Edu ವೀರ
16K views • 11 hours ago
ನಟ ರಜನೀಕಾಂತ್ 'ಜೈಲರ್ 2' ಚಿತ್ರೀಕರಣದ ನಡುವೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಸಿನಿಮಾದ ಕೆಲಸದಿಂದ ವಿರಾಮ ಪಡೆದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರು. ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಧ್ಯಾನ ಮಾಡಿದರು. ಗಂಗಾ ನದಿಯ ದಡದಲ್ಲಿ ಆರತಿಯಲ್ಲಿ ಭಾಗವಹಿಸಿದರು. ನಂತರ ದ್ವಾರಾಹಾತ್‌ಗೆ ಪ್ರಯಾಣಿಸಿದರು. ರಸ್ತೆಬದಿಯಲ್ಲಿ ಸರಳವಾಗಿ ಊಟ ಸವಿದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರ ಸರಳ ಜೀವನಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಟ ರಜನೀಕಾಂತ್ ಅವರು ಆಗಾಗ ಹಿಮಾಲಯಕ್ಕೆ ಹೋಗಿ ಏಕಾಂತದಲ್ಲಿ ಕಾಲ ಕಳೆಯುತ್ತಾರೆ. ಇದೀಗ ಅವರು ಮತ್ತೊಮ್ಮೆ ಹಿಮಾಲಕ್ಕೆ ತೆರಳಿದ್ದಾರೆ. ಅಚ್ಚರಿಯೆಂದರೆ ಸಿಮಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ರಜನೀಕಾಂತ್ ತಮ್ಮ ಸಿನಿ ಜೀವನದಿಂದ ಒಂದು ಬ್ರೇಕ್ ಪಡೆದುಕೊಂಡಿದ್ದಾರೆ. ಸಿನಿಮಾದ ಗೋಜಲವನ್ನು ಬಿಟ್ಟು ಹಿಮಾಲಯದ ಪುಣ್ಯಕ್ಷೇತ್ರಗಳಲ್ಲಿ ಕಾಲಕಳೆಯುತ್ತಿದ್ದಾರೆ. ರಜನೀಕಾಂತ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಹಿಮಾಲಯದಲ್ಲಿ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡಿದ್ದಾರೆ. ಅವರು ಪರ್ವತಗಳಲ್ಲಿದ್ದ ಸಮಯದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. #👉ಹಿಮಾಲಯ ಯಾತ್ರೆಗೆ ಹೊರಟ ಸೂಪರ್ ಸ್ಟಾರ್😯
319 likes
10 comments • 251 shares