ಹಳೇ ಪ್ರೀತಿಯೇ ಗಾನವಿ ಆತ್ಮಹ್ಮತ್ಯೆಗೆ ಕಾರಣವಾಯ್ತಾ?; ಸೂರಜ್ ಕುಟುಂಬಸ್ಥರು ಹೇಳಿದ್ದಿಷ್ಟು
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಗಾನವಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ಕುಟುಂಬಸ್ಥರು ಸೂರಜ್ ವರದಕ್ಷಿಣೆ ಕಿರುಕುಳ ನೀಡಿದ್ದರು. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಗಾನವಿ ಪತಿ ಸೂರಜ್ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಗಾನವಿ ಕುಟುಂಬದ ವಿರುದ್ಧವೇ ದೂರು ದಾಖಲಾಗಿದೆ. ಗಾನವಿಗಿದ್ದ ಹಳೆಯ ಪ್ರೇಮ ಸಂಬಂಧವೇ ಈ ಎಲ್ಲಾ ದುರಂತಗಳಿಗೆ ಕಾರಣ ಎನ್ನುವುದು ಬಯಲಾಗಿದೆ.