men,s day
#

men,s day

#ಒಂದ್ ಸರೀ ಓದಿ ಹುಟ್ಟಿದಾಗ ಗಂಡು ಮಗು ಆಗಿದೆ ಅಂತಾ ಎಲ್ಲರೂ ಖುಷಿ ಪಡ್ತಾರೆ ಆದರೆ ಆ ಮಗೂ ಮುಂದೆ ತಾನೂ ಗಂಡು ಅಂತಾ ಸಾಬೀತು ಮಾಡಲು ಎಷ್ಟು ಕಷ್ಟ ಪಡಬೇಕು ಅಂತಾ ಬರೆಯೋ ಪ್ರಯತ್ನ ಮಾಡಿದ್ದೀನಿ 😍. ಗಂಡು ಮಗು ಹುಟ್ಟಿದ ಮೇಲೆ 3 ವರ್ಷದ ವರೆಗೆ ಮಾತ್ರ ಮಗು ತರ ನೋಡ್ಕೋತಾರೆ ಆಮೇಲೆ. ಹುಡುಗ ಅತ್ತರೆ - ಲೇ ನೀನು ಹುಡುಗ ಕಣ್ಲಾ ಹುಡುಗೀತರ ಅಳ್ತಿಯಲ್ಲ ನಾಚಿಕೆಯಾಗಲ್ವಾ ? ಅಂತಾರೆ ಪಾಪ ಆ ಮಗೂ ಮನಸ್ಸು ಕಲ್ಲು ಮಾಡ್ಕೊಂಡು ಅಳೋದೇ ನಿಲ್ಸುತ್ತೆ 😥. ಪಾಪ ಇನ್ನೂ ಅಂಗನವಾಡಿಗೆ ಹೋಗ್ತಾಯಿರುತ್ತೆ ನೀನು ಚೆನ್ನಾಗಿ ಓದಿ ಡಾಕ್ಟರು , ಇಂಜಿನಿಯರು ಆಗ್ಬೇಕು ಅಂತಾರೆ. ಹಳ್ಳಿಯಲ್ಲಿ ಹುಟ್ಟಿರೋ ಗಂಡು ಮಕ್ಳಂತು ಅಪ್ಪನಿಗೆ ಹೊಲದಲ್ಲಿ ಸಹಾಯ ಮಾಡಿ ಶಾಲೆಗೆ ಹೋಗ್ತಾರೆ. ಹೆಂಗೋ ಮಾಡಿ 10ನೆ ಪಾಸ್ ಮಾಡಿರ್ತಾರೆ ಅವಾಗ puc ಯಲ್ಲಿ ವಿಜ್ಞಾನ ವಿಭಾಗ ಆಯ್ಕೆಮಾಡಿಕೊಳ್ಳಲು ಒತ್ತಡ ಹೇರಲಾಗುತ್ತದೆ. ಹದಿಹರೆಯ ವಯಸ್ಸಿನ ಹುಚ್ಚಾಟದ ಮಧ್ಯಯೂ ಪರೀಕ್ಷೆಯ ಟೈಮಲ್ಲಿ ಓದಿ ಪಾಸ್ ಮಾಡ್ಕೋತಾರೆ. ಅದಾದಮೇಲೆ ಯಾರೋ ಹೇಳಿದ್ರು ಅಂತ ಒಂದು ಯಾವುದೋ ವೃತ್ತಿಪರ ಕೋರ್ಸಿಗೆ ಸೇರಿ 4-5 ವರ್ಷಗಳಲ್ಲಿ ಪದವಿಯನ್ನು ಪಾಡ್ಕೋತಾರೆ. ಡಿಗ್ರಿ ಹೆಂಗೋ ಆಯ್ತು ಒಂದು ಸ್ವಲ್ಪ ದಿನ ಆರಾಮಾಗಿ ಇರೋಣ ಅಂದ್ರೆ ಸಂಬಂಧಿಕರು ಪಕ್ಕದ್ಮನೆಯ , ಆಂಟಿ , ಅಂಕಲ್ಗಳ ಟಾರ್ಚರ್ ತಡಿಲಾರ್ದೆ , ಇಷ್ಟವಿಲ್ಲದಿದ್ದರೂ ಯಾವ್ದೋ ಕಿತ್ತೊದ್ ಕೆಲಸಕ್ಕೆ ಸೇರ್ಕೊತಾರೆ. ಬರೋ ಕಡಿಮೆ ಸಂಬಳದಲ್ಲಿಯೇ ಬದುಕಿ ಅದ್ರಲೇ ಸ್ವಲ್ಪ ದುಡ್ಡು ಉಳಿಸಿ ಮನೆಗೆ ಕಳಿಸಬೇಕು. ಸ್ವಲ್ಪ ದಿನ ಆದ್ಮೇಲೆ ಒಳ್ಳೆಯ ಕೆಲಸ ಹುಡುಕಿಕೊಂಡು OT ಗೀಟಿ ಮಾಡಿ ಮನೆಯ ಸಾಲಗಳೆಲ್ಲ ತೀರಿಸಿ , ಅಕ್ಕ ತಂಗಿ ಇದ್ರೆ ಅವರ ಮದುವೆ ಮಾಡಿಸಿ ಅವನು ಮದುವೆಯಾಗುವಷ್ಟರಲ್ಲಿ ಅವನ ವಯಸ್ಸು 30-35 😥. ಮದುವೆಯಾದಮೇಲೆ ಹೆಂಡತಿಯನ್ನೂ ಸಹಿಸಿ ಮಕ್ಕಳಿಗೆ ಆಸ್ತಿ ಮಾಡಿಕ್ಕಲು ಮತ್ತೆ 20 ವರ್ಷ ದುಡಿತಾನೇ. ಇಷ್ಟೆಲ್ಲ ಆಗಿ ಅವನು ಬದುಕುಳಿದರೆ ಅವನಿಗೆ 60 ವರ್ಷ 😥. ಮಕ್ಕಳು ಒಳ್ಳೆಯವರಾಗಿದ್ದರೆ ಮನೆಯಲ್ಲಿ ಇಲ್ಲ ವೃಧಾಶ್ರಮದಲ್ಲಿ ಬಿಪಿ , ಶುಗರ್ ಮಾತ್ರೆ ನುಂಗಿ ಸ್ವಲ್ಪ ವರ್ಷಗಳಲ್ಲಿ ಸ್ವರ್ಗಕ್ಕೆ ಹೋಗೊನೆ ಪುರುಷ 😥. ಏನೋ ನಾನೂ ಕಂಡದ್ದು ಬರೆದಿದ್ದೇನೆ ನಿಮ್ಮ ಅನಿಸಿಕೆ ತಿಳಿಸಿ 😍. ಈ ಬರಹ ಪ್ರತಿಯೊಬ್ಬ ಜವಾಬ್ದಾರಿಯುತ ಪುರುಷರಿಗೆ ಅರ್ಪಣೆ 😍. #ವಿಶ್ವ_ಪುರುಷ_ದಿನ
733 ವೀಕ್ಷಿಸಿದ್ದಾರೆ
12 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post