@sharana1211
@sharana1211

pailwan sharana

ನಾನು ಸ್ನೇಹ ಜೀವಿ 👬

#ಅನುಕಂಪ_ಬೇಡ_ಜಾಗೃತಿ_ಬೇಕು ಅದೇನೋ ಈ ಒಂದು ವಿಷಯ ಕೇಳಿದರೆ ಸಾಕು ಜನರು ಏನೋ ಅಸಹ್ಯ ಅನ್ನುವಂತೆ ಫೀಲ್ ಮಾಡುತ್ತಾರೆ. ಯಾಕೆ? ಇದು ಪ್ರತಿ ಹೆಣ್ಣಿನಲ್ಲೂ ಕೂಡ ಆಗುವ ಸಹಜ ಪ್ರಕ್ರಿಯೆ. ಸಮಾಜ ಯಾಕೆ ಮೂಗುಮುರಿಯುತ್ತೋ ತಿಳಿಯದು. ಆಕೆಯ ದೇಹಪ್ರಕೃತಿಗೆ ತಕ್ಕಂತೆ ನಾಲ್ಕು-ಮೂರು-ಎರಡು ದಿನಗಳ ಕಾಲ ಆಕೆ ಅನುಭವಿಸುವ ನರಕಯಾತನೆ, ದೈಹಿಕ-ಮಾನಸಿಕ ನೋವು ಅಷ್ಟಿಷ್ಟಲ್ಲಾ. ರಕ್ತಚೆಲ್ಲಿ ನೋವ ಸಹಿಸಿ ಬದುಕುತ್ತಿರುವಳವಳು. ರಣಾಂಗಣದ ಯೋಧನಂತೆ..! ನಮ್ಮ ನಾಗರೀಕತೆ ಇದನ್ನ ಮೌಢ್ಯದ ಪರಮಾವಧಿ‌ಯಲ್ಲಿ ಇದನ್ನ ನೋಡುತ್ತದೆ ಅಂತ ಬಿಂಬಿಸಲೊರಟವರಿಗೇನು ಕಡಿಮೆ ಇಲ್ಲಾ. ಆಧುನಿಕ ಕಾಲದಲ್ಲೂ ಮೆಡಿಕಲ್ ಶಾಪಿನ ಮುಂದೆನಿಂತ ಹುಡುಗಿ ಮುಖಭಾವ, ಕೇಳುವಾಗ ಅದೇನೋ‌ ಅಪರಾಧ ಭಾವ ಕಾಡಿದಂತಾಗಿ ಕೇಳುತ್ತಾಳೆ. ಅಲ್ಲಿಯವ ಮುಖಕಿವುಚಿಕೊಂಡು ಪೇಪರ್ನಲ್ಲಿ ಸುತ್ತಿ ವಿಷದಂತೆ ತಂದಿಡುತ್ತಾನೆ. ಶಾಪಿಂಗ್ ಮಾಲಿನಲ್ಲಿ ತೆಗೆದುಕೊಂಡಾಗಲು ಬಿಲ್ ಕೌಂಟರ್ನಲ್ಲಿ ಮತ್ತದೇ, ಇನ್ನು ಬಳಸಿದ ಪ್ಯಾಡ್ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಾಗಲೂ ಮುಜುಗರ ತಪ್ಪಿದ್ದಲ್ಲಾ..! ಬಿಲೀವ್ ಮೀ, ಹಳಬರು ಈ ವಿಷಯದಲ್ಲಿ ಬಹಳ ಗಂಭೀರವಾಗಿದ್ದರು. ಹಳಬರು ಆ ಸಮಯದಲ್ಲಿ ಆಕೆಯನ್ನ ಸುಮ್ಮನೆ ಒಂದು ಕಡೆ ಕುಳಿತುಕೊಳ್ಳಲು ಬಿಡುತ್ತಿದ್ದರು, ಅಂದು ಅವಿಭಕ್ತ ಕುಟುಂಬಗಳು, ಸ್ತ್ರೀಗೆ ಬಹಳಷ್ಟು ಕೆಲಸಗಳಿರುತ್ತಿತ್ತು. ಮನೆ ಕೆಲಸ-ಮಕ್ಕಳ ಯೋಗಕ್ಷೇಮ-ಕೃಷಿ ಎಲ್ಲದರಲ್ಲೂ ತೊಡಗಿಸಿಕೊಳ್ಳಬೇಕಿತ್ತು. ಹೇಗೆ ನಿಭಾಯಿಸಲಾಗುವುದು ಹೇಳಿ? ಆಕೆಯನ್ನ ಆ ಸಮಯದಲ್ಲಿ ಯಾವುದೇ ದೈಹಿಕ-ಮನಸಿಕ ಒತ್ತಡಗಳಿಗೆ ಒಳಗಾಗದಂತೆ ಸುಮ್ಮನೆ ಬಿಡಬೇಕಾಗುತ್ತದೆ. ಕುಟುಂಬದ ಬೇರೆ ಹೆಂಗಸರು ಕೆಲಸ ಹಂಚಿಕೊಂಡು ಮಾಡುತ್ತಿದ್ದರು. ಸಂಪ್ರದಾಯದ ಹೆಸರಿನಲ್ಲಿ ಮೂರು-ನಾಲ್ಕು ಬಾರಿ ಸ್ನಾನ, ಆಧುನಿಕ ವೈದ್ಯಪದ್ದತಿಯೂ ಇದನ್ನೇ ಹೇಳುತ್ತದೆ, ದೇಹದಲ್ಲಿನ ಉಷ್ಣತೆ ಕಾಪಾಡಲು ಸ್ನಾನ ಅವಶ್ಯಕ ಎಂದು. ಊಟದಲ್ಲೂ ಹಾಗೆಯೇ, ಜಿಡ್ಡಿನ ಪದಾರ್ಥ ನೀಡದೆ ಸಾಮಾನ್ಯ ಆಹಾರ ನೀಡುತ್ತಿದ್ದರು. ಕೆಲವು ಕಡೆ ಅತಿರೇಕದ ಆಚರಣೆಗಳು ಇದ್ದರೂ ಅದಕ್ಕೆ ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡಬೇಕಾಗಿಲ್ಲಾ. ಇಂದು ನೋಡಿ ವಿಭಕ್ತ ಕುಟುಂಬಗಳು, ಬಹಳಷ್ಟು ಜನ ಹೆಂಗಸರು ಎಲ್ಲಾ ರೀತಿಯ ಕೆಲಸಗಳಿಗೆ ಅನಿವಾರ್ಯವಾಗಿ ತೊಡಗಿಸಿಕೊಳ್ಳಬೇಕಿದೆ. ಎಷ್ಟೋ ಮಂದಿ ಗಾರ್ಮೆಂಟ್ಸ್, ಪ್ರೈವೇಟ್ ಕಂಪನಿಗಳಲ್ಲಿ ಹಾಗೂ ಸರ್ಕಾರಿ ಕೆಲಸ ಮಾಡುವ ಸ್ಥಳಗಳಲ್ಲೂ ಆಕೆಗೆ ಅಷ್ಟುದಿನ ವಿಶ್ರಾಂತಿ ಇಂದು ಎಲ್ಲಿ ನೀಡಲಾಗುತ್ತಿದೆ. ಹಬ್ಬ-ಹರಿದಿನ-ಸಂಬಂಧಿಕರ ಕಾರ್ಯಗಳಲ್ಲಿ ಭಾಗವಹಿಸಬೇಕು, ಇಲ್ಲದಿದ್ದರೇ ಮುನಿಸು, ಅದಕ್ಕಾಗಿ ಪೀರಿಯಡ್ ಮುಂದೆ ಹಾಕುವ ಮಾತ್ರೆಗಳನ್ನ ತೆಗೆದುಕೊಳ್ಳಬೇಕು, ಆದರೆ ಅದು ಮತ್ತಷ್ಟು ನೋವನ್ನ ಕೊಡುತ್ತದೆ. NCC ಯಲ್ಲಿದ್ದಾಗ ಅವರ ಕಷ್ಟ ನೋಡಿ ನಾನೂ ನೊಂದಿದ್ದೇನೆ. ಕೆಲಸ ಮಾಡುವ ಸ್ಥಳಗಳಲ್ಲೂ ಅವರ ಮುಖಭಾವದಲ್ಲೇ ತಿಳಿಯುತ್ತದೆ. ಕುಳಿತಲ್ಲೋ, ನಿಂತಲ್ಲೋ ಆಕೆ ಪಡುತ್ತಿರುವ ಅಸಾಧ್ಯ ನೋವು ಹೇಳಲಾಗದು. ಪರಿಣಾಮ ಏನಾಗಿದೆ ಗೊತ್ತೇ? ಹೆಣ್ಣು ದಿನೇದಿನೇ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾವೆ, ಅರಚುತ್ತವೆ, ಕಿರುಚುತ್ತವೆ, ಅಳುತ್ತವೆ, ತಲೆಸುತ್ತಿ ಬೀಳುತ್ತವೆ. ನಾನೇ ತಲೆಸುತ್ತಿ ಬಿದ್ದ ಇಬ್ಬರನ್ನು ಉಪಚರಿಸಿದ್ದೇನೆ. ಕಿರುಚುವವರಿಗೆ ಏನು ಹೇಳುವುದು ಹೇಳಿ? ಇನ್ನು ಆ ಸಮಯದಲ್ಲಿ ನಡೆಯುವ ಪ್ರತಿಘಟನೆಯು ಹೆಣ್ಣಿನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಡುತ್ತದೆ, ಪ್ರೇಮವೋ, ದ್ವೇಷವೋ, ಚುಚ್ಚುಮಾತೋ.. ದ್ರೌಪದಿಯೂ ಅಂದು ಅದೇ ಸ್ಥಿತಿಯಲ್ಲಿ ಇದ್ದಳು, ನಾನಲ್ಲಿಗೆ ಬರೋ ಹಾಗಿಲ್ಲಾ ಎಂದು ಎಷ್ಟು ಬೇಡಿದರೂ ಬಿಡದೇ ಆಕೆಯನ್ನ ವಿಕೃತವಾಗಿ ಹಿಡಿದೆಳದಾಡಿ ಅಟ್ಟಹಾಸ ಮೆರೆದರು, ಅದನ್ನು ಸಮರ್ಥಿಸುವ ನೀಚ ಜನ ಇಂದೂ ಸಮಾಜದ ನಡುವೆ ಇದ್ದಾರೆ. ದ್ವೇಷದ ಕಿಚ್ಚು ಆ ಹೆಣ್ಣಿನ ಒಡಲಾಳದಲ್ಲಿ ಹಾಗೆಯೇ ಉಳಿದು, ಪ್ರತಿಸಲವೂ ನೆನಪಾಗಿ ರೌರವ ನರಕ ತೋರಿಸುತ್ತಿತ್ತು. ಆ ಪಾಪಿಯ ಎದೆಬಗೆದ ರಕ್ತದಿಂದ ತಲೆಬಾಚಿ ತಣ್ಣಗಾದಳು ಆಕೆ..! ಭಾರತದಲ್ಲಿ ಕೆಲವು ಸೋಗಲಾಡಿಗಳು ಕೆಲವರ್ಷದ ಹಿಂದೆ ಇದನ್ನು ರಾಜಕೀಕರಣಗೊಳಿಸಿ ಅಸಹ್ಯ ಮೂಡಿಸಿದರು. ಅವರೇನು ಜಾಗೃತಿ ಮೂಡಿಸಲಿಲ್ಲಾ, ರಾಜಕೀಯದ ಕೆಸರೆರಚಾಟಕ್ಕೆ ಬಳಸಿಕೊಂಡರು ಅಷ್ಟೇ. ಕೆಲವರಂತೂ ಉದ್ದುದ್ದ ಕಥೆ-ಕವನ ಬರೆದು ಕಾಸು ಮಾಡಿಕೊಂಡು ಪ್ರಶಸ್ತಿ ತೆಗೆದುಕೊಂಡರು, ಧಾರ್ಮಿಕ ಭಾವನೆಗಳ ಜೊತೆಗೆ ಆಟವಾಡಿ ವಿಕೃತತೆ ಮೆರೆದರು. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಅಂದಿನ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ-ಸ್ವಚ್ಛತಾ ಕಾರ್ಯಗಳನ್ನು ತಿಳಿಸುತ್ತಾ ಅರಿವು ಮೂಡಿಸುತ್ತಿದ್ದಾರೆ. ಅವರಿಗೆ ಎಷ್ಟು ಕೃತಜ್ಞತೆಯ ಸಲ್ಲಿಸಿದರೂ ಸಾಲದು. ಪಟ್ಟಣಗಳಲ್ಲಿ ಕೆಲವು ಶಾಲೆಗಳಲ್ಲೇ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೇಳ್ಪಟ್ಟಿರುವೆ. ಹೆಣ್ಣುಮಕ್ಕಳ ಜೊತೆಗೆ ಗಂಡುಗಳಿಗೂ ಅರಿವು ಮೂಡಿಸಲಿ, ಗಂಡುಗಳಲ್ಲಿ ಮೂಡುವ ಅಸಹ್ಯ ಭಾವನೆ ತೊಲಗಿ, ಆ ಸಮಯದಲ್ಲಿ ಗೌರವಿಸುವಂತಾಗಲಿ. ಅರಿವು ಸಮಾಜಮುಖಿಯಾಗಿ ಅರೋಗ್ಯಕರ ಸಮಾಜ ನಿರ್ಮಾಣವಾಗಲಿ ಎಂಬ ಸಣ್ಣ ಆಶಯ...!
#

🤔 ನನ್ನ ಪ್ರಕಾರ

🤔 ನನ್ನ ಪ್ರಕಾರ - RAHUL RAV PHOTOGRAPHY - ShareChat
117 ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
ಹೊಸದಾಗಿ ಏನಾದರೂ ತಗೊಂಡರೆ ಗಮನ ಪೂರ್ತಿ ಅದರ ಮೇಲೆ ಇರುತ್ತಂತೆ ವಸ್ತು ಆಗಲಿ ಏನೇ ಆಗಲಿ ಅದೇ ಹಳೆದಾದರೆ ಅಯ್ಯೋ ಬಿಡು ಅಂತ ಸುಮ್ಮನಾಗ್ತೀವಿ... ಸಂಬಂಧಗಳು ಹಾಗೆ ಹೊಸದರಲ್ಲಿ ನಾವೇನು ಮಾಡಿದರೂ ಇಷ್ಟ ಆಗ್ತೀವಿ ಯಾವುದು ತಪ್ಪು ಕಾಣೋಲ್ಲ ಅದೇ ಹಳೇದಾಗ್ತ ಆಗ್ತ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯೋಕೆ ನೋಡ್ತಾರೆ.... ಹೊಸದರಲ್ಲೂ ಹಳೆಯದಾದಾಗಲು ನಿತ್ಯ ನಿರಂತರ ಬದಲಾಗದ ಭಾವನೆ ಪ್ರೀತಿ ಅಂದರೆ ಒಂದೇ ಒಬ್ಬರೇ ಅವರೇ #ತಾಯಿ ಮಕ್ಕಳು ಎಷ್ಟೇ ದೊಡ್ಡವರಾದರೂ ಏನೇ ಮಾಡಿದರೂ ಅವರ ಪ್ರೀತಿ ವಾತ್ಸಲ್ಯ ಬದಲಾಗಲ್ಲ... ಐ ಲವ್ಯೂ ಅಮ್ಮ ಅಷ್ಟೇ.... #🌃ಶುಭ ರಾತ್ರಿ #🤔ನನ್ನ ಪ್ರಕಾರ #💑ಹೃದಯದ ಮಾತು #📜ನುಡಿಮುತ್ತು #✏️ನನ್ನ ಬರಹ
#

🌃ಶುಭ ರಾತ್ರಿ

🌃ಶುಭ ರಾತ್ರಿ - ShareChat
132 ವೀಕ್ಷಿಸಿದ್ದಾರೆ
9 ತಿಂಗಳ ಹಿಂದೆ
ಶುಭರಾತ್ರಿ. ಕನ್ನಡ ಚಿತ್ರರಂಗದ ಅದ್ಬುತ ಪ್ರತಿಭೆಯ ಸುಂದರ ಜೋಡಿ ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕ ನಟ ಸಾಮಾಜಿಕ ಕಳ ಕಳಿ ಇರುವ ನಟ #ಯಶ್ ಮತ್ತೆ ಅದ್ಬುತ ಪ್ರತಿಭೆಯ ಚೆಲುವೆ #ರಾಧಿಕಾ ಪಂಡಿತ್ ಇವರ ಮುದ್ದಿನ ಪುತ್ರಿಗೆ ನಾಮಕರಣದ ಸಂಭ್ರಮದ ಸುಂದರ ದೃಶ್ಯಗಳು,.. #ಐರಾ ಯಶ್ ಎಂದು ನಾಮಕರಣ ಮಾಡಿದ್ದಾರೆ, ಐರಾ ಎಂದರೆ ಶ್ರೀ ಮಹಾಲಕ್ಷ್ಮಿಯ ಹೆಸರು,.. ಪುಟ್ಟ ರಾಜಕುಮಾರಿಗೆ ಆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, ತಂದೆ ಮತ್ತು ತಾಯಿಯಾದ ಯಶ್ ಹಾಗೂ ರಾಧಿಕಾ ಪಂಡಿತ್ ಇವರಿಬ್ಬರಿಗೂ ಅಭಿನಂದನೆಗಳು. ಶುಭವಾಗಲಿ, ಎಲ್ಲರಿಗೂ ಶುಭರಾತ್ರಿ. #🌃ಶುಭ ರಾತ್ರಿ #👏ಶುಭಾಶಯಗಳು #✏️ನನ್ನ ಬರಹ #🤔ನನ್ನ ಪ್ರಕಾರ #💑ಹೃದಯದ ಮಾತು
#

🌃ಶುಭ ರಾತ್ರಿ

🌃ಶುಭ ರಾತ್ರಿ - ShareChat
121 ವೀಕ್ಷಿಸಿದ್ದಾರೆ
9 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಕರಣ