Nandan B M
1K views • 1 days ago
#rss #ಭಾರತ #✍🏻ದೇಶಭಕ್ತಿ ಶಾಯರಿ.
ಆತ್ಮೀಯ ಕಾರ್ಯಕರ್ತ ಬಂಧುಗಳೇ ,
ತಮಗೆಲ್ಲ ತಿಳಿದಿರುವ ಹಾಗೆ ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಇದರ ಶತಾಬ್ದಿ ವರ್ಷ (100 ವರ್ಷ).
ಸಂಘದ ಶತಾಬ್ದಿ ವರ್ಷದಲ್ಲಿ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಿಂದೂ ಸಮಾಜದ ನಡುವೆ ಹಾಗೂ ಸಂಘ ವಿಸ್ತಾರದ ಬಗ್ಗೆ ಹಲವಾರು ಯೋಜನೆಗಳನ್ನು ಕಳೆದ ಎರಡು ವರ್ಷಗಳಿಂದ ಸಂಘದ ಪ್ರಮುಖರು ಚಿಂತಿಸಿ, ನೂರಾರು ಕಾರ್ಯಕ್ರಮಗಳನ್ನು ಈ ಶತಾಬ್ದಿ ವರ್ಷದಲ್ಲಿ ನಡೆಯಬೇಕು ಎನ್ನುವ ಹಂಬಲದೊಂದಿಗೆ ಶ್ರಮಿಸುತ್ತಿದ್ದಾರೆ .
ಇದರಲ್ಲಿ ಬಹಳ ಪ್ರಮುಖವಾಗಿ ಸಮಾಜದಲ್ಲಿ ಆಗಬೇಕಾದ ಸಾಮಾಜಿಕ ಪರಿವರ್ತನೆ, ವಿಶೇಷವಾಗಿ ವ್ಯಕ್ತಿ, ಕುಟುಂಬ ಮತ್ತು ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಯ ಬಗ್ಗೆ ಸಂಘ ಯೋಚಿಸಿದೆ. ಅವುಗಳನ್ನು
*ಪಂಚ ಪರಿವರ್ತನೆ* ಎಂಬುವ ನೆಲೆಯಲ್ಲಿ ಯೋಚಿಸಲಾಗಿದೆ.
ಅವುಗಳೆಂದರೆ
1. ಸಾಮಾಜಿಕ ಸದ್ಭಾವ 2. ಕುಟುಂಬ ಪ್ರಬೋಧನ್ 3. ಸ್ವದೇಶಿ 4.ಪರಿಸರ ಸಂರಕ್ಷಣೆ
5. ನಾಗರಿಕ ಕರ್ತವ್ಯ
ಹೀಗೆ ಐದು ಭಾಗಗಳಲ್ಲಿ ನಾವು ಕಾರ್ಯವನ್ನು ಮಾಡಬೇಕಾಗಿದೆ. ಹಾಗೆಯೇ ಸಂಘದ ವಿಸ್ತಾರದ ಬಗ್ಗೆಯೂ ಕೂಡ ವಿಶೇಷ ಪ್ರಯತ್ನಗಳು ನಾವು ನಡೆಸಬೇಕಾಗುತ್ತದೆ. ಈಗ ತುರ್ತಾಗಿ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ತಮಗೆ ತಿಳಿಸಲು ಬಯಸುತ್ತೇನೆ.
ನಮ್ಮ ನಿವಾಸ/ ಗ್ರಾಮದ ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ /ಮಿಲನ್ ಇದರ ಮುಖ್ಯ ಶಿಕ್ಷಕ_ ಕಾರ್ಯವಾಹ ಅಥವಾ ಇನ್ನಿತರದ ಸಂಘದ ಜವಾಬ್ದಾರಿ ಕಾರ್ಯಕರ್ತರು ಯಾರು ಎಂದು ತಿಳಿದುಕೊಂಡು, ಅವರನ್ನು ಭೇಟಿ ಮಾಡಿ, ನಿಮ್ಮ ಪರಿಚಯ ಮಾಡಿಕೊಂಡು ಶತಾಬ್ದಿ ವರ್ಷದಲ್ಲಿ ನಮ್ಮ ಸಹಭಾಗಿತ್ವದ ಬಗ್ಗೆ ತಿಳಿಸಬೇಕು.
ಮೊದಲು ಗಣವೇಶ ಸಿಗುವ ಸ್ಥಳ ತಿಳಿದು ನಾವೆಲ್ಲರೂ ಸಂಘದ ಗಣವೇಶವನ್ನು ಖರೀದಿಸಬೇಕು. ಈಗಾಗಲೇ ಗಣವೇಶ ಇದ್ದಲ್ಲಿ ಒಮ್ಮೆ ಎಲ್ಲವೂ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯವಾದವುಗಳನ್ನು ಖರೀದಿಸಿ ಸಿದ್ದಪಡಿಸಿಕೊಳ್ಳಬೇಕು. ನಮ್ಮ ಕುಟುಂಬ ಮತ್ತು ಸ್ನೇಹಿತರ ವರ್ಗದಲ್ಲಿರುವ ಎಲ್ಲರಿಗೂ ಗಣವೇಶ ಖರೀದಿಸುವಂತೆ ತಿಳಿಸಬೇಕು. ಈಗಾಗಲೇ ಸಂಘವು ಅನೇಕ ಕಡೆಗಳಲ್ಲಿ ಗಣವೇಶ ಸಿಗುವ ಬಂಡಾರಗಳನ್ನು (Shop) ಸ್ಥಾಪಿಸಿದೆ.
ಶತಾಬ್ದಿ ವಿಜಯದಶಮಿ ಉತ್ಸವ ಅಕ್ಟೋಬರ್ 2 ರಂದು ನಡೆಯಲಿದೆ. ನಾವೆಲ್ಲರೂ ಕೂಡ ಕಡ್ಡಾಯವಾಗಿ ನಮ್ಮ ಸಮೀಪದದಲ್ಲಿ ನಡೆಯುವ ವಿಜಯದಶಮಿ ಉತ್ಸವ ಸ್ಥಳ, ಸಮಯ ತಿಳಿದುಕೊಂಡು ಭಾಗವಹಿಸಬೇಕು. ನಮ್ಮ ಸ್ನೇಹಿತರು ಮತ್ತು ನಮ್ಮ ಕುಟುಂಬದ ಎಲ್ಲಾ ಪುರುಷರು ಮತ್ತು ಮಹಿಳೆಯರು ಕೂಡ ಈ ಶತಾಬ್ದಿ ವರ್ಷದ ವಿಜಯದಶಮಿ ಉತ್ಸವದಲ್ಲಿ ಭಾಗವಹಿಸುವಂತೆ ತಿಳಿಸಬೇಕು.
ಶತಾಬ್ದಿ ವಿಜಯದಶಮಿಯ ಹಿನ್ನೆಲೆಯಲ್ಲಿ 'ಪಥಸಂಚಲನ' (Route March ) ನಡೆಯಲಿದೆ.
ಸಾಮಾನ್ಯವಾಗಿ ವಿಜಯದಶಮಿ ಉತ್ಸವ ಆದ 6-7 ದಿನಗಳಲ್ಲಿ ಆಯಾ ಭಾಗದಲ್ಲಿ ಪಥಸಂಚಲನ ಅಯೋಜಿಸಿರುತ್ತಾರೆ. ಭಾರತೀಯ ಜನತಾ ಪಾರ್ಟಿ ಜವಾಬ್ದಾರಿ ಇರುವ ನಾವೆಲ್ಲರೂ ಕೂಡ ಈ ಪಥ ಸಂಚಲನದಲ್ಲಿ ಭಾಗವಹಿಸಬೇಕು. ಹಾಗೂ ನಮ್ಮ ಸ್ನೇಹಿತರನ್ನು, ನಮ್ಮ ಕುಟುಂಬ ವರ್ಗದಲ್ಲಿರುವ ಎಲ್ಲಾ ಬಾಲಕ, ತರುಣ ಹಾಗೂ ಎಲ್ಲ ಹಿರಿಯ ಸ್ವಯಂಸೇವಕರನ್ನು ಈ ಪಥಸಂಚನದಲ್ಲಿ ಭಾಗವಹಿಸುವಂತೆ ತಿಳಿಸಬೇಕು.
ಸ್ನೇಹಿತರೇ,
ತಮಗೆಲ್ಲ ತಿಳಿದಿರುವ ಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮ್ಮ ಮಾತೃ ಸಂಸ್ಥೆಯಾಗಿದೆ. ಇದರ ಶತಾಬ್ದಿಯಾದ ಈ ವರ್ಷದಲ್ಲಿ ನಾವೆಲ್ಲರೂ ಕೂಡ ಸಾಕಷ್ಟು ಸಮಯವನ್ನು ಇದಕ್ಕಾಗಿ ಮುಡಿಪಾಗಿಡೋಣ, ಶತಾಬ್ದಿ ವರ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಯತ್ನಿಸೋಣ.
ಶತಾಬ್ದಿ ವರ್ಷ ಯಶಸ್ವಿಯಾಗಿ ಪೂರೈಸಲು ನಮ್ಮ ಶ್ರಮ, ಸಮಯ ನೀಡಿ ಯಶಸ್ವಿಗೊಳಿಸೋಣ.
57 likes
149 shares