ನನ್ನ ಕನಸು
ಕನಸೊಂದು ಮನಸೊಂದಿಗೆ ಬೆರೆತ ಸಮಯ, ಸಪ್ತಪದಿ ತುಳಿಯುತ ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸುವ ಅವಸರದಲ್ಲಿ, ನಿನ್ನ ಕಾಲು ತುಳಿದಾಗ ನೀನು ತಿರುಗಿ ನನ್ನ ಕಡೆ ಚೆಲ್ಲಿದ ಆ ತುಂಟ ಕಿರುನಗೆಯಷ್ಟೇ ಸುಂದರ ಅನಿಸಿತು. ಮುಂದಿನ ನಮ್ಮ ಜೀವನ ಹೆಣ್ಣಲ್ಲವೇ ನಾ ನು? ನನಗೂ ಕನಸುಗಳು ಇದ್ದವೂ, ನನ್ನ ವರಿಸುವವನು "ಹುಚ್ಚ"ನಂತೆ ಪ್ರೀತಿಸಬೇಕು, ಹೆಚ್ಚಾಗಿ ಭಾವನೆಗಳನ್ನು ಗೌರವಿಸಬೇಕು, ಮಗುವಿನ ಹಾಗೆಯೇ ನೋಡಿಕೊಳ್ಳಬೇಕು, ಅಂತವನ ಜೊತೆ ನಾ ಬೆರೆತು, ಸೀತಾ ಮಾತೆಯಂತೆ ಪತಿಯೇ ದೇವರೆಂಬಂತೆ ಸುಖ ದುಃಖಕ್ಕೆ ಜೊತೆಯಾಗಿ, ನಗುತ ತುಂಟಾಟವಾಡುತ ಜೀವನ ನೌಕೆಯನ್ನು ಪರಸ್ಪರ ಪ್ರೀತಿಯಿಂದ ನಡೆಸಿ, ಈ ಜೀವದ ಕೊನೆಯ ಶ್ವಾಸವೂ, ಅವನ ತೊಳಲ್ಲೇ ಕಣ್ಮುಚ್ಚಿ ಮಲಗಿ ಮುಗಿಸಬೇಕೆಂದು ಅಂತೆಲ್ಲಾ ಕನಸು ಕಟ್ಟಿಕೊಂಡ, ಕಠುವಾದ ಭಾರತೀಯ ಸಂಸ್ಕ್ರತೀ ಮನೆಯ ಕಲಿಯುಗದ ಹೆಣ್ಣು ಮಗಳು ನಾನು. ಅಪ್ಪ ಅಮ್ಮ ನ ಇಷ್ಟದಂತೆ, ಅವರು ನಡೆಸಿದ ದಾರಿಯಲ್ಲಿ ನಡೆದು, ಅವರಿಷ್ಟದಂತೆ ಓದಿ ಪದವಿ ಪಡೆದು ಮುಗಿಸಿ, ಈಗಲೂ ಅವರಿಷ್ಟ ಪಟ್ಟಂತೆ ನಿಗದಿಯಾದ ಮದುವೆಗೆ, ಮುಕ್ತ ಮನಸ್ಸಿನಂದಲೆ ಒಪ್ಪಿ, ಈಗ ಹಸೆಮಣೆಯ ಮೇಲೆ ಕುಳಿತಿದ್ದೇನೆ. ಹೃದಯವೂ ಒಲವಿನ ಗೀತೆ ಹಾಡುತಿದೆ, ಮನಸು ಮರ್ಕಟದಂತೆ ಕುಣಿಯುತಿದೆ, ಒಂದೊಮ್ಮೆ ಭಯವೂ, ಖುಷಿಯೂ ಸಮ್ಮಿಶ್ರ ಭಾವ ಮನಸಿನ ಪುಟದಲಿ ಜೋಕಾಲಿ ಆಡುತ್ತಿದೆ. ಇಷ್ಟೇಲ್ಲ ಯೋಚಿಸುವಾಗ ಯಾರೋ ಕರೆದಂತಾಯಿತು ಕನಸ್ಸು ಕಂಡಿದ್ದು ಸಾಕು, ಏಳು ಬೇಗ ರೆಡಿಯಾಗು, ನಿನ್ನ ಅಕ್ಕನ(ದೊಡ್ಡಪ್ಪನ ಮಗಳ) ಮದುವೆಗೆ ಹೋಗಬೇಕು ...ಅಂದರು ಅಮ್ಮ *ಮಹಾಲಕ್ಷ್ಮಿ*
#

ನನ್ನ ಕನಸು

ನನ್ನ ಕನಸು - withra - ShareChat
718 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post