*ಓಂನಮಃಶಿವಾಯ* 09-Feb-2019
ನಿತ್ಯ ಭವಿಷ್ಯ
🦌ಮೇಷ🐐
ಕೆಲಸ ಸಾಧನೆಗಾಗಿ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಹಿರಿಯರಿಗೆ ನಮಸ್ಕರಿಸಿ ಹೋದಲ್ಲಿ ಕೆಲಸ ಸಿದ್ಧಿಸುವುದು.
🐄ವೃಷಭ
ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
👭ಮಿಥುನ
ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು.
🦀ಕರ್ಕಾಟಕ
ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು.
🐆ಸಿಂಹ
ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಕಹಿ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ಹಾಗಾಗಿ ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪರ ವಿಚಾರಗಳನ್ನು ತಿಳಿದುಕೊಳ್ಳಿ.
👩🏻🎤ಕನ್ಯಾ
ನಂಬಿದ ಜನರು ಕೈಕೊಡುತ್ತಿದ್ದಾರೆ ಎಂದು ಬೇಸರಿಸುವುದರಲ್ಲಿ ಅರ್ಥವಿಲ್ಲ. ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವಿಲ್ಲ. ಅಂತೆಯೇ ನಿಮ್ಮ ನಡೆನುಡಿಗಳಲ್ಲಿ ಬದಲಾವಣೆ ತಂದುಕೊಂಡಲ್ಲಿ ಒಳಿತಾಗುವುದು.
⚖ತುಲಾ
ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ.
🦞ವೃಶ್ಚಿಕ
ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.
🏹ಧನು
ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.
🐊ಮಕರ
ನಿಮ್ಮ ಬುದ್ಧಿ ಬಲದಿಂದ ಪದೋನ್ನತಿ ಸಿಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದು ಮುಂದುವರಿಕೆಯ ಬಗ್ಗೆ ಚಿಂತನೆ ನಡೆಸುವಿರಿ. ಸಹಜವಾಗಿಯೇ ಕೆಲವರು ವಿರೋಧಿಸುವ ಜನ ಇರುತ್ತಾರೆ. ಅವರ ಟೀಕೆಗಳಿಗೆ ಕಿವಿಗೊಡದಿರಿ.
👅ಕುಂಭ
ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು ಹಿರಿಯರು. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಆರೋಗ್ಯದ ಕಡೆ ಗಮನ ಇರಲಿ.
🦈🦈ಮೀನ
ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಎಲ್ಲಾ ಕಾಲದಲ್ಲೂ ಲಾಭವೇ ಆಗುತ್ತದೆ ಎಂದು ತಿಳಿಯಬಾರದು. ಮುಷ್ಟಿ ಕಾಳು ಚೆಲ್ಲಿ ಮೂಟೆ ಕಾಳನ್ನು ಪಡೆಯುವಂತೆ ನಿಮ್ಮ ಹಣ ಖರ್ಚಾಗುವುದು. ಆದರೂ ಮುಂದೆ ಒಳಿತಾಗುವುದು.
🙏🏻*ಡಾ//ಪ್ರಭು ಲಿಂಗ ದೇವರು* ಜ್ಯೋತಿಷ್ಯ ಗುರು,