nudi mattu
#

nudi mattu

*ಮನಸ್ಸನ್ನು ಕದಡುವ ಆದಿಶಂಕರರ ಮಾತೃ ಪಂಚಕ* ಕಾಲಡಿ ಗ್ರಾಮದಲ್ಲಿ ಆದಿ ಶಂಕರರ ತಾಯಿ ఆర్యాంಬೆ ಮರಣ ಶಯ್ಯೆಯ ಮೇಲೆ ಇರುವಳು. ತನ್ನನ್ನು ನೆನೆಸಿಕೊಂಡ ತಕ್ಷಣ ಆಕೆಯ ಬಳಿಗೆ ಶಂಕರರು ಬಂದು ಉತ್ತರ ಕ್ರಿಯೆಗಳನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಶಂಕರರು ಹೇಳಿದ ಐದು ಶ್ಲೋಕಗಳು *"ಮಾತೃಪಂಚಕ"* ಎಂಬುದಾಗಿ ಪ್ರಸಿದ್ದವಾಗಿವೆ. ಅವುಗಳನ್ನು ಸ್ಮರಿಸಿಕೊಳ್ಳೋಣ. *मुक्तामणिस्तवं नयनं ममेति* *राजेति जीवेति चिर सुत त्वम् ।* *इत्युक्तवत्यास्तव वाचि मातः* *ददाम्यहं तण्डुलमेव शुष्कम् ॥ १॥* *ತಾತ್ಪರ್ಯ:* ಅಮ್ಮಾ! " ನೀನು ನನ್ನ ಮುತ್ತು ಕಣೋ! ನನ್ನ ರತ್ನ ಕಣೋ!ನನ್ನ ಕಣ್ಣ ಬೆಳಕೋ ಎನ್ನಪ್ಪಾ! ನೀನು ಚಿರಂಜೀವಿ ಯಾಗಿರ ಬೇಕು" ಅಂತ ಪ್ರೇಮದಿಂದ ಎನ್ನ ಕರೆದ ನಿನ್ನ ಬಾಯಲ್ಲಿ ಈದಿನ ಕೇವಲ ಇಷ್ಟು ಶುಷ್ಕವಾದ ಅಕ್ಕಿಯ ಕಾಳುಗಳನ್ನು ಹಾಕುತ್ತಿದ್ದೇನೆ. ನನ್ನನ್ನು ಕ್ಷಮಿಸು. *अम्बेति तातेति शिवेति तस्मिन्* *प्रसूतिकाले यदवोच उच्चैः ।* *कृष्णेति गोविन्द हरे मुकुन्द* *इति जनन्यै अहो रचितोऽयमञ्जलिः* ॥2!! ತಾತ್ಪರ್ಯ: ಹಲ್ಲುಗಳಬಿಗಿಯಲ್ಲಿ ನನ್ನ ಪ್ರಸವಕಾಲದಲ್ಲಿ ಬಂದ ತಡೆಯಲಾಗದ ಬಾಧೆಯನ್ನು " ಅಮ್ಮಾ! ಅಯ್ಯಾ!ಶಿವಾ! ಕೃಷ್ಣಾ! ಹರೇ! ಗೋವಿಂದಾ!" ಎಂದುಕೊಳ್ಳುತ್ತಾ ಭರಿಸಿ ನನಗೆ ಜನ್ಮ ನೀಡಿದ ತಾಯಿಗೆ ನಾನು ನಮಸ್ಕರಿಸುತ್ತಿದ್ದೇನೆ. *आस्तां तावदियं प्रसूतिसमये* *दुर्वारशूलव्यथा नैरुच्यं तनुशोषणं* *मलमयी शय्या च संवत्सरी ।* *एकस्यापि न गर्भभारभरणक्लेशस्य यस्याक्षमः* *दातुं निष्कृतिमुन्नतोऽपि तनयस्तस्यै जनन्यै नमः ॥ ३॥* ತಾತ್ಪರ್ಯ: ಅಮ್ಮಾ! ನನ್ನನ್ನು ಹೆತ್ತ ಸಮಯದಲ್ಲಿ ನೀನು ಎಂತಹ ಶೂಲವ್ಯಥೆಯನ್ನು (ಹೊಟ್ಟೆ ನೋವು) ಅನುಭವಿಸಿದೆಯೋ ಅಲ್ಲವೇ! ಕಳೆ (ಹೊಳಪು) ಕಳೆದುಕೊಂಡು, ಶರೀರ ಶುಷ್ಕಿಸಿ ಇರುತ್ತದೆ.ಮಲದಿಂದ ಶಯ್ಯೆ ಮಲಿನವಾದರೂ - ಒಂದು ಸಂವತ್ಸರ ಕಾಲ ಆ ಕಷ್ಟವನ್ನು ಹೇಗೆ ಸಹಿಸಿದೆಯೋ ಅಲ್ಲವೇ! ಯಾರೂ ಅಂತಹ ಬಾಧೆಯನ್ನು ಸಹಿಸಲಾರರು. ಎಷ್ಟು ದೊಡ್ಡವನಾದರೂ ಮಗ ತಾಯಿಯ ರುಣ ತೀರಿಸ ಬಲ್ಲನೇ? ನಿನಗೆ ನಮಸ್ಕಾರ ಮಾಡುತ್ತಿದ್ದೇನೆ. *गुरुकुलमुपसृत्य स्वप्नकाले तु दृष्ट्वा* *यतिसमुचितवेषं प्रारुदो त्वमुच्चैः ।* *गुरुकुलमथ सर्वं प्रारुदत्ते समक्षं* *सपदि चरणयोस्ते मातरस्तु प्रणामः* ॥४!! ತಾತ್ಪರ್ಯ: ನಿನ್ನ ಕನಸಿನಲ್ಲಿ ನಾನು ಸನ್ಯಾಸಿವೇಷದಲ್ಲಿ ಕಾಣಿಸಿಕೊಂಡದ್ದೇಸರಿ ಬಾಧೆಪಟ್ಟು , ನಮ್ಮ ಗುರುಕುಲಕ್ಕೆ ಬಂದು ಗಟ್ಟಿಯಾಗಿ ನೀನು ಅತ್ತೆ. ಆ ಸಮಯದಲ್ಲಿ ನಿನ್ನ ದುಃಖ ಅಲ್ಲಿಯವರೆಲ್ಲರಿಗೂ ಬಾಧೆ ಕಲಿಗಿಸಿತು. ಅಂತಹ ದೊಡ್ಡವ್ಯಕ್ತಿಯಾದ ನಿನ್ನ ಪಾದಗಳಿಗೆ ನಮಸ್ಕರಿಸುತ್ತಿದ್ದೇನೆ. *न दत्तं मातस्ते मरणसमये तोयमपिवा* *स्वधा वा नो दत्ता मरणदिवसे* *श्राद्धविधिना।* *न जप्त्वा मातस्ते* *मरणसमये तारकमनु-* *रकाले सम्प्राप्ते मयि *कुरु दयां मातुरतुलाम्* ॥ ५॥ ತಾತ್ಪರ್ಯ: ಅಮ್ಮಾ! ಸಮಯ ಮಿಂಚಿಹೋದ ಮೇಲೆ ಬಂದೆನು. ನಿನ್ನ ಮರಣ ಸಮಯದಲ್ಲಿ ಸ್ವಲ್ಪ ನೀರು ಕೂಡಾ ನಾನು ನಿನ್ನ ಗಂಟಲೊಳಗೆ ಹಾಕಲಿಲ್ಲ. ಶ್ರಾದ್ಧವಿಧಿಯನ್ನು ಅನುಸರಿಸಿ "ಸ್ವಧಾ" ವನ್ನು ಕೊಡಲಿಲ್ಲ. ಪ್ರಾಣವು ಹೋಗುವ ಸಮಯದಲ್ಲಿ ನಿನ್ನ ಕಿವಿಯಲ್ಲಿ ತಾರಕಮಂತ್ರ ವನ್ನು ಓದಲಿಲ್ಲ. ನನ್ನನ್ನು ಕ್ಷಮಿಸು. ನನ್ನಲ್ಲಿ ಯಾವುದಕ್ಕೂ ಸಮಾನವಾಗದ ದಯೆ ತೋರು ತಾಯೇ! ~~~~~~~~~~~~~~~~~~~~ ಶ್ರೀ ಸಾಂಬಮೂರ್ತಿ ಅವರು ಕಳುಹಿಸಿದ್ದ ತೆಲುಗು ತರ್ಜುಮೆ ಯನ್ನು ಕನ್ನಡಕ್ಕೆ ಅನುವಾದಿಸಿ ಕಳಿಸುತ್ತಿದ್ದೇನೆ. - ಸಂಸ್ಕೃತ ಶ್ಲೋಕಗಳನ್ನು ಉಳಿಸಿಕೊಳ್ಳದಿದ್ದರೆ ಅನುವಾದದ ಒಟ್ಟಾರೆ ಸಾರ ಕುಂದುತ್ತದೆ. ಹಾಗಾಗಿ ತಾಯಿಯತಾಯಿ ತಾಯಿ ಜತೆಗೆ ಇರಲು ಅನುಮತಿ ಕೋರುತ್ತೇನೆ. *ಸ್ವಂತ ಮಾತು* _________ ಕಣ್ಣೀರು ಬಾರದಿದ್ದರೆ , ಮತ್ತೊಮ್ಮೆ ನಿಧಾನವಾಗಿ ಭಕ್ತಿ ಯಿಂದ ಓದಿ, ಕಷ್ಟಪಟ್ಟಾದರೂ ಸರಿ ತಾಯಿಗಾಗಿ ಒಂದು ಹನಿಯಾದರೂ ಸುರಿಸಿ.🙏
205 ವೀಕ್ಷಿಸಿದ್ದಾರೆ
6 ತಿಂಗಳ ಹಿಂದೆ
#

nudi mattu

*ಪತಿಗೆ ಪತ್ನಿಯೊಡನೆ ಹೇಳಲಿಕ್ಕಿರುವುದು ಇಷ್ಟೆ!* ಪತಿ ಹಾಗೂ ಪತ್ನಿ ಗಾಳಿಪಟ ಹಾರಿಸುತಿದ್ದರು. ಪತಿ ಪತ್ನಿಯೊಡನೆ ಹೀಗೆಂದು ಕೇಳಿದರು. "ಅಲ್ವೆ ಒಂದು ಪ್ರಶ್ನೆ ಇದರ ಸರಿಯಾದ ಉತ್ತರವನ್ನ ನೀನು ಹೇಳಬೇಕು. ಈ ಗಾಳಿಪಟ ಹಾರುತ್ತಿರುವಾಗ ನೂಲಿನ ಕೆಳಸವೇನು...? " "ನೂಲು ಆ ಪಟವನ್ನ ತನ್ನಿಷ್ಟಕ್ಕೆ ಹಾರಲು ಅನಮತಿಸದೆ ಎಳೆದು ಹಿಡಿದಿದೆ.." ಎಂದು ಪತ್ನಿ ತಟ್ಟನೆ ಹೇಳಿಬಿಟ್ಟಳು. ಪತಿ: ಇಲ್ಲ. ಆ ಪಟವು ಗುರಿ ತಪ್ಪದೆ ಹಾರುತ್ತಿರಲೆಂದು ನೂಲು ತನ್ನ ಬಾಧ್ಯತೆಯನ್ನ ಪೋರೈಸುತಿದೆ" ಪತ್ನಿ ಈ ಮಾತನ್ನು ಆಳಿಸಿದಾಕ್ಷಣ ಪರಿಹಾಸ್ಯ ರೂಪದಲ್ಲಿ ನಕ್ಕು ಬಿಟ್ಟಳು. ಅದನ್ನರಿತ ಪತಿ ಕತ್ತರಿಯಿಂದ ನೂಲನ್ನು ಕತ್ತರಿಸಿಬಿಟ್ಟನು. ನೂಲಿನ ನಿಯಂತ್ರಣ ತಪ್ಪಿದಾಕ್ಷಣ ಪಟವು ಗುರಿಯಿಲ್ಲದೆ ಅಡ್ಡದಿಡ್ಡಿ ಹಾರಾಡಿ ಆಚೀಚೆ ಬಡಿದು ಹರಿದು ಸ್ವಲ್ಪ ದೂರದಲ್ಲಿಯೇ ತಲೆ ಕೆಳಗಾಗಿ ನೆಲಕ್ಕಪ್ಪಲಿಸಿತು. ಇದನ್ನೇ ನೋಡತಿದ್ದ ಪತ್ನಿಯೊಡನೆ ಕಂಡೆಯಾ ಇದಾಗಿದೆ ನಿಜಾಂಶ..! ನೂಲು ಪಟವನ್ನ ತನ್ನಷ್ಟಕ್ಕೆ ಹಾರಡಲು ಬಿಡುವುದಿಲವೆಂಬೂದು ನಿನ್ನ ಬಾವನೆಯಾಗಿತ್ತು. ಮಾತ್ರವಲ್ಲ ನೂಲು ಪಟವನ್ನು ಬಿಟ್ಟು ದೂರ ಸರಿದರೆ ಪಟವಂತು ಸ್ವತಂತ್ರವಾಗಿ ಹಾರಾಡಬಹುದೆಂದು ಕೂಡ ನೀನು ಗ್ರಹಿಸಿದೆ. ಆದರೆ ಆ ಸ್ವಾತಂತ್ರ್ಯ ಎಷ್ಟು ದುರ್ಬಲವೆಂದು ನೀನು ಮನಗಂಡೆಯಲ್ಲವೇ...? ಹೌದು ನೀನೆಂಬ ಪಟವ ನಿಯಂತ್ರಿಸುತ್ತಿರುವ ನೂಲಾಗಿದ್ದೇನೆ ನಾನು. ನನ್ನ ನಿಯಂತ್ರಣದಿಂದ ನಿನಗೆಷ್ಟು ಎತ್ತರಕ್ಕೂ ಆರಾಮವಾಗಿ ಹಾರಾಡಬಹುದು. ಆದರೆ ಯಾವತ್ತೂ ಸ್ವಾತಂತ್ರವಾಗಿ ಹಾರಾಡಬೇಕೆಂಬ ವ್ಯಾಮೋಹದಿಂದ ನನ್ನನ್ನು ಕತ್ತರಿಸದಿರು...... (ಈ ಕಾಲದ ಮಹಿಳೆಯರ ಗಮನಕ್ಕೆ)
515 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post