🚨 ಡ್ಯಾನ್ಸ್ ಮಾಸ್ಟರ್ ಬರ್ಬರ *ತ್ಯೆ! 🚨
10 Posts • 50K views
#🚨 ಡ್ಯಾನ್ಸ್ ಮಾಸ್ಟರ್ ಬರ್ಬರ *ತ್ಯೆ! 🚨 ಹಾವೇರಿ: ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ಒಬ್ಬರ ಕತ್ತು ಸೀಳಿ ಕೊ*ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಮೊಟೆಬೆನ್ನೂರು ಎಂಬಲ್ಲಿ ನಡೆದಿದೆ. ಲಿಂಗೇಶ್ ಕೊ*ಲೆಯಾದ ಡ್ಯಾನ್ಸ್ ಮಾಸ್ಟರ್. ಲಿಂಗೇಶ್ ಮೃತದೇಹ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಫ್ಲೈಓವರ್ ಮೇಲೆ ಪತ್ತೆಯಾಗಿದೆ.ಮೃತ ಲಿಂಗೇಶ್ ಚಿತ್ರದುರ್ಗದಲ್ಲಿ ಡ್ಯಾನ್ಸ್ ಸ್ಕೂಲ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ ಲಿಂಗೇಶ್ ಮನೆಗೆ ಶವವಾಗಗಿ ಬಂದಿದ್ದಾರೆ.ಭಾನುವಾರ ರಾತ್ರಿ ಲಾಂಗ್ ರೈಡ್ ಹೋಗುತ್ತಿರೋದಾಗಿ ಲಿಂಗೇಶ್ ಮನೆಯಿಂದ ಹೊರ ಹೋಗಿದ್ದರು. ತಾಯಿ ರಾತ್ರಿ ಊಟಕ್ಕೆ ಕರೆಯಲು ಫೋನ್ ಮಾಡಿದ್ದಾಗ ಲಿಂಗೇಶ್, ಬರ್ತಿನಮ್ಮ ಎಂದು ಸಹ ಹೇಳಿದ್ದರು. ಆದರೆ ಈ ವೇಳೆಗಾಗಲೇ ಲಿಂಗೇಶ್ ಹುಬ್ಬಳ್ಳಿ ತಲುಪಿದ್ದರು ಎನ್ನಲಾಗಿದೆ. ಇದೀಗ ಬೆಳಗ್ಗೆ ಲಿಂಗೇಶ್ ಮೃತದೇಹ ಪತ್ತೆಯಾಗಿದೆ. ಲಿಂಗೇಶ್ ಹುಬ್ಬಳ್ಳಿಗೆ ಬಂದ ಮೇಲೆ ಏನಾಯ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಮತ್ತೊಂದೆಡೆ ಲಿಂಗೇಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಶವ ಪತ್ತೆಯಾದ ಸ್ಥಳದಲ್ಲಿ ಚಾಕು ಪತ್ತೆ ಕತ್ತು ಸೀಳಿ ಕೊ*ಲೆ ಮಾಡಿರುವ ಹಂತಕರು ಶವವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಲಿಂಗೇಶ್ ಬಳಸುತ್ತಿದ್ದ ಡ್ಯೂಕ್ ಬೈಕ್, ಒಂದು ನೀರಿನ ಬಾಟೆಲ್, ಸಿಗರೇಟ್ ಪ್ಯಾಕ್ ಮತ್ತು ಸಣ್ಣದಾದ ಚಾಕು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿಂಗೇಶ್ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
19 likes
3 comments 28 shares
Udaya Kumar Kulkarni
1K views 1 months ago
*ಕತ್ತು ಸೀಳಿದ ಸ್ಥಿತಿಯಲ್ಲಿ ಡ್ಯಾನ್ಸ್ ಮಾಸ್ಟರ್ ಶವ ಪತ್ತೆ: ಕೊಲೆಯೋ? ಆತ್ಮಹತ್ಯೆಯೋ?* ಈ ವೀಡಿಯೊ ವೀಕ್ಷಿಸಲು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://getlokalapp.com/share/posts/15298127?utm_source=video_link&utm_v=pdd_video_link_share&utm_constituency_id=4145 ನಾನು *Lokal App* ಬಳಸುತ್ತಿದ್ದೇನೆ. ನೀವು ತಕ್ಷಣ ಡೌನ್‌ಲೋಡ್ ಮಾಡಬಹುದು ಮತ್ತು ನಿಮ್ಮ ಜಿಲ್ಲೆ/ಸ್ಥಳೀಯ ಸುದ್ದಿಗಳು ಮತ್ತು ಉದ್ಯೋಗಾವಕಾಶಗಳೊಂದಿಗೆ ಅಪ್‌ಡೇಟ್ ಆಗಿರಬಹುದು. #🚨 ಡ್ಯಾನ್ಸ್ ಮಾಸ್ಟರ್ ಬರ್ಬರ *ತ್ಯೆ! 🚨
12 likes
16 shares