ShareChat
click to see wallet page

#😯ನಟ ವಿನಯ್ ರಾಜ್‌ಕುಮಾರ್‌ ಜೊತೆ ಖ್ಯಾತ ನಟಿ ಡೇಟಿಂಗ್😱 Ramya & Vinay Rajkumar: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Actress Ramya) ಮತ್ತು ನಟ ವಿನಯ್ ರಾಜ್ ಕುಮಾರ್ (Actor Vinay Rajkumar) ಮಧ್ಯ ಪ್ರೀತಿ ಅರಳಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ಸುದ್ದಿಯನ್ನು ರಮ್ಯ ತಳ್ಳಿ ಹಾಕಿದ್ದರು.ಇದೀಗ ವಿನಯ್ ಅವರು ನಟಿ ರಮ್ಯಾಗೆ ರಿಂಗ್ ಕೊಡಿಸಿದ್ದಾರೆ. ಇಬ್ಬರು ಸೇರಿ ಜ್ಯುವೆಲ್ಲರಿ ಶಾಪ್‌ಗೆ ತೆರಳಿ ರಿಂಗ್ ಖರೀದಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ.ರಮ್ಯಾ ಮತ್ತು ನಟ ಪುನೀತ್ ರಾಜ್ ಕುಮಾರ್ ಅವರಿಬ್ಬರು ಒಳ್ಳೆ ಪೇರ್. ಆಗಾಗ ಚಿತ್ರೀಕರಣ ವೇಳೆ ನಟ ವಿನಯ್ ರಾಜ್ ಕುಮಾರ್ ಅವರು ಸೆಟ್ ಗೆ ಹೋಗುತ್ತಿದ್ದರು. ಆಗಿನಿಂದಲೇ ವಿನಯ್ ರಮ್ಯಾ ಅವರಿಗೆ ಚಿರಪರಿಚಿತ. ಇತ್ತೀಚೆಗೆ ವಿನಯ್ ಜೊತೆಗೆ ರಮ್ಯಾ ಅವರು ಅಮೆರಿಕದಲ್ಲಿ ಕಾರ್ಯಕ್ರಮವೊಂದಕ್ಕೆ ಹೋದಾಗ ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡಿದ್ದರು. ಇವು ವೈರಲ್ ಆಗುತ್ತಿದ್ದಂತೆ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎಂದು ಹಬ್ಬಿಸಲಾಯಿತು. ಆದರೆ ಇದಕ್ಕೆ ರಮ್ಯಾ ಅವರು, ವಿ'ನಯ್ ನನ್ನ ತಮ್ಮನ ತರ' ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಹೊಸ ವಿಡಿಯೋ ಮೂಲಕ ಮತ್ತೊಮ್ಮೆ ತಮ್ಮ ಮಧ್ಯೆ ಏನು ಇಲ್ಲ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ವಿಡಿಯೋ ಸಖತ್ ವೈರಲ್ ಆಗುತ್ತಿದೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📢ಸೆಪ್ಟೆಂಬರ್ 26 ರ ಅಪ್ಡೇಟ್ಸ್ 👈 #👩ನಟಿಯರು #🍿ಸ್ಯಾಂಡಲ್ ವುಡ್

55.4K ने देखा
6 दिन पहले