ಹೊನ್ನಾವರ: ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ 'ತಟ್ಟೆ ಹಣ'ಕ್ಕಾಗಿ ಅರ್ಚಕರಾದ ನರಸಿಂಹ ಭಟ್ ಹಾಗೂ ರಮಾನಂದ ಭಟ್ ಜನರ ಮುಂದೆಯೇ ಕಿತ್ತಾಡಿಕೊಂಡಿದ್ದಾರೆ. ದೇವಸ್ಥಾನದ ಹಕ್ಕಿಗಾಗಿ ಈ ಕುಟುಂಬದ ನಡುವೆ ದಶಕಗಳಿಂದ ಕೋರ್ಟ್‌ನಲ್ಲಿ ದಾವೆ ನಡೆಯುತ್ತಿದ್ದು, ಇದೀಗ ಪೂಜೆ ವಿಚಾರವಾಗಿ ಪರಸ್ಪರ ನೂಕಾಟ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. #😏ಇದೇ ಪ್ರಪಂಚ #🖋️ ನನ್ನ ಬರಹ