Failed to fetch language order
ಶಿಯಾ
1 Post • 115 views
"ಇರಾನ್ಂಘರ್ಷ: ಧರ್ಮದ ಹೆಸರಿನಲ್ಲಿ ರಾಜಕೀಯ ಬಲಾಟಿಕೆ" ಇರಾನ್ - ಇಸ್ರೇಲ್ ದೇಶಗಳ ಯುದ್ದವಲ್ಲ, ಯಹೂದಿ-ಮುಸ್ಲಿಂ ಧರ್ಮಗಳ ಯುದ್ದವಲ್ಲ, ಇದು ಇರಾನ್ ಶಿಯಾ-ಇಸ್ರೇಲ್ ಯಹೂದಿಗಳ ಯುದ್ದ ಶಿಯಾ ರಾಷ್ಟ್ರವಾದ ಇರಾನ್ ಪರ ಸುನ್ನಿ ರಾಷ್ಟ್ರಗಳು ಬೆಂಬಲಕ್ಕೆ ಬರುತ್ತಿಲ್ಲ, ಕಾರಣ ಇರಾನ್ಗೆ ಸುನ್ನಿಗಳೆಂದರೆ ಆಗಿಬರಲ್ಲ, ಏಕೆಂದರೆ ಸೌದಿ ಸುನ್ನಿ ರಾಷ್ಟ್ರ ಆ ರಾಷ್ಟ್ರಕ್ಕೆ ಶಿಯಾ ಹೌತಿಗಳು ದಾಳಿ ಮಾಡುತ್ತಾರೆ, ಈ ಹೌತಿಗಳಿಗೆ ಇಸ್ರೇಲ್ ಸಹಕಾರ ನೀಡುತ್ತದೆ,ಅದಕ್ಕಾಗಿ ರಣರಂಗದಲ್ಲಿ ಬರುತ್ತಿಲ್ಲ, ಒಂದು ಕಡೆ ಮುಸ್ಲಿಂ ರಾಷ್ಟ್ರ ಎಂದು ಹೇಳಿಕೊಳ್ಳುವ ಪಾಕಿಸ್ತಾನ ತನ್ನ ಗಡಿಯನ್ನು ಮುಚ್ಚಿದೆ, ಅಮೇರಿಕಾ ಬುಡಕ್ಕೆ ಹೋಗಿ ಮಲಗಿದೆ, ಅಷ್ಟು ಧರ್ಮಾಭಿಮಾನ ಇದ್ದರೆ ಪಾಕಿಸ್ತಾನ ರಣರಂಗದಲ್ಲಿ ಇಳಿಯಬೇಕಿತ್ತು, ಇಳಿಯಲ್ಲ, ಅವರವರ ದೇಶದ ಲಾಭದ ಬಗ್ಗೆ ಎಲ್ಲಾ ದೇಶಗಳು ಯೋಚಿಸುತ್ತವೆ ವಿನಃ ಬಲಿಯಾಗಲು ಬಯಸಲ್ಲ, ಅಮೇರಿಕಾ ಅಷ್ಟಾಗಲಿ ಇರಾನ್ಗೆ ಬುದ್ದಿವಾದ ಹೇಳಿದೆ, ಶಾಂತಿ ಒಪ್ಪಂದ ಮಾಡಿಕೊಳ್ಳಿ ಅಂತ ಯುದ್ದ ನಿಲ್ಲಿಸಲು ಮುಂದಾಗಿತ್ತು ಎಚ್ಚರಿಕೆಯನ್ನು ಸಹ ನೀಡಿದೆ ಈಗ ದಾಳಿ ಸಹ ಮಾಡಿದೆ ಅವರವರ ನಿಲುವುಗಳು ಅವರಿಗೆ ಬಿಟ್ಟಿದ್ದು ಇಲ್ಲಿ ನೋಡಿದರೆ ನಮ್ಮ ಜನ ರಾಜಕಾರಣಿಗಳು ಭಾರತ ಇರಾನ್ ಪರ ನಿಲ್ಲಬೇಕು ಎಂದು ಹೇಳುತ್ತಾರೆ, ಅವರವರ ಸೆಂಟಿಮೆಂಟ್, ರಾಜಕೀಯ ಲಾಭ ಅವರಿಗೆ, ಏನಾದರೂ ಹೇಳಿಕೆ ಕೋಡುತ್ತಾರೆ ಅದೆ ರಾಜಕೀಯ ಪಾಕಿಸ್ತಾನದ ಜೊತೆಗೆ ಯುದ್ದದ ಸಂಧರ್ಭದಲ್ಲಿ ಇಸ್ರೇಲ್ ಭಾರತದ ಪರವಾಗಿ ನಿಂತಿದೆ ಹಾಗೆ ನೋಡಿದರೆ ಭಾರತ ಇಸ್ರೇಲ್ ಪರ ನಿಲ್ಲಬೇಕು ಅದು ಯಾವಾಗ ಪಾಕಿಸ್ತಾನದ ಮೇಲೆ ಇಸ್ರೇಲ್ ಏನಾದರೂ ಯುದ್ದ ಸಾರಿದರೆ ಆಗ ಖಡಾಖಂಡಿತವಾಗಿ ಭಾರತ ಇಸ್ರೇಲ್ ಜೊತೆಗೆ ಪಾಕಿಸ್ತಾನದ ಮೇಲೆ ಯುದ್ದ ಮಾಡಬೇಕು -ಅಯ್ಯನಗೌಡ ಪಾಟೀಲ #ಇಸ್ರೇಲ್ #ಇರಾನ್ #ಇಸ್ಲಾಂ ಧರ್ಮ #ಶಿಯಾ #ಮುಸ್ಲಿಂ
12 likes
12 shares