#😍 ನನ್ನ ಸ್ಟೇಟಸ್ #🖋️ ನನ್ನ ಬರಹ #✍ಟ್ರೆಂಡಿಂಗ್ ಕೋಟ್ಸ್📜 #🙏ನಮಸ್ಕಾರ #☺ಜೀವನದ ಸತ್ಯ
#🖋️ ನನ್ನ ಬರಹ #😍 ನನ್ನ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #🙏ನಮಸ್ಕಾರ #😆COMEDY
#💓ಲವ್ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #🙏ನಮಸ್ಕಾರ #😍 ನನ್ನ ಸ್ಟೇಟಸ್ #🖋️ ನನ್ನ ಬರಹ
#😍 ನನ್ನ ಸ್ಟೇಟಸ್ #😆COMEDY #🙏ನಮಸ್ಕಾರ #✍ಟ್ರೆಂಡಿಂಗ್ ಕೋಟ್ಸ್📜 #💓ಲವ್ ಸ್ಟೇಟಸ್
#😆COMEDY #🙏ನಮಸ್ಕಾರ #💓ಲವ್ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #😍 ನನ್ನ ಸ್ಟೇಟಸ್
#😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #✍ಟ್ರೆಂಡಿಂಗ್ ಕೋಟ್ಸ್📜 #🙏ನಮಸ್ಕಾರ #😆COMEDY
#☺ಜೀವನದ ಸತ್ಯ #😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #💑ಮದುವೆ ಸಂಭ್ರಮ #😞 ಮೂಡ್ ಆಫ್ ಸ್ಟೇಟಸ್
ಕಾಂತಾರ ಚಾಪ್ಟರ್ -೧
ಸುಮ್ಮನೇ ಹೊಗಳಿಕೆಯಲ್ಲ ನೋಡುವ ಕಣ್ಣುಗಳಿಗಷ್ಟೇ ದಕ್ಕುವ ದರ್ಶನ , ದೈವ ದರ್ಶನ ಇದು . ಕಾಂತಾರ ಚಾಪ್ಟರ್ -೧ .
‘ಕಾಂತಾರ: ಚಾಪ್ಟರ್ 1’ ಮೇಲೆ ಸಾಕಷ್ಟು ನಿರೀಕ್ಷೆಯಿರುವ ಸಿನೆಮಾ . ಕರಾವಳಿ, ಮಲೆನಾಡು ಭಾಗಗಳಲ್ಲಿ ದೈವ, ಭೂತ, ಚೌಡಿ, ಪಂರ್ಜುಲಿ...ಹೀಗೆ ನೂರಾರು ದೈವಗಳನ್ನು ಆರಾಧಿಸುತ್ತಾರೆ. ರಕ್ತ, ಮಾಂಸ ಬೇಡುವ ಈ ದೈವಗಳನ್ನು ದೇವರ ಸ್ಥಾನದಲ್ಲಿ ಕೂರಿಸುವುದಿಲ್ಲ. ಬದಲಿಗೆ ಶಿವಗಣಗಳೆಂದು ನಂಬುತ್ತಾರೆ. ಅಂಥದ್ದೇ ಶಿವಗಣಗಳ ಸಾಮ್ರಾಜ್ಯ ‘ಕಾಂತಾರ’ದ ಕಾಡು. ಆ ಕಾಡಿನಲ್ಲಿ ವಿರೋಧಿಗಳಿಂದ ದೈವವನ್ನು ಕಾಯುವವನು ಕಥಾನಾಯಕ ‘ಬೆರ್ಮೆ’.
ಕ್ರಿ.ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೃಷ್ಟಿಯಾದ ಮಾಯಾವಿಲೋಕವಿದು. ಕಾಡಿನಿಂದ ಹೊರಬಂದು ಸರಿಯಾಗಿ ಊರನ್ನೇ ನೋಡದ, ಮನುಕುಲದ ಸಂಪರ್ಕವೇ ಇಲ್ಲದ ‘ಬೆರ್ಮೆ’ ಮತ್ತವನ ಸಂಗಡಿಗರು ಬಾಂಗ್ರಾ ರಾಜ್ಯಕ್ಕೆ ಕಾಲಿಡುತ್ತಾರೆ. ಬಾಂಗ್ರಾ ರಾಜ ಮನೆತನದ ಅರಸ ರಾಜಶೇಖರ ಮತ್ತು ಆತನ ಮಗ ಕುಲಶೇಖರನಿಗು ಹಾಗೂ ಈ ಕಾಂತಾರದ ಕಾಡಿಗೂ ಒಂದು ನಂಟಿದೆ. ಅಜ್ಜನ ಕಾಲದಿಂದಲೂ ದ್ವೇಷವಿದೆ. ಈಶ್ವರನ ಹೂದೋಟ ಎಂಬ ಸಣ್ಣ ಭಯವೂ ಇದೆ. ಬಾಂಗ್ರಾ ರಾಜ್ಯದ ಪರಿಚಯ, ಅಲ್ಲಿನ ಪಾತ್ರಗಳು, ಅವರ ಹಿನ್ನೆಲೆ, ವ್ಯಾಪಾರ, ‘ಬೆರ್ಮೆ’ ಮತ್ತವನ ಸಂಗಡಿಗರು ಈ ರಾಜ್ಯಕ್ಕೆ ಬಂದು ಇಲ್ಲಿನ ವೈಭವವನ್ನು ತುಂಬಿಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ. ‘ಕಾಂತಾರ’ದ ಕ್ಲೈಮ್ಯಾಕ್ಸ್ ದೃಶ್ಯವೇ ಈ ಚಿತ್ರದ ಇಂಟರ್‌ವಲ್. ‘ಬೆರ್ಮೆ’ ದೈವದ ಮಗ ಎಂಬುದು ಇಲ್ಲಿ ಗೊತ್ತಾಗುತ್ತದೆ. ಈತನನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂಬುದೂ ಇಲ್ಲಿಯೇ ಸ್ಪಷ್ಟವಾಗಿ, ದ್ವಿತೀಯಾರ್ಧದ ಕಥೆಗೂ ಒಂದು ರೀತಿ ಇಲ್ಲಿಯೇ ಕ್ಲೈಮ್ಯಾಕ್ಸ್ ಸಿಕ್ಕಿರುತ್ತದೆ!
ಇಡೀ ಚಿತ್ರದ ಹೈಲೆಟ್ ಎಂದರೆ ಮೇಕಿಂಗ್. ಚಿತ್ರದಲ್ಲಿನ ‘ದೈವ’ವೆಂಬ ಅಂಶದ ಹೊರತಾಗಿ ಮಾಸ್ ಆ್ಯಕ್ಷನ್ ಸಿನಿಮಾ ಎನಿಸಿಕೊಳ್ಳಲು ಬೇಕಾದ ಎಲ್ಲ ಸಿದ್ಧಸೂತ್ರಗಳೂ ಇವೆ .
ನಾವು ಎಣಿಸದ ಕತೆಯ ತಿರುವು , ನೋಡುಗರಿಗೆ ಮೈ ನವಿರೇಳಿಸುವ ದೃಶ್ಯವೈಭವವನ್ನು ಕಟ್ಟಿ ಕೊಡುವ ಸಿನೆಮಾ ಇದು . ನೋಡಿದಷ್ಟು ಸುಲಭವಾಗಿ ಸಿನೆಮಾವನ್ನು ದಕ್ಕಿಸಿಕೊಂಡೆ ಎನ್ನುವ ಭಾವವನ್ನು ಸಿನೆಮಾ ಹೊಂದಿಲ್ಲ . ಇದನ್ನು ನೋಡುವ ಕಣ್ಣು , ಮನಸ್ಸು , ಶುಭ್ರವಾಗಿದ್ದರೆ ಇನ್ನಷ್ಟು ಅಪ್ಯಾಯಮಾನವಾಗಿ ಸುಲಭವಾಗಿ ಹೃದಯಕ್ಕೆ ಇಳಿದು ನಮ್ಮ ದೈವಿಕ ದೃಷ್ಟಿಯನ್ನು ತಲುಪುವುದಂತು ನಿಜ .
ಈ ನಮ್ಮ ಹೆಮ್ಮೆಯ ಕನ್ನಡ ಸಿನೆಮಾ ( Pan India ) ವಾಣಿಜ್ಯದ ದೃಷ್ಟಿಯಿಂದಲು ಎಲ್ಲ ರೀತಿಯಲ್ಲು ಜಗತ್ತು ಒಮ್ಮೆ ತಿರುಗಿ ನೋಡುವಂತಹ ಮೇಕಿಂಗ್ , ಅಭಿನಯ , ಚಿತ್ರಕತೆಯನ್ನು ಹೊಂದಿದೆ . ಮನೆಮಂದಿಯಲ್ಲ ಕೂತು ನೋಡಬೇಕಾದ ಸಿನೆಮಾ . ಒಮ್ಮೆ ನೋಡಿ ಸಿನೆಮಾದ ಅದ್ಬುತವನ್ನು ಕಣ್ತುಂಬಿಕೊಳ್ಳಿ .
ನಮ್ಮ ಸಿನೆಮಾ ನಮ್ಮ ಹೆಮ್ಮೆ ...😍😘😍
ಶ್ರೀನಿವಾಸ್ ಶ್ರೀಗಂದ
#🙏ನಮಸ್ಕಾರ #😍 ನನ್ನ ಸ್ಟೇಟಸ್ #🖋️ ನನ್ನ ಬರಹ #☺ಜೀವನದ ಸತ್ಯ ಶ್ರೀಗಂಧ
#✍ಟ್ರೆಂಡಿಂಗ್ ಕೋಟ್ಸ್📜 #✨ ನವರಾತ್ರಿ ಸ್ಟೇಟಸ್ #😍 ನನ್ನ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🙏ನಮಸ್ಕಾರ