ಫಾಲೋ
Gayatri Hobbies
@gayatrihobbies
2,486
ಪೋಸ್ಟ್ಸ್
19,289
ಫಾಲೋವರ್ಸ್
Gayatri Hobbies
9K ವೀಕ್ಷಿಸಿದ್ದಾರೆ
3 ದಿನಗಳ ಹಿಂದೆ
ಅಕ್ರಮವಾಗಿ ಬಿಪಿಎಲ್​ ಕಾರ್ಡ್​ ಪಡೆದವರಿಗೆ ಶಾಕ್​​ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, Central Board of Direct Taxation ಮಾಹಿತಿ ಆಧಾರದ ಮೇಲೆ ರಾಜಧಾನಿ ಬೆಂಗಳೂರೊಂದರಲ್ಲೇ ಲಕ್ಷಾಂತರ ಕಾರ್ಡ್​ಗಳು ರದ್ದಾಗುವ ಸಾಧ್ಯತೆ ಇದೆ. ಆಹಾರ ಇಲಾಖೆಗೆ ಕಳೆದ ತಿಂಗಳು ದೊರೆತಿರುವ ಟ್ಯಾಕ್ಸ್​​ ರಿಪೋರ್ಟ್​​ ಆಧಾರದಲ್ಲಿ, ತೆರಿಗೆ ಕಟ್ಟುತ್ತಿದ್ದರೂ ಪಡೆದಿರುವ ಬಿಪಿಎಲ್​ ಕಾರ್ಡ್​ಗಳು ಎಪಿಎಲ್​ ಕಾರ್ಡ್​​ಗಳಾಗಿ ಪರಿವರ್ತನೆಯಾಗಲಿವೆ. ಆಹಾರ ಇಲಾಖೆಯ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿಯೇ 13,329 ಬಿಪಿಎಲ್ ಕಾರ್ಡ್​ಗಳು ರದ್ದಾಗಿದ್ದು, ಅವನ್ನು ಎಪಿಎಲ್​​ ಆಗಿ ಪರಿವರ್ತಿಸಲಾಗಿದೆ. ಈ ಹಿನ್ನಲೆ ರಾಜಾಜಿನಗರದ ಆಹಾರ ಇಲಾಖೆ ಮುಂದೆ ಜನರು ಜಮಾಯಿಸಿದ್ದಾರೆ. ಕಳೆದ ತಿಂಗಳು ರೇಷನ್​​ ಸಿಕ್ಕಿತ್ತು, ಆದ್ರೆ ಈ ತಿಂಗಳು ನಮಗೆ ರೇಷನ್​​ ನೀಡಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಮಹಿಳೆಯೋರ್ವರು, ನಾವು ಟ್ಯಾಕ್ಸ್ ಕಟ್ಟುತ್ತಿಲ್ಲ, ಮಗಳು ಕೆಲಸ ಮಾಡುತ್ತಿದ್ದಳು. ಆದರೆ ಈಗ ಅವಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಹೀಗಿದ್ದರೂ ನಮಗೆ ರೇಷನ್​​ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. #🔴'BPL ಕಾರ್ಡ್ ರದ್ದು' ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ❌
Gayatri Hobbies
14.1K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದ ನಟಿ ನಯನಾ ವಿರುದ್ಧ ಕಲಬುರ್ಗಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್​​ಐಆರ್ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿನ ನಟಿ, ಹಾಸ್ಯ ಕಲಾವಿದೆ ನಯನ ವಿರುದ್ಧ ದೂರು ದಾಖಲಾಗಿದೆ. ನಟಿ ನಯನಾ ಅವರು ದಲಿತ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಯೊಂದು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಯನಾ ಅವರು ಕಳೆದ ತಿಂಗಳು ಚಿಟ್ ಫಂಡ್ ಮೋಸದ ಕುರಿತಾಗಿ ಮಾತನಾಡುತ್ತಾ ಬಳಸಿದ್ದ ಪದಗಳು ದಲಿತ ವಿರೋಧಿ ಮತ್ತು ಜಾತಿ ನಿಂದನಾತ್ಮಕ ಪದಗಳಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲಬುರ್ಗಿಯಲ್ಲಿ ದಲಿತ ಸೇನೆಯ ಅಧ್ಯಕ್ಷರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. #😮ಜಾತಿ ನಿಂದನೆ ಆರೋಪ: ಖ್ಯಾತ ನಟಿ ವಿರುದ್ಧ ದೂರು ದಾಖಲು😱
Gayatri Hobbies
66.5K ವೀಕ್ಷಿಸಿದ್ದಾರೆ
8 ದಿನಗಳ ಹಿಂದೆ
ಕಳೆದ ಕೆಲವು ದಿನಗಳಿಂದ ಚಿತ್ರರಂಗದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಿದೆ. ಇದು ಮಾತ್ರವಲ್ಲ, ಪ್ರತಿದಿನ ಹಿರಿಯ ನಟಿಯರು ಮತ್ತು ನಟರ ವಿಚ್ಛೇದನದ ಸುದ್ದಿಗಳು ಕೇಳಿ ಬರುತ್ತಿವೆ. ಇದೀಗ, ನಟಿಯೊಬ್ಬರು 43 ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದಿದ್ದಾರೆ. ಇದು ಮಾತ್ರವಲ್ಲದೆ, ಇತ್ತೀಚೆಗೆ ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಇದು ನಟಿಯ ಮೂರನೇ ವಿಚ್ಛೇದನ. ಕಳೆದ ಕೆಲವು ದಿನಗಳಲ್ಲಿ ನಟಿಯ ವಿಚ್ಛೇದನದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈಗ ಅವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ. ನಟಿಯ ಪೋಸ್ಟ್ ನೋಡಿ, ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಮಲಯಾಳಂ ನಟಿ ಮೀರಾ ವಾಸುದೇವನ್ ಛಾಯಾಗ್ರಾಹಕ ವಿಪಿನ್ ಪುಥಿಯಕಂ ಅವರಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮೀರಾ ವಾಸುದೇವನ್ ಮತ್ತು ವಿಪಿನ್ ಕಳೆದ ವರ್ಷ ಮೇ ತಿಂಗಳಲ್ಲಿ ಕೊಯಮತ್ತೂರಿನಲ್ಲಿ ವಿವಾಹವಾದರು. ಮದುವೆಯಾದ ಕೇವಲ ಒಂದು ವರ್ಷದೊಳಗೆ, ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ನಿರ್ಧಾರ ಮಾತ್ರವಲ್ಲ, ಇಬ್ಬರೂ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. #😮43 ನೇ ವಯಸ್ಸಿಗೆ ಮೂರನೇ ಬಾರಿ ವಿಚ್ಛೇದನ ಪಡೆದ ಪ್ರಸಿದ್ಧ ನಟಿ😱
Gayatri Hobbies
647 ವೀಕ್ಷಿಸಿದ್ದಾರೆ
12 ದಿನಗಳ ಹಿಂದೆ
‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ ನಿನ್ನೆ (ಶುಕ್ರವಾರ) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಪ್ರಕಟಗೊಂಡಿವೆ. ಆದರೆ ಜನ ಸಿನಿಮಾ ನೋಡಲು ಬಂದಿಲ್ಲ. ಇದು ಅನೀಶ್ ಅವರಿಗೆ ತೀವ್ರ ನೋವುಂಟು ಮಾಡಿದ್ದು, ಕಣ್ನೀರು ಹಾಕುತ್ತಾ ಭಾವುಕವಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ (Love OTP) ಇದೇ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಲವ-ಲವಿಕೆಯಿಂದ ನಿರ್ದೇಶಕರು ತೆರೆಗೆ ತಂದಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಬಂದ ಹೊರತಾಗಿಯೂ ಚಿತ್ರಮಂದಿರಗಳಿಗೆ ಜನ ಬಂದಿಲ್ಲ. ಇದು ನಟ ಅನೀಶ್ ಅವರಿಗೆ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. #😢ಸಿನಿಮಾಗೆ ನೀರಸ ಪ್ರತಿಕ್ರಿಯೆ, ಕಣ್ಣೀರು ಹಾಕಿದ ಖ್ಯಾತ ನಟ😞
Gayatri Hobbies
743 ವೀಕ್ಷಿಸಿದ್ದಾರೆ
16 ದಿನಗಳ ಹಿಂದೆ
ಚಿತ್ರರಂಗದಲ್ಲಿ ಅನೇಕ ಜನರು ತಾರೆಗಳಾಗಿದ್ದಾರೆ. ಕೆಲವರು ಸಿನಿಮಾ ಅವಕಾಶಗಳಿಲ್ಲದೆ ಕಂಗೆಟ್ಟಿದ್ದಾರೆ. ಅನೇಕ ನಟರು ಈಗ ಚಲನಚಿತ್ರಗಳ ಕೊರತೆಯಿಂದ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಕಳಪೆ ಆರ್ಥಿಕ ಪರಿಸ್ಥಿತಿಯಿಂದಾಗಿ ರಸ್ತೆಗೆ ಬಿದ್ದ ಘಟನೆಗಳು ಹಲವು ಇವೆ. ಅನೇಕರು ಈಗಾಗಲೇ ಮಾಧ್ಯಮಗಳಿಗೆ ಬಂದು ತಮ್ಮ ಕಳಪೆ ಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದ ಘಟನೆಗಳು ಹಲವು ಇವೆ. ಈ ನಟ ಅಂತಹ ಜನರಲ್ಲಿ ಒಬ್ಬರು. ಅವರು ಒಂದು ಕಾಲದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದರು. ಈಗ ಅವರು ಆರ್ಥಿಕ ಸಂಕಷ್ಟದಿಂದಾಗಿ ಆಟೋ ಓಡಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ. ಬೆಳ್ಳಿ ಪರದೆಯ ಮೇಲೆ ಬೆಳಕು ಚೆಲ್ಲಿದ ನಂತರ ಆಸ್ಕರ್ ರೇಸ್‌ನಲ್ಲಿರುವ ಆ ನಟನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.ಈ ನಟ ಒಂದು ಕಾಲದಲ್ಲಿ ಬಾಲ ಕಲಾವಿದನಾಗಿ ಮಿಂಚಿದ್ದರು. ತಮ್ಮ ನಟನೆಯಿಂದ ಅನೇಕ ಪ್ರೇಕ್ಷಕರನ್ನು ಆಕರ್ಷಿಸಿದರು. ಅವರು ತಮ್ಮ ನಟನೆಯಿಂದ ಅನೇಕ ಪ್ರಶಸ್ತಿಗಳನ್ನು ಗೆದ್ದರು. ಅಷ್ಟೇ ಅಲ್ಲ, ಅವರು ನಟಿಸಿದ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತು. ಆದರೆ ನಂತರ, ಅವರಿಗೆ ಕಡಿಮೆ ಅವಕಾಶಗಳು ಸಿಕ್ಕವು. ಈಗ ಅವರು ಆಟೋ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಅವರ ಹೆಸರು ಶಫೀಕ್ ಸೈಯದ್. ಅವರು ಸಲಾಮ್ ಬಾಂಬೆ ಚಿತ್ರದಿಂದ ಮನ್ನಣೆ ಪಡೆದರು! 1988 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸುವ ಮೂಲಕ ಅವರು ಪ್ರಭಾವಿತರಾದರು. #😮ಸಿನಿಮಾ ಅವಕಾಶಗಳಿಲ್ಲದೇ ಕಂಗೆಟ್ಟು ಆಟೋ ಓಡಿಸುತ್ತಿರುವ ಖ್ಯಾತ ನಟ😢
Gayatri Hobbies
7.9K ವೀಕ್ಷಿಸಿದ್ದಾರೆ
17 ದಿನಗಳ ಹಿಂದೆ
ಅಮೃತವರ್ಷಿಣಿ ಖ್ಯಾತಿಯ ಸೀರಿಯಲ್‌ ನಟಿ ರಜನಿಯವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರುಣ್ ಗೌಡ ಅವರನ್ನು ಒರಸಿರುವ ಅವರು ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಪ್ರೀತಿಯ ಹೆಸರು ನೀಡಿದ್ದ ಅವರು ಈಗ ಕೊನೆಗೂ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತರೆ ನಟಿ ರಜನಿಯವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಮತ್ತು ಜೀ ಕನ್ನಡ ವಾಹಿನಿಯ ಹಿಟ್ಲರ್‌ ಕಲ್ಯಾಣ ಧಾರಾವಾಹಿ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡಿದ್ದ ಈ ಜೋಡಿ, ಎಲ್ಲರಿಗೂ ಇಷ್ಟವಾಗಿತ್ತು ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರುವುದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ಇನ್ನು ಇವರಿಬ್ಬರ ಅನ್ಯೂನ್ಯತರಯನ್ನು ನೋಡಿದವರೆಲ್ಲ ಕೆಲವು ಬಾರಿ ಲವ್ ಮಾಡ್ತಿದ್ದೀರಾ ಎಂಬ ಪ್ರಶ್ನೆಗೆ ಸ್ನೇಹಿತರು ಎಂದು ಉತ್ತರಿಸಿದ್ದ ನಟಿ ರಜಿನಿ ಈಗ ಕೊನೆಗೂ ಆ ಸ್ನೇಹಕ್ಕೆ ಮದುವೆ ಮೂಲಕ ಅರ್ಥ ನೀಡಿದ್ದಾರೆ. ಅರುಣ್ ಗೌಡ ಅವರು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದು ಫಿಟ್‌ನೆಸ್‌ ಪ್ರಿಯರಾಗಿದ್ದಾರೆ. #💖ಜಿಮ್ ಟ್ರೈನರ್ ಜೊತೆ ಸಪ್ತಪದಿ ತುಳಿದ ಖ್ಯಾತ ನಟಿ 😍
Gayatri Hobbies
127.9K ವೀಕ್ಷಿಸಿದ್ದಾರೆ
22 ದಿನಗಳ ಹಿಂದೆ
ಗೆದ್ದ ಕ್ಯಾನ್ಸರ್, ಖ್ಯಾತ ಖಳನಟ ಹರೀಶ್ ರಾಯ್ ನಿಧನಖಳನಟ ಹರೀಶ್ ರಾಯ್ ನಿಧನ: ‘ಓಂ’, ‘ನಲ್ಲ’ ಇತ್ತೀಚೆಗಿನ ಬ್ಲಾಕ್ ಬಸ್ಟರ್ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಖಳನಟ ಹರೀಶ್ ರಾಯ್ ಅವರು ಇಂದು (ನವೆಂಬರ್ 06) ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಹಲವು ನಟ-ನಟಿಯರು ಆರ್ಥಿಕ ಸಹಾಯ ಮಾಡಿದ್ದರು.ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯದೊಂದಿಗೆ ಸತತ ಹೋರಾಟ ಮಾಡುತ್ತಲೇ ಇದ್ದ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದ ಹರೀಶ್ ರಾಯ್ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ನಟ ಯಶ್ ಸೇರಿದಂತೆ ಇನ್ನೂ ಹಲವರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಆದರೆ ಅಂತಿಮವಾಗಿ ಹರೀಶ್ ಅವರು ಇಂದು ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಕೃಷಗೊಂಡು ಗುರುತೇ ಸಿಗದಂತೆ ಆಗಿದ್ದರು ಹರೀಶ್ ರಾಯ್. ತಮ್ಮ ಚಿಕಿತ್ಸೆಗಾಗಿ ಅವರು ಸಹಾಯವನ್ನು ಸಹ ಅಂಗಲಾಚಿದ್ದರು. ಅದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ನಟ ಯಶ್ ಸಹ ಈ ಹಿಂದೆಯೇ ತಮಗೆ ಸಹಾಯ ಮಾಡಿರುವುದಾಗಿ ಹರೀಶ್ ರಾಯ್ ಹೇಳಿಕೊಂಡಿದ್ದರು.  ಹಲವಾರು ಮಂದಿ ಸಿನಿಮಾ ಮಂದಿ ಹೋಗಿ ಹರೀಶ್ ರಾಯ್ ಅವರನ್ನು ಮಾತನಾಡಿಸಿ ತಾವು ಜೊತೆಗೆ ಇರುವುದಾಗಿ ಭರವಸೆ ನೀಡಿದ್ದರು. ಹಲವು ಯೂಟ್ಯೂಬರ್​​ಗಳು ಸಹ ಹೋಗಿದ್ದರು. ಕಳೆದ ಕೆಲ ತಿಂಗಳುಗಳಿಂದಲೂ ಸತತವಾಗಿ ಚಿಕಿತ್ಸೆಯನ್ನು ಪಡೆಯುತ್ತಲೇ ಇದ್ದರು ಹರೀಶ್ ರಾಯ್. ಇದೀಗ ಕೊನೆಗೆ ನಿಧನ ಹೊಂದಿದ್ದಾರೆ.ಕರಾವಳಿ ಮೂಲಕ ಹರೀಶ್ ರಾಯ್ ಅವರು 90ರ ದಶಕದ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ಅಸಲಿಗೆ ನಿಜ ಜೀವನದಲ್ಲಿಯೂ ಸಹ ಪ್ರಕರಣ ಒಂದರಲ್ಲಿ ಹರೀಶ್ ರಾಯ್ ಅವರು ಜೈಲು ಪಾಲಾಗಿದ್ದರು. ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಹರೀಶ್ ರಾಯ್, ತಮ್ಮ ಜೈಲು ದಿನಗಳನ್ನು ನೆನಸಿಕೊಂಡು ಕಣ್ಣೀರು ಹಾಕಿದ್ದರು. ಹರೀಶ್ ರಾಯ್ ಅವರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.ಹರೀಶ್ ರಾಯ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಅಂಡರ್​ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹಾಗೂ ಸ್ಯಾಂಡಲ್​ವುಡ್​ನ ಟಾಪ್ ಸಿನಿಮಾ ಕೆಜಿಎಫ್​​ ಚಾಪ್ಟರ್ 1 ಹಾಗೂ ಕೆಜಿಎಫ್​​ ಚಾಪ್ಟರ್ 2 ನಲ್ಲಿ ಅಭಿನಯಿಸಿದ್ದಾರೆ. #😭ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ನಿಧನ 💔
Gayatri Hobbies
14.5K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ತತ್ತರಿಸಿರುವ ಪಿಂಚಣಿದಾರರು ತಮ್ಮ ಜೀವನ ಮಟ್ಟವನ್ನು ಸುಧಾರಿಸಲು ಕನಿಷ್ಠ ಪಿಂಚಣಿ ಮೊತ್ತವನ್ನು ₹7,500ಕ್ಕೆ ಹೆಚ್ಚಿಸುವಂತೆ ಬಹುಕಾಲದಿಂದ ಬೇಡಿಕೆ ಇಟ್ಟಿದ್ದಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ [ಪಿಂಚಣಿ ಪರಿಷ್ಕರಣೆಗೆ ಮುಂದಾಗಿದೆ. ಇತ್ತೀಚಿಗೆ ನಡೆದ ಕೇಂದ್ರ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆಯಲ್ಲಿ ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000ದಿಂದ ಹೆಚ್ಚಿಸುವ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಂಚಣಿದಾರರ ಜೀವನದಲ್ಲಿ ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಸಮಾಲೋಚನೆ ನಡೆಸಲಾಗಿದ್ದು, ಸರ್ಕಾರ ಕನಿಷ್ಠ ಮಾಸಿಕ ಪಿಂಚಣಿಯ ಮೊತ್ತವನ್ನು ₹7,500ವರೆಗೆ ಪರಿಷ್ಕರಿಸಲು ಚಿಂತನೆ ನಡೆಸಲಾಗಿದೆ. #🚨ಪಿಂಚಣಿದಾರರಿಗೆ ಸಿಹಿ ಸುದ್ಧಿ: ಮಾಸಿಕ ಪಿಂಚಣಿ ₹7,500ಕ್ಕೆ ಏರಿಕೆ🤩
See other profiles for amazing content