಬ್ಬವು ಮರುಗಿದೆ ಗೆಳತಿ ನಭದಲಿ ಮಂಜಿನ ಹನಿಯದು ಕರಗಿದೆ ಗೆಳತಿ #💖ಕವನಗಳು
ಮೊದಲ ರಾತ್ರಿಯ ಮಂಚದ ಮೇಲೆ ಬಿದ್ದ ಹೂವೊಂದು ಹೇಳಿತು ಅರಳಿ ನಿಂತಾಗ ಮುಡಿಗೇರಿಸಿಕೊಳ್ಳಬೇಕಾದವಳು ಮದವೇರಿದಾಗ ಮೈಗಂಟಿಸಿ ಕೊಂಡಿಹಳು #💖ಕವನಗಳು