@nikhithgowda
@nikhithgowda

ನಿಖಿತ್ ಗೌಡ ಸಿ

"Sweet heart" is not "beauty"

#

ಭಾರತ

ಭಾರತದ ಬಗ್ಗೆ ತಿಳಿಯಿರಿ 1} #‎ರಾಷ್ಟ್ರಧ್ವಜ => ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 => ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ => ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. => ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. => ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. => ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. => ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. => ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. => ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು => ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. => ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 2} #‎ರಾಷ್ಟ್ರೀಯ_ಚಿನ್ಹೆ => ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರ ಪ್ರದೇಶದಲ್ಲಿ ಅಶೋಕನು ಹೊರಡಿಸಿರುವ ಸಾರನಾಥ ಸೂಪ್ತದಿಂದ ಪಡೆಯಲಾಗಿದೆ. => ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ, ಗೂಳಿ & ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ. => ಭಾರತ ಸರ್ಕಾರವು ಇದನ್ನು 26 ಜನೆವರಿ 1950 ರಂದು ಅಳವಡಿಸಿಕೊಂಡಿತು. => ಇದರ ಕೆಳಗೆ ಮಂಡಕೊಪನಿಷತ್ತಿನಿಂದ ಪಡೆದಿರುವ ಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. => ರಾಷ್ಟ್ರೀಯ ಚಿನ್ಹೆಯು ಭಾರತದ ಸರ್ಕಾರದ ಹಕ್ಕನ್ನು ಸೂಚಿಸುವುದು. 3} #‎ರಾಷ್ಟ್ರೀಯ_ಹೂವು => ಭಾರತದ ಪುಷ್ಪ - ಕಮಲದ ಹೂವು => ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ. => ಕಮಲದ ವೈಜ್ಞಾನಿಕ ಹೆಸರು - ನೀಲುಂಬಾ ನುಸಿಫೇರಾ(Nelumbo nucifera) => ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ. 4} #‎ರಾಷ್ಟ್ರಗೀತೆ => ಭಾರತದ ರಾಷ್ಟ್ರಗೀತೆ 'ಜನಗಣಮನ" => ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್ => ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. => ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. => ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ. => ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ. => ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ. => ರವೀಂದ್ರನಾಥ ಟ್ಯಾಗೋರ್ ರವರ 'ಅಮರ್ ಸೋನಾರ್ ಬಾಂಗ್ಲಾ' ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು) => 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ "ರಕ್ಷಾಬಂಧನ" ಆಚರಿಸುವಂತೆ ಕರೆ ನೀಡಿದ್ದರು. 5} #‎ರಾಷ್ಟ್ರೀಯ_ಹಾಡು => ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು. => ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ 'ಆನಂದಮಠ' ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ. => ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು. => ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು. => ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್. 6} #‎ರಾಷ್ಟ್ರೀಯ_ಪಂಚಾಂಗ => ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ. => ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ. => ಸಾಮಾನ್ಯ ವರ್ಷದ ಮೊದಲ ದಿನಾಂಕ - ಮಾರ್ಚ 21 => ಅಧಿಕ ವರ್ಷದ ಮೊದಲ ದಿನಾಂಕ - ಮಾರ್ಚ 22 => ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು. => 2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು. => ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು - ಚೈತ್ರ => ಕೊನೆಯ ತಿಂಗಳು - ಫಾಲ್ಗುಣ => ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ 7} #‎ರಾಷ್ಟ್ರೀಯ_ಕ್ರೀಡೆ => ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ => ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. => ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ. => ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ. => ಭಾರತದ ಹಾಕಿಯ ಮಾಂತ್ರಿಕ - ಧ್ಯಾನಚಂದ್ => ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು. => ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ. => ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ. => ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ - 70 ನಿಮಿಷಗಳು. 8} #‎ರಾಷ್ಟ್ರೀಯ_ನದಿ => ಭಾರತದ ರಾಷ್ಟ್ರೀಯ ನದಿ - ಗಂಗಾನದಿ => ನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.=> ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km) => ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ. 9} #‎ರಾಷ್ಟ್ರೀಯ_ಜಲಪ್ರಾಣಿ => ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ. => ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica) 10} #‎ರಾಷ್ಟ್ರೀಯ_ಪಕ್ಷಿ => ಭಾರತದ ರಾಷ್ಟ್ರೀಯ ಪಕ್ಷಿ - ನವಿಲು => ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ - 1972 ರ ಅಡಿಯಲ್ಲಿ ನವಿಲು ಸಂರಕ್ಷಿಸಲಾಗುವುದು. => ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್ (pavo cristatus) => ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ. 11} #‎ರಾಷ್ಟ್ರೀಯ_ಮರ => ಭಾರತದ ರಾಷ್ಟ್ರೀಯ ಮರ - ಬನಯಾನ್ ಅಥವಾ ಅರಳಿ ಮರ. => ಅರಳಿ ಮರದ ವೈಜ್ಞಾನಿಕ ಹೆಸರು - ಫೈಕಾಸ್ ಬೆಂಗಾಲೆನಿಸ್ (ficus benghalensis) => ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ. => ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ. => ಗೌತಮ ಬುದ್ದನ ಆಧ್ಯಾತ್ಮಿಕ ಗುರು - ಅಲಾರ ಕಮಾ => ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು - ಕಲ್ಕತ್ತದಲ್ಲಿ. => ಪ್ರಪಂಚದ ಅತಿ ದೊಡ್ಡ ವೃಕ್ಷ - ದೈತ್ಯ ಸಿಕೋಯ್ ಮರ. => ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ. 12} #‎ರಾಷ್ಟ್ರೀಯ_ಹಣ್ಣು => ಭಾರತದ ರಾಷ್ಟ್ರೀಯ ಹಣ್ಣು - ಮಾವಿನ ಹಣ್ಣು => ಮಾವಿನ ವೈಜ್ಞಾನಿಕ ಹೆಸರು - ಮ್ಯಾಂಜಿಫೇರಾ ಇಂಡಿಕಾ (mangifera indica) => ಮಾವಿ ಹಣ್ಣಿನಲ್ಲಿರುವ ಜೀವಸತ್ವಗಳು - A,C,D => ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ. 13 ರಾಷ್ಟ್ರೀಯ_ವಂಶಪಾರಂಪರ್ಯ_ಪ್ರಾಣಿ => ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ. => ಆನೆಯ ವೈಜ್ಞಾನಿಕ ಹೆಸರು - ಎಲಿಫಾಸ್ ಮ್ಯಾಕ್ಷಿಮಸ್ (elephas maximus) => ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ - ಆಪ್ರಿಕಾದ ಆನೆ. => ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ - 1992. => ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ. => ಕರ್ನಾಟಕದ ರಾಜ್ಯ ಪ್ರಾಣಿ - ಆನೆ. 14} #‎ರಾಷ್ಟ್ರೀಯ_ಪ್ರಾಣಿ => 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು. => ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು. => ಹುಲಿಯ ವೈಜ್ಞಾನಿಕ ಹೆಸರು - ಪ್ಯಾಂಥೇರಾ ಟ್ರೈಗಿಸ್. (Panthera tigris) => ಭಾರತದ ಮೊದಲ ಹುಲಿ ಅಭಯಾರಣ್ಯ - ಉತ್ತರಖಂಡದ ಕಾರ್ಬೆಟ್ => ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ - ಕರ್ನಾಟಕ. => ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ - ಆಂದ್ರಪ್ರದೇಶದ ನಾಗಾರ್ಜುನ ಸಾಗರ => ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ - ಪಶ್ಚಿಮ ಬಂಗಾಳದ ಸುಂದರಬನ್ಸ್ => ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ - 1972 15} #‎ರಾಷ್ಟ್ರೀಯ_ಕಟ್ಟಡ => ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.. ★•┈•┈•┈••✦✿✦••┈•┈•┈•
142 ವೀಕ್ಷಿಸಿದ್ದಾರೆ
11 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ