ಫಾಲೋ
Edu ವೀರ
@edu_veera
12,525
ಪೋಸ್ಟ್ಸ್
189,502
ಫಾಲೋವರ್ಸ್
Edu ವೀರ
797 ವೀಕ್ಷಿಸಿದ್ದಾರೆ
14 ದಿನಗಳ ಹಿಂದೆ
ಕನ್ನಡ ಸಾಹಿತಿ, ಕವಯತ್ರಿ ಅರುಂಧತಿ ರಮೇಶ್ (76) ಅವರು ವಯೋಸಹಜ ಕಾಯಿಲೆಯಿಂದಾಗಿ ಬೆಂಗಳೂರಿನಲ್ಲಿ ಭಾನುವಾದ ನಿಧನ ಹೊಂದಿದ್ದು, ಅವರ ಮೃತದೇಹವನ್ನು ರಾಮಯ್ಯ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ; ಅವರು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದರು ಮತ್ತು 'ಚಿತ್ರಚಾತಕ', 'ಮಡಿಲು' ಮುಂತಾದ ಕೃತಿಗಳನ್ನು ರಚಿಸಿದ್ದರು. #💔ಖ್ಯಾತ ಹಿರಿಯ ಕನ್ನಡದ ಲೇಖಕಿ ಇನ್ನಿಲ್ಲ😭
Edu ವೀರ
25.5K ವೀಕ್ಷಿಸಿದ್ದಾರೆ
23 ದಿನಗಳ ಹಿಂದೆ
ಮಾಗಡಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಮನೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಯೂಟ್ಯೂಬ್‌ ನ್ಯೂಸ್‌ ಚಾನೆಲ್‌ ನಡೆಸುತ್ತಿದ್ದ ರವಿ ಜಮುನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಇಬ್ಬರು ಸ್ನೇಹಿತರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಾಲಕಿಯ ಸಹಾಯದಿಂದ ಆರೋಪಿಯನ್ನು ಹಿಡಿದು, ಆತನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. #😡17 ವರ್ಷದ ಬಾಲಕಿಯ ಕಿಡ್ನಾಪ್,ಅಸಭ್ಯ ವರ್ತನೆ ; ಖ್ಯಾತ ಯುಟ್ಯುಬರ್ ಅರೆಸ್ಟ್😱
Edu ವೀರ
72.1K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಕೆಜಿಎಫ್​ ಚಾಪ್ಟರ್​ 2 (KGF Chapter 2 Co-Director) ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ (Kirtan Nadagouda) ಅವರ ನಾಲ್ಕು ವರ್ಷದ ಪುತ್ರ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಕೀರ್ತನ್ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಪುತ್ರ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಪುತ್ರನನ್ನು ಕಳೆದುಕೊಂಡ ನಿರ್ದೇಶಕರ ಕುಟುಂಬ ಕಣ್ಣೀರಿಟ್ಟಿದ್ದಾರೆ. #💔ಲಿಫ್ಟ್‌ನಲ್ಲಿ ಸಿಲುಕಿ KGF ನಿರ್ದೇಶಕನ ಪುತ್ರ ದುರ್ಮರಣ😭
Edu ವೀರ
56.1K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಸಂಗೀತ್ ಸಾಗರ್ ಶಿವಮೊಗ್ಗದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಗರ್ ಮೃತದೇಹವನ್ನು ಇಡಲಾಗಿದೆ. ಸಾವು ಯಾವ ಕ್ಷಣದಲ್ಲಿ ಹೇಗೆ ಬರುತ್ತದೆ ಎಂದು ಊಹಿಸೋದು ತುಂಬಾನೇ ಕಷ್ಟ. ನಟಿಸುವಾಗಲೇ ನಿಧನ ಹೊಂದಿದ ಅನೇಕ ಕಲಾವಿದರು ಇದ್ದಾರೆ. ಈಗ ಕನ್ನಡದ ನಿರ್ದೇಶಕನೋರ್ವ ಸಿನಿಮಾ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ‘ಪಾತ್ರಧಾರಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದ ಸಂಗೀತ್ ಸಾಗರ್ ಮೃತ ದುರ್ಧೈವಿ. ಅವರ ಸಾವಿನಿಂದ ಇಡೀ ಕುಟುಂಬಕ್ಕೆ ಶಾಕ್ ಉಂಟಾಗಿದೆ. ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. #😭ಕನ್ನಡದ ಖ್ಯಾತ ನಿರ್ದೇಶಕ ನಿಧನ 💔😟
Edu ವೀರ
2.3K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟ ಶ್ರಿರಾಮ್ ಅವರ ವಿವಾಹ ನೆರವೇರಿದೆ. ಸ್ಫೂರ್ತಿ ಎಂಬುವವರ ಜೊತೆ ಶ್ರೀರಾಮ್ ವಿವಾಹ ಆಗಿದ್ದಾರೆ. ಭಾನುವಾರ (ನವೆಂಬರ್ 30) ಅವರು ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಶ್ರೀರಾಮ್ ಅವರದ್ದು ಲವ್ ಮ್ಯಾರೇಜ್ ಅಲ್ಲ. ಇದೊಂದು ಪಕ್ಕಾ ಅರೇಂಜ್ ಮ್ಯಾರೆಜ್ ಎನ್ನಲಾಗುತ್ತಿದೆ. ಮೈಸೂರಿನಲ್ಲಿ ಇವರ ವಿವಾಹ ನೆರವೇರಿದೆಯಂತೆ. ಶ್ರೀರಾಮ್ ಮದುವೆ ಫೋಟೋಗಳು ಗಮನ ಸೆಳೆದಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಸಾಮಾನ್ಯವಾಗಿ ವಿವಾಹ ಆಗುವಾಗ ಹುಡುಗಿ ಚಿತ್ರರಂಗದವರಲ್ಲದೆ ಇದ್ದರೆ ಸೆಲೆಬ್ರಿಟಿಗಳು ಅವರ ಕಿರುಪರಿಚಯ ಮಾಡಿಕೊಡುತ್ತಾರೆ. ಆದರೆ, ಶ್ರೀರಾಮ್ ಅವರು ಸದ್ಯಕ್ಕೆ ಆ ರೀತಿ ಮಾಡಿಲ್ಲ. ಅವರು ತಾವು ಕೈ ಹಿಡಿದ ಹುಡುಗಿಯ ಹಿನ್ನೆಲೆಯನ್ನು ಇನ್ನಷ್ಟೇ ತಿಳಿಸಬೇಕಿದೆ. #❤️ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟ😍
Edu ವೀರ
55.7K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ನಟಿ ಆಶಿಕಾ ರಂಗನಾಥ್‌ (Ashika Ranganath) ಅವರ ಸಂಬಂಧಿ ಯುವತಿ ಡ್ರಗ್‌ ಅಡಿಕ್ಟ್‌ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ.  – ಎಂಜಿನಿಯರಿಂಗ್‌ ಮುಗಿಸಿ ಕೆಲಸಕ್ಕೆ ತಯಾರಿ ನಡೆಸಿದ್ದ ಅಚಲ ಹಾಸನ/ಬೆಂಗಳೂರು: ನಟಿ ಆಶಿಕಾ ರಂಗನಾಥ್‌ (Ashika Ranganath) ಅವರ ಸಂಬಂಧಿ ಯುವತಿ ಡ್ರಗ್‌ ಅಡಿಕ್ಟ್‌ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ. ಹಾಸನ (Hassan) ಮೂಲದ ಯುವತಿ ಅಚಲ (22) ನವೆಂಬರ್‌ 22ರಂದು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ (Puttanahalli Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದ್ರೆ 10 ದಿನ ಕಳೆದರೂ, ಸಾಕ್ಷ್ಯಗಳಿದ್ದರೂ ಆರೋಪಿ ಬಂಧನ ಆಗದೇ ಇರುವುದು ಅಚಲ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. #💔ಕನ್ನಡದ ಖ್ಯಾತ ನಟಿ ಮನೆಯಲ್ಲಿ ತೀವ್ರ ಶೋಕ 😟
Edu ವೀರ
90.6K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಉಮೇಶ್‌ ಅವರು ಇನ್ನಿಲ್ಲ. ಇಂದು ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಆಸ್ಪತ್ರೆ ಬೆಡ್‌ ಮೇಲಿದ್ದಾಗಲೂ ಕಾಮಿಡಿ ಮಾಡಿದ್ದ ಹಿರಿಯ ನಟ ಉಮೇಶ್‌ ಅವರು ವಿಧಿವಶರಾಗಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಕಾಲನ ಕರೆಗೆ ಓಗುಟ್ಟಿದ್ದಾರೆ. ಚಿತ್ರರಂಗದ ಗಣ್ಯರು ಉಮೇಶ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. #💔ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ😭💔
See other profiles for amazing content