ಸಣ್ಣ ಕಥೆ
*ಒಂದು ದಿನ ಹಿಟ್ಲರ್ ಒಂದು ಕೋಳಿಯನ್ನು ಸಂಸತ್ತಿಗೆ ತಂದನು ...* *ಮತ್ತು ಅವನು ಅದರ ರೆಕ್ಕೆಗಳನ್ನು ಒಂದೊಂದಾಗಿ ಎಲ್ಲರ ಮುಂದೆ ಎಳೆಯಲು ಪ್ರಾರಂಭಿಸಿದನು ...* *ಕೋಳಿ ನೋವಿನಿಂದ ಕಿರುಚಾಡುತ್ತಿತ್ತು, ತಪ್ಪಿಸಿಕೊಳ್ಳಲು ಹಂಬಲಿಸುತ್ತಿತ್ತು….* *ಹಿಟ್ಲರ್ ಕೋಳಿಯ ಎಲ್ಲಾ ಗರಿಗಳನ್ನು ಒಂದೊಂದಾಗಿ ಕಿತ್ತು ಬಿಟ್ಟನು..* *ನಂತರ ಕೋಳಿಯನ್ನು ನೆಲದ ಮೇಲೆ ಬಿಟ್ಟು ಬಿಟ್ಟನು.* *ನಂತರ ಜೇಬಿನಿಂದ ಸ್ವಲ್ಪ ಧಾನ್ಯಗಳನ್ನು ತೆಗೆದುಕೊಂಡು ಕೋಳಿಯ ಮುಂದೆ ಒಂದೊಂದಾಗಿ ಎಸೆಯುತ್ತ ನಿಧಾನವಾಗಿ ಮುಂದಕ್ಕೆ ಚಲಿಸುತ್ತಾನೆ.* *ಆಗ ಕೋಳಿ ಧಾನ್ಯಗಳನ್ನು ತಿನ್ನುತ್ತಾ ಹಿಟ್ಲರನ ಹಿಂದೆ ನಡೆಯಲು ಪ್ರಾರಂಭಿಸುತ್ತದೆ...* *ಹಾಗೆಯೇ ಹಿಟ್ಲರ್ ಕೋಳಿಗೆ ಧಾನ್ಯಗಳನ್ನು ಎಸೆಯುತ್ತಿದ್ದನು ಮತ್ತು ಕೋಳಿ ಕಾಳುಗಳನ್ನು ತಿನ್ನುತ್ತ ಅವನನ್ನು ಹಿಂಬಾಲಿಸುತ್ತ ಹೋಯಿತು..* *ಕೊನೆಗೆ ಕೋಳಿ ಹಿಟ್ಲರನ ಕಾಲಿನ ಕೆಳಗೆ ಬಂದು ನಿಂತಿತು ...* *ಹಿಟ್ಲರ್ ಸ್ಪೀಕರ್ ಕಡೆಗೆ ನೋಡುತ್ತಾ ಒಂದು ವಾಕ್ಯವನ್ನು ಹೇಳಿದನು….* *"ಪ್ರಜಾಪ್ರಭುತ್ವ" ಹೊಂದಿರುವ ದೇಶದಲ್ಲಿ ಜನಸಾಮಾನ್ಯರ ಸ್ಥಿತಿ ಈ ಕೋಳಿಯಂತೆ ...* *ಅವರ ನಾಯಕರು ಎಲ್ಲದರಲ್ಲೂ ಜನರನ್ನು ದೋಚುತ್ತಾರೆ ಮತ್ತು ಅವರನ್ನು ದುರ್ಬಲರು, ಮತ್ತು ಬಡವರನ್ನಾಗಿ ಮಾಡುತ್ತಾರೆ ...* *ತದನಂತರ ಅವರು ಸ್ವಲ್ಪ ತುಂಡನ್ನು ಅವರ ಮುಂದೆ ಇಟ್ಟು ನಂತರ ಅವರ ದೇವರಾಗುತ್ತಾರೆ ...* *ಇದು ನಿಜವೋ ಸುಳ್ಳೋ ಗೊತ್ತಿಲ್ಲ..* *ಆದರೆ ವಾಸ್ತವವನ್ನು ನಿರಾಕರಿಸಲಾಗುವುದಿಲ್ಲ ....!* *ಇಂದು ಭಾರತದ ಜನರ ಸ್ಥಿತಿ ಹಿಟ್ಲರನ ಕೋಳಿಯಂತೆಯೇ ಇದೆ ...* *ನೀವು ಅರ್ಥಮಾಡಿಕೊಂಡರೆ, ದಯವಿಟ್ಟು ಹಂಚಿಕೊಳ್ಳಿ..👍🏻* #ಸಣ್ಣ ಕಥೆ #students story #life story #life story
#

ಸಣ್ಣ ಕಥೆ

ಸಣ್ಣ ಕಥೆ - ShareChat
186 ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#

🤔 ನನ್ನ ಪ್ರಕಾರ

```ಒಂದು ಬಡ ಕುಟುಂಬವಿತ್ತು. ಆ ಕುಟುಂಬದಲ್ಲಿ 5 ಜನರಿದ್ದರು. ತಂದೆ ತಾಯಿ ಮತ್ತು ಮೂವರು ಮಕ್ಕಳು, ತಂದೆ ಯಾವತ್ತೂ ಅನಾರೋಗ್ಯದಿಂದ ಇರುತ್ತಿದ್ದನು, ಕಡೆಗೆ ಒಂದು ದಿನ ತಂದೆ ಸಾಯುತ್ತಾನೆ, 3 ದಿನಗಳವರೆಗೆ ಅಕ್ಕಪಕ್ಕದವರು ಊಟ ಕೊಡುತ್ತಾರೆ. ನಂತರ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ತಾಯಿಯು ಕೆಲದಿನಗಳವರೆಗೆ ಹಾಗೋ ಹೀಗೋ ಮಾಡಿ ಮಕ್ಕಳಿಗೆ ಊಟ ಕೊಡುತ್ತಾಳೆ, ಆದರೆ ಎಲ್ಲಿಯವರೆಗೆ? ಕೊನೆಗೆ ಮತ್ತೆ ಹಸಿದ ಹೊಟ್ಟೆಯಲ್ಲಿ ಉಪವಾಸ ಇರಬೇಕಾದ ಪರಿಸ್ಥಿತಿ ಬರುತ್ತದೆ. ಆಹಾರವಿಲ್ಲದೇ ಅನಾರೋಗ್ಯದಿಂದ 8 ವರ್ಷದ ಮಗ ಹಾಸಿಗೆ ಹಿಡಿಯುತ್ತಾನೆ. ಒಂದು ದಿನ.. 5 ವರ್ಷದ ಮಗು ಅವಳ ತಾಯಿಯ ಕಿವಿಯಲ್ಲಿ ಕೇಳುತ್ತದೆ. "ಅಮ್ಮಾ ಅಣ್ಣ ಯಾವಾಗ ಸಾಯುತ್ತಾನೆ?" ಆಗ ತಾಯಿ ದುಃಖದಲ್ಲಿ ಕೇಳುತ್ತಾಳೆ ಯಾಕಮ್ಮ ಹಾಗೆ ಕೇಳ್ತಿಯಾ?. ಆ 5 ವರ್ಷದ ಮಗು ಉತ್ತರ ಹೇಳುತ್ತದೆ ಆ ಉತ್ತರ ಕೇಳಿದರೆ ನಿಮ್ಮ ಕಣ್ಣುಗಳಲ್ಲಿ ಕಣ್ಣೀರು ಬರುತ್ತವೆ. ಆ ಮಗುವಿನ ಉತ್ತರ ಹೀಗಿರುತ್ತದೆ "ಅಮ್ಮಾ. ಅಣ್ಣ ಸತ್ತರೆ ಊಟ ಅಕ್ಕಪಕ್ಕದವರು ಊಟ ಕೊಡ್ತಾರಮ್ಮಾ...! ಗೆಳೆಯರೇ ನಮ್ಮ ಆಹಾರದಲ್ಲಿ ಬಡವರ ಪಾಲೂ ಇದೆ. ಬಡವರಿಗೆ ಸಹಾಯ ಮಾಡುವುದರಲ್ಲಿಯೂ ಸಂತೋಷವಿದೆ. "ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ" ನೀವು ಯಾವುದ್ಯಾವುದೋ ಮೆಸೇಜ್ ಕವನಗಳನ್ನು ಶೆರ್ ಮಾಡ್ಕೋತಿರಿ. ಸ್ವಲ್ಪ ಸಮಯ ಕೊಟ್ಟು ಈ ಮಾಹಿತಿಯನ್ನು ಈ ಮೆಸೇಜ್ ಅನ್ನು ತಮ್ಮ ತಮ್ಮ ಗೆಳೆಯರ ಮತ್ತು ತಮ್ಮ ಗ್ರೂಪ್ ನಲ್ಲಿ ಶೇರ್ ಮಾಡಿ.```plz don't waste food👏🏻👏🏻👏🏻 #🤔 ನನ್ನ ಪ್ರಕಾರ #ಸಣ್ಣ ಕಥೆ #don't waste food👍 ##don't waste food👍 #🙏plz don't waste food 🙏
201 ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
#

short story

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....? ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ.... ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪಾರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು. ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ. ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು. ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ. 'ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ' ಎಂಬ ಭಿತ್ತಿಪತ್ರ ಕಾಣಿಸಿತ್ತು. ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ....? ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ..... ಈಗ ಬೂಟ್'ಗಳಿಂದ ನೋವಾಗುತ್ತಿಲ್ಲ.... ಮನೆಯಲ್ಲಿ ಅಪ್ಪ ಇಲ್ಲ... ಸ್ಕೂಟರ್ ಇಲ್ಲ... ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ....! ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ....! " ಬೇಡ ಅಪ್ಪ...! ನನಗೆ ಬೈಕ್ ಬೇಡ....!!ಅಂದೆ ಆವಾಗ್ಲೆ ಗೊತ್ತಾಗಿದ್ದು ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ. ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ. ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು. ಯೋಚನೆ ಮಾಡಿ, ಇಂತಹ ಕಥೆಗಳನ್ನು ಮಕ್ಕಳಿಗೆ ಹೇಳಿ ವ್ಯಕ್ತಿತ್ವ ಬೆಳೆಸಿ: One of the best msgs that i hv read n plz read and share without fail.🙏🏻 👌👌👌👌👌 #short story #ಸಣ್ಣ ಕಥೆ #ತಂದೆ ತಾಯಿ ಪ್ರೀತಿ #father
239 ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
#

ಸಣ್ಣ ಕಥೆ

*_ಬಾಕಿ ಬಿಲ್_* ********* 👉🏻 ಒಬ್ಬ 80 ವರ್ಷದ ಮುದುಕನಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು ಆಸ್ಪತ್ರೆ ಬಿಲ್ 8 ಲಕ್ಷ ಬಿಲ್ ನೋಡಿ ಮುದುಕ ಕಣ್ಣೀರು ಹಾಕಿದ ಅದನ್ನು ಕಂಡ ವೈದ್ಯರು ಅಳಬೇಡಿ ನಿಮ್ಮ ಬಿಲ್ ಸ್ವಲ್ಪ ಕಡಿಮೆ ಮಾಡುತ್ತೇವೆ. 👉🏻ಮುದುಕ.... ಸರ್ ಬಿಲ್ ತುಂಬಾ ಕಡಿಮೆ 10 ಲಕ್ಷ ತುಂಬಲು ನಾನು ಯೋಗ್ಯನಾಗಿರುವೆ ನಾನು ಅತ್ತಿದ್ದು ಅದಕ್ಕಲ್ಲಾ.. 👉🏻ಯಾಕೆಂದರೆ ಆ ಪರಮಾತ್ಮ 80 ವರ್ಷ ನನ್ನ ಹೃದಯವನ್ನು ಜೋಪಾನವಾಗಿ ಕಾಪಾಡಿದ್ದಕ್ಕೆ ಯಾವುದೇ ಬಿಲ್ ನನಗೆ ಕಳಿಸಲಿಲ್ಲ ನೀವೂ ಕೇವಲ ಮೂರು ಗಂಟೆ ನನ್ನ ಹೃದಯ ಪಂಕ್ಷನಿಂಗ್ ಗೆ ಎಂಟು ಲಕ್ಷ ರೂಪಾಯಿಯೇ... ?? 🙏🙏🙏 ಓ ಪರಮಾತ್ಮ ನೀನು ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತೀಯಾ ನೀನು ನಮ್ಮ ಒಂದೊಂದು ಅಂಗಾಂಗದ ಮೇಲು ಬೆಲೆ ಕಟ್ಟಲಾಗದ investment ಮಾಡಿದ್ದಿಯ ನಮ್ಮ ದೇಹದ ಯಾವುದೊ ಒಂದು ಅಂಗ ಕೆಲಸ ಮಾಡಲಿಲ್ಲ ಅಂತ ಡಾಕ್ಟರ್ ಬಳಿ ಹೋದಾಗಲೇ ನಿನ್ನ ಬೆಲೆ ನಮಗೆ ಅರ್ಥವಾಗುವುದು ನೀನು ಯಾವುದೇ ಪ್ರತಿಫಲ ಬಯಸದ ಉತ್ಪಾದಕ ....ನೀನು ಉತ್ಪಾದಿಸಿದ ಅಂಗವನ್ನು ರಿಪೇರಿ ಮಾಡಿ ಲಕ್ಷಾಂತರ ಹಣ ಕೊಟ್ಟು ಭಯ ಭಕ್ತಿಯಿಂದ ನಿಂಗಿಂತಲೂ ಒಂದು ಮಾರು ಮೇಲೆ ಎಂಬಂತೆ ವೈದ್ಯರಿಗೆ ನಮಸ್ಕಾರ ಹೇಳಿ ಬರುತ್ತೇವೆ ಆದರೂ ನೀನು ಕೋಪಗೊಳ್ಳುವುದಿಲ್ಲ ನಮ್ಮ ಯೋಗಕ್ಷೇಮದ ಹೊಣೆ ಹೊತ್ತಿದ್ದೀಯ ಎಂಥಹ ಕರುಣಾಳು ನೀನು ನಿನಗೆ ಕೊಡಲು ನನ್ನ ಬಳಿ ಏನಿದೆ 👉🏻...... ರಾತ್ರಿ ಕರೆಂಟು ಬಳಿಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಬಿಸಾಡುತ್ತಾರೆ 👉🏻ಸೂರ್ಯನ ಬೆಳುಕು ಬಿಸಿಲಿಗೆ ಯಾವುದೇ ಬಿಲ್ಲಿಲ್ಲ 👉🏻..... ನೀರು ಬಳಸಿದೆ ಎಂದು ತಿಂಗಳಿಗೊಮ್ಮೆ ಬಿಲ್ಲು ಕಟ್ಟುತ್ತಾರೆ 👉🏻ಕಾಲುವೆ ಬಾವಿ ಏರಿ ಕೆರೆ ಸಮುದ್ರಗಳು ಕೊಟ್ಟ ನೀರಿಗೆ ಯಾವುದೇ ಬಿಲ್ ಕಟ್ಟುವುದಿಲ್ಲ 👉🏻..... A c ಗಾಳಿಗಾಗಿ ಲಕ್ಷಾಂತರ ಹಣ ವ್ಯಯಿಸುತ್ತೇವೆ 👉🏻ನೀನು ಕೊಟ್ಟ ಪರಿಶುದ್ಧ ಗಾಳಿಗೆ ಯಾವುದೇ ಬಿಲ್ಲಿಲ್ಲ 👉🏻ಯಾವ ಬಿಲ್ ಪಡೆಯದ ನಿನಗೆ ನನ್ನದೊಂದು ಸಣ್ಣ ಬಿಲ್ ..🙏🙏🙏🙏🙏🙏🙏🙏🙏🙏🙏 🙏******ಓ.ದೇವರೇ ನಿನಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ನಿನ್ನ ಋಣ ತೀರಿಸಲು ಸಾದ್ಯವಿಲ್ಲ.. ನಾನೆಂದೂ ನಿನಗೆ ಚಿರ ಋಣಿ..ಕೋಟಿ ಕೋಟಿ ಧನ್ಯವಾದಗಳು ತಂದೆ. ********💐💐💐💐💐💐💐💐💐 ಸರ್ವೇಜನಾ ಸುಖಿನೋಭವಂತೋ🙏🙏🙏🙏🙏🙏 #ಸಣ್ಣ ಕಥೆ #short story #beutifull short story #🙏 ಆಧ್ಯಾತ್ಮ #🙏 ಓಂ ನಮಃ ಶಿವಾಯ
199 ವೀಕ್ಷಿಸಿದ್ದಾರೆ
2 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post