@premaleela8893
@premaleela8893

baby

ಐ ಲವ್ ಶೇರ್ ಚಾಟ್

*ರಾಜ್ಯಾದ್ಯಂತ ಶಾಲಾ,ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್!?..ಶಾಕಿಂಗ್ ಕಾರಣವೇನು ಗೊತ್ತಾ?* ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕಾದ ಮಕ್ಕಳು, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ರಾಜ್ಯಾದಂತ್ಯ ಶಾಲಾ ಕಾಲೇಜಿಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಹಲವು ಹೊಸ ನಿಯಮಗಳಲ್ಲಿ ರಚಿಸಲು ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇತ್ತಿಚಿಗಷ್ಟೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜಿನೀಶ್ ಅವರು ಸಿಐಡಿ ಇಲಾಖೆಗೆ ಬರೆದಿರುವ ಪತ್ರವೊಂದು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗುವ ಮಕ್ಕಳು ಶಾಲೆಯಲ್ಲಿ ಕುಳಿತು ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ವಿಷಯದ ಬಗ್ಗೆ ಶಾಲಿನಿ ರಜಿನೀಶ್ ಅವರು ಆತಂಕ ವ್ಯಕ್ತಪಡಿಸಿದ್ದರು. ಈ ಘಟನೆ ವರದಿಯಾದ ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಲೆಯಿಂದ ಮನೆಗೆ ತೆರಳಿದ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಲಕಳೆಯುವುದನ್ನು ತಪ್ಪಿಸಲು ಹಾಗೂ ಈ ಬಗ್ಗೆ ಪಾಲಕ, ಪೋಷಕರಲ್ಲಿ ಅರಿವು ಮೂಡಿಸಲು ಹೊಸ ನಿಯಮ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಹಾಗಾದರೆ, ಏನಿದು ವರದಿ? ಶಿಕ್ಷಣ ಇಲಾಖೆ ಮೊಬೈಲ್ ಬಳಕೆಯನ್ನು ಗಂಭೀರವಾಗಿ ಪರಿಗಣಿಸಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ. *ಬೆಚ್ಚಿಬಿದ್ದಿದ್ದ ರಾಜ್ಯದ ಪೋಷಕರು!* ಇಷ್ಟು ದಿನ ಮಕ್ಕಳು ಮೊಬೈಲ್​ನಲ್ಲಿ ಆಟ ಆಡ್ಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದಿದ್ದ ಪೋಷಕರಿಗೆ ಮೊನ್ನೆ ಹೊರಬಿದ್ದಿದ್ದ ಸುದ್ದಿ ಬೆಚ್ಚಿಬೀಳಿಸಿತ್ತು. ಮೊಬೈಲ್​ನಿಂದ ಮಕ್ಕಳಲ್ಲಿರುವ ಮುಗ್ಧ ಭಾವನೆಗಳು ಕೂಡ ಕಡಿಮೆಯಾಗ್ತಿವೆ. ಮೊಬೈಲ್‌ಗೆ ಅಡಿಕ್ಟ್ ಆಗಿರೋದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಇದಲ್ಲದೇ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಶಾಲಾ ಟಾಯ್ಲೆಟ್‌ಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಶಾಲಿನಿ ರಜಿನೀಶ್ ಅವರು ಬರೆದಿರುವ ಪತ್ರ ಪೋಷಕರನ್ನು ಚಿಂತೆಗೀಡುಮಾಡಿತ್ತು. *ವಿವಿಧ ಇಲಾಖೆ ಅಧಿಕಾರಿಗಳಿಗೆ ಪತ್ರ* ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಶಾಲೆಗಳಲ್ಲಿ ಇರುವ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದೆ. ಮಕ್ಕಳು ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣದ ದುರ್ಬಳಕೆ ತಪ್ಪಿಸಲು ಹೊಸ ನಿಯಮ ಒಂದನ್ನು ಅಗತ್ಯವಾಗಿ ರೂಪಿಸಬೇಕಿದೆ. ಪಾಲಕ, ಪೋಷಕರು, ಶಾಲಾಡಳಿತ ಮಂಡಳಿ ಹಾಗೂ ಸಾರ್ವಜನಿಕರು ಸೇರಿದಂತೆ ಇಡೀ ಸಮಾಜವೇ ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಯಲ್ಲಿ ಭಾಗಿಯಾಗುವಂತ ನಿಯಮ ರೂಪಿಸುವ ಅಗತ್ಯವಿದೆ ಎಂಬುದನ್ನು ಉಲ್ಲೇಖೀಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಅವರಿಂದ ಮಾಹಿತಿ ಕೋರಿದ್ದರು. *ನಿಮ್ಹಾನ್ಸ್‌ನ ತಜ್ಞ ವೈದ್ಯರ ಸಲಹೆ!* ಶಾಲಾ ಮಕ್ಕಳನ್ನು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದಿಂದ ದೂರವಿಡುವಲ್ಲಿ ಪಾಲಕ, ಪೋಷಕರ ಕರ್ತವ್ಯ ಅತಿ ಮುಖ್ಯವಾಗಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ(ಸೈಬರ್‌ ವಿಭಾಗ), ಆರೋಗ್ಯ ಇಲಾಖೆ ಮತ್ತು ನಿಮ್ಹಾನ್ಸ್‌ನ ತಜ್ಞ ವೈದ್ಯರು ಮತ್ತು ಶಿಕ್ಷಣ ತಜ್ಞರ ಸಲಹೆ ಪಡೆಯುಲು ನಿರ್ಧರಿಸಿದೆ. ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ(ಕ್ಯಾಮ್ಸ್) ಕೂಡ ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಿದೆ. *ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?* ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕಾದ ಮಕ್ಕಳು, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ರಾಜ್ಯಾದಂತ್ಯ ಶಾಲಾ ಕಾಲೇಜಿಗಳಲ್ಲಿ ಮೊಬೈಲ್ ಬ್ಯಾನ್ ಮಾಡುವುದು ಸೇರಿದಂತೆ ಹಲವು ಹೊಸ ನಿಯಮಗಳಲ್ಲಿ ರಚಿಸಲು ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. *ಪಾಲಕರಿಗೆ ಅರಿವು.* ಶಾಲಿಯಲ್ಲಿ ಈ ಕಥೆಯಾದರೆ, ಶಾಲೆಯಿಂದ ಮನೆಗೆ ಹೋದ ಬಹುತೇಕ ವಿದ್ಯಾರ್ಥಿಗಳು ಮೊದಲು ಮುಟ್ಟುವುದೇ ಪಾಲಕರ ಮೊಬೈಲ್‌. ಇದನ್ನು ತುರ್ತು ತಪ್ಪಿಸಬೇಕಿದೆ. ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೊಂದಿಕೊಂಡಷ್ಟು ಅವರಲ್ಲಿ ಬೇರೆ ರೀತಿಯ ಬದಲಾವಣೆಗಳು ಆಗುತ್ತಿರುತ್ತದೆ. ಶಾಲೆಗಳಲ್ಲಿ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ವಿಚಾರವಾಗಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಲೇ ಬೇಕು. . ಇದಕ್ಕಾಗಿ ಪಾಲಕ, ಪೋಷಕರಿಗೆ ಅರಿವು ಮೂಡಿಸಲೇ ಬೇಕು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. *ಮಾನಸಿಕ ಖನ್ನತೆಗೆ ಕಾರಣ* ಶಾಲಾ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣ ಬಳಸುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಪಾಲಕರಿಗೆ ಅರಿವಿಲ್ಲದೇ, ತಮ್ಮ ಮಕ್ಕಳಿಗೆ ಮೊಬೈಲ್‌ ನೀಡುತ್ತಾರೆ. ಇದು ಮಕ್ಕಳು ಸುಲಭವಾಗಿ ಸಾಮಾಜಿಕ ಜಾಲತಾಣ ಪ್ರವೇಶಿಸಲು ದಾರಿಯಾಗಿದೆ.ಫೇಸ್‌ಬುಕ್‌, ವಾಟ್ಸ್‌ಆಪ್‌ ಮೊದಲಾದ ಜಾಲತಾಣಗಳಿಂದ ಮಾನಸಿಕ ಖನ್ನತೆಗೆ ಒಳಗಾಗಿರುವ ನಿದರ್ಶನವೂ ಇದೆ. ಹೀಗಾಗಿ ಪೋಷಕರಿಗೆ ಅರಿವು ಮೂಡಿಸಲು ಹೊಸ ನಿಯಮ ರಚಿಸುವಂತೆ ಶಿಕ್ಷಣ ಇಲಾಖೆಗೆ ಕೋರಿಕೊಂಡಿದ್ದೇವೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಅವರು ಹೇಳಿದ್ದಾರೆ. *ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.* ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ. *ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.* ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ. *ಮೊಬೈಲ್‌ನಿಂದ ಮಾನಸಿಕ ಒತ್ತಡ.* ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು. *ಪೋಷಕರ ಪ್ರೀತಿಯೇ ಔಷದ.* ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಬಾವವನ್ನು ತಡೆಯಲು ಪ್ರೀತಿಗಿಂತ ಬೇರೊಂದು ಲಸಿಕೆ ಇಲ್ಲ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಪೋಷಕರಿಂದ ಆಗಬೇಕಿದೆ. ಇದು ಅವರ ಭವಿಷ್ಯದ ಪ್ರಶ್ನೆ ಕೂಡ ಆಗಿದೆ. ಇದಕ್ಕೆ ನೀವೇನು ಮಾಡುತ್ತಿರಾ? ನಿಮ್ಮ ಚಿಂತನೆ ಏನು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. #nimagidu gotha
ಪೂರ್ತಿಯಾಗಿ ನೋಡಲು
ಸಂವಿಧಾನದ ಪ್ರಶ್ನೆಗಳು ━━━━━━━━━━━━━━━━━━━━ ಸಂವಿಧಾನದ ಪ್ರಶ್ನೆಗಳು ━━━━━━━━━━━━━━━━━ 1."ಸಂವಿಧಾನವಿಲ್ಲದ ರಾಜ್ಯವು ರಾಜ್ಯವಲ್ಲ ಆದರೆಅದೊಂದು ಅರಾಜಕತ್ವದ ರಾಜ್ಯ" ಎಂದು ಹೇಳಿದವರುಯಾರು? 🔥ಎ ವಿ ಡೈಸಿ 2.ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನುಕಾಪಾಡುವುದು, ರಾಷ್ಟ್ರ ರಾಷ್ಟ್ರಗಳ ನಡುವೆನ್ಯಾಯಯುತವಾದ ಮತ್ತು ಗೌರವಯುತವಾದಸಂಬಂಧವನ್ನು ಕಾಯ್ದುಕೊಂಡು ಬರುವುದು. ಎಂಬುದರಬಗ್ಗೆ ತಿಳಿಸುವ ಸಂವಿಧಾನದ ಅನುಚ್ಚೇದ ಯಾವುದು? 💥ಅನುಚ್ಚೇದ 51 3. ರಾಷ್ಟ್ರಪತಿ ಸ್ಥಾನ ತೆರವಾದರೆ ಉಪರಾಷ್ಟ್ರಪತಿಹಂಗಾಮಿಯಾಗಿ ಆ ಸ್ಥಾನವನ್ನು ತುಂಬುತ್ತಾರೆ. ಒಂದುವೇಳೆ ಏಕಕಾಲದಲ್ಲಿ ಇಬ್ಬರೂ ತೆರವಾದರೆ, ರಾಷ್ಟ್ರಪತಿಚುನಾವಣೆ ನಡೆಯುವ ವರೆಗೆ ಆ ಸ್ಥಾನವನ್ನುತುಂಬುವವರು ಯಾರು? 🔥ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ 4. ಭಾರತದ ಕಂಟ್ರೋಲರ್ ಅಡಿಟರ್ ಜನರಲ್ ಮತ್ತುಮುಖ್ಯ ಚುನಾವಣಾಧಿಕಾರಿಯನ್ನು ಪದಚ್ಯುತಗೊಳಿಸುವಅಧಿಕಾರ ಯಾರಿಗಿದೆ? 🔥 ಸಂಸತ್ತು 5. ಕೇಂದ್ರ ಕಾರ್ಯಾಂಗವು ಈ ಕೆಳಗಿನ ಯಾರನ್ನುಒಳಗೊಂಡಿರುತ್ತದೆ? 💥ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿನೇತೃತ್ವದ ಮಂತ್ರಿಮಂಡಲ ಹಾಗೂ ಅಟಾರ್ನಿ ಜನರಲ್‍ರನ್ನುಒಳಗೊಂಡಿರುತ್ತದೆ. 6. ಭಾರತದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಜಾರಿಗೆತರಬೇಕೆಂದು 1957ರಲ್ಲಿ ಶಿಫಾರಸ್ಸು ಮಾಡಿದ ಸಮಿತಿಯಾವುದು? 🔥ಬಲವಂತರಾಯ್ ಮೆಹತ ಸಮಿತಿ 7. ಯಾವುದೇ ರಾಜಕೀಯ ಪಕ್ಷವನ್ನು ರಾಷ್ಟ್ರೀಯಪಕ್ಷವೆಂದು ಚುನಾವಣಾ ಆಯೋಗವು ಮಾನ್ಯತೆನೀಡಬೇಕಾದರೆ ಆ ಪಕ್ಷವು 💥 ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಶೇ 4 ರಷ್ಟು ಮತಗಳನ್ನುಪಡೆಯಬೇಕು. 8. ಯಾವ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿ ಅಖಿಲಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೂರ್ವಭಾವಿ ಮತ್ತುಮುಖ್ಯ ಪರೀಕ್ಷೆ ಎಂದು ಎರಡು ಹಂತಗಳನ್ನು ಜಾರಿಗೆತರಲಾಗಿದೆ? 💥 ಕೊಠಾರಿ ಸಮಿತಿ 9. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಪ್ರಾತಿನಿಧ್ಯಒದಗಿಸುವ ಭಾರತೀಯ ಸಂವಿಧಾನದ ಅನುಚ್ಚೇದಯಾವುದು ಮತ್ತು ಅವರಿಗೆ ಮೀಸಲಾದ ಸ್ಥಾನಗಳುಎಷ್ಟು? 🔥 331 ಮತ್ತು 2 10. ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕಮಾಡುವಾಗ ರಾಷ್ಟ್ರಪತಿಯವರು ಕೆಳಕಂಡ ಯಾರೊಂದಿಗೆಸಮಾಲೋಚಿಸಬೇಕು? 💥ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಮತ್ತು ಇತರ ನ್ಯಾಯಾಧೀಶರೊಂದಿಗೆ 11. ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದಅವಕಾಶವನ್ನು ನಿರ್ಣಾಯಕ ಮಾಡುವ ತಿದ್ದುಪಡಿ ಮತ್ತುಅನುಚ್ಚೇದ ಅನುಕ್ರಮವಾಗಿ ಯಾವುವು? 🔥 61ನೇ ತಿದ್ದುಪಡಿ ಕಾಯಿದೆ ಮತ್ತು 326ನೇ ಅನುಚ್ಚೇದ 12. ಶಕ್ತಿಯುತ ಕೇಂದ್ರ ಸರ್ಕಾರವುಳ್ಳ ಒಕ್ಕೂಟವ್ಯವಸ್ಥೆಯನ್ನು ಭಾರತದ ಸಂವಿಧಾನವು ಯಾವ ದೇಶದಸಂವಿಧಾನದಿಂದ ಎರವಲು ಪಡೆಯಿತು? 🔥ಕೆನಡಾ 13. 1773ರ ರೆಗ್ಯುಲೇಟಿಂಗ್ ಆ್ಯಕ್ಟ್ ಮೂಲಕ ಮೊದಲಬಾರಿಗೆ ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಈಸ್ಥಳದಲ್ಲಿ ಅಸ್ತಿತ್ವಕ್ಕೆ ತರಲಾಯಿತು. 🔥ಕೊಲ್ಕತ್ತಾ 14. ಬ್ರಿಟಿಷರ ಆಡಳಿತದಲ್ಲಿ ಭಾರತೀಯರು ಭಾಗವಹಿಸಲುಅವಕಾಶ ಕಲ್ಪಿಸಿದ ಕಾಯ್ದೆ ಯಾವುದು? 💥1861ರ ಕಾಯ್ದೆ 15. ಭಾರತ ಸಂವಿಧಾನದ 9ನೇ ಭಾಗ ಈ ಕೆಳಗಿನ ಯಾವವಿಷಯವನ್ನು ಒಳಗೊಂಡಿದೆ? 💥 ಪಂಚಾಯತ್ ಸಂಸ್ಥೆಗಳು 16. ಆಸ್ಟ್ರೇಲಿಯಾ ಸಂವಿಧಾನದಿಂದ ಈ ಕೆಳಗಿನ ಯಾವವಿಷಯವನ್ನು ಎರವಲಾಗಿ ಪಡೆಯಲಾಗಿದೆ? 🔥ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳು 17. ವಿದೇಶಗಳಲ್ಲಿರುವ ಭಾರತೀಯರಿಗೆ ದ್ವಿಪೌರತ್ವಹೊಂದುವ ಅವಕಾಶಕ್ಕೆ ಶಿಫಾರಸ್ಸು ಮಾಡಿದ ಆಯೋಗಯಾವುದು? 💥ಎಲ್.ಎಂ. ಸಿಂಘ್ವಿ ಆಯೋಗ 18.ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಳದ ಆಧಾರದಮೇಲೆ ಯಾವುದೇ ವ್ಯಕ್ತಿಗೂ ಪಕ್ಷಪಾತ ಮಾಡಬಾರದೆಂದುತಿಳಿಸುವ ಭಾರತ ಸಂವಿಧಾನದ ಕಲಂ ಯಾವುದು?. 🔥15 ನೇ ಕಲಂ 19. ಯಾವುದೇ ವ್ಯಕ್ತಿಯನ್ನು ಬಂಧಿಸಿದ 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆಹಾಜರುಪಡಿಸಬೇಕೆಂದು ತಿಳಿಸುವ ರಿಟ್ ಯಾವುದು? 💥 ಹೇಬಿಯಸ್ ಕಾರ್ಪಸ್ 20. ರಾಷ್ಟ್ರದಲ್ಲಿ ಯುದ್ಧ ನಡೆದಾಗ, ಭದ್ರತೆಗೆ ಧಕ್ಕೆ ಇದ್ದಾಗಹಾಗೂ ಆಂತರಿಕ ಗಲಭೆಗಳು ಉಂಟಾದಾಗರಾಷ್ಟ್ರಪತಿಯವರು ಈ ಕೆಳಗಿನ ಯಾವ ವಿಧಿಯನ್ವಯತುರ್ತು ಪರಿಸ್ಥಿತಿಯನ್ನು ಘೋಷಿಸುವರು? 352 ನೇ ವಿಧಿ 21. ಭಾರತದ ಉಪರಾಷ್ಟ್ರಪತಿಯವರನ್ನು ಈ ಕೆಳಕಂಡವಿಧಾನದ ಮೂಲಕ ಅವರ ಸ್ಥಾನದಿಂದತೆಗೆದುಹಾಕಬಹುದು 🔥 ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತುಅದಕ್ಕೆ ಲೋಕಸಭೆಯ ನಿರ್ಣಯದ ಮೂಲಕತೆಗೆದುಹಾಕಬಹುದು 22. ಭಾರತದ ಮಹಾಲೆಕ್ಕ ಪರಿಶೋಧಕರನ್ನುನೇಮಿಸುವವರು 💥ರಾಷ್ಟ್ರಪತಿಗಳು 23. ಸಂವಿಧಾನದ ಭಾಗ III ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗಿಲ್ಲಎಂದು ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಚನ್ಯಾಯಾಲಯವು ತೀರ್ಪು ನೀಡಿತು? 🔥ಗೋಲಕ್‍ನಾಥ್ V/S ಪಂಜಾಬ್ ರಾಜ್ಯ ಪ್ರಕರಣ 24. ಸಂಸತ್ ಮತ್ತು ರಾಜ್ಯ ಶಾಸಕಾಂಗದಲ್ಲಿ ಪಕ್ಷಾಂತರನಿಷೇಧ ಕಾಯಿದೆಯನ್ವಯ ಈ ಕೆಳಗಿನ ಯಾವಸಂದರ್ಭದಲ್ಲಿ ಮಾತ್ರ ಸದಸ್ಯತ್ವ ರದ್ದಾಗುತ್ತದೆ? 💥ಆಯ್ಕೆಯಾದ ಪಕ್ಷದ ವಿಪ್ ಉಲ್ಲಂಘಿಸಿದಾಗ 25. ಸಂಸತ್ತಿನ ವಿವಿಧ ಸಮಿತಿಗಳನ್ನು ಹಾಗೂ ಅವುಗಳಕಾರ್ಯಗಳನ್ನು ಹೊಂದಿಸಿ I II 1) ವ್ಯವಹಾರಗಳ ಸಲಹಾ ಎ) ಸಾರ್ವಜನಿಕಸಮಿತಿ ವಿನಿಯೋಗಗಳನ್ನು ಪರಿಶೀಲಿಸುವುದು 2) ಆಯ್ಕೆ ಸಮಿತಿ ಬಿ) ಮುಂಗಡಪತ್ರಗಳ ವೆಚ್ಚಗಳ ಪರಿಶೀಲನೆ 3) ಅಂದಾಜು ಸಮಿತಿ ಸಿ) ಪೂರ್ಣಅಧಿವೇಶನಕ್ಕೆ ವೇಳಾಪಟ್ಟಿ ಸಿದ್ಧಪಡಿಸುವುದು 4) ಸಾರ್ವಜನಿಕ ಲೆಕ್ಕಪತ್ರ ಡಿ) ಮಸೂದೆಯನ್ನು ಸಮಿತಿ ಪರಿಶೀಲಿಸಿಸದನದ ಮುಂದಿಡುವುದು. 🔥 1->ಸಿ 2->ಡಿ 3->ಬಿ #👇ನಿಮಗಿದು ಗೊತ್ತೇ
ಪೂರ್ತಿಯಾಗಿ ನೋಡಲು
1. ಎಕ್ಸರೆ ಕಂಡು ಹಿಡಿದ ವಿಜ್ಞಾನಿ? ==>👍🏼(●ರಾಂಟ್ ಜೆನ್) __________________ 2. ಕಂಪೂಟರ ಕಂಡು ಹಿಡಿದ ವಿಜ್ಞಾನಿ? ==>👍🏼(●ಚಾರ್ಲ್ಸ್ ಬ್ಯಾಬೆಜ್) __________________ 3. ಟೆಲಿಪೋನ್ ಕಂಡು ಹಿಡಿದ ವಿಜ್ಞಾನಿ? ==>👍🏼(●ಗ್ರಹಾಂಬೆಲ್) ________________ 4. ಬಲ್ಬು ಕಂಡು ಹಿಡಿದ ವಿಜ್ಞಾನಿ? ==>👍🏼(●ತಾಮಸ್ ಎಡಿಸನ್) _______________ 5. ನೂಟ್ರಾನ್ ಕಂಡು ಹಿಡಿದ ವಿಜ್ಞಾನಿ? ==>👍🏼(●ಚಾಡ್ ವಿಕ್) ________________ 6. ಹೊಸ ಗ್ರಹವನ್ನು ಕಂಡು ಹಿಡಿದ ವಿಜ್ಞಾನಿ? ==>👍🏼(●ವಿಲಿಯಂ ಹರ್ಷಲ್) _________________ 7. ಟೆಲಿವಿಜನ್ ಕಂಡು ಹಿಡಿದ ವಿಜ್ಞಾನಿ? ==>👍🏼(●ಜಿ .ಎಲ್. ಬೈಡ್ ರ) _________________ 8. ಮುದ್ರಣ ಯಂತ್ರವನ್ನು ಕಂಡು ಹಿಡಿದ ವಿಜ್ಞಾನಿ? ==>👍🏼(●ಕ್ಯಾಕ್ಸಟನ್) _________________ 9. ಥರ್ಮಾಮೀಟರ್ ಕಂಡು ಹಿಡಿದ ವಿಜ್ಞಾನಿ? ==>👍🏼(●ಪ್ಯಾರನ್ ಹೀಟ್) _______________ 10.ಸೈಕಲ್ ಕಂಡು ಹಿಡಿದ ವಿಜ್ಞಾನಿ? ==>👍🏼(●ಮ್ಯಾಕ್ ಮಿಲನ್) ______________ 11.ಡೈನಾಮೆಟ್ ಕಂಡು ಹಿಡಿದ ವಿಜ್ಞಾನಿ? ==>👍🏼(●ನೊಬೆಲ್) ______________ 12.ರೇಡಿಯಂ ಕಂಡು ಹಿಡಿದ ವಿಜ್ಞಾನಿ? ==>👍🏼(●ಮೇಡಂ ಕ್ಯೂರಿ) _______________ 13.ಹೆಲಿಕ್ಯಾಪ್ಟರ್ ಕಂಡು ಹಿಡಿದ ವಿಜ್ಞಾನಿ? ==>👍🏼(●ಟ್ರಿಕ್ವೇಟ್) _______________ 14.ಹುಚ್ಚು ನಾಯಿಗೆ ಮದ್ದು ಕಂಡು ಹಿಡಿದ ವಿಜ್ಞಾನಿ? ==>👍🏼(●ಲೂಯಿ ಪ್ಯಾಶ್ಚರ್) _______________ 15.ರೇಡಿಯೋ ಕಂಡು ಹಿಡಿದ ಮಾರ್ಕೋನಿ #📜Information
ಪೂರ್ತಿಯಾಗಿ ನೋಡಲು
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ