#😍ಗುಡ್ ನ್ಯೂಸ್ -Gruhalakshmi ಬಾಕಿ ₹2,000 ಹಣ ಜಮೆ💰💸 ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 3 ತಿಂಗಳಿಗೊಮ್ಮೆ ಕಾಂಗ್ರಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊ ಒಂದಾದ 'ಗೃಹಲಕ್ಷ್ಮಿ' ಹಣವನ್ನ ನೀಡುತ್ತೇವೆ. ನಾವು ಆರ್ಥಿಕವಾಗಿ ಗಟ್ಟಿಯಾಗಿದ್ದೇವೆ. ಜಿಎಸ್ಟಿ ಸಂಗ್ರಹದಲ್ಲಿ ಕೇಂದ್ರದವರು ಅರ್ಧ ಹಣ ಕೊಡಬೇಕು, ಅವರು ಕೊಡುವುದು ವಿಳಂಬ ಆಗುತ್ತದೆ. ಆದ್ದರಿಂದ ಹಣ ಹೊಂದಿಸುವುದು ತಡವಾಗುತ್ತದೆ ಅಷ್ಟೇ. 3 ತಿಂಗಳಿಗೊಮ್ಮೆ ಆದರೂ ಗೃಹಲಕ್ಷ್ಮಿ ಹಣವನ್ನೂ ನೀಡುತ್ತೇವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.ಗೃಹಲಕ್ಷ್ಮಿಯರಿಗೆ ಇದರಿಂದ ಶಾಕ್ ಕೊಟ್ಟಂತಾಗಿದೆ. ಇನ್ನೂ ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಯೋಜನೆ ಆರಂಭ ಆದಗಿನಿಂದ ಈ ಯೋಜನೆ ಅಡಿಯಲ್ಲಿ 1.24 ಕೋಟಿ ಮಹಿಳೆಯರಿಗೆ 54,000 ಕೋಟಿ ರೂಪಾಯಿ ಹಣ ಜಮೆ ಮಾಡಲಾಗಿದೆ. ಒಟ್ಟು 23 ಕಂತುಗಳಲ್ಲಿ ನೊಂದಣಿ ಆದ ಪ್ರತಿ ಕುಟುಂಬದ ಯಜಮಾನಿಗೆ ತಲಾ 46,000 ರೂಪಾಯಿ ನೀಡಲಾಗಿದೆ ಎಂದು ಹೇಳಿದರು.ಈ ಹಿಂದೆ ಇಲಾಖೆಯಿಂದಲೇ ಫಲಾನುಭವಿಗಳ ಖಾತೆಗೆ 2,000 ರೂಪಾಯೊ ಹಣ ಜಮೆ ಮಾಡಲಾಗುತ್ತಿತ್ತು. ಸದ್ಯ ತಾಲ್ಲೂಕು ಪಂಚಾಯಿತಿಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ಬದಲಾವಣೆ ಮಾಡಲಾಗಿದೆ. ಆದ್ದರಿಂದ ಕೆಲ ತಿಂಗಳ ಕಂತುಗಳ ಹಣ ವಿಳಂಬ ಆಗಿದೆ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ತುಂಬಾ ಬಡ ಕುಟುಂಬಗಳಿಗೆ ಆಧಾರವಾಗಿದೆ. ಅದೆಷ್ಟೋ ಜನ ಇದರಿಂದ ಮನೆಗೆ ಬೇಕಾದ ಅಗತ್ಯ ವಸ್ತುಗಳಿಂದ ಹಿಡಿದು, ವಾಹನ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಹಣದಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಉದಾಹರಣೆಗಳಿವೆ
#🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲