inspire youth
#

🕺🏾 ടിക് ടോക്ക് വീഡിയോസ്

133 ವೀಕ್ಷಿಸಿದ್ದಾರೆ
6 ತಿಂಗಳ ಹಿಂದೆ
#

inspire youth

214 ವೀಕ್ಷಿಸಿದ್ದಾರೆ
8 ತಿಂಗಳ ಹಿಂದೆ
#

inspire youth

155 ವೀಕ್ಷಿಸಿದ್ದಾರೆ
8 ತಿಂಗಳ ಹಿಂದೆ
#

inspire youth

ಮೈಸೂರು, ಮಾರ್ಚ್ 7: ಆಕೆಯ ಕಣ್ಣೆದುರಲ್ಲೇ ಮುರಿದು ಬಿದ್ದ ಆಕೆಯ ಕಾಲನ್ನು ಇಲಿಗಳು ತಿನ್ನುತ್ತಿದ್ದರೆ ಆಗುವ ಯಮಯಾತನೆ ಕಡಿಮೆಯೇ? ವಿಧಿಯ ಲೆಕ್ಕವಿಲ್ಲದಷ್ಟು ಪರಿಹಾಸ್ಯವನ್ನು ತಾಳ್ಮೆಯಿಂದ ಸ್ವೀಕರಿಸಿ ಇಂದು ಸಾಧನೆಯ ಎವರೆಸ್ಟ್ ಹತ್ತಿನಿಂತಿರುವ ಅರುಣಿಮಾ ಸಿನ್ಹಾ ಅವರ ಬದುಕಿನ ಯಶೋಗಾಥೆ ಇಲ್ಲಿದೆ. ಮಾರ್ಚ್ 8 ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಒನ್ ಇಂಡಿಯಾದೊಡನೆ ಮಾತಿಗಿಳಿದ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದು ಬೆಲೆಕಟ್ಟಲಾಗದಷ್ಟು ಅನುಭವಗಳನ್ನ... ಅರುಣಿಮಾ, ನಿಮ್ಮ ಹಿನ್ನೆಲೆ ಹಾಗೂ ಆ ದುರ್ಘಟನೆಯ ಬಗ್ಗೆ ತಿಳಿಸುವಿರಾ…? ಅಂದು 2011 ಲಕ್ನೋ ದಿಂದ ದೆಹಲಿಯ ಕಡೆಗೆ ಚಲಿಸುತ್ತಿದ್ದ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಚಲಿಸುತ್ತಿದ್ದೆ. ನಾಲ್ಕು ಜನ ಕಳ್ಳರು ನನ್ನ ಕತ್ತಿನಲ್ಲಿರುವ ಚಿನ್ನದ ಸರಕ್ಕೆ ಕೈಹಾಕಿದ್ದರೂ ಪ್ರಯಾಣಿಕರೆಲ್ಲ ಜನರಲ್ ಕಂಪಾರ್ಟ್ ಮೆಂಟಿನಲ್ಲಿ ಇವೆಲ್ಲ ಮಾಮೂಲು ಎಂಬಂತೆ ಕೂತಿದ್ದರು. ಆ ನಾಲ್ಕು ಪೈಲ್ವಾನರ ಮುಂದೆ ನನ್ನ ಪ್ರತಿತರೋಧ ಯಾವ ಲೆಕ್ಕ? ಕೇವಲ ಸರ ಕದ್ದು ಪರಾರಿಯಾಗಿದ್ದರೆ ಒಂದೆರಡು ದಿನ ಮರುಗುತ್ತಿದ್ದೆ. ಆದರೆ ಅವರು ರೈಲಿನಿಂದಲೇ ನನ್ನನ್ನು ನೂಕಿ ಜೀವನ ಪೂರ್ತಿ ಮರೆಯಲಾಗದಂಥ ಶಾಪವೊಂದನ್ನು ಕೊಟ್ಟು ಹೋಗಿದ್ದರು. ರೈಲಿನಿಂದ ಬಿದ್ದು ಏನಾಗುತ್ತಿದೆ ಎಂದು ಯೋಚಿಸುವ ಮೊದಲೇ ಪಕ್ಕದ ಕಂಬಿಯ ಮೇಲೆ ಬಿದ್ದಿದ್ದ ನನ್ನ ಕಾಲನ್ನು ಮತ್ತೊಂದು ರೈಲು ನಿರ್ದಯವಾಗಿ ತುಂಡರಿಸಿಕೊಂಡು ಹೋಗಿತ್ತು. ನನ್ನ ಕಣ್ಣೆದುರಲ್ಲೇ ಮುರಿದು ಬಿದ್ದ ನನ್ನ ಕಾಲನ್ನು ಇಲಿಗಳು ತಿನ್ನುತ್ತಿದ್ದರೆ, ಯಮಯಾತನೆ ನನಗೆ. ಬರೋಬ್ಬರಿ 7 ತಾಸು ರೈಲ್ವೇ ಕಂಬಿಗಳ ನಡುವೆ ಅರೆಪ್ರಜ್ಞಾವಸ್ಥೆಯಲ್ಲೇ ಮಲಗಿದ್ದೆ. ಒಂಟಿಕಾಲಿನ ಭವಿಷ್ಯ ನೆನೆದು ಮರುಗುವುದಲ್ಲದೆ ನನಗೆ ಬೇರೆ ದಾರಿ ಇರಲಿಲ್ಲ. ವಿಶ್ವದ ಅತಿಎತ್ತರದ ಮೌಂಟ್ ಎವರೆಸ್ಟ್ ಏರುವ ಕಲ್ಪನೆ ಮೂಡಿದ್ದು ಹೇಗೆ..? ಒಂದು ಕಾಲು ಕಳೆದುಕೊಂಡಾಗ ತುಂಬಾ ದುಃಖವಾಗಿತ್ತು. ಆದರೆ, ಧೃತಿಗೆಡಲಿಲ್ಲ. ನನ್ನ ಸ್ಥಿತಿ ನೋಡಿ ಕುಟುಂಬದವರು ಅನುಕಂಪ ತೋರಿಸುತ್ತಿದ್ದರು. ಆದರೆ, ನನಗೆ ಅನುಕಂಪ ಬೇಕಿರಲಿಲ್ಲ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೌಂಟ್ ಎವರೆಸ್ಟ್ ಪರ್ವತಾರೋಹಣದ ಒಂದು ಲೇಖನ ನನ್ನ ಗಮನ ಸೆಳೆಯಿತು. ಕನಸು ಚಿಗುರೊಡೆಯುವುದಕ್ಕೆ ಅಷ್ಟು ಸಾಕಿತ್ತು. ಮಹಿಳಾ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರನ್ನು ಸಂಪರ್ಕಿಸಿದ ನಂತರ ಕನಸು ನನಸಾಗುವ ಭರವಸೆ ಸಿಕ್ಕಿತ್ತು. ಅಂದು ಮಾಧ್ಯಮಗಳು ಲೇವಡಿ ಮಾಡಿದಾಗಿನ ಕಹಿಅನುಭವದ ಬಗ್ಗೆ ಹೇಳುತ್ತೀರಾ? ವಾಸ್ತವ ಗೊತ್ತಿಲ್ಲದಿದ್ದರೂ, ಆಕೆ ಟಿಕೇಟ್ ತೆಗೆದುಕೊಂಡಿರಲಿಲ್ಲ, ಅದಕ್ಕೆಂದೇ ಟಿಸಿ ಬಂದೊಡನೆ ಅವಳೇ ರೈಲಿನಿಂದ ಹಾರಿದಳು ಎಂದು ಕೆಲವರು ಬರೆದರು. ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು, ಅದಕ್ಕೆಂದೇ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದರು. ಇಂಥ ಮಾತುಗಳು ನನ್ನಲ್ಲಿ ಮತ್ತಷ್ಟು ಕಿಚ್ಚು ಹತ್ತಿಸುತ್ತಿದ್ದವು. ತರಬೇತಿ ಸಮಯದಲ್ಲಿ ಪಟ್ಟ ಕಷ್ಟ ಹೇಗಿತ್ತು..? ಕಷ್ಟ, ಹಾಗಂದರೇನು? ಒಬ್ಬ ವ್ಯಕ್ತಿಗೆ ಆತ್ಮವಿಶ್ವಾಸಕ್ಕಿಂತ ಯಾವುದು ದೊಡ್ಡದ್ದಲ್ಲ. 2012ರ ಮಾರ್ಚ್‌ನಲ್ಲಿ ಬಚೇಂದ್ರಿ ಪಾಲ್ ಅವರ ಮಾರ್ಗದರ್ಶನದಲ್ಲಿ ನನ್ನ ತರಬೇತಿ ಶುರುವಾಯಿತು.. ಜತೆಯಲ್ಲಿದ್ದ ಇತರರು ನನಗಿಂತ ಬೇಗ ಪರ್ವತ ಏರುತ್ತಿದ್ದರು. ಆದರೆ, ನಾನು ಮಾತ್ರ ಕೊನೆಯಲ್ಲಿರುತ್ತಿದ್ದೆ. ಆದರೆ, ಸತತ ಪ್ರೋತ್ಸಾಹ ಮತ್ತು ಕಠಿಣ ಶ್ರಮದಿಂದ ನಾನೂ ಇತರರಂತೆ ಶೀಘ್ರವಾಗಿ ಪರ್ವತ ಏರಲು ಕಲಿತೆ. ಅಷ್ಟೇ ಅಲ್ಲ, ಕೆಲವೊಮ್ಮೆ ಅವರಿಗಿಂತ ಮೊದಲೇ ನಾನು ಪರ್ವತ ಏರುವ ಗುರಿ ಮುಟ್ಟುತ್ತಿದ್ದೆ. ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಅದನ್ನು ಗಮನಿಸದೇ ನನ್ನ ತರಬೇತಿ ಮುಗಿಸಿದೆ. ಬಚೇಂದ್ರಿ ಪಾಲ್ ಅವರ ಸತತ ಪ್ರೋತ್ಸಾಹ, ಮಾರ್ಗದರ್ಶನದಿಂದಾಗಿ ಯಶಸ್ವಿಯಾಗಿ ತರಬೇತಿ ಮುಗಿಸಿದೆ. ನಿಮ್ಮಲ್ಲಿನ ಯಾವ ಗುಣವನ್ನು ನೀವು ತುಂಬಾ ಇಷ್ಟಪಡುತ್ತಿರಾ…? ನಮ್ಮನ್ನು ನಾವು ಪ್ರೀತಿಸಬೇಕು... ನಅನೂ ನನ್ನನ್ನು ಪ್ರೀತಿಸಿದೆ. ಎವರೆಸ್ಟ್ ಹತ್ತುವುದು ನನ್ನ ಕನಸಾದರೆ ನನ್ನ ಆತ್ಮವಿಶ್ವಾಸ ಎವರೆಸ್ಟ್ ಕಿಂತ ಎತ್ತರದಲ್ಲಿತ್ತು! ಡೆತ್ ಜೋನ್ ಎಂಬ ಕಠಿಣ ಸ್ಥಳವನ್ನೂ ದಾಟಿ ನಾನು ಮುಂದೆ ಹೋಗಿದ್ದೆ ಮಧ್ಯೆ ನನ್ನ ಆರೋಗ್ಯ ಕೈಕೊಟ್ಟರೂ ನಾನು ಹೆಜ್ಜೆಯನ್ನು ಹಿಂದಿಡುವ ಯೋಚನೆಯನ್ನೂ ಮಾಡಲಿಲ್ಲ. ಸತತ 1,055 ಗಂಟೆಗಳ ನನ್ನ ಶ್ರಮ ಕೊನೆಗೂ ಫಲ ನೀಡಿತ್ತು. ಅಂದು ಮೇ 21. ನಾನು ಜಗತ್ತಿನ ಅತ್ಯಂತ ಎತ್ತರದ ಹಿಮಾಲಯ ಪರ್ವತ ಮೌಂಟ್ ಎವರೆಸ್ಟ್‌ನ ದಕ್ಷಿಣ ತುದಿಯಲ್ಲಿ ನಿಂತಿದ್ದೆ. ನನ್ನ ಕನಸು ನನಸಾಗಿತ್ತು. ಮೌಂಟ್ ಎವರೆಸ್ಟ್‌ ತಲುಪಿದ ಆ ಕ್ಷಣ ಹೇಗಿತ್ತು? ಆರಂಭದಲ್ಲಿ ಮೌಂಟ್ ಎವರೆಸ್ಟ್‌ನ ತುದಿ ತಲುಪಿದಾಗ ನನಗೆ ನಂಬಿಕೆಯೇ ಬರಲಿಲ್ಲ. ನಂತರ ನಿಧಾನವಾಗಿ ವಾಸ್ತವಕ್ಕೆ ಬಂದೆ. ಅಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿದ ಆ ಕ್ಷಣ ಬದುಕಿಗೆ ಇನ್ನೇನು ಬೇಕು ಅನ್ನಿಸಿತ್ತು. ಭಾವೋದ್ವೇಗಕ್ಕೊಳಗಾಗಿಬಿಟ್ಟಿದ್ದೆ. ಹೆಣ್ಣು ಇಂದು ತುಳಿತಕ್ಕೊಳಗಾಗುತ್ತಿದ್ದಾಳಾ..? ಖಂಡಿತ, ನಮ್ಮ ಸಮಾಜದಲ್ಲಿ ಹಲವರು ಹೆಣ್ಣನ್ನು ಕೇವಲ ಕಾಮದ ಸರಕನ್ನಾಗಿ ನೋಡುತ್ತಿದ್ದಾರೆ. ಆಕೆಯ ಬಟ್ಟೆಯ ಬಗ್ಗೆ ಟೀಕೆ ನಡೆಯುತ್ತದೆ. ಆದರೆ ಎಲ್ಲೂ ಆಕೆಯ ಪ್ರತಿಭೆಯ ಬಗ್ಗೆ ಚರ್ಚೆಯಾಗುವುದಿಲ್ಲ. ನಮ್ಮ ಸಮಾಜ ಮಹಿಳೆಗೆ ಸ್ವಾತಂತ್ರ್ಯ ನೀಡಲು ಇನ್ನೂ ಸಿದ್ಧವಿಲ್ಲ. ನಾನು ಚಿಕ್ಕವಳಿದ್ದಾಗ ಹಾಕಿಸ್ಟಿಕ್ ಹಿಡಿಯುವುದನ್ನು, ಟ್ರ್ಯಾಕ್ ಸೂಟ್ ಹಾಕುವುದನ್ನು ನಮ್ಮೂರಿನ ಜನರು ವಿಚಿತ್ರವಾಗಿ ನೋಡುತ್ತಿದ್ದರು. ನಾನು ಬಾಲ್ಯ ವಿವಾಹದ ಅನಿಷ್ಟಕ್ಕೂ ಬಲಿಯಾಗಿದ್ದೆ. 20 ದಿನಗಳಲ್ಲೇ ಅದನ್ನು ತಿರಸ್ಕರಿಸಿ ಹೊರಬಂದೆ. ಮಹಿಳಾ ದಿನದ ನಿಮ್ಮ ಸಂದೇಶ? ನಾನು ಹೆಣ್ಣುಮಕ್ಕಳಿಗೆ ಹೇಳುವುದಿಷ್ಟೇ. ನಿಮ್ಮದಲ್ಲದ ತಪ್ಪಿಗೆ ನೀವು ಬಲಿಯಾಗಬೇಡಿ.. ಥಾಮಸ್ ಅಲ್ವಾ ಎಡಿಸನ್ ಹೇಳುವಂತೆ, ಸಫಲರಾಗಿರ ಬೇಕಾದರೆ, ನಮ್ಮ ಪ್ರತಿಭೆಯ ಅಂಶ ಒಂದು ಪಾಲಾಗಿದ್ದರೆ, ಪರಿಶ್ರಮದ ಅಂಶ ತೊಂಬತ್ತೊಂಬತ್ತು ಎಂಬುದನ್ನು ಮರೆಯುವಂತಿಲ್ಲ. ಸಾವನ್ನು ಸವಾಲಾಗಿ ತೆಗೆದುಕೊಂದು ಬದುಕುವದೇ ಸಹಜ ಪರಿಕ್ರಮ. ನಿಮಗೆ ನೀವೇ ಆದರ್ಶಪ್ರಾಯರು. ಆಗಸವೂ ನಿಮ್ಮ ಮಿತಿಯಾಗದಿರಲಿ. ಮುಂದಿನ ನಿಮ್ಮ ಗುರಿ ಏನು...? ನಾನು ಏರಿರುವುದು ಕೆಲವೇ ಕೆಲವು ಪರ್ವತಗಳನ್ನು ಮಾತ್ರ.. ನನ್ನಲ್ಲಿ ಅಡಕವಾದ ಮತ್ತೊಂದು ಆಸೆ ಎಂದರೇ ವಿಶ್ವದ ಟಾಪ್ ಮೋಸ್ಟ್ ಗಿರಿ ಶ್ರೇಣಿಗಳನ್ನು ಏರಬೇಕೆಂಬುದನ್ನು. ಅದನ್ನು ಏರಿಯೇ ಏರುತ್ತೇನೆ.
367 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಯಾವುದೇ ಪೋಸ್ಟ್ಸ ಇಲ್ಲ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post