#🔯ಶುಕ್ರವಾರದ ವಿಶೇಷ ರಾಶಿಫಲ
ಮಣ್ಣಿನ ಗೋಡೆಗೆ ಬಿದಿರಿನ ಗಳಗಳ ಕದ
ನಮ್ಮೂರಿನ ಹಳೆಯ ಮನೆಗಳ ಬಾಗಿಲಲ್ಲಿ ಇಂದಿಗೂ ಕೆಲವೆಡೆ ಬಿದಿರಿನ ಗಳಗಳ ಕದ ಕಾಣಸಿಗುತ್ತವೆ. . ಮಣ್ಣಿನ ಗೋಡೆಯ ಮಧ್ಯೆ ನಿಂತಿದ್ದ ಆ ಕದ, ಕೇವಲ ಒಳಗೆ ಹೋಗುವ ಮಾರ್ಗವಲ್ಲ, ಅದು ಒಂದು ಕಾಲದ ಶ್ವಾಸವಿತ್ತು. ಪಶ್ಚಿಮಘಟ್ಟದ ಗುಡ್ಡದ ತುದಿಯಲ್ಲಿ ಮಳೆ, ಗಾಳಿ, ಸಿಡಿಲು ಮಿಂಚುಗಳ ಎಲ್ಲದರ ಮಧ್ಯೆ ನಿಂತ ಆ ಬಿದಿರಿನ ಬಾಗಿಲು ನೂರಾರು ಮಳೆಗಾಲಗಳನ್ನು ಸಹಿಸಿತ್ತು, ನೂರಾರು ಬೆಳಕನ್ನು ಕಂಡಿತ್ತು.
ಹಳ್ಳಿ ಹಟ್ಟಿಗಳ ಹೃದಯದಂತಿತ್ತು ಈ ಗಳಗಳ ಕದ. ದನಗಳ ಸುರಕ್ಷತೆ, ಮನೆಯ ನೆಮ್ಮದಿ, ಗಾಳಿಯ ಸಂಚಾರ ಎಲ್ಲವೂ ಅದರ ಮೂಲಕ ಸಾಗುತಿತ್ತು.
ದನಗಳು ಸಂಜೆ ಮನೆಗೆ ಬಂದಾಗ, ತಮ್ಮ ಮೈಯನ್ನು ಆ ಕದಕ್ಕೆ ಒರಸಿ ನಿಂತುಕೊಳ್ಳುತ್ತಿದ್ದವು. ಅವರ ಉಸಿರಿನ ಉಷ್ಣತೆ, ಅವರ ಕಣ್ಣುಗಳ ಶಾಂತಿ , ಈ ಎಲ್ಲವೂ ಕದದ ಜೀವವಾಗಿತ್ತು.
ಆದರೆ ಒಂದು ರಾತ್ರಿ ಆ ಭರವಸೆಯ ಬಾಗಿಲು ಮೌನವಾಗಿತ್ತು. ಯಾರೋ ಕಳ್ಳರು, ಅದೇ ಕದವನ್ನು ಒಡೆದು, ಅದರ ಆಶ್ರಯದಲ್ಲಿದ್ದ ಹಸುಗಳನ್ನು ಕದ್ದೊಯ್ದರು. ಬೆಳಗ್ಗೆ ಮನೆಯ ಯಜಮಾನ ಕದದ ತುಂಡುಗಳನ್ನು ನೋಡಿ ನಿಶ್ಯಬ್ದರಾದರು. ನಂಬಿಕೆಯ ಚೂರುಗಳಾಗಿತ್ತು.
ಆ ದಿನದಿಂದ ಹಟ್ಟಿಯ ಮೌನ ಬದಲಾಯಿತು. ದನಗಳ ಅಳಲು, ವಿಷಾದ ಹಾಡಿತ್ತು . ಆದರೂ, ಮಣ್ಣಿನ ಗೋಡೆಗೆ ಬಿದಿರಿನ ಗಳಗಳ ಕದದ ನೆನಪು ಉಳಿದಿದೆ.
ರಾಂ ಅಜೆಕಾರು ಕಾರ್ಕಳ
#ಶುಭ ಶುಕ್ರ ವಾರ 🌸🌸🌸🌸 #ಶುಕ್ರವಾರ #🌞ಮುಂಜಾನೆಯ ಶುಭೋದಯಗಳು 🌞☕ #ಶು ಭೋ ದ ಯ