nudii muttu
#

nudii muttu

🙏🏽ಶುಭೋದಯ ಎಲ್ಲರಿಗೂ G😊😀D M😆RNING 😁 😊: ನಿತ್ಯ ಕಗ್ಗ...... ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು । ಸ್ವರ್ಣಸಭೆಯಾ ಶೈವತಾಂಡವದ ಕನಸು ॥ ಅನ್ಯ ಚಿಂತೆಗಳನದು ಬಿಡಿಸುತವನಾತ್ಮವನು । ಚಿನ್ಮಯಕೆ ಸೇರಿಸಿತು - ಮಂಕುತಿಮ್ಮ ॥ ೭೬೪ ॥ 😊: There was once a great believer in Lord Shiva by the name - Nanda. He was born in lower caste and was forbidden from entering temples. But he had a dream of Shiva dancing his signature Tandava steps in a elegant court of Gods. After having this dream that was the only thing he could think of. His single minded devotion made him forget (free himself from) all the worldly ties and finally become one with the Holy Spirit. - Mankutimma 😊: ಅವನಿಗೆ ಸ್ವರ್ಣಸಭೆಯಲ್ಲಿ ಶಿವತಾಂಡವವನ್ನು ನೋಡುವ ಕನಸು. ಅನ್ಯ ಚಿಂತೆಗಳನ್ನು ಬಿಟ್ಟು ಕೇವಲ ಅದನ್ನೇ ಚಿಂತಿಸುತ್ತಿದ್ದನಾದ್ದರಿಂದ ಆ ದರುಶನದಿಂದಲೇ ಅವನ ಆತ್ಮಕ್ಕೆ ಮುಕ್ತಿ ಸಿಕ್ಕಿತು, ಅಂತಹ ‘ಹೊಲೆಯರ ನಂದ’ ಧನ್ಯ ಎಂದು ಏಕಾಗ್ರತೆಯಿಂದ ಪರತತ್ವವನ್ನು ಹೇಗೆ ಸಾಧಿಸಬಹುದು ಎಂದು ಒಂದು ಕತೆಯನ್ನು ಉದಾಹರಿಸಿ ತಿಳಿಸಲೆತ್ನಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. 😊: ವಿವೇಕ ವಾಣಿ...... ಬಡವರು, ಅಶಕ್ತರು, ರೋಗಿಗಳಲ್ಲಿ ಯಾರು ಶಿವನನ್ನು ಕಾಣುತ್ತಾರೋ ಅವರೇ ನಿಜವಾದ ಶಿವಭಕ್ತರು. 😊: ನುಡಿಮುತ್ತು...... ಏನಾದರೂ ದುಷ್ಟರು ಮಾತ್ರ ತೆಪ್ಪಗಾಗುವುದಿಲ್ಲ. ಸತ್ಯದಿಂದ ಧರ್ಮಕ್ಕೆ ರಕ್ಷೆ. ಯೋಗದಿಂದ ವಿದ್ಯೆಗೆ ರಕ್ಷೆ. ಶುದ್ಧತೆಯಿಂದ ರೂಪಕ್ಕೆ ರಕ್ಷೆ. ಒಳ್ಳೆಯ ನಡತೆಯಿಂದ ಕುಲಕ್ಕೆ ರಕ್ಷೆ. #nudii muttu
189 ವೀಕ್ಷಿಸಿದ್ದಾರೆ
6 ತಿಂಗಳ ಹಿಂದೆ
#

nudii muttu

🙏😊ಎಲ್ಲರಿಗು ಶುಭೋದಯ G😊😃D M0RNING🙏 😊: ನಿತ್ಯ ಕಗ್ಗ...... ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? । ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ॥ ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ । ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ ॥ ೭೬೦ ॥ 😊: Don't think about the lives that we have already lived. We should concentrate in the ones which are yet to come. By keeping our eyes set in the front - God created us like this so that we should be forward looking. - Mankutimma 😊: ಹಿಂದಿನ ಜನ್ಮಗಳ ನೆನಪಿನಿಂದ ನಿನಗೇನಾಗಬೇಕಾಗಿದೆ. ಇಂದಿನ ಜನ್ಮಕ್ಕೆ ನೀನು ಮಹತ್ವವನ್ನು ನೀಡು ಎನ್ನುವಂತೆ ಬೆನ್ನ ಹಿಂದಿನದು ಕಾಣಿಸದಂತೆ ಮತ್ತು ಮುಂದೆ ಮಾತ್ರ ನೋಡುವಂತೆ ಮುಖದಲ್ಲಿ ಕಣ್ಣನ್ನು ಇಟ್ಟಿಹನು ನಮಗೆ ಆ ಸೃಷ್ಟಿಕರರ್ತ, ಎಂದು ಹೇಳುತ್ತಾ, ಬದುಕಿನಲ್ಲಿ ಕಳೆದುಹೋದದ್ದನ್ನು ಬಿಟ್ಟು, ಮುನ್ನೋಟವಿಟ್ಟುಕೊಳ್ಳಬೇಕೆಂದು ಸೂಚಿಸಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ. 😊: ಚಾಣಕ್ಯನ ನೀತಿಗಳು - ದುಷ್ಟ ವ್ಯಕ್ತಿಗಳ ಸಿಹಿ ಮಾತುಗಳ ಮೇಲೆ ತಪ್ಪಿಯೂ ವಿಶ್ವಾಸವಿಡಬಾರದು. ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಮರೆತಿರುವುದಿಲ್ಲ. ಹುಲಿ ಹಿಂಸೆ ಮಾಡುವುದನ್ನು ಬಿಡುವುದಿಲ್ಲ... 😊:ನುಡಿಮುತ್ತು ಸ್ವಲ್ಪ ಇದ್ದಾಗ ಜಾಸ್ತಿ ಬೇಕೆನಿಸುತ್ತದೆ. ಜಾಸ್ತಿ ಇದ್ದಾಗ ಇನ್ನೂ ಜಾಸ್ತಿ ಬೇಕೆನಿಸುತ್ತದೆ. ಆದರೆ ಎಲ್ಲವನ್ನೂ ಕಳೆದುಕೊಂಡಾಗ ಸ್ವಲ್ಪವೇ ಎಷ್ಟು ದೊಡ್ಡದಿತ್ತು ಎಂದು ಗೊತ್ತಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದರ ಅರ್ಥ ಇದೇ. #nudii muttu
221 ವೀಕ್ಷಿಸಿದ್ದಾರೆ
6 ತಿಂಗಳ ಹಿಂದೆ
#

nudii muttu

🙏😊ಎಲ್ಲರಿಗು ಶುಭೋದಯ G😊😃D M0RNING🙏 😊: ನಿತ್ಯ ಕಗ್ಗ...... ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ । ಅವರೆಷ್ಟು ಯಶವಂತರ್ ಎನುವ ಕರುಬಿನಲಿ ॥ ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು । ಶಿವನಿಗೆ ಕೃತಜ್ಞತೆಯೆ? - ಮಂಕುತಿಮ್ಮ ॥ ೭೪೭ ॥ 😊: How rich are they? How powerful are they? How famous are they? Man has only such thoughts about others. There is a whole lot of possessions that he has an enjoys. But he forgets them all and concentrates only on what others have. Is this how we show thankfulness to God (Lord Shiva)? - Mankutimma 😊: ಅವರಿಗೆಷ್ಟು ಧನವಿದೆ, ಇವರಿಗೆಷ್ಟು ಬಲವಿದೆ ಮತ್ತು ಅವರೆಷ್ಟು ಯಶಸ್ವೀ ಜನ ಎಂದು ಅನ್ಯರ ಕಂಡು ಕೊರಗುವುದರಲ್ಲಿ ನಿನ್ನ ಬಳಿ ಏನಿಹುದು ಎಂದು ನೀನು ಮರೆತು ಹೋದರೆ ಅದು ಆ ಪರಮಾತ್ಮನಿಗೆ ಕೃತಜ್ಞತೆ ತೋರಿದಂತೆ ಆಗುತ್ತದೆಯೇ? ಎಂದು ಒಂದು ತಾತ್ವಿಕ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು. 😊: ಚಾಣಕ್ಯನ ನೀತಿಗಳು - ದುರ್ಬಲ ಮನಸ್ಸಿನ ಮನುಷ್ಯ ವಿಷಯಗಳನ್ನು ದೊಡ್ಡದು ಮಾಡುತ್ತಾನೆ. ಆದರೆ ಅವನಿಂದ ದೊಡ್ಡದನ್ನು ಪಡೆಯಲಾಗುವುದಿಲ್ಲ. 😊: ನುಡಿಮುತ್ತು *ಮೌನವನ್ನು ನೀವು ಪ್ರಶಾಂತತೆ ಎಂದು ತಿಳಿದರೆ ತಪ್ಪಾಗುತ್ತದೆ*. *ಮೌನದಲ್ಲಿರುವಷ್ಟು ಪ್ರಭಲ ಸಂಘರ್ಷ ಮತ್ಯಾವ ಗದ್ದಲದಲ್ಲೂ ಇಲ್ಲ...!!*
259 ವೀಕ್ಷಿಸಿದ್ದಾರೆ
7 ತಿಂಗಳ ಹಿಂದೆ
#

nudii muttu

322 ವೀಕ್ಷಿಸಿದ್ದಾರೆ
10 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post