ಶುಭ ಶುಕ್ರ ವಾರ 🙏🏻
113 Posts • 103K views
Ram Ajekar
615 views 12 days ago
ಒಂದು ನೀರಿನ ಹನಿ ಅದೊಂದು ನೀರಿನ ಹನಿ ಮಳೆ ನಿಂತುಹೋಗಿದ್ದರೂ, ಆ ಹನಿಯು ಮರದ ಎಲೆಗಳಿಂದ ಜಾರಿಕೊಂಡು ಫಠಕ್ ಎಂದು ಮನೆಯ ಹಂಚಿನ ಛಾವಣಿಯ ಮೇಲೆ ಬಿತ್ತು. ಮಳೆ ನಿಂತರೂ ಮತ್ತೆ ಸುರಿಯುವ ಆಸೆಯ ಮಳೆಹನಿ ಇನ್ನೊಂದು ಹನಿಯನ್ನು ಹಾಳು ಮಾಡದೆ ಭೂಮಿಗೆ ಸೇರಲು ತವಕಿಸುತ್ತಿತ್ತು. ಸಾಗರವೆಂಬುದು ನೀರಿನ ಹನಿಗಳಿಂದಲೇ ಆಗಿದೆ. ಸಮುದ್ರ, ಕೆರೆ, ನದಿ ಎಲ್ಲವು ನೀರಿನ ಮೂಲಗಳೇ. ಸಕಲ ಪ್ರಾಣಿ–ಪಕ್ಷಿಗಳ ಬದುಕಿಗೆ ಒಂದೇ ಹನಿ ನೀರು ಸಾಕಷ್ಟೆ. ಬದುಕಿನ ವ್ಯತ್ಯಾಸಗಳೂ ಹಾಗೆಯೇ — ನೀರಿನ ಹನಿಗಳಂತೆ. ಒಮ್ಮೆ ಬಿತ್ತು ಹೋದರೆ ಮತ್ತೆ ಮರಳಿ ಬರುವುದಿಲ್ಲ. ಸಮಯ ಕಳೆದುಹೋದರೆ ಸಿಗುವುದಿಲ್ಲ; ಹಾಗೆಯೇ ಬದುಕು ಕೂಡ. ಒಮ್ಮೆ ಯಾವುದೋ ಸನ್ನಿವೇಶದಲ್ಲಿ ತುಂಬಾ ಬಾವುಕನಾಗಿದ್ದೆ. ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. “ಸೋತೆಯಾ?” ಎಂಬ ಪ್ರಶ್ನೆಗೆ ಕಣ್ಣೀರು ಉತ್ತರಿಸಿತ್ತು. ಆದರೆ ಆಗ ಬಂದ ಮಳೆ, ಕಣ್ಣೀರನ್ನು ತೊಳೆದು ತನ್ನ ಹನಿಯೊಂದಿಗೆ ಕಳೆದುಹೋದಿತು. “ಕಣ್ಣೀರಿನ ಜೊತೆ ನಾನಿದ್ದೀನಿ” ಎಂದು ಮಳೆ ಹನಿ ಭರವಸೆ ನೀಡಿದಾಗ, ಹೃದಯದಲ್ಲಿ ಹೊಸ ಖುಷಿ ಭರವಸೆ ಮೂಡಿತ್ತು. ನೋವಿನೊಂದಿಗೆ ಬಂದ ನಾಳೆಯ ಭರವಸೆಗಳು ನಮ್ಮನ್ನು ಇನ್ನಷ್ಟು ಗಟ್ಟಿಯನ್ನಾಗಿಸಿವೆ. ಒಮ್ಮೆ ಬಟ್ಟೆ ಒಗೆದು ಒಣಗಿಸಲು ಸರಿಗೆಯ ಮೇಲೆ ಹಾಕುತ್ತಿದ್ದೆ. ಭಾರಿ ಬಿಸಿಲು ಮೇ ತಿಂಗಳ ಎರಡನೇ ವಾರ. ಬಿಸಿಯ ಕಾವಿನಲ್ಲಿ ಕೆಂಪಿರುವೆಗಳೊಂದು ಸರಿಗೆಯ ಮೇಲಿನಿಂದ ಸಾಗುತ್ತಿದ್ದವು. ಬಿಸಿಗೆ ಬಸವಳಿದಿರಬೇಕು. ನೆಲಕ್ಕೆ ಬಿದ್ದವು. ಆದರೂ ಒಗೆದ ಬಟ್ಟೆಯ ಮೇಲಿನ ನೀರಿನ ಹನಿಗಳು ಕೆಂಪಿರುವೆಗಳ ಮೇಲೆ ಬಿದ್ದು ಅವುಗಳಿಗೆ ಜೀವ ನೀಡಿದವು. ಒಂದು ಹನಿ ನೀರು ಬಿದ್ದಾಗ, “ಅಬ್ಬಾ, ಬದುಕಿದೆ ಬಡ ಜೀವ!” ಎಂದು ಅನಿಸಿದಂತಾಯಿತು. ಅದು ಕೂಡ ಒಂದು ಹನಿ ನೀರು. ಕಣ್ಣೀರಾದರೂ ಅದರಲ್ಲಿದೆ ನೋವಿನ ಮೌಲ್ಯ; ಮಳೆಯಾದರೂ ಅದರಲ್ಲಿದೆ ಪ್ರೀತಿಯ ಮೌಲ್ಯ. ಬಟ್ಟೆ ಒಗೆದ ನೀರಿನ ಹನಿಯೂ ಕೆಂಪಿರುವೆಗೆ ಜೀವ ಉಳಿಸಿದ ಮೌಲ್ಯವಿತ್ತು. . ರಾಂ‌ ಅಜೆಕಾರು ಕಾರ್ಕಳ #ಸ್ಪೂರ್ತಿ ದಾಯಕ ಮಾತು ಗಳು👌👍 #ಶುಕ್ರವಾರ #ಶುಭ ಶುಕ್ರ ವಾರ 🌸🌸🌸🌸 #ಶುಕ್ರ ಗೌರೀ ಶುಭಾಶಯ #ಶುಭ ಶುಕ್ರ ವಾರ 🙏🏻
14 likes
6 shares
Ram Ajekar
993 views 2 months ago
#🙏ಶುಕ್ರವಾರದ ಭಕ್ತಿ ಸ್ಪೆಷಲ್ ಕರುವಿನ ಕಾತರ !!! ಗುಡ್ಡದ ಮೇಲೆ ಹಸಿರು ಹುಲ್ಲಿನ ಹಾಸು ಚೆಲ್ಲಿದೆ. ಆ ಹಸಿರಿನ ಮಧ್ಯೆ ಮುಗಿಲು ಮುಟ್ಟುವ ಮಂಜು ಹರಡಿಕೊಂಡಿತ್ತು. ಮಳೆಯ ಹನಿಗಳು ಮಂಜಿನಲ್ಲಿ ಕರಗಿ ಹೋದಂತೆ ಹೊಳೆಯುತ್ತಾ ಸುರಿಯುತ್ತಿದವು. ಗೋಧೂಳಿ ಹೊತ್ತು ಇಳಿಯುತ್ತಿದ್ದರೂ, ಆಕಾಶದ ದಟ್ಟ ಮಂಜಿನಲ್ಲಿ ಸಮಯವೇ ಕಣ್ಮರೆ ಆಯಿತೇನೋ ಎನ್ನಿಸುವಂತಿತ್ತು. ಮೈಮೇಲೆ ಹನಿಗಳ ನೆನೆವಿನಿಂದ ಜಾರಾಡುತ್ತಿದ್ದ ಹಸುಗಳು ಹೊಟ್ಟೆ ತುಂಬಿಸುತ್ತ ಕಿವಿ ನೆವರಿಸಿಕೊಂಡಿದ್ದವು. ಅವರ ಕಣ್ಣಿನಲ್ಲಿ ಒಂದೇ ಕಾತರ "ಇನ್ನೂ ಸ್ವಲ್ಪ ಹುಲ್ಲು ತಿಂದರೆ ಹೊಟ್ಟೆ ತುಂಬುತ್ತದೆ, ಹೀಗೆ ಹೊಟ್ಟೆ ತುಂಬಿದರೆ ಮರಿಗೂ ಹಾಲು ಕೊಡುವ ಶಕ್ತಿ ಬರುತ್ತದೆ". ಹಸುವಿನ ಕಣ್ಣಿನಲ್ಲಿ ಮಮತೆಯ ಮಿಂಚು ಕಾಣಿಸಿತು. ತನ್ನ ಕರು ಹಸಿವಿನಿಂದ ಬಳಲಬಾರದೆಂಬ ಚಿಂತನೆ ಅವರೊಳಗಿನ ಮಾತೇನೋ ಎನ್ನುವ ಭಾವ ಮೂಡಿತು. ಆ ಹೊತ್ತಿಗೆ ಮನೆಯೊಡತಿ ಹಸುಗಳನ್ನು ಕರೆ ಬಂದಳು. . ಹಸುವಿನ ನಡಿಗೆಯಲ್ಲೊಂದು ಚಂಚಲತೆ, ಕಣ್ಣಲ್ಲಿ ಪ್ರೀತಿ, ಮನಸ್ಸಲ್ಲಿ ಮಗು ಎಂಬ ನೆನಪು. ಕೊಟ್ಟಿಗೆಯ ದೀಪದ ಬೆಳಕಿನತ್ತ ಹಸುವಿನ ಹೆಜ್ಜೆ ತಿರುಗಿತು. ಆ ದೃಶ್ಯ ನೋಡುವಷ್ಟರಲ್ಲಿ ಗೋಧೂಳಿಯ ಮಂಕು ಹೊತ್ತು ಹೃದಯವನ್ನೇ ಮುಟ್ಟಿತು. ಇನ್ನೊಂದು ಮೂಲೆಯಲ್ಲಿ ಹಂಚಿನ ಅಂಗಳದಲ್ಲಿ ಬೆಂಕಿ ಹಚ್ಚಿ ಯಜಮಾನಿ ಬಿಸಿ ನೀರು ಕಾಯಿಸುತ್ತಿದ್ದಳು. ಹೊರಗೆ ಮಂಜು, ಚಳಿ ಎಷ್ಟು ಕಚಗುಳಿ ಹಾಕುತ್ತಿದ್ದರೂ ಮನೆಯೊಳಗೆ ಬೆಂಕಿಯ ಉರಿ ಬೆಚ್ಚಗಿನ ತಾಯಿಮಡಿಲಿನಂತೆ ತೋರುತ್ತಿತ್ತು. ಕತ್ತಲೆಯ ಮಂಜಿನಲ್ಲಿ ಒಂದು ಹೊತ್ತಿಗೆ ಆ ಬೆಚ್ಚಗಿನ ಅನುಭವ ಜೀವಂತಿಕೆಗೆ ಬಲ ನೀಡಿದಂತಾಯಿತು. ಕೊಟ್ಟಿಗೆಯೊಳಗೆ ಕರು ಚಂಗನೆ ಹಾರಿ “ಅಂಬಾ” ಎಂದು ಕೂಗಿತು. ಆ ಕೂಗಿಗೆ ಸ್ಪಂದಿಸಿದಂತೆ ತಾಯಿ ಹಸು ತನ್ನ ಹಾಲನ್ನು ಹಂಚಿತು. ಹಾಲಿನ ಬಿಳುಪು ಕರುಬಾಯಿ ಮುಟ್ಟಿ ಹರಿಯುತ್ತಿದ್ದಂತೆ ಆ ದೃಶ್ಯವೇ ಭೂಮಿಗೆ ಇಳಿದ ಮಮತೆ ಎಂದು ಅನ್ನಿಸಿತು. ಮನೆಯ ಯಜಮಾನಿ ಹಸುಗಳಿಗೆ ಬಿಸಿ ನೀರು ಇಡುತ್ತಿದ್ದಾಗ, ಅವರ ಮೈ ಬಿಸಿ ಏರಿ ಚಳಿಯಿಂದ ಮುಕ್ತಿ ದೊರಕಿದಂತಾಯಿತು. ಗುಡ್ಡದ ಮಂಜು, ಮಳೆಯ ಚಳಿ, ಹಸುವಿನ ಮಮತೆ, ಕರುವಿನ ಕಾತರ ಈ ಎಲ್ಲವೂ ಒಂದೇ ಬಗೆಯ ಭಾವಯಾತ್ರೆಯಂತೆ ಕಾಣಿಸಿತು. ಪ್ರಕೃತಿ, ಪ್ರಾಣಿ, ಮನುಷ್ಯ ಮೂವರು ಒಂದೇ ಹೃದಯದ ತಂತಿಯಲ್ಲಿ ಕೂಡಿಕೊಂಡಂತೆ ಆ ಸಾಯಂಕಾಲ ಭಾಸವಾಯಿತು. ರಾಂ ಅಜೆಕಾರು ಕಾರ್ಕಳ http://ramajekar.travel.blog/2025/08/29/daily-story/ #ಶುಭ ಶುಕ್ರ ವಾರ 🌸🌸🌸🌸 #ಶುಕ್ರ ಗೌರಿ 🙏🙏 #ಶುಕ್ರ ಗೌರೀ ಶುಭಾಶಯ #ಶುಭ ಶುಕ್ರ ವಾರ 🙏🏻 #KudremukhTrek #WesternGhatsTrek #KudremukhPeak #TrekLife #NatureEscape #WesternGhatsDiaries #MountainMagic #KudremukhAdventure #TrekkingIndia #MistyMountains #GreenTrails #ExploreKudremukh #TrekToRemember #KudremukhVibes #NatureAddict #WesternGhatsBeauty #LostInNature #HikingGoals #KudremukhHeights #EcoTrail #MountainTherapy #TrekkerLife #IntoTheWild #NatureLoversParadise #WesternGhatsMagic #AdventureSeekers #KudremukhHills #HikeMoreWorryLess #SoulfulTrek #WesternGhatsExplorer
10 likes
18 shares