ಗಂಡ ಹೆಂಡತಿ
#

ಗಂಡ ಹೆಂಡತಿ

1.2k ವೀಕ್ಷಿಸಿದ್ದಾರೆ
4 ತಿಂಗಳ ಹಿಂದೆ
ಗಂಡನ ಮೇಲೆ ಹೆಂಡತಿಗೆ ಇರುವ ಸಣ್ಣ ಸಣ್ಣ ಆಸೆ ಏನು ಗೊತ್ತಾ? ಸಾಮಾನ್ಯವಾಗಿ ಹೆಣ್ಣು ಮಕ್ಖಳಿಗೆ ಬಹಳ ಆಸೆಗಳು ಎನ್ನುತ್ತಾರೆ. ಹೌದು ಹೆಣ್ಣು ತನ್ನ ಗಂಡನಿಂದ ಬಹಳಷ್ಟು ಆಸೆಗಳ ಈಡೇರಿಕೆಯನ್ನು ಅಪೇಕ್ಷೆ ಪಡುತ್ತಾಳೆ.. ಆದರೆ ಮುಖ್ಯವಾದುದೆಂದರೆ ಬಹಳಷ್ಟು ಹೆಣ್ಣು ಮಕ್ಕಳು ಸಣ್ಣ ಸಣ್ಣ ಆಸೆಗಳಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಾರೆ. ಅದರಲ್ಲೂ ತನ್ನ ಗಂಡನಿಂದ ಅಪೇಕ್ಷೆ ಪಡುವ ಸಣ್ಣ ಆಸೆಗಳು ಈಡೇರಿದರೇ ಅದರಲ್ಲೇ ಸ್ವರ್ಗ ಕಾಣುತ್ತಾಳೆ. ಅಂತಹ ಕೆಲವೊಂದು ಆಸೆಗಳು ಇಲ್ಲಿವೆ ನೋಡಿ.. ಬೆಳಗ್ಗೆ ಎದ್ದಾಗ ದೇವರ ನಂತರ ನೀ ನೋಡುವ ಮುಖವು ನನ್ನದಾಗಿರಲಿ.. ನೀ ಬೆಳಗ್ಗೆ ತಿಂಡಿ ತಿನ್ನುವಾಗ ಒಂದು ತುತ್ತು ನನಗಾಗಿ ಮೀಸಲಿರಲಿ.. ಕೆಲಸಕ್ಕೆಂದು ಹೋಗುವಾಗ ಕಣ್ ಸನ್ನೆ ಯಲ್ಲೇ ಹೇಳಿದರೂ ಸಾಕು.. ಹೋಗಿ ನಾ ಬರುವೆನೆಂದು.. ಆದರೆ ಹೇಳದೆ ಹೋಗಬೇಡ ತಡೆಯಲಾಗುವುದಿಲ್ಲ ಆ ನೋವ ನಾನೆಂದು.. ನಿನ್ನ ಕೆಲಸಕ್ಕೆಂದು ನಾ ತೊಂದರೆ ನೀಡುವುದಿಲ್ಲ ನೆನಪಿಟ್ಟುಕೊ.. ಆದರೆ ಊಟದ ವೇಳೆಯಲ್ಲಿ ಒಮ್ಮೆಯಾದರೂ ನನ್ನ ನೆನೆಸಿಕೊ.. ಸಂಜೆ ವೇಳೆಯಲಿ ನನಗಾಗಿ ನೀ ತರಬೇಡ ಏನನ್ನೂ.. ಆದರೆ ತಡವಾಗಿ ಬರಬೇಡ ಕಾಯುತ್ತಿರುವೆ ನಿನ್ನನ್ನು.. ಸಮಾರಂಭಗಳಿಗೆ ಹೋದಾಗ ಅಪರಿಚಿತನಂತೆ ನೀ ದೂರ ಹೋಗಬೇಡ.. ಕೈ ಹಿಡಿಯದಿದ್ದರೂ ಪರವಾಗಿಲ್ಲ, ನಾ ನಿನ್ನವಳೆಂದು ನೀ ಮರೆಯಬೇಡ.. ಸುಖವ ಮಾತ್ರ ನೀಡು ಎಂದು ನಾ ಕೇಳುವವಳಲ್ಲ.. ನಿನ್ನ ಕಷ್ಟಗಳಲ್ಲಿ ನಾ ಜೊತೆ ಇರುವೆ ಹೆಣ್ಣು ಅಬಲೆಯಲ್ಲ.. ಬಂದಾಗ ನಾ ತಾಯಿ ಆಗುವ ಸಂತೋಷದ ಸಮಯ.. ಅದು ನಮ್ಮಿಬ್ಬರ ಪಾಲಿಗೊಂದು ಆಗಬೇಕು ವಿಸ್ಮಯ.. ಜೀವನ ಪೂರ್ತಿ ನಿನ್ನ ಮಗುವಂತೆ ಕಾಣುವೆ.. ನಾ ತಾಯಿಯಾಗುವ ಸಮಯದಲ್ಲಿ ನಾನೇ ನಿನ್ನ ಮಗುವಾಗಿಬಿಡುವೆ.. ಅತಿಯಾದ ಕಾಳಜಿ ತೋರಿಸು ನನಗೆ ಎಂದಾಗ, ನಾ ಗುಲಾಮನಲ್ಲ ಎಂದು ರೇಗಬೇಡ.. ನಿನ್ನ ಮಗುವು ನಾನು, ಮಗುವಿಗೆ ಪ್ರೀತಿ ತೋರಿದರೆ ಗುಲಾಮನಾಗುವರೇನು? ಹೊಟ್ಟೆಯಲ್ಲಿ ಮಗುವಿರಲು ಸೂಕ್ಷ್ಮವಾಗುವುದಂತೆ ಮನವು.. ಹುಚ್ಚು ಆಸೆಗಳ ಈಡೇರಿಸಿಬಿಡು.. ಕಳೆದುಬಿಡಲಿ ಸಂತೊಷದಿ ಆ ಸಮಯವು.. ನನ್ನ ಗರ್ಭವ ಸೀಳಿ ಮಗು ಹೊರ ಬಂದಾಗ ನಾ ನೋಡಬೇಕು ನಿನ್ನ ಮುಖವ.. ನಂತರ ನಾ ಸತ್ತರೂ ಪರವಾಗಿಲ್ಲ, ನಾ ಪಡೆದು ಹೋಗುವೆ ಸಾರ್ಥಕ ಭಾವವ.. ಆರೋಗ್ಯ ಕೆಟ್ಟಾಗ ನಾನಿನ್ನ ಪೋಷಿಸುವೆ ಚಿಂತೆಬಿಡು.. ನಿನ್ನ ನೋವ ನಾ ನೋಡಲಾರೆ ಮರೆಯದಿರು.. ಸಮಾಜದಲ್ಲಿ ನನಗೂ ಒಂದು ವ್ಯಕ್ತಿತ್ವವ ರೂಪಿಸಿಕೊಳ್ಳಲು ಸಹಕಾರ ನೀಡಿಬಿಡು.. ನಾನೇನೇ ಆದರೂ ರಾತ್ರಿ ನಿನ್ನ ತೋಳ ಮೇಲೆ ಮಲಗಲು ಅವಕಾಶ ಮಾಡಿಕೊಡು.. ನನ್ನ ಆಸೆಗಳು ಅತಿ ಎನಿಸಿದರೆ ದಯಮಾಡಿ ಕ್ಷಮಿಸಿಬಿಡು.. ನಿನ್ನ ಬಳಿಯಲ್ಲದೇ ಯಾರಲ್ಲಿ ಕೇಳಲಿ ಈ ಬಯಕೆಗಳ ನೀ ಹೇಳಿಬಿಡು.. ಕೊನೆಯಲ್ಲಿ ನನ್ನದೊಂದು ಮಾತು.. ಇಲ್ಲಿ ನಾನು ಬರೆದಿರುವ ಹೆಣ್ಣಿನ ಆಸೆಗಳು ಕೆಲವರಿಗೆ ಅತಿ ಎನಿಸಬಹುದು, ಕೆಲವರಿಗೆ ಕೇವಲವೆನಿಸಬಹುದು, ಇನ್ನೂ ಕೆಲವರಿಗೆ ಸಿಲ್ಲಿ ಎನಿಸಬಹುದು, ಆದರೆ ಅದೆಷ್ಟೋ ಸಮಯಗಳು ಈ ಸಿಲ್ಲಿ ಆಸೆಗಳು ಈಡೇರದೇ ಕೊರಗುವುದುಂಟು, ಬೇಸರವನ್ನು ವ್ಯಕ್ತ ಪಡಿಸಿದಾಗ ಮನಸ್ಥಾಪಗಳು ಆಗುವುದು ಉಂಟು.. ಈ ಆಸೆಗಳು ಬಹಳಷ್ಟು ಮಂದಿಗೆ ಅಮೂಲ್ಯ ಎನಿಸಬಹುದು.. ಇಂದು ಇರುತ್ತೇವೆ, ನಾಳೆ ನಮ್ಮ ಜೀವದ ಮೇಲೆ, ನಮ್ಮ ಜೀವನದ ಮೇಲೆ ನಮಗೇ ಭರವಸೆ ಇರುವುದಿಲ್ಲ, ಇರುವಷ್ಟು ದಿನ ನಮ್ಮವರನ್ನು ಸಂತೋಷವಾಗಿಟ್ಟುಕೊಂಡರೆ ಅದರಲ್ಲಿ ಕಳೆದುಕೊಳ್ಳುವುದೇನಿದೆ ಅಲ್ಲವೇ? ಓದುತ್ತಿರುವವರು ಹೆಣ್ಣಾಗಲಿ ಗಂಡಾಗಲಿ ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡಿ, ಅವರ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿ, ಕಳೆದುಕೊಳ್ಳುವುದೇನಿಲ್ಲ, ಇನ್ನೊಬ್ಬರನ್ನು ಸಂತೋಷ ಪಡಿಸಿದರೆ ಆಗುವ ಆನಂದವೇ ಬೇರೆ.. #ಗಂಡ ಹೆಂಡತಿ
#

ಗಂಡ ಹೆಂಡತಿ

ಗಂಡ ಹೆಂಡತಿ - ShareChat
2.5k ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post