ವಾಲ್ಮೀಕಿ ಜಯಂತಿ
#

ವಾಲ್ಮೀಕಿ ಜಯಂತಿ

65 ವೀಕ್ಷಿಸಿದ್ದಾರೆ
19 ದಿನಗಳ ಹಿಂದೆ
#

ವಾಲ್ಮೀಕಿ ಜಯಂತಿ

1.1k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
#

ವಾಲ್ಮೀಕಿ ಜಯಂತಿ

276 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
#

ವಾಲ್ಮೀಕಿ ಜಯಂತಿ

🙏ವಾಲ್ಮೀಕಿ ಇತಿಹಾಸ🙏 ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ''. ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ 'ಆದಿಕವಿ' ಮಹರ್ಷಿ ವಾಲ್ಮೀಕಿಯ ಜಯಂತ್ಯುತ್ಸವವನ್ನು ಅಕ್ಟೋಬರ್‌ 24ರಂದು ಕರ್ನಾಟಕ ರಾಜ್ಯಾದ್ಯಂತ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು 'ಕವಿಗಳ ಕವಿ' ಎಂದು ಮಹಾಕವಿ ಕಾಳಿದಾಸ ಗೌರವಿಸಿದ್ದಾನೆ. ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್‌ ನೆಹರು ಅವರು ರಚಿಸಿರುವ 'ಡಿಸ್ಕವರಿ ಆಫ್‌ ಇಂಡಿಯಾ' ಪುಸ್ತಕದಲ್ಲಿ, ಜನರ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿರುವ ಮಹಾಕಾವ್ಯ ರಾಮಾಯಣ ಎಂಬುದಾಗಿ ಉಲ್ಲೇಖಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರು, ''ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಹಾಕವಿ ನಮಗೆ ದೊರೆತಿರುವುದು ಭುವನದ ಭಾಗ್ಯ,'' ಎಂದು ಬಣ್ಣಿಸಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲೇ ಸುದ್ದಿಗಳನ್ನು ಪಡೆಯಿರಿ ಸಬ್‌ಸ್ಕ್ರೈಬ್‌ ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು 24,000 ಶ್ಲೋಕಗಳನ್ನು ಹೊಂದಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ಜಗತ್ತಿನ ಪ್ರಸಿದ್ಧ ಲೇಖಕ ಮತ್ತು ವಿಮರ್ಶಕನಾದ ಟಿ.ಎಸ್‌. ಎಲಿಯೆಟ್‌, ''ನೂರು ವರ್ಷಗಳಿಗೊಮ್ಮೆ ಸಾಹಿತ್ಯ ಮತ್ತು ಸಾಹಿತಿಗಳನ್ನು ವಿಮರ್ಶೆ ಮಾಡುವ ಮತ್ತು ತುಲನೆ ಮಾಡುವ ಕಾಲ ಬರುತ್ತದೆ. ಆಗ ಸಾಹಿತ್ಯ ಮತ್ತು ಸಾಹಿತಿಗಳ ಜನಪ್ರಿಯತೆಯ ಸ್ಥಾನಮಾನ ಏರುಪೇರಾಗುತ್ತದೆ,'' ಎಂದು ಅಭಿಪ್ರಾಯ ಪಡುತ್ತಾನೆ. ಆದರೆ ರಾಮಾಯಣ ಮಹಾಕಾವ್ಯ ಮತ್ತು ಅದರ ಕರ್ತೃ ಮಹರ್ಷಿ ವಾಲ್ಮೀಕಿಯು ಅನಾದಿಕಾಲದಿಂದ ವರ್ತಮಾನದವರೆಗೂ ನಿರಂತರವಾಗಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದು ಜನಮಾನಸದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ವಾಲ್ಮೀಕಿ ರಾಮಾಯಣದ ಪ್ರಾರಂಭದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. ಯಾವತ್‌ ಸಾಸ್ಯಂತಿಗಿರಯಃ ಸರಿತಶ್ಚ ಮಹೀತಲೇ ತಾವದ್ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ ''ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ''. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯು ಅಮರಕವಿಯಾಗಿರುತ್ತಾರೆ.
1.5k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
#

ವಾಲ್ಮೀಕಿ ಜಯಂತಿ

*ಮಹರ್ಷಿ ವಾಲ್ಮೀಕಿ* ಸಾವಿರಾರು ವರ್ಷಗಳ ಹಿಂದೆ ಜನಿಸಿದ ಮಹರ್ಷಿ ವಾಲ್ಮೀಕಿ ಜಗತ್ತಿನ ಮೊಟ್ಟ ಮೊದಲ ಕವಿ. ಅದಕ್ಕಾಗಿಯೇ ವಾಲ್ಮೀಕಿಯನ್ನು ಆದಿ ಕವಿ ಎಂದು ಬಣ್ಣಿಸುತ್ತಾರೆ. ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯವನ್ನು ಬರೆದು ಹೆಚ್ಚಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಬೇಡ ಎನ್ನುವ ಪದದಲ್ಲಿ ಅದ್ಭುತವಾದ ಅರ್ಥವಿದೆ. ಬೇಡನೆಂದರೆ ಎಲ್ಲ ಕೆಟ್ಟ ಗುಣಗಳನ್ನು ನಿರಾಕರಿಸಿದವನು, ತಿರಸ್ಕರಿಸಿದವನು ಎಂಬ ಅರ್ಥವಿದೆ. ಮದ ಬೇಡ, ಮತ್ಸರ ಬೇಡ, ಮೋಹ ಬೇಡ, ಕಾಮ ಬೇಡ ಎಂದು ಹೇರುವದೇ ಬೇಡ ಎಂಬ ನಿಜವಾದ ಅರ್ಥವೆಂಬುದನ್ನು ನಾವು ಅರಿಯಬೇಕು. ತನ್ನ ಶಿಷ್ಯ ಭಾರದ್ವಾಜನೊಂದಿಗೆ ಗಂಗಾ ನದಿಗೆ ಸ್ನಾನಕ್ಕೆ ಹೊರಟಿದ್ದಾಗ ಅಲ್ಲಿದ್ದ ತಾಮಸ ಕೊಳದಲ್ಲಿ ಸ್ನಾನ ಮಾಡಲು ವಾಲ್ಮೀಕಿ ಬಯಸುತ್ತಾನೆ. ತಾಮಸ ಸರೋವರದ ಮೇಲಿನ ಮರದಲ್ಲಿ ಜೋಡಿ ಪಕ್ಷಿಗಳು ಸುಂದರವಾಗಿ ಹಾಡುತ್ತಾ ಕುಳಿತಿದ್ದನ್ನು ಕಂಡು ವಾಲ್ಮೀಕಿಗೆ ಸಂತೋಷವಾಗುತ್ತದೆ. ಆದರೆ ಆ ಸಂತೋಷ ಕೆಲವೇ ಕ್ಷಣಗಳಲ್ಲಿ ಮಾಯವಾಗಿಬಿಡುತ್ತದೆ. ಒಬ್ಬ ಬೇಡಗಾರನ ಬಾಣ ಗಂಡು ಪಕ್ಷಿಗೆ ತಾಗಿ ಅದು ದುಃಖಿಸುತ್ತಾ ನೆಲಕ್ಕೆ ಬೀಳುತ್ತದೆ. ಅದನ್ನು ಕಂಡು ಹೆಣ್ಣು ಪಕ್ಷಿ ದುಃಖಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಮಾಯವಾದ ಸಂತೋಷಕ್ಕೆ ಬೇಟೆಗಾರನ ಹಿಂಸೆ ಎಂಬುದನ್ನು ವಾಲ್ಮೀಕಿ ಅರಿಯುತ್ತಾನೆ. ಬಿಲ್ಲು ಬಾಣಗಳ ಸಮೇತ ಬಂದ ಬೇಟೆಗಾರನಿಗೆ ಹೇಳುತ್ತಾನೆ. ನೋಡು ಯಾವುದೇ ತಪ್ಪು ಮಾಡದೇ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಪಕ್ಷಿಯನ್ನು ನೀನು ಕೊಂದಿದ್ದಕ್ಕೆ ಅದಕ್ಕಾಗಿ ನೀನು ಜೀವನ ಪರ್ಯಂತ ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿ ಎಂದು ಹೇಳುವುದರ ಮೂಲಕ ಮೊದಲ ಶ್ಲೋಕವನ್ನು ರಚಿಸುತ್ತಾನೆ. ಮಾನಿಯಾದ ಎಂಬ ಶ್ಲೋಕವೇ ಮೊಟ್ಟ ಮೊದಲ ಸಂಸ್ಕೃತ ಕಾವ್ಯವಾಗಿದೆ ಎಂಬುದನ್ನು ಇತಿಹಾಸ ಹೇಳುತ್ತದೆ. ಹಿಂಸೆ ಒಳ್ಳೆಯದಲ್ಲ ಎಂಬ ಅಹಿಂಸಾ ತತ್ವವನ್ನು ವಾಲ್ಮೀಕಿ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದಾನೆ. ಅದೇ ತತ್ವವನ್ನು ಹಿಡಿದ ಬುದ್ದ-ಬಸವ-ಗಾಂಧೀಜಿ ಈ ಜಗತ್ತನ್ನು ಗೆದ್ದಿದ್ದಾರೆ. ಅದನ್ನೇ ಬಸವಣ್ಣ ಕಳಬೇಡ, ಕೊಲಬೇಡ ಎಂದು ಹೇಳಿದ್ದಾನೆ. ಗಾಂಧೀಜಿ ಅಹಿಂಸೆಯೇ ಧರ್ಮ ಎಂದು ಹೇಳಿದ್ದಾರೆ. ರಾಮಾಯಣದ ಇಪ್ಪತ್ತಾಲ್ಕು ಸಾವಿರ ಶ್ಲೋಕಗಳು ಏಳು ಕಾಂಡಗಳು ಸಾವಿರಾರು ಪಾತ್ರಗಳನ್ನು ಸೃಷ್ಟಿ ಮಾಡಿವೆ. ಅಲ್ಲಿ ಬರುವ ರಾಮ-ರಾವಣ, ಸೀತೇ, ಲಕ್ಷ್ಮಣ, ಶೂರ್ಪನಕಿ, ಹನುಮಂತ ಕೇವಲ ಸಂಕೇತಗಳು. ಆ ಎಲ್ಲ ಪಾತ್ರಗಳು ನಮ್ಮಲ್ಲಿಯೇ ಅಡಗಿವೆ ಎಂಬುದನ್ನು ವಾಲ್ಮೀಕಿ ಹೇಳುತ್ತಾನೆ. ರಾಮನ ಪಾತ್ರ ತ್ಯಾಗ ಮತ್ತು ಒಳ್ಳೆಯತನವನ್ನು ಸೂಚಿಸುತ್ತದೆ. ರಾಮನು ತಮ್ಮನ ಸಲುವಾಗಿ ಸಿಂಹಾಸನವನ್ನೇ ತ್ಯಾಗ ಮಾಡಿ ಕಾಡಿಗೆ ತೇರಳುತ್ತಾನೆ. ರಾಮನ ತ್ಯಾಗ, ತಾಯ ಮೇಲಿನ ಪ್ರೀತಿ ಅವನ ಶ್ರೇಷ್ಠತೆಯನ್ನು ಸಾರುತ್ತವೆ. ಬಾಲ ಕಾಂಡ, ಅಯೋಧ್ಯ ಕಾಂಡ, ಅರಣ್ಯ ಕಾಂಡ, ಕ್ಟಿಂದ ಕಾಂಡ ಹಾಗೂ ಸುಂದರ ಕಾಂಡ, ಯುದ್ದ ಕಾಂಡ ಹಾಗೂ ಉತ್ತರ ಕಾಂಡಗಳ ಮೂಲಕ ಇಡೀ ರಾಮಾಯಣವನ್ನು ವಿವರಿಸಲಾಗಿದೆ. ಇದು ಜಗತ್ತಿನ ಮೊಟ್ಟ ಮೊದಲ ದೊಡ್ಡ ಮಹಾಕಾವ್ಯ ಎಂಬ ಕೀರ್ತಿಯನ್ನು ಗಳಿಸಿಕೊಂಡಿದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನುಷ್ಯನಲ್ಲಿ ಅಡಗಿರುವ ಗುಣಗಳನ್ನು ಹೇಳುತ್ತವೆ. ಇಲ್ಲಿ ಬರುವ ಎಲ್ಲ ಪಾತ್ರಗಳಿಗೆ ಅವುಗಳದೇ ಆದ ಒಳ್ಳೆಯ ಕೆಟ್ಟ ಗುಣಗಳಿರುತ್ತವೆ. ಆದರೆ ಅವುಗಳನ್ನು ನಾಶ ಮಾಡಿ ಹೇಗೆ ಒಳ್ಳೆಯರಾಗಬೇಕು ಎಂಬುದೇ ಈ ಮಹಾಕಾವ್ಯದ ಉದ್ದೇಶ. ಅನೇಕ ಕಾರಣಗಳಿಂದಾಗಿ ಶ್ರೀರಾಮನನ್ನು ಮರ್ಯಾದಾ ಪುರುಷನೆಂದು ಕರೆಯುತ್ತೇವೆ. ಆತನಲ್ಲಿ ಅಡಗಿದ್ದ ಪ್ರೀತಿ-ವಿಶ್ವಾಸ ತ್ಯಾಗ ಒಬ್ಬ ವ್ಯಕ್ತಿಯಲ್ಲಿ ಹೇಗೆ ಶಾಶ್ವತವಾಗಿ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಎಂಬುದಕ್ಕೆ ಸಾಕ್ಷಿ. ಇಂದು ಜಗತ್ತು ಶ್ರೀರಾಮನ ಶ್ರೇಷ್ಠ ಮೌಲ್ಯಗಳಿಗಾಗಿಯೇ ಗಾಂಧೀಜಿ ಪ್ರಾಣ ಬಿಡುವಾಗ ಹೇರಾಮ್ ಎಂದರು. ಶ್ರೀರಾಮನ ಪಾತ್ರ ಅವನಲ್ಲಿನ ಶ್ರೇಷ್ಠ ಗುಣ ಗಾಂಧೀಜಿಯವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಒಬ್ಬ ರಾಜಕುಮಾರನಾಗಿ ರಾಮ ಕಾಡಿನಲ್ಲಿ ಹದಿನಾಲ್ಕು ವರ್ಷ ವನವಾಸವನ್ನು ಅನುಭವಿಸುತ್ತಾನೆ. ಆಗ ಜೀವನದ ಕಷ್ಟಗಳೇನು ಎಂಬುದನ್ನು ಅರಿತುಕೊಂಡು ಪರಿಪೂರ್ಣ ಮನುಷ್ಯನಾಗುತ್ತಾನೆ. ನಮ್ಮ ಬದುಕಿನಲ್ಲಿಯೂ ಕಷ್ಟ, ನೋವುಗಳು ಬಂದಾಗ ನಾವು ಶ್ರೀರಾಮನ ವನವಾಸದ ಅರಣ್ಯ ಕಾಂಡವನ್ನು ಓದಿದರೆ ಸಾಕು ನಮ್ಮ ಕಷ್ಟಗಳೆಲ್ಲ ಮಾಯವಾಗುತ್ತವೆ. ಶ್ರೀರಾಮನಂತಹ ರಾಜಕುಮಾರನಿಗೆ ಅಷ್ಟೊಂದು ರೀತಿಯ ಕಷ್ಟಗಳಿದ್ದ ಮೇಲೆ ನಮ್ಮದು ಯಾವ ಲೆಕ್ಕ ಅನಿಸಿ ಸಮಾಧಾನ ಸಿಗುತ್ತದೆ. ವಾಲ್ಮೀಕಿಯ ಉದ್ದೇಶ ಕೂಡಾ ಅದೇ ಆಗಿತ್ತು. ಜೀವನವೆಂದ ಮೇಲೆ ಕಷ್ಟಗಳು ಬಂದೇ ಬರುತ್ತವೆ. ನಾವು ಅವುಗಳನ್ನು ಧೈರ್ಯದಿಂದ ಎದುರಿಸಬೇಕು ಎಂಬುದೇ ಆಗಿದೆ. ರಾವಣನು ಸೀತೆಯನ್ನು ಅಪಹರಿಸದೇ ಹೋಗಿದ್ದರೆ ರಾವಣನ ಕೆಟ್ಟ ಗುಣಗಳು ಹಾಗೆಯೇ ಉಳಿದು ಬಿಡುತ್ತಿದ್ದವು. ರಾವಣನಲ್ಲಿ ಅಹಂಕಾರ, ಪೂಜಾಫಲ ಎರಡನ್ನೂ ಕವಿ ಸುಂದರವಾಗಿ ವರ್ಣಿಸುತ್ತಾನೆ. ಆದರೆ ಅವನ ಅಹಂಕಾರ ಅವನ ಪೂಜಾಫಲವನ್ನು ಹಾಳುಮಾಡುತ್ತದೆ. ಪರರ ಧನ, ಪರರ ಸ್ತ್ರೀಯನ್ನು ಅಪಹರಿಸುವುದು ಒಳ್ಳೆಯದಲ್ಲ ಎಂಬುದನ್ನೇ ವಾಲ್ಮೀಕಿ ಇಲ್ಲಿ ನೀರೂಪಿಸುತ್ತಾನೆ. ರಾವಣನ ಅಂತ್ಯ ವ್ಯಕ್ತಿಯಲ್ಲಿ ಅಡಗಿರುವ ಅಹಂಕಾರದ ಅಂತ್ಯವಾಗಿದೆ. ಶಿವಭಕ್ತನಾದ ರಾವಣ ದೇವರನ್ನು ಒಲಿಸಿಕೊಂಡರೂ ಪರಸ್ತ್ರೀ ಮೇಲಿನ ವ್ಯಾಮೋಹದಿಂದಾಗಿ ತನ್ನ ಅಂತ್ಯ ಕಾಣುತ್ತಾನೆ. ಅದನ್ನು ಬಸವಣ್ಣನವರು ಛಲಬೇಕು ಶರಣಂಗೆ ಪರಸತಿಯನು ಒಲ್ಲೆನೆಂಬ, ಛಲಬೇಕು ಶರಣಂಗೆ ಪರಧನವ ಒಲ್ಲೆನೆಂಬ ಎಂದು ಸಾರಿದ್ದಾರೆ. ಮರ್ಹ ವಾಲ್ಮೀಕಿಯ ಸಂದೇಶಗಳನ್ನು ಎಲ್ಲ ಮಹಿಮಾ ಪುರುಷರು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ಸಾರಿ ಹೇಳಿದ್ದಾರೆ. ಇಂದು ನಾವು ಅನೇಕ ಕಷ್ಟಗಳನ್ನು ಎದುರಿಸುತ್ತೇವೆ. ಆಗ ನೋವನ್ನು ಅನುಭವಿಸುತ್ತೇವೆ. ಅಂತಹ ಸಂದರ್ಭದಲ್ಲಿ ರಾಮಾಯಣದ ಅರಣ್ಯ ಕಾಂಡವನ್ನು ಓದಿದರೆ ನಮಗೆ ಬಂದಿರುವ ಕಷ್ಟಗಳು ಏನೂ ಅಲ್ಲ ಅನಿಸುತ್ತವೆ. ಕಷ್ಟಗಳು ಯಾರನ್ನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಅವುಗಳನ್ನು ಎದುರಿಸಿದರೆ ಜೀವನದಲ್ಲಿ ಸುಖ ಸಿಗುತ್ತದೆ ಎಂಬುದನ್ನು ಮುಂದೆ ವಾಲ್ಮೀಕಿ ತಮ್ಮ ರಾಮಾಯಣದ ಸುಂದರ ಕಾಂಡದಲ್ಲಿ ವಿವರಿಸುತ್ತಾರೆ. ಈ ಎಲ್ಲ ಕಾರಣಗಳಿಂದ ರಾಮಾಯಣದಲ್ಲಿ ಎಲ್ಲವೂ ಇದೆ. ಇಡೀ ನಮ್ಮ ಜೀವನವೇ ಇದೆ. ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವೂ ಇದೆ. ಲಕ್ಷ್ಮಣನ ಸೋದರ ಪ್ರೇಮ, ಹನುಮಂತನ ಸ್ವಾಮಿನಿಷ್ಟೆ, ಸೀತೆಯ ಪಾವಿತ್ರತೆ ಮನುಷ್ಯನಲ್ಲಿ ಇರಬೇಕದ ಗುಣಗಳನ್ನು ಸಾರಿ ಹೇಳುತ್ತವೆ. ನಮ್ಮ ಮನಸ್ಸಿನಲ್ಲಿ ರಾಮ-ರಾವಣ-ಹನುಮಂತ ಎಲ್ಲರೂ ಅಡಗಿ ಕುಳಿತಿರುತ್ತಾರೆ. ನಾವೇ ಅವರನ್ನು ಹುಡುಕಿ ತೆಗೆದು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಾಗ ಶ್ರೀರಾಮರಾಗುತ್ತೇವೆ. ಇಲ್ಲದಿದ್ದರೆ ರಾವಣರಾಗುತ್ತೇವೆ ಎಂಬ ಸಂದೇಶವನ್ನು ಜಗತ್ತಿಗೆ ಮರ್ಹ ವಾಲ್ಮೀಕಿ ನೀಡಿದ್ದಾನೆ. ಜಗತ್ಪ್ರಸಿದ್ದ ಕವಿಯ ರಾಮಾಯಣ ಇಂದು ಎಲ್ಲರಿಗೆ ಬೇಕಾಗಿದೆ. ಶ್ರೀರಾಮ ನಮ್ಮ ಪಾಲಿನ ದೇವರಾಗಿದ್ದಾನೆ. ಆದರೆ ಅವನ ಆದರ್ಶ ಗುಣಗಳನ್ನು ನಾವು ಪಾಲಿಸಿಕೊಂಡಾಗ ಶ್ರೀರಾಮನಿಗೆ ಹಾಗೂ ಮರ್ಹ ವಾಲ್ಮೀಕಿಗೆ ಗೌರವ ಕೊಟ್ಟಂತಾಗುತ್ತದೆ. ನಮ್ಮಲ್ಲಿರುವ ರಾವಣವನ್ನು ಕಿತ್ತಿ ಒಗೆದು ಬದುಕಿನಲ್ಲಿ ಬರುವ ಎಲ್ಲ ಕಷ್ಟಗಳನ್ನು ಎದುರಿಸಿದಾಗ ಬದುಕು ಸುಂದರವಾಗುತ್ತದೆ. ಮರ್ಹ ವಾಲ್ಮೀಕಿ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಹುಟ್ಟಿನಿಂದ ಬೇಡನಾದರೂ, ಅವನ ಕಾವ್ಯದ ಮೂಲಕ, ಅವನ ದೈವ ಗುಣಗಳ ಮೂಲಕ ದೇವರಾಗಿದ್ದಾನೆ. ವಿಭೂತಿ ಪುರುಷನಾಗಿದ್ದಾನೆ. ಬುದ್ದ-ಬಸವ-ಗಾಂಧಿ-ಅಂಬೇಡ್ಕರ್ ಯಾವುದೇ ಜಾತಿ ಜನಾಂಗಕ್ಕೆ ಸೇರಿದವರಲ್ಲ. ಅವರ ಆದರ್ಶ ಹಾಗೂ ಸಾಧನೆಗಳ ಮೂಲಕ ಅವರು ಎಲ್ಲ ಜನಾಂಗಕ್ಕೂ ಸೇರಿರುತ್ತಾರೆ. ನಮ್ಮೆಲ್ಲರಿಗೆ ಕೇವಲ ಹುಟ್ಟಿನಿಂದ ಜಾತಿರುತ್ತದೆ. ನಾವು ಏನನ್ನಾದರೂ ಶ್ರೇಷ್ಠವಾದದ್ದನ್ನು ಸಾಧಿಸಿದರೆ ನಾವು ಜಾತಿಯನ್ನು ಮೀರಿ ಬೆಳೆಯುತ್ತೇವೆ. ಅಂತಹ ಶ್ರೇಷ್ಟ ಗುಣಗಳನ್ನು ನಮ್ಮ ಸಾಹಿತ್ಯ ನಮಗೆ ನೀಡುತ್ತದೆ. ರಾಮಾಯಣ, ಮಹಾಭಾರತ, ಬಸವಾದಿ ಶರಣರ ವಚನಗಳು, ಗಾಂಧಿ-ಅಂಬೇಡ್ಕರ್ ಅವರ ವಿಚಾರ ಧಾರೆಗಳು ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡುತ್ತವೆ. ಈ ಎಲ್ಲ ಪುಣ್ಯ ಪುರುಷರ ಜಯಂತಿಗಳನ್ನು ಆಚರಿಸುವುದರ ಮೂಲಕ ನಮ್ಮನ್ನು ನಾವು ಪರಿಶುದ್ಧ ಗೊಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ರಾಮಾಯಣ ಓದಿಸುವುದರ ಮೂಲಕ ಅವರಲ್ಲಿ ತ್ಯಾಗ, ಪ್ರೀತಿ, ವಿಶ್ವಾಸ, ಸ್ನೇಹ ನಿಷ್ಠೆಯ ಭಾವನೆಗಳನ್ನು ಬೆಳೆಸಬೇಕಾಗಿದೆ.
500 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
#

ವಾಲ್ಮೀಕಿ ಜಯಂತಿ

ಇಂದು ಕರ್ನಾಟಕ ಸರ್ಕಾರದ ರಜಾ ದಿನ. ವಾಲ್ಮೀಕಿ ಜಯಂತಿ ಪ್ರಯುಕ್ತ............ ಈ ದಿನ ಯಾರನ್ನು ಸ್ಮರಿಸೋಣ............, ರಾಮ - ಲಕ್ಷ್ಮಣ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ....... ಹೀಗೆ ಸಾಗುವ ಪಾತ್ರಗಳೋ.... ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ, ಅಥವಾ, ಅದರ ಕರ್ತೃ ವಾಲ್ಮೀಕಿಯನ್ನೋ, ಅಥವಾ, ವಾಲ್ಮೀಕಿಯ ನಾಯಕ ಜನಾಂಗವನ್ನೋ, ಅಥವಾ, ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ........ ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾನೆ. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ ಭರತ ಶತೃಘ್ಞರಂತ ಆದರ್ಶ ಸಹೋದರರನ್ನು, ರಾವಣನೆಂಬ ಪಾತ್ರವನ್ನು ದುಷ್ಟತನದ ಸಂಕೇತವಾಗಿ ಬಳಸಿ, ಹನುಮಂತನೆಂಬ ಪಟ್ಟ ಶಿಷ್ಯನಂತ ನಂಬುಗೆಯ ವ್ಯಕ್ತಿತ್ವವನ್ನು ಮತ್ತೂ ಹಲವಾರು ಪಾತ್ರಗಳನ್ನು ತುಂಬಾ ಸೂಕ್ಷ್ಮವಾಗಿ ಸೃಷ್ಟಿಸಿರುತ್ತಾರೆ. ಕೇವಲ ಪಾತ್ರಗಳ ಸೃಷ್ಟಿ ಮಾತ್ರವಲ್ಲದೆ ಆಗಿನ ಕಾಲದ ವ್ಯವಸ್ಥೆಯ ಎಲ್ಲಾ ಮಗ್ಗುಲುಗಳನ್ನು ಮತ್ತು ನಂಬಿಕೆಗಳನ್ನು, ಆಚರಣೆಗಳನ್ನು, ಅಗಸನ ಮಾತು, ರಾಜ ಪುರೋಹಿತರ ಸಲಹೆ, ಶಂಬೂಕನ ಹತ್ಯೆ ಮುಂತಾದ ಅನೇಕ ಅಂಶಗಳನ್ನು ಮತ್ತು ಬಹುಮುಖ್ಯವಾಗಿ ಆಗಿನ ಕಾಲದ ಭೌಗೋಳಿಕ ಪ್ರದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ‌. ಇದ್ದನ್ನೆಲ್ಲಾ ಗಮನಿಸಿದಾಗ ನಾವು ನಿಜವಾಗಲೂ ಸ್ಮರಿಸಬೇಕಾಗಿರುವುದು..... ರಾಮ ಸೀತೆಯರನ್ನು ಅಲ್ಲ, ರಾವಣ ಹನುಮಂತರನ್ನು ಅಲ್ಲ, ಅಯೋಧ್ಯೆ - ರಾಮ ಸೇತುವೆಯನ್ನು ಅಲ್ಲ, ನಾಯಕ ಬೇಡ ಜನಾಂಗವನ್ನೂ ಅಲ್ಲ, ಆ ಜನಾಂಗದ ನಾಯಕರನ್ನು ಅಲ್ಲ, ಬದಲಾಗಿ, ವಾಲ್ಮೀಕಿ ಎಂಬ ವ್ಯಕ್ತಿಯನ್ನು, ಮತ್ತು ಆತನ ಅತ್ಯದ್ಭುತ ಕ್ರಿಯಾತ್ಮಕ ಬುದ್ದಿ ಶಕ್ತಿಯನ್ನು, ಶತಶತಮಾನಗಳು ಕಳೆದರು ಇಂದಿಗೂ ಹೊಸ ಹೊಸ ಹೊಳಹುಗಳನ್ನು ನೀಡುತ್ತಿರುವ ಆ ಮಹಾನ್ ಗ್ರಂಥವನ್ನು ಸೃಷ್ಟಿಸಿದ ಆತನ ಚಿಂತನಾ ಪ್ರಜ್ಞೆಯನ್ನು...... ಆ ಕಾರಣಕ್ಕಾಗಿ ವಾಲ್ಮೀಕಿಯನ್ನು ನೆನೆಯುತ್ತಾ........ ಎಲ್ಲಾ ರೀತಿಯ ಕಲೆಗಾರರಿಗೆ ವಾಲ್ಮೀಕಿ ಕ್ರಿಯಾತ್ಮಕತೆಯಲ್ಲಿ ಮುಗಿಯದ ಅಕ್ಷಯ ಪಾತ್ರೆಯಂತ ಸ್ಪೂರ್ತಿಯ ಚಿಲುಮೆಯಾಗಲಿ ಎಂದು ಆಶಿಸುತ್ತಾ....... ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ. ಹೆಚ್.ಕೆ.
2.1k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
#

ವಾಲ್ಮೀಕಿ ಜಯಂತಿ

ವಾಲ್ಮೀಕಿ ಮಹರ್ಷಿಯ ಪರಿಚಯ – ತಂದೆ : ಪ್ರಚೇತಸೇನ. – ಮೂಲನೆಲೆ : ಕರ್ನಾಟಕದ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಹವಣಿ ಎಂಬ ಪ್ರದೇಶ. – ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ಕರ್ನಾಟಕದ ಪ್ರದೇಶಗಳು : ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ಋಷಿಮುಖ ಪರ್ವತ.       ವಾಲ್ಮೀಕಿಯು ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರ. ನಂತರ ಇತನು ಅನೇಕ ವರ್ಷಗಳ ಕಾಲ ಘೋರ ತಪಸ್ಸಿನಲ್ಲಿ ಮಗ್ನನಾದನು. ಆಗ ಇತನ ಸುತ್ತಲು ಹುತ್ತ ಬೆಳೆದು ದೇಹ ಮುಚ್ಚಿಹೋಗಿತ್ತು. ಈ ದೃಶ್ಯವನ್ನು ರಾಷ್ಟ್ರ್ರಕವಿ ಕುವೆಂಪುರವರು ವರ್ಣಿಸಿದಂತೆ, “ವಾಲ್ಮೀಕಿ ಎಂದರೆ, ವಾಲ್ಮೀಕ (ವಾಲ್ಮೀಕಕ್ಕೆ ಸಂಸ್ಕೃತದಲ್ಲಿ ಹುತ್ತ ಎನ್ನುತ್ತಾರೆ.) ಅಂದರೆ ಹುತ್ತವನ್ನು ಪ್ರವೇಶಿಸಿದವನು ಎಂದರ್ಥ”. ಇದನ್ನು “ವಾಲ್ಮೀಕಿಯು ತನ್ನ ಅಂತರಾತ್ಮವನ್ನು ಪ್ರವೇಶಿಸಿದನು” ಎಂದು ಹೇಳಬಹುದು. ಕಾರಣ ಮನುಷ್ಯ ತನ್ನೊಳಗೆ ತಾನು ಪ್ರವೇಶಿಸಿ, ಮನಸ್ಸನ್ನು ವಿಶ್ಲೇಷಣೆಗೆ ಒಳಪಡಿಸಿದರೆ ಸಿದ್ಧಿಯು ಖಂಡಿತ ಪ್ರಾಪ್ತವಾಗುತ್ತದೆ. ಹಾಗೂ ತಪಸ್ಸನ್ನು ಭಕ್ತಿ ಮತ್ತು ಶ್ರದ್ಧೆಯ ಮೂಲಕ ಆಚರಿಸಿ ಎಂದು ವಾಲ್ಮೀಕಿ ಮಹರ್ಷಿ ತಿಳಿಸಿಕೊಟ್ಟಿದ್ದಾರೆ.   ಈ ರೀತಿ ಪರಿವರ್ತನೆಗೊಂಡ ವಾಲ್ಮೀಕಿ ಮಹರ್ಷಿಯು, ಪವಿತ್ರ ಹಾಗೂ ಸಾಹಿತ್ಯ ಮಾಲೆಯಲ್ಲಿ ಶ್ರೇಷ್ಠ ಸ್ಥಾನ ಹೊಂದಿದ ಮಹಾಕಾವ್ಯ “ರಾಮಾಯಣ”ವನ್ನು ಸಂಸ್ಕೃತದಲ್ಲಿ ರಚಿಸಿದರು. ಈ ಕಾವ್ಯದಲ್ಲಿ ಶ್ರೀರಾಮನ ಸರ್ವಶ್ರೇಷ್ಠತೆಯನ್ನು ಹಾಗೂ ಯುಗ-ಯುಗಗಳ ಇತಿಹಾಸವನ್ನು ಮತ್ತು ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ್ದಾರೆ. * ವಾಲ್ಮೀಕಿ ಮಹರ್ಷಿಯು ರಚಿಸಿದ ಮಹಾಕಾವ್ಯ ರಾಮಾಯಣ :- ವಾಲ್ಮೀಕಿ ಮಹರ್ಷಿಯು ರಚಿಸಿದ ರಾಮಾಯಣವು ಅನೇಕ ಸಾಧಕರಿಗೆ ಮಾರ್ಗಸೂಚಿಯಾಗಿದೆ ಎಂಬುವುದಕ್ಕೆ ಉತ್ತಮ ಉದಾಹರಣೆ. ಸ್ವಾಮಿ ವಿವೇಕಾನಂದರು. ಕಾರಣ ಬಾಲ್ಯದಲ್ಲಿರುವಾಗ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ದೇವಿಯವರು ರಾಮಾಯಣ, ಮಹಾಭಾರತ, ಭಗವದ್ಗೀತಾ ಭೋದಿಸುತ್ತಿದ್ದರು. ರಾಮಾಯಣದ ಪ್ರಭಾವದಿಂದ ವಿವೇಕಾನಂದರು ಶ್ರೀರಾಮನ ಪ್ರತಿಮೆಗಳನ್ನು ಪೂಜಿಸುತ್ತಾ ಕಾಲ ಕಳೆಯುತ್ತಿದ್ದರು. ಹಾಗೂ ರಾಮಾಯಣದಲ್ಲಿ ಬರುವ ಉತ್ತಮ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು, ಇಡಿ ಪ್ರಪಂಚಕ್ಕೆ ಭಾರತೀಯ ಸಂಸ್ಕೃತಿ, ಧರ್ಮ ಹಾಗೂ ಭಾರತೀಯ ಮಹಾಕಾವ್ಯಗಳನ್ನು ಪರಿಚಯಿಸಿಕೊಟ್ಟರು. ಹೀಗೆ ವಾಲ್ಮೀಕಿ ರಚಿಸಿದ ರಾಮಾಯಣವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನಾ ಸಿದ್ದಿ ಕಾವ್ಯವಾಗಿದೆ. ಹಾಗೂ ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ಧಿ, ಮನಸ್ಸು, ಕ್ರಿಯೆ ಕರ್ಮಗಳನ್ನು ಸೂಕ್ತ ದಾರಿಯಲ್ಲಿ ನಡೆಸುವ ಕಾರ್ಯ ಮಾಡುತ್ತದೆ. ಇಂತಹ ಮನೋಹರವಾದ, ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾ ಕಾವ್ಯವನ್ನು ರಚನೆ ಮಾಡಿದ ವಾಲ್ಮೀಕಿ ಮಹರ್ಷಿಯು ಋಷಿಪುಂಗವರಲ್ಲೇ ಶ್ರೇಷ್ಠ ಮಹರ್ಷಿಯಾಗಿ ಉನ್ನತ ಸ್ಥಾನವನ್ನು ಗಳಿಸಿ, ಕಾವ್ಯ ಸಿರಿಯ ಕೊಂಬೆಯನ್ನೇರಿ ‘ರಾಮ ರಾಮ’ ಎಂದು ಮಧುರವಾಗಿ ಮಧುರಾಕ್ಷರಗಳಿಂದ ಧ್ವನಿಗೈಯುವ ಕೋಗಿಲೆಯಾಗಿದ್ದಾರೆ. ಹಾಗೂ ಮಹಾಕಾವ್ಯ ರಾಮಾಯಣವು ಇಂದಿಗೂ ಪಾಶ್ಚಾತ್ಯರ ದೃಷ್ಟಿಯಲ್ಲಿ ಆದರ್ಶ ಕಾವ್ಯವಾಗಿದೆ. ಪ್ರಪಂಚದಲ್ಲಿರುವ ಅನೇಕ ಭಾಷೆಗಳಲ್ಲಿ ರಾಮಾಯಣ ಗ್ರಂಥ ಹೊರಬಂದಿದೆ. ಹಾಗೂ ರಾಮಾಯಣವು ಭರತಖಂಡದಲ್ಲಿ ಜನ್ಮತಾಳಿದರೂ, ವಿಶ್ವಮಾನ್ಯತೆ ಪಡೆದಿದೆ. ಆದ್ದರಿಂದ ಇಂದಿಗೂ ಮಲೇಷಿಯಾದ ರಾಷ್ಟ್ರಾಧ್ಯಕ್ಷರು “ಸೆರಿಪಾದುಕಾಧೂಲಿಯ ಮೇಲೆ” ಅಂದರೇ ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿಯೇ ಅಧಿಕಾರ ಸ್ವಿಕರಿಸುತ್ತಾರೆ. ಇನ್ನೂ ಥಾಯ್ಲೆಂಡಿನ ರಾಜವಂಶದಲ್ಲಿ ರಾಜರುಗಳಿಗೆ “ರಾಮ” ಎಂದೇ ಗೌರವದಿಂದ ಕಾಣುತ್ತಾರೆ. ಹಾಗೂ ಈ ವಾಲ್ಮೀಕಿ ರಾಮಾಯಣವನ್ನು ಆಧರಿಸಿಕೊಂಡು ಹೋರಬಂದಿರುವ ಅನೇಕ ಪದ್ಯ, ಪ್ರಬಂಧಗಳು, ಕಾವ್ಯಗಳು, ನಾಟಕಗಳು, ಗ್ರಂಥಗಳು, ಹಾಗೂ ಮುಂತಾದ ನಾನಾ ವಿಧದ ಕಾವ್ಯ ಕೃತಿಗಳಿಗೆ ವಾಲ್ಮೀಕಿ ರಾಮಾಯಣ ಜನ್ಮದಾತೆಯಾಗಿದೆ. ಹಾಗೂ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು “ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿ ತೋರಿಸುತ್ತಿದೆ” ಎಂಬುದು ನಿತ್ಯ ಸತ್ಯ. * ಸಾಧಕ ಗುಣದ ವಾಲ್ಮೀಕಿ ಮಹರ್ಷಿ :-   ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಶ್ರೇಯಸ್ಸು ಆದಿಕವಿ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆ. ಹಾಗೂ ವಾಲ್ಮೀಕಿ ಮಹರ್ಷಿಯು ಒಂದು ರೀತಿಯಲ್ಲಿ ಸರ್ವತೋಮುಖಿ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ, ತತ್ವ ಜ್ಞಾನಿ ಹಾಗೂ ಆದಿಕವಿಯಾಗಿ ಬಹು ವೈವಿಧ್ಯಮಯವಾಗಿ ಜನರ ಮನಸೊರೆಗೊಂಡಿದ್ದಾರೆ. ಇಂತಹ ಮಹಾನ್ ಮಹರ್ಷಿಯ ಹೆಸರು ಜಗತ್ತಿಗೆ ಪರಿಚಯವಾದದ್ದು, ರಾಮಾಯಣ ಕಾವ್ಯದ ಮೂಲಕ. ಆದ್ದರಿಂದ ನಾವು ವಾಲ್ಮೀಕಿ ಮಹರ್ಷಿಯನ್ನು ಸಾಧಕ ಗುಣದವರು ಎಂದು ಹೇಳಬಹುದು. ಕಾರಣ ವಾಲ್ಮೀಕಿ ಮಹರ್ಷಿ ಕಾಡಿನಲ್ಲಿ ಅರಳಿದ ಸುಗಂಧ ಪುಷ್ಪ.       ಕೃಪೆ :- ಅಂತರ್ಜಾಲದಿಂದ
884 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
#

ವಾಲ್ಮೀಕಿ ಜಯಂತಿ

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಹಿನ್ನೆಲೆ ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸ ಮುನಿಯ ಮಗ. ಹೀಗಾಗಿ ಅವರಿಗೆ 'ಪ್ರಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು. ರಾಮಾಯಣ ರಚನೆಗೆ ಪ್ರೇರಣೆ ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು. ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ || ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಬಾಯಿಂದ ಹೊರಹೊಮ್ಮಿದ ಮಾತುಗಳು. ಈ ಶ್ಲೋಕದ ಅರ್ಥ ಹೀಗಿದೆ : ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ || ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು. ಉತ್ತರ ರಾಮಾಯಣದೊಳಗೊಂದು ಪಾತ್ರವಾಗಿ ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆ ಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತಿಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು (ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ-ಅಥವಾ ಜೈಮಿನಿ ಋಷಿಯು ತನ್ನ ಸಂಸ್ಕೃತದ ಜೈಮಿನಿ ಭಾರತದಲ್ಲಿ ಮೂಲವನ್ನು ಬದಲಾಯಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.. ಮಹಾಕವಿ ಆದಿಕವಿ ವಾಲ್ಮೀಕಿಗೆ ನಮನ ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ || ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ || ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ . 'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ.
6.1k ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಯಾವುದೇ ಪೋಸ್ಟ್ಸ ಇಲ್ಲ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post