ಫಾಲೋ
ವಿಷ್ಣು ಪ್ರಿಯ 🦚💙
@vishnupriya4723
66
ಪೋಸ್ಟ್ಸ್
447
ಫಾಲೋವರ್ಸ್
ವಿಷ್ಣು ಪ್ರಿಯ 🦚💙
1K ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ
#🙏ಲಕ್ಷ್ಮಿ ದೇವಿ🌸 🙏 ಹರಿಃ ಓಂ 🕉️ ಶ್ರೀ ಮಹಾಲಕ್ಷ್ಮೀ ಸುಪ್ರಭಾತಂ ಶ್ರೀಮಹಾಲಕ್ಷ್ಮೀಸುಪ್ರಭಾತಂ ..🙏🙏 ಶ್ರೀಲಕ್ಷ್ಮಿ ಶ್ರೀಮಹಾಲಕ್ಷ್ಮಿ ಕ್ಷೀರಸಾಗರಕನ್ಯಕೇ. ಉತ್ತಿಷ್ಠ ಹರಿಸಂಪ್ರೀತೇ ಭಕ್ತಾನಾಂ ಭಾಗ್ಯದಾಯಿನಿ . ಉತ್ತಿಷ್ಠೋತ್ತಿಷ್ಠ ಶ್ರೀಲಕ್ಷ್ಮಿ ವಿಷ್ಣುವಕ್ಷಸ್ಥಲಾಲಯೇ ಉತ್ತಿಷ್ಠ ಕರುಣಾಪೂರ್ಣೇ ಲೋಕಾನಾಂ ಶುಭದಾಯಿನಿ .. 1.. ಶ್ರೀಪದ್ಮಮಧ್ಯವಸಿತೇ ವರಪದ್ಮನೇತ್ರೇ ಶ್ರೀಪದ್ಮಹಸ್ತಚಿರಪೂಜಿತಪದ್ಮಪಾದೇ . ಶ್ರೀಪದ್ಮಜಾತಜನನಿ ಶುಭಪದ್ಮವಕ್ತ್ರೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 2.. ಜಾಂಬೂನದಾಭಸಮಕಾಂತಿವಿರಾಜಮಾನೇ ತೇಜೋಸ್ವರೂಪಿಣಿ ಸುವರ್ಣವಿಭೂಷಿತಾಂಗಿ . ಸೌವರ್ಣವಸ್ತ್ರಪರಿವೇಷ್ಟಿತದಿವ್ಯದೇಹೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 3.. ಸರ್ವಾರ್ಥಸಿದ್ಧಿದೇ ವಿಷ್ಣುಮನೋಽನುಕೂಲೇ ಸಂಪ್ರಾರ್ಥಿತಾಖಿಲಜನಾವನದಿವ್ಯಶೀಲೇ . ದಾರಿದ್ರ್ಯದುಃಖಭಯನಾಶಿನಿ ಭಕ್ತಪಾಲೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 4.. ಚಂದ್ರಾನುಜೇ ಕಮಲಕೋಮಲಗರ್ಭಜಾತೇ ಚಂದ್ರಾರ್ಕವಹ್ನಿನಯನೇ ಶುಭಚಂದ್ರವಕ್ತ್ರೇ . ಹೇ ಚಂದ್ರಿಕಾಸಮಸುಶೀತಲಮಂದಹಾಸೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 5.. ಶ್ರೀಆದಿಲಕ್ಷ್ಮಿ ಸಕಲೇಪ್ಸಿತದಾನದಕ್ಷೇ ಶ್ರೀಭಾಗ್ಯಲಕ್ಷ್ಮಿ ಶರಣಾಗತ ದೀನಪಕ್ಷೇ . ಐಶ್ವರ್ಯಲಕ್ಷ್ಮಿ ಚರಣಾರ್ಚಿತಭಕ್ತರಕ್ಷಿನ್ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 6.. ಶ್ರೀಧೈರ್ಯಲಕ್ಷ್ಮಿ ನಿಜಭಕ್ತಹೃದಂತರಸ್ಥೇ ಸಂತಾನಲಕ್ಷ್ಮಿ ನಿಜಭಕ್ತಕುಲಪ್ರವೃದ್ಧೇ . ಶ್ರೀಜ್ಞಾನಲಕ್ಷ್ಮಿ ಸಕಲಾಗಮಜ್ಞಾನದಾತ್ರಿ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 7.. ಸೌಭಾಗ್ಯದಾತ್ರಿ ಶರಣಂ ಗಜಲಕ್ಷ್ಮಿ ಪಾಹಿ ದಾರಿದ್ರ್ಯಧ್ವಂಸಿನಿ ನಮೋ ವರಲಕ್ಷ್ಮಿ ಪಾಹಿ . ಸತ್ಸೌಖ್ಯದಾಯಿನಿ ನಮೋ ಧನಲಕ್ಷ್ಮಿ ಪಾಹಿ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 8.. ಶ್ರೀರಾಜ್ಯಲಕ್ಷ್ಮಿ ನೃಪವೇಶ್ಮಗತೇ ಸುಹಾಸಿನ್ ಶ್ರೀಯೋಗಲಕ್ಷ್ಮಿ ಮುನಿಮಾನಸಪದ್ಮವಾಸಿನ್ . ಶ್ರೀಧಾನ್ಯಲಕ್ಷ್ಮಿ ಸಕಲಾವನಿಕ್ಷೇಮದಾತ್ರಿ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 9.. ಶ್ರೀಪಾರ್ವತೀ ತ್ವಮಸಿ ಶ್ರೀಕರಿ ಶೈವಶೈಲೇ ಕ್ಷೀರೋದಧೇಸ್ತ್ವಮಸಿ ಪಾವನಿ ಸಿಂಧುಕನ್ಯಾ . ಸ್ವರ್ಗಸ್ಥಲೇ ತ್ವಮಸಿ ಕೋಮಲೇ ಸ್ವರ್ಗಲಕ್ಷ್ಮೀ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 10.. ಗಂಗಾ ತ್ವಮೇವ ಜನನೀ ತುಲಸೀ ತ್ವಮೇವ ಕೃಷ್ಣಪ್ರಿಯಾ ತ್ವಮಸಿ ಭಾಂಡಿರದಿವ್ಯಕ್ಷೇತ್ರೇ . ರಾಜಗೃಹೇ ತ್ವಮಸಿ ಸುಂದರಿ ರಾಜ್ಯಲಕ್ಷ್ಮೀ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 11.. ಪದ್ಮಾವತೀ ತ್ವಮಸಿ ಪದ್ಮವನೇ ವರೇಣ್ಯೇ ಶ್ರೀಸುಂದರೀ ತ್ವಮಸಿ ಶ್ರೀಶತಶೃಂಗಕ್ಷೇತ್ರೇ . ತ್ವಂ ಭೂತಲೇಽಸಿ ಶುಭದಾಯಿನಿ ಮರ್ತ್ಯಲಕ್ಷ್ಮೀ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 12.. ಚಂದ್ರಾ ತ್ವಮೇವ ವರಚಂದನಕಾನನೇಷು ದೇವಿ ಕದಂಬವಿಪಿನೇಽಸಿ ಕದಂಬಮಾಲಾ . ತ್ವಂ ದೇವಿ ಕುಂದವನವಾಸಿನಿ ಕುಂದದಂತೀ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 13.. ಶ್ರೀವಿಷ್ಣುಪತ್ನಿ ವರದಾಯಿನಿ ಸಿದ್ಧಲಕ್ಷ್ಮಿ ಸನ್ಮಾರ್ಗದರ್ಶಿನಿ ಶುಭಂಕರಿ ಮೋಕ್ಷಲಕ್ಷ್ಮಿ . ಶ್ರೀದೇವದೇವಿ ಕರುಣಾಗುಣಸಾರಮೂರ್ತೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 14.. ಅಷ್ಟೋತ್ತರಾರ್ಚನಪ್ರಿಯೇ ಸಕಲೇಷ್ಟದಾತ್ರಿ ಹೇ ವಿಶ್ವಧಾತ್ರಿ ಸುರಸೇವಿತಪಾದಪದ್ಮೇ . ಸಂಕಷ್ಟನಾಶಿನಿ ಸುಖಂಕರಿ ಸುಪ್ರಸನ್ನೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 15.. ಆದ್ಯಂತರಹಿತೇ ವರವರ್ಣಿನಿ ಸರ್ವಸೇವ್ಯೇ ಸೂಕ್ಷ್ಮಾತಿಸೂಕ್ಷ್ಮತರರೂಪಿಣಿ ಸ್ಥೂಲರೂಪೇ . ಸೌಂದರ್ಯಲಕ್ಷ್ಮಿ ಮಧುಸೂದನಮೋಹನಾಂಗಿ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 16.. ಸೌಖ್ಯಪ್ರದೇ ಪ್ರಣತಮಾನಸಶೋಕಹಂತ್ರಿ ಅಂಬೇ ಪ್ರಸೀದ ಕರುಣಾಸುಧಯಾಽಽರ್ದ್ರದೃಷ್ಟ್ಯಾ . ಸೌವರ್ಣಹಾರಮಣಿನೂಪುರಶೋಭಿತಾಂಗಿ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 17.. ನಿತ್ಯಂ ಪಠಾಮಿ ಜನನಿ ತವ ನಾಮ ಸ್ತೋತ್ರಂ ನಿತ್ಯಂ ಕರೋಮಿ ತವ ನಾಮಜಪಂ ವಿಶುದ್ಧೇ . ನಿತ್ಯಂ ಶೃಣೋಮಿ ಭಜನಂ ತವ ಲೋಕಮಾತಃ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 18.. ಮಾತಾ ತ್ವಮೇವ ಜನನೀ ಜನಕಸ್ತ್ವಮೇವ ದೇವಿ ತ್ವಮೇವ ಮಮ ಭಾಗ್ಯನಿಧಿಸ್ತ್ವಮೇವ . ಸದ್ಭಾಗ್ಯದಾಯಿನಿ ತ್ವಮೇವ ಶುಭಪ್ರದಾತ್ರೀ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 19.. ವೈಕುಂಠಧಾಮನಿಲಯೇ ಕಲಿಕಲ್ಮಷಘ್ನೇ ನಾಕಾಧಿನಾಥವಿನುತೇ ಅಭಯಪ್ರದಾತ್ರಿ . ಸದ್ಭಕ್ತರಕ್ಷಣಪರೇ ಹರಿಚಿತ್ತವಾಸಿನ್ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 20.. ನಿರ್ವ್ಯಾಜಪೂರ್ಣಕರುಣಾರಸಸುಪ್ರವಾಹೇ ರಾಕೇಂದುಬಿಂಬವದನೇ ತ್ರಿದಶಾಭಿವಂದ್ಯೇ . ಆಬ್ರಹ್ಮಕೀಟಪರಿಪೋಷಿಣಿ ದಾನಹಸ್ತೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 21.. ಲಕ್ಷ್ಮೀತಿ ಪದ್ಮನಿಲಯೇತಿ ದಯಾಪರೇತಿ ಭಾಗ್ಯಪ್ರದೇತಿ ಶರಣಾಗತವತ್ಸಲೇತಿ . ಧ್ಯಾಯಾಮಿ ದೇವಿ ಪರಿಪಾಲಯ ಮಾಂ ಪ್ರಸನ್ನೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 22.. ಶ್ರೀಪದ್ಮನೇತ್ರರಮಣೀವರೇ ನೀರಜಾಕ್ಷಿ ಶ್ರೀಪದ್ಮನಾಭದಯಿತೇ ಸುರಸೇವ್ಯಮಾನೇ . ಶ್ರೀಪದ್ಮಯುಗ್ಮಧೃತನೀರಜಹಸ್ತಯುಗ್ಮೇ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 23.. ಇತ್ಥಂ ತ್ವದೀಯಕರುಣಾತ್ಕೃತಸುಪ್ರಭಾತಂ ಯೇ ಮಾನವಾಃ ಪ್ರತಿದಿನಂ ಪ್ರಪಠಂತಿ ಭಕ್ತ್ಯಾ . ತೇಷಾಂ ಪ್ರಸನ್ನಹೃದಯೇ ಕುರು ಮಂಗಲಾನಿ ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 24.. ಜಲಧೀಶಸುತೇ ಜಲಜಾಕ್ಷವೃತೇ ಜಲಜೋದ್ಭವಸನ್ನುತೇ ದಿವ್ಯಮತೇ . ಜಲಜಾಂತರನಿತ್ಯನಿವಾಸರತೇ ಶರಣಂ ಶರಣಂ ವರಲಕ್ಷ್ಮಿ ನಮಃ .. 25.. ಪ್ರಣತಾಖಿಲದೇವಪದಾಬ್ಜಯುಗೇ ಭುವನಾಖಿಲಪೋಷಣ ಶ್ರೀವಿಭವೇ . ನವಪಂಕಜಹಾರವಿರಾಜಗಲೇ ಶರಣಂ ಶರಣಂ ಗಜಲಕ್ಷ್ಮಿ ನಮಃ .. 26.. ಘನಭೀಕರಕಷ್ಟವಿನಾಶಕರಿ ನಿಜಭಕ್ತದರಿದ್ರಪ್ರಣಾಶಕರಿ . ಋಣಮೋಚನಿ ಪಾವನಿ ಸೌಖ್ಯಕರಿ ಶರಣಂ ಶರಣಂ ಧನಲಕ್ಷ್ಮಿ ನಮಃ .. 27.. ಅತಿಭೀಕರಕ್ಷಾಮವಿನಾಶಕರಿ ಜಗದೇಕಶುಭಂಕರಿ ಧಾನ್ಯಪ್ರದೇ . ಸುಖದಾಯಿನಿ ಶ್ರೀಫಲದಾನಕರಿ ಶರಣಂ ಶರಣಂ ಶುಭಲಕ್ಷ್ಮಿ ನಮಃ .. 28.. ಸುರಸಂಘಶುಭಂಕರಿ ಜ್ಞಾನಪ್ರದೇ ಮುನಿಸಂಘಪ್ರಿಯಂಕರಿ ಮೋಕ್ಷಪ್ರದೇ . ನರಸಂಘಜಯಂಕರಿ ಭಾಗ್ಯಪ್ರದೇ ಶರಣಂ ಶರಣಂ ಜಯಲಕ್ಷ್ಮಿ ನಮಃ .. 29.. ಪರಿಸೇವಿತಭಕ್ತಕುಲೋದ್ಧರಿಣಿ ಪರಿಭಾವಿತದಾಸಜನೋದ್ಧರಿಣಿ . ಮಧುಸೂದನಮೋಹಿನಿ ಶ್ರೀರಮಣಿ ಶರಣಂ ಶರಣಂ ತವ ಲಕ್ಷ್ಮಿ ನಮಃ .. 28.. ಶುಭದಾಯಿನಿ ವೈಭವಲಕ್ಷ್ಮಿ ನಮೋ ವರದಾಯಿನಿ ಶ್ರೀಹರಿಲಕ್ಷ್ಮಿ ನಮಃ . ಸುಖದಾಯಿನಿ ಮಂಗಲಲಕ್ಷ್ಮಿ ನಮೋ ಶರಣಂ ಶರಣಂ ಸತತಂ ಶರಣಂ .. 29.. ವರಲಕ್ಷ್ಮಿ ನಮೋ ಧನಲಕ್ಷ್ಮಿ ನಮೋ ಜಯಲಕ್ಷ್ಮಿ ನಮೋ ಗಜಲಕ್ಷ್ಮಿ ನಮಃ . ಜಯ ಷೋಡಶಲಕ್ಷ್ಮಿ ನಮೋಽಸ್ತು ನಮೋ ಶರಣಂ ಶರಣಂ ಸತತಂ ಶರಣಂ .. 30.. ನಮೋ ಆದಿಲಕ್ಷ್ಮಿ ನಮೋ ಜ್ಞಾನಲಕ್ಷ್ಮಿ ನಮೋ ಧಾನ್ಯಲಕ್ಷ್ಮಿ ನಮೋ ಭಾಗ್ಯಲಕ್ಷ್ಮಿ . ಮಹಾಲಕ್ಷ್ಮಿ ಸಂತಾನಲಕ್ಷ್ಮಿ ಪ್ರಸೀದ ನಮಸ್ತೇ ನಮಸ್ತೇ ನಮೋ ಶಾಂತಲಕ್ಷ್ಮಿ .. 30.. ನಮೋ ಸಿದ್ಧಿಲಕ್ಷ್ಮಿ ನಮೋ ಮೋಕ್ಷಲಕ್ಷ್ಮಿ ನಮೋ ಯೋಗಲಕ್ಷ್ಮಿ ನಮೋ ಭೋಗಲಕ್ಷ್ಮಿ . ನಮೋ ಧೈರ್ಯಲಕ್ಷ್ಮಿ ನಮೋ ವೀರಲಕ್ಷ್ಮಿ ನಮಸ್ತೇ ನಮಸ್ತೇ ನಮೋ ಶಾಂತಲಕ್ಷ್ಮಿ .. 31.. ಅಜ್ಞಾನಿನಾ ಮಯಾ ದೋಷಾನಶೇಷಾನ್ವಿಹಿತಾನ್ ರಮೇ . ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಅಷ್ಟಲಕ್ಷ್ಮಿ ನಮೋಽಸ್ತುತೇ .. 32.. ದೇವಿ ವಿಷ್ಣುವಿಲಾಸಿನಿ ಶುಭಕರಿ ದೀನಾರ್ತಿವಿಚ್ಛೇದಿನಿ ಸರ್ವೈಶ್ವರ್ಯಪ್ರದಾಯಿನಿ ಸುಖಕರಿ ದಾರಿದ್ರ್ಯವಿಧ್ವಂಸಿನಿ . ನಾನಾಭೂಷಿತಭೂಷಣಾಂಗಿ ಜನನಿ ಕ್ಷೀರಾಬ್ಧಿಕನ್ಯಾಮಣಿ ದೇವಿ ಭಕ್ತಸುಪೋಷಿಣಿ ವರಪ್ರದೇ ಲಕ್ಷ್ಮಿ ಸದಾ ಪಾಹಿ ನಃ .. 33.. ಮಾಂ ಸದ್ಯಃಪ್ರಫುಲ್ಲಸರಸೀರುಹಪತ್ರನೇತ್ರೇ ಹಾರಿದ್ರಲೇಪಿತಸುಕೋಮಲಶ್ರೀಕಪೋಲೇ . ಪೂರ್ಣೇಂದುಬಿಂಬವದನೇ ಕಮಲಾಂತರಸ್ಥೇ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 34.. ಭಕ್ತಾಂತರಂಗಗತಭಾವವಿಧೇ ನಮಸ್ತೇ ರಕ್ತಾಂಬುಜಾತನಿಲಯೇ ಸ್ವಜನಾನುರಕ್ತೇ . ಮುಕ್ತಾವಲೀಸಹಿತಭೂಷಣಭೂಷಿತಾಂಗಿ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 35.. ಕ್ಷಾಮಾದಿತಾಪಹಾರಿಣಿ ನವಧಾನ್ಯರೂಪೇ ಅಜ್ಞಾನಘೋರತಿಮಿರಾಪಹಜ್ಞಾನರೂಪೇ . ದಾರಿದ್ರ್ಯದುಃಖಪರಿಮರ್ದಿತಭಾಗ್ಯರೂಪೇ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 36.. ಚಂಪಾಲತಾಭದರಹಾಸವಿರಾಜವಕ್ತ್ರೇ ಬಿಂಬಾಧರೇಷು ಕಪಿಕಾಂಚಿತಮಂಜುವಾಣಿ . ಶ್ರೀಸ್ವರ್ಣಕುಂಭಪರಿಶೋಭಿತದಿವ್ಯಹಸ್ತೇ ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ .. 37.. ಸ್ವರ್ಗಾಪವರ್ಗಪದವಿಪ್ರದೇ ಸೌಮ್ಯಭಾವೇ ಸರ್ವಾಗಮಾದಿವಿನುತೇ ಶುಭಲಕ್ಷಣಾಂಗಿ . ನಿತ್ಯಾರ್ಚಿತಾಂಘ್ರಿಯುಗಲೇ ಮಹಿಮಾಚರಿತ್ರೇ ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ .. 38.. ಜಾಜ್ಜ್ವಲ್ಯಕುಂಡಲವಿರಾಜಿತಕರ್ಣಯುಗ್ಮೇ ಸೌವರ್ಣಕಂಕಣಸುಶೋಭಿತಹಸ್ತಪದ್ಮೇ . ಮಂಜೀರಶಿಂಜಿತಸುಕೋಮಲಪಾವನಾಂಘ್ರೇ ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ .. 39.. ಸರ್ವಾಪರಾಧಶಮನಿ ಸಕಲಾರ್ಥದಾತ್ರಿ ಪರ್ವೇಂದುಸೋದರಿ ಸುಪರ್ವಗಣಾಭಿರಕ್ಷಿನ್ . ದುರ್ವಾರಶೋಕಮಯಭಕ್ತಗಣಾವನೇಷ್ಟೇ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 40.. ಬೀಜಾಕ್ಷರತ್ರಯವಿರಾಜಿತಮಂತ್ರಯುಕ್ತೇ ಆದ್ಯಂತವರ್ಣಮಯಶೋಭಿತಶಬ್ದರೂಪೇ . ಬ್ರಹ್ಮಾಂಡಭಾಂಡಜನನಿ ಕಮಲಾಯತಾಕ್ಷಿ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 41.. ಶ್ರೀದೇವಿ ಬಿಲ್ವನಿಲಯೇ ಜಯ ವಿಶ್ವಮಾತಃ var ವಸುದಾಯಿನಿ ಆಹ್ಲಾದದಾತ್ರಿ ಧನಧಾನ್ಯಸುಖಪ್ರದಾತ್ರಿ . ಶ್ರೀವೈಷ್ಣವಿ ದ್ರವಿಣರೂಪಿಣಿ ದೀರ್ಘವೇಣಿ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 42.. ಆಗಚ್ಛ ತಿಷ್ಠ ತವ ಭಕ್ತಗಣಸ್ಯ ಗೇಹೇ ಸಂತುಷ್ಟಪೂರ್ಣಹೃದಯೇನ ಸುಖಾನಿ ದೇಹಿ . ಆರೋಗ್ಯಭಾಗ್ಯಮಕಲಂಕಯಶಾಂಸಿ ದೇಹಿ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 43.. ಶ್ರೀಆದಿಲಕ್ಷ್ಮಿ ಶರಣಂ ಶರಣಂ ಪ್ರಪದ್ಯೇ ಶ್ರೀಅಷ್ಟಲಕ್ಷ್ಮಿ ಶರಣಂ ಶರಣಂ ಪ್ರಪದ್ಯೇ . ಶ್ರೀವಿಷ್ಣುಪತ್ನಿ ಶರಣಂ ಶರಣಂ ಪ್ರಪದ್ಯೇ ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 44.. ಮಂಗಲಂ ಕರುಣಾಪೂರ್ಣೇ ಮಂಗಲಂ ಭಾಗ್ಯದಾಯಿನಿ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 45.. ಅಷ್ಟಕಷ್ಟಹರೇ ದೇವಿ ಅಷ್ಟಭಾಗ್ಯವಿವರ್ಧಿನಿ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 46.. ಕ್ಷೀರೋದಧಿಸಮುದ್ಭೂತೇ ವಿಷ್ಣುವಕ್ಷಸ್ಥಲಾಲಯೇ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 47.. ಧನಲಕ್ಷ್ಮಿ ಧಾನ್ಯಲಕ್ಷ್ಮಿ ವಿದ್ಯಾಲಕ್ಷ್ಮಿ ಯಶಸ್ಕರಿ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 48.. ಸಿದ್ಧಲಕ್ಷ್ಮಿ ಮೋಕ್ಷಲಕ್ಷ್ಮಿ ಜಯಲಕ್ಷ್ಮಿ ಶುಭಂಕರಿ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 49.. ಸಂತಾನಲಕ್ಷ್ಮಿ ಶ್ರೀಲಕ್ಷ್ಮಿ ಗಜಲಕ್ಷ್ಮಿ ಹರಿಪ್ರಿಯೇ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 50.. ದಾರಿದ್ರ್ಯನಾಶಿನಿ ದೇವಿ ಕೋಲ್ಹಾಪುರನಿವಾಸಿನಿ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 51.. ವರಲಕ್ಷ್ಮಿ ಧೈರ್ಯಲಕ್ಷ್ಮಿ ಶ್ರೀಷೋಡಶಭಾಗ್ಯಂಕರಿ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 52.. ಮಂಗಲಂ ಮಂಗಲಂ ನಿತ್ಯಂ ಮಂಗಲಂ ಜಯಮಂಗಲಂ . ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 53.. 🙏🙏 ಇತಿ ಶ್ರೀಮಹಾಲಕ್ಷ್ಮೀಸುಪ್ರಭಾತಂ ಸಂಪೂರ್ಣಂ .🙏🙏 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
13K ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#ಆಷಾಢ ಮಾಸ 2025 *ಆಷಾಡ ಮಾಸದ ವಿಶೇಷತೆಗಳು** ನಾಳೆ ದಿನಾಂಕ 26-6-2025 ರಿಂದ ಆಷಾಢ ಮಾಸ ಶುರುವಾಗುವುದು. ತನ್ನಿಮಿತ್ತ ಆಷಾಢ ಮಾಸದ ವಿಶೇಷತೆಗಳ ಬಗ್ಗೆ ತಿಳಿಸಲು ಈ ಲೇಖನ.*** *ಆಷಾಢ ಮಾಸದ ಮಹತ್ವಗಳೇನು? ಇದರ ಹಿಂದಿರುವ ಕಾರಣಗಳು.* ಹಿಂದೂ ಜ್ಯೋತಿಷ್ಯದ ಪ್ರಕಾರ ಇದು ಅಶುಭ ಮಾಸ. ಹೀಗಾಗಿ ಆಷಾಢ ಮಾಸ ಪ್ರಾರಂಭವಾದ ಬಳಿಕ ಮದುವೆ, ಗೃಹಪ್ರವೇಶ,ಉಪನಯನಾದಿ ಶುಭಕಾರ್ಯಗಳು, ವಾಹನ ಮತ್ತು ಜಮೀನು ಕೊಳ್ಳುವುದು,ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳನ್ನು ಯಾರೂ ಮಾಡುವುದಿಲ್ಲ. ಈ ವರ್ಷ ಜೂನ್ 26 ರಿಂದ ಆಷಾಢ ಮಾಸ ಆರಂಭವಾಗಿ,ಜುಲೈ 24 ಕ್ಕೆ ಮುಗಿಯುತ್ತದೆ. ಚಾಂದ್ರಮಾನದ ಆಚರಣೆ ಮಾಡುವವರಿಗೆ ಆಷಾಢ ಶೂನ್ಯ ಮಾಸ. ಸೌರಮಾನದವರಿಗೆ ಕರ್ಕಾಟಕ ಮಾಸ ಶೂನ್ಯ. ಈ ವರ್ಷ ತಾ 17-7-25 ಗುರುವಾರದಿಂದ ಆಷಾಢದ ಅಂತ್ಯ 24-7-25ರವರೆಗೂ ಕರ್ಕಾಟಕ ಮಾಸವೂ ಇರುತ್ತದೆ. ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಪೂಜೆ, ವ್ರತಗಳನ್ನು ಮಾಡಬಹುದು. ಆಷಾಢ ಅಶುಭ ಮಾಸ ಎನ್ನಲು ಹಲವಾರು ಕಾರಣಗಳು ಇವೆ. ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ, ಶುಭ ಕಾರ್ಯಗಳನ್ನು ಇಟ್ಟುಕೊಂಡರೆ ಬಂದು ಹೊಗುವ ಬಂಧು-ಬಳಗ, ಇಷ್ಟ-ಮಿತ್ರರಿಗೆ ಕಷ್ಟವಾಗುವುದು.ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಆಷಾಢದಲ್ಲಿ ಅತ್ತೆ- ಸೊಸೆ, ಅತ್ತೆ-ಅಳಿಯ ಒಟ್ಟಿಗೆ ಇರಬಾರದು ಎಂದು ಸಾಮಾನ್ಯವಾಗಿ ಹೆಂಡತಿಯನ್ನು ತವರುಮನೆಗೆ ಕಳಿಸುವರು. ಇದರ ಹಿಂದಿನ ಸಿದ್ಧಾಂತ ಬೇರೆ ಇದೆ. ಈ ಅವಧಿಯಲ್ಲಿ ಹೆಣ್ಣು ಗರ್ಭ ತಾಳಿದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬಿರುಬೇಸಿಗೆ ಕಾಲದಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ.ಬೇಸಿಗೆಯ ಅವಧಿಯಲ್ಲಿ ಆಕೆಗೆ ಹೆಚ್ಚು ತೊಂದರೆಯಾಗಬಹುದೆಂದು ಜನರು ಇದನ್ನು ಸಹ ನಂಬಲು ಆರಂಭಿಸಿದರು. ಮದುವೆಯಾದ ವರ್ಷದಲ್ಲಿ ಆಷಾಢದಲ್ಲಿ ಅತ್ತೆ ಸೊಸೆ ಬೇರೆ ಬೇರೆ ಇರುತ್ತಾರೆನ್ನುವುದಕ್ಕೆ ಸರಿಯಾದ ಕಾರಣ ಇಲ್ಲವಾದರೂ,ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು,ಇದರಿಂದ ಅವರಿಬ್ಬರಲ್ಲಿ ಕುಟುಂಬದ ಸಾಮರಸ್ಯ, ಅನ್ಯೋನ್ಯತೆಗೆ ಧಕ್ಕೆಯಾಗಬಹುದು, ಜಗಳಕ್ಕೆ ಕಾರಣ ಆಗಬಹುದು, ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು. *ಪೂಜೆಗಳು ಹಾಗೂ ವ್ರತಗಳು*. ಇದು ಆಷಾಢ ಮಾಸದ ಮತ್ತೊಂದು ಮಹತ್ವ. ಈ ಅವಧಿಯಲ್ಲಿ ಪುರಿ ಜಗನ್ನಾಥನ ರಥ ಯಾತ್ರೆ, ಚಾರ್ತುಮಾಸ ಯಾತ್ರೆ, ಪಾಲ್ಕಿ ಯಾತ್ರೆ, ದಕ್ಷಿಣಾಯನ ಪುಣ್ಯಕಾಲ, ಪ್ರಥಮೈಕಾದಶಿ (ಶಯನೈಕಾದಶಿ) ಪೂಜೆ ಹಾಗೂ ವ್ರತಗಳು ಆಷಾಢ ಮಾಸದಲ್ಲಿ ಜನಪ್ರಿಯವಾಗಿದೆ.ಆಸ್ತಿಕರು ಈ ಪೂಜೆ, ವ್ರತಗಳನ್ನು ಭಕ್ತಿಯಿಂದ ಆಚರಿಸುತ್ತಾರೆ. *ಶಯನೈಕಾದಶಿಯಂದು* ಶೇಷಶಾಯಿಯಾಗಿ ಯೋಗನಿದ್ರೆಯಲ್ಲಿ ಪವಡಿಸುವ ಶ್ರೀಮಹಾವಿಷ್ಣುವು ಕಾರ್ತಿಕ ಶುದ್ಧ ದ್ವಾದಶಿ *ಉತ್ಥಾನದ್ವಾದಶಿಯ* ದಿನ ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ವಿಷ್ಣುವಿನ ಯೋಗನಿದ್ರಾಕಾಲದ ಈ ನಾಲ್ಕು ತಿಂಗಳು ಯಾರೂ ಮಂಗಳಕಾರ್ಯವನ್ನು ಮಾಡುವುದಿಲ್ಲ. ಯುಗದ ಪ್ರಭಾವ ಮತ್ತು ಶುಭ ಮುಹೂರ್ತಗಳು ಕಡಿಮೆ ಇರುವುದರಿಂದ ಈಗ ಜನರು ವರ್ಷದ ಹನ್ನೆರಡು ತಿಂಗಳೂ ಮಂಗಳಕಾರ್ಯವನ್ನು ಮಾಡುತ್ತಿದ್ದಾರೆ,ಇದು ಬೇರೆ ಮಾತು. ಆಷಾಢ ಮಾಸದಲ್ಲಿಯೇ ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಉಪದೇಶಿಸಿದ್ದನು. ದೇವಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದ ಶುಕ್ಲ ಏಕಾದಶಿಯ ದಿನ.ಆ ದಿನವನ್ನು *ಭಾಗೀರಥೀ ಹಬ್ಬ* ಎಂದು ಅನೇಕರು ಆಚರಿಸುವರು. ಮಹಾಪತಿವ್ರತೆಯಾದ ಅತ್ರಿಮಹರ್ಷಿಯ ಪತ್ನಿ ಅನಸೂಯಾದೇವಿ ಈ ಮಾಸದ ನಾಲ್ಕು ಸೋಮವಾರ ಶಿವವ್ರತವನ್ನು ಮಾಡಿದ್ದಳು. ಅಮರನಾಥದ ಹಿಮಲಿಂಗದ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ. ಪ್ರಥಮ ಏಕಾದಶಿ ವ್ರತ, ಆರಾಧನೆ ಬರುವುದು ಆಷಾಢದಲ್ಲಿ. ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ.ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಈ ಆಚರಣೆ ನಡೆಯುತ್ತದೆ. ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು, ಇಂದ್ರನು ಗೌತಮರಿಂದ ಶಾಪ ಪಡೆದುದು, ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದಿದ್ದು ಆಷಾಢ ಮಾಸದಲ್ಲಿಯೇ. ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ದೀಪವನ್ನು ಹೊತ್ತಿಸಿಟ್ಟು *ಜ್ಯೋತಿರ್ಭೀಮೇಶ್ವರ* ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆಯ ದಿನ *ಗುರುಪೂರ್ಣಿಮೆ/ವ್ಯಾಸಪೂರ್ಣಿಮೆ* ಯನ್ನು ಎಲ್ಲಾ ಮಠ ಮಂದಿರಗಳಲ್ಲಿ ವ್ಯಾಸಪೂಜೆ ಮಾಡಿ ಅಂದಿನಿಂದ ಯತಿಗಳು, ಮಠಾಧಿಪತಿಗಳು ನಾಲ್ಕು ತಿಂಗಳ ಅವಧಿಯ ಚಾತುರ್ಮಾಸ್ಯ ವ್ರತವನ್ನು ಆರಂಭಿಸುತ್ತಾರೆ. ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನವಾದ *ಚಾಮುಂಡೇಶ್ವರಿಜಯಂತಿಯು* ಆಷಾಢ ಬಹುಳ ಸಪ್ತಮಿ ಈ ವರ್ಷ *ತಾ 17-7-25 ಗುರುವಾರ* ಬರುವುದು ಈ ಮಾಸದಲ್ಲಿಯೇ. ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು *ದೇವಶಯನಿ ಏಕಾದಶಿ,ಶಯನೈಕಾದಶಿ* (ದೇವರ ನಿದ್ರೆಯ ಏಕಾದಶಿ) ಎಂದು ಹೇಳುತ್ತಾರೆ. ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು *ಕಾಮಿಕಾ ಏಕಾದಶಿ* ಎನ್ನುತ್ತಾರೆ. *ಪೌರಾಣಿಕ ಹಿನ್ನಲೆ.* ಹಿಂದೆ ದೇವ ಮತ್ತು ದಾನವರ ನಡುವೆ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ *ಮೃದುಮಾನ್ಯ* ಎಂಬುವನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಅದರಿಂದ ಅವನು ಬ್ರಹ್ಮ, ವಿಷ್ಣು, ಶಿವನೂ ಸೇರಿ ಎಲ್ಲ ದೇವತೆಗಳಿಗೆ ಅಜೇಯ ನಾದನು.ದೇವತೆಗಳು ಅವನ ಭಯದಿಂದ ತ್ರಿಕೂಟ ಪರ್ವತದ ಮೇಲೆ ಇರುವ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು.ಅಂದು ಆಷಾಢ ಏಕಾದಶಿಯಾಗಿದ್ದು ಕಾಕತಾಳೀಯವಾಗಿ ಅವರಿಗೆ ಉಪವಾಸ ಮಾಡುವಂತಾಯಿತು. ದಾರಾಕಾರದ ಮಳೆಯ ನೀರಿನಲ್ಲಿ ತೊಯ್ದು ಸ್ನಾನವೂ ಆಯಿತು.ಆಗ ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಗಿ,ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ದೇವತೆಗಳಿಗಾಗಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ಅಧಿದೇವತೆಯಾಗಿದ್ದಾಳೆ. *ಪ್ರಥಮೈಕಾದಶಿಯ ಮಹತ್ವ* ೧) ಆಷಾಢ ಏಕಾದಶಿಯ ವ್ರತದಲ್ಲಿ ಎಲ್ಲ ದೇವತೆಗಳ ತೇಜಸ್ಸು ಒಂದಾಗಿರುತ್ತದೆ. ೨) ಕಾಮಿಕಾ ಏಕಾದಶಿಯು ಮನೋಕಾಮನೆಯನ್ನು ಪೂರ್ಣಗೊಳಿಸುವ ಏಕಾದಶಿಯಾಗಿದ್ದು ಇದು ಪುತ್ರದಾಯೀ ಸತ್ಪುತ್ರನನ್ನು ಕೊಡುವ ಏಕಾದಶಿಯಾಗಿದೆ. *ಏಕಾದಶಿ ವ್ರತ ಮಾಡುವ ಕ್ರಮ.* ಮೊದಲನೆಯ ದಿನ ಅಂದರೆ ಏಕಾದಶಿಯ ಹಿಂದಿನ ದಿನವಾದ ದಶಮಿಯದಿನ ಏಕಭುಕ್ತರಾಗಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಿ,ಪೂರ್ಣದಿವಸ ಉಪವಾಸದಿಂದಿರಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಿ ಆಷಾಢ ಶುಕ್ಲ ದ್ವಾದಶಿಯಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು,ಪ್ರಾತಃಸ್ನಾನ, ಸಂಧ್ಯೋಪಾಸನೆ ಮಾಡಿ, ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು *ಶ್ರೀಧರ* ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ನಂದಾದೀಪವನ್ನು ಉರಿಸಬೇಕು. *ಪಂಢರಪುರದ ಯಾತ್ರೆ (ವಾರಕರಿ)* ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. *ವಾರಕರಿ* (ವಿಠಲನ ಭಕ್ತರು) ಸಂಪ್ರದಾಯವು ವೈಷ್ಣವ ಸಂಪ್ರದಾಯದಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಈ ಸಂಪ್ರದಾಯದಲ್ಲಿ ವಾರಿಕರಿ ದೀಕ್ಷೆ ಪಡೆದಂತೆ ವಾರ್ಷಿಕ,ಅರ್ಧವಾರ್ಷಿಕ ಹೀಗೆ ಪಡೆದಿರುವ ದೀಕ್ಷೆಯ ವಿಧಕ್ಕನುಸಾರವಾಗಿ ಪಂಢರಪುರಕ್ಕೆ ಯಾತ್ರೆ ಮಾಡುತ್ತಾರೆ. ಈ ಯಾತ್ರೆಯನ್ನು ಕಾಲ್ನಡಿಗೆಯಿಂದ ಮಾಡಿದರೆ ಶಾರೀರಿಕ ತಪಸ್ಸಾಗುತ್ತದೆ ಎಂಬ ನಂಬಿಕೆ ವಿಟ್ಠಲನ ಭಕ್ತರಲ್ಲಿದೆ. ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವವು ಮುಂದಿನಂತಿದೆ. ಈ ತಿಥಿಯಂದೇ ಏಕಾದಶೀದೇವಿಯ ಉತ್ಪತ್ತಿಯಾಯಿತು. ಈ ತಿಥಿಯಿಂದ ಚಾತುರ್ಮಾಸ್ಯವು ಆರಂಭವಾಗುತ್ತದೆ. ಇದೇ ದಿನ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಪವಡಿಸಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ. ಇದೇ ತಿಥಿಯಂದು ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನು. ಆಷಾಢ ಏಕಾದಶಿಯು ಕಾಲಕ್ಕೆ ಸಂಬಂಧಿಸಿದೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ನಾಲ್ಕು ತಿಂಗಳುಗಳಲ್ಲಿ ದಕ್ಷಿಣಾಯನವು ನಡೆಯುತ್ತಿರುತ್ತದೆ. ಆದ್ದರಿಂದ ಈ ಕಾಲಾವಧಿಯು ದೇವತೆಗಳ ನಿದ್ರೆಯ ಕಾಲಾವಧಿಯಾಗಿದೆ ಎಂದು ಹೇಳಲಾಗಿದೆ. ಈ ಕಾಲಾವಧಿಯಲ್ಲಿ ದೇವತೆಗಳ ಸಗುಣ-ನಿರ್ಗುಣ ತತ್ತ್ವಗಳ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯವು ಅಪ್ರಕಟ ಸ್ವರೂಪದಲ್ಲಿರುತ್ತದೆ. ಆದುದರಿಂದ ಭೂಮಂಡಲದ ಕಡೆಗೆ ಅವುಗಳ ಪ್ರಕ್ಷೇಪಣೆಯ ಪ್ರಮಾಣವು ಕಡಿಮೆಯಿರುತ್ತದೆ. ಈ ಅವಧಿಯಲ್ಲಿ ದೇವತೆಗಳ ತತ್ತ್ವಗಳು ಅಪ್ರಕಟ ಸ್ವರೂಪದಲ್ಲಿರುವುದರಿಂದ ವಾಯುಮಂಡಲ ಮತ್ತು ಬ್ರಹ್ಮಾಂಡ ಮಂಡಲಗಳಲ್ಲಿ, ಹಾಗೆಯೇ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರ ಪರಿಣಾಮವು ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಮುಂತಾದವುಗಳನ್ನು ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ಕಡಿಮೆಯಾಗುತ್ತದೆ. ಆಷಾಢ ಶುಕ್ಲ ಏಕಾದಶಿಯ ದಿನ ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ,ಇಡೀ ರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚಿಡುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ. ಮಾಧ್ವ ಮತಾನುಯಾಯಿಗಳು ಸ್ತ್ರೀ ಪುರುಷ ಎಂಬ ಭೇದವಿಲ್ಲದೆ, ಮಾಧ್ವ ಮಠದ ಸ್ವಾಮಿಗಳಿಂದ ದೇಹದ ಹಣೆ,ತೋಳು,ಎದೆ,ಹೊಟ್ಟೆ ಮುಂತಾದ ಭಾಗಗಳ ಮೇಲೆ ಶಂಖ,ಚಕ್ರ,ವಿಷ್ಣು ಪಾದ,ತ್ರಿನಾಮದ ಸಂಕೇತಗಳ *ತಪ್ತ ಮುದ್ರಾ ಧಾರಣೆ* ಮಾಡಿಸಿಕೊಳ್ಳುತ್ತಾರೆ. (ಸಂಗ್ರಹ) ========================== *ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ...🙏🏻😍🚩* ಸನಾತನವೊಂದೇ ವಿಶ್ವ ಧರ್ಮ...🙏🏻😍🚩 ಸನಾತನ ರಾಷ್ಟ್ರಕ್ಕಾಗಿ, ಸನಾತನ ಧರ್ಮಕ್ಕಾಗಿ..... *ಸನಾತನ ರಾಷ್ಟ್ರಭಕ್ತರು🚩* ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
706 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#✍️ ಮೋಟಿವೇಷನಲ್ ಕೋಟ್ಸ್ ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ – ಆಟದ ಹಿನ್ನಲೆ ಕಥೆ ನಾವೂ ಚಿಕ್ಕವರಿದ್ದಾಗ, ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ , ಡಾಮ್ ಡೂಮ್, ಟಸ್ ಪುಸ್, ಕೊಯ್ ಕೊಟಾರ್ ಅಂತಿದ್ವಿ. ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅತ್ತೆ ಹೇಳಿದರು “ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು. ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ. ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌. ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ. ಕಾಂಚನ – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ. ಮಿಣ ಮಿಣ – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ. ಡಾಮ್ ಡೂಮ್ – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ. ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು. ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. ಹೇಗಿದೆ? “ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು. ಅತ್ತೆ ಮಾತು ಮುಂದುವರಿಸಿದರು.” “ಅವಲಕ್ಕಿ, ಅಪಮಾನ ಮಾಡಬಾರದು. ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” ಹೌದು, ಎಂದು ಹೇಳಿದೆ. ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ . ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
833 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#ಆಷಾಢ ನವರಾತ್ರಿ 🙏 #varahi amma ಗುಪ್ತ ನವರಾತ್ರಿ ಆಚರಣೆ ಮಾಹಿತಿ ಗುಪ್ತ ನವರಾತ್ರಿಯ ಮಹತ್ವ: ಗುಪ್ತ ನವರಾತ್ರಿಯೆಂದು ಆಚರಿಸಲಾಗುವ ಆಷಾಢ ನವರಾತ್ರಿಯನ್ನು ದೇಶದ ಕೆಲವೆಡೆ ಗಾಯತ್ರಿ ದೇವಿಯ ನವರಾತ್ರಿಯೆಂದೂ ಕೂಡ ಆಚರಿಸುತ್ತಾರೆ. ಈ ನವರಾತ್ರಿಯಂದು 9 ದಿನ ರಾತ್ರಿ ದುರ್ಗಾದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇಂದು ಗುಪ್ತ ಎಂದರೆ ರಹಸ್ಯವೆಂದರ್ಥ. ಈ ಪದವೇ ಸೂಚಿಸುವಂತೆ ಈ ಹಬ್ಬವನ್ನು ಗುಪ್ತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮೊಟ್ಟ ಮೊದಲ ಬಾರಿಗೆ ಗುಪ್ತ ಸಾಮ್ರಾಜ್ಯದವರು ಆಚರಿಸಿರುವುದರಿಂದ ಇದಕ್ಕೆ ಗುಪ್ತ ಎನ್ನುವ ಹೆಸರು ಬರಲು ಕಾರಣವಾಯಿತೆಂಬ ನಂಬಿಕೆಯಿದೆ. ಕುಟುಂಬದಲ್ಲಿ ಯಾರಾದರು ವ್ರತವನ್ನು ಕೈಗೊಂಡಾಗ ಸಾವನ್ನಪ್ಪಿದರೆ, ಸಾಮಾಜಿಕ ಅಥವಾ ಆಧ್ಯಾತ್ಮಿಕ ಸೇವೆಯಲ್ಲಿ ಇರುವಾಗಲೇ ದೈವಾಧೀನರಾದರೆ ಅಂತಹ ಕುಟುಂಬದಲ್ಲಿ ಈ ನವರಾತ್ರಿಯನ್ನು ಒಂಟಿಯಾಗಿ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ದುರ್ಗಾದೇವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಹಬ್ಬದಲ್ಲಿ ಯಾವುದೇ ಆಡಂಬರವಿರುವುದಿಲ್ಲ. ಕೇವಲ ಭಕ್ತಿಯೊಂದೇ ದೇವಿಗೆ ಅರ್ಪಿಸಲಾಗುತ್ತದೆ. ಈ ನವರಾತ್ರಿಯಂದು ದುರ್ಗೆಯನ್ನು ಆರಾಧಿಸಿದರೆ ದೇವಿಯು ಆಂತರಿಕ ಮತ್ತು ಬಾಹ್ಯ ನಕಾರಾತ್ಮಕ ಶಕ್ತಿಗಳನ್ನು , ಚಿಂತನೆಗಳನ್ನು ತೊಡೆದು ಹಾಕುತ್ತಾಳೆ. ಈ ನವರಾತ್ರಿಯ ಆಚರಣೆಯಿಂದ ಬುದ್ಧಿವಂತಿಕೆ ಮತ್ತು ಸಂಪತ್ತು ದೊರೆಯುತ್ತದೆ ಎನ್ನುವ ನಂಬಿಕೆಯೂ ಇದೆ. ವಿಷ್ಣುವಿನ ವರಹ ಅವತಾರ ಗುಪ್ತ ನವರಾತ್ರಿ ಸಮಯದಲ್ಲಿ ಜನರು ಸಾಮಾನ್ಯವಾಗಿ ದುರ್ಗಾ ದೇವಿಯನ್ನು ನವದುರ್ಗಾ ಎನ್ನುವ 9 ಅವತಾರಗಳಲ್ಲಿ ಪೂಜಿಸಲಾಗುತ್ತದೆ. ಮಾಟಮಂತ್ರ, ಅಸೂಯೆ ಮುಂತಾದ ದುಷ್ಟ ಶಕ್ತಿಗಳ ವಿರುದ್ಧ ಈ ಪೂಜೆಯು ರಕ್ಷಣೆ ನೀಡುತ್ತದೆ. ಗುಪ್ತ ನವರಾತ್ರಿಯ 9 ರಾತ್ರಿ ದೇವಿ ಮಹಾತ್ಮ್ಯಾಂ ಅಥವಾ ದುರ್ಗಾ ಮಂತ್ರಗಳನ್ನು ಪಠಿಸಲಾಗುತ್ತದೆ. ಆಷಾಢ ನವರಾತ್ರಿಯು ವರಹಿ ದೇವಿಯನ್ನು ಕೂಡ ಪೂಜಿಸಲು ಸೂಕ್ತ ಸಮಯವಾಗಿದೆ. ವರಾಹಿ ದೇವಿಯು ಹಂದಿ ಮುಖದ ದೇವಿಯಾಗಿದ್ದು, ಈಕೆಯನ್ನು ವಿಷ್ಣುವಿನ ವರಹ ಅವತಾರದ ಅತ್ನಿಯೆಂದು ಪರಿಗಣಿಸಲಾಗುತ್ತದೆ. ಈಕೆ ಶಕ್ತಿಯುತ ಮತ್ತು ಸಹಾನುಭೂತಿಯುಳ್ಳ ದೇವತೆಯಾಗಿದ್ದಾಳೆ. ಈಕೆ ಭಕ್ತರ ಬಯಕೆಯನ್ನು ಈಡೇರಿಸುತ್ತಾಳೆ. ಹಾಗೂ ಭೌತಿಕ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ವರಹಿಯನ್ನು ಲಕ್ಷ್ಮಿ ದೇವಿಯ ಸಂಪತ್ತಿನ ರೂಪವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣದ ಪ್ರಕಾರ, ವರಹಿ ದೇವಿಯು ಧೈರ್ಯ, ಶೌರ್ಯ, ವಿಜಯ ಮತ್ತು ಬೇಡಿದ ವರಗಳನ್ನು ನೀಡುವ ದೇವಿಯಾಗಿದ್ದಳೆ. ಗುಪ್ತ ನವರಾತ್ರಿಯ ಪೂಜಾವಿಧಿ: 1) ಮನೆಯಲ್ಲೇ ದೇವಿಗೆ ಮಂತ್ರವನ್ನು ಮತ್ತು ಪ್ರಸಾದವನ್ನು ಅರ್ಪಿಸುವುದರ ಮೂಲಕ ಸರಳವಾಗಿ ಪೂಜೆಯನ್ನು ಮಾಡಿ. 2) ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ದೇವಿಯ ಮಹಾತ್ಮ್ಯಾಂ ಓದಿ ಅಥವಾ ಬೇರೆಯವರಿಂದ ಕೇಳಿ. 3) ನಿಮ್ಮಲ್ಲಿ ಸಂಪೂರ್ಣ ದಿನ ಉಪವಾಸವಿರಲು ಸಾಧ್ಯವಾದರೆ ದಿನಪೂರ್ತಿ ಉಪವಾಸವಿರಿ ಅಥವಾ ಸಂಪೂರ್ಣ ದಿನ ಉಪವಾಸವಾಗಿರಲು ಸಾಧ್ಯವಿಲ್ಲದಿದ್ದರೆ ಒಂದು ಹೊತ್ತಾದರೂ ಉಪವಾಸವನ್ನು ಆಚರಿಸಿ. 4) ದುರ್ಗೆಯ ಪೂಜೆಯೊಂದಿಗೆ ವರಹಿ ದೇವಿಯನ್ನು ಕೂಡ ಆರಾಧಿಸಿ. 5) ಆಷಾಢ ನವರಾತ್ರಿಯ 9 ರಾತ್ರಿಗಳಲ್ಲೂ ದುರ್ಗೆಯನ್ನು ವಿಶೇಷವಾಗಿ ಪೂಜಿಸಿ, ಪೂಜೆಯ ನಂತರ ಸುಮಂಗಲಿಯರಿಗೆ ಅರಶಿಣ, ಕುಂಕುಮ, ಬಳೆ, ಅಕ್ಷತೆ ಹಾಗೂ ಸೀರೆಯನ್ನು ಅಥವಾ ರವಿಕೆಯ ಬಟ್ಟೆಯನ್ನು ನೀಡಿ. ಗುಪ್ತ ನವರಾತ್ರಿಯ ಅಥವಾ ಆಷಾಢ ನವರಾತ್ರಿಯಾಚರಣೆಯ ಉಪಯೋಗ: 1) ನಕಾರಾತ್ಮಕ ಶಕ್ತಿಯನ್ನು ದೂರಾಗಿಸುತ್ತದೆ. 2) ಸಂಪತ್ತನ್ನು, ಹಣವನ್ನು ನೀಡಿ, ದುರಾದೃಷ್ಟದಿಂದ ನಿಮ್ಮನ್ನು ದೂರಾಗಿಸುತ್ತದೆ. 3) ಹಣಕಾಸಿನ ವಿಚಾರದಲ್ಲಿ ಅಥವಾ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದು ಹಾಕುತ್ತದೆ. 4) ಶಕ್ತಿ, ಸಾಮರ್ಥ್ಯ ಮತ್ತು ಎಲ್ಲಾ ಕಾರ್ಯದಲ್ಲೂ ಜಯವನ್ನು ನೀಡುತ್ತಾಳೆ. 5) ಆರೋಗ್ಯವಂತ ಜೀವನವನ್ನು ಕಲ್ಪಿಸುತ್ತದೆ. ಆಷಾಢ ನವರಾತ್ರಿಯ ಅಥವಾ ಗುಪ್ತ ನವರಾತ್ರಿಯ 9 ದಿನ ರಾತ್ರಿಯು ತಾಯಿ ದುರ್ಗೆಯನ್ನು ಆರಾಧಿಸಿ ಅವಳ ಆಶೀರ್ವಾದವನ್ನು ಪಡೆದುಕೊಳ್ಳಿ. ಈ ನವರಾತ್ರಿಯು ಕೂಡ ಉಳಿದೆಲ್ಲಾ ನವರಾತ್ರಿಗಳಷ್ಟೇ ಪವಿತ್ರವಾದ ನವರಾತ್ರಿಯೆಂದು ಪರಿಗಣಿಸಲಾಗಿದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
704 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 ಶ್ರೀನವರಾತ್ರಿ ಸಂಕಲ್ಪ ಮತ್ತು ಅಖಂಡ ದೀಪಸ್ಥಾಪನವಿಧಿ.*. ಶ್ರೀನವರಾತ್ರಿ ಉತ್ಸವವನ್ನು ಆಶ್ವೀನ ಶುಕ್ಲ ಪ್ರತಿಪದೆಯ ದಿನ ಸಂಕಲ್ಪ ಪೂರ್ವಕವಾಗಿ ಪ್ರಾರಂಭಿಸಬೇಕು . ಅಚಮನ ಪ್ರಾಣಾಯಾಮ ಸಂಕಲ್ಪ - ಶುಭೆ ಶೋಭನೆ ಮಹೂರ್ತೆ - ಏವಂಗುಣವಿಶೆಷಣವಿಶಿಷ್ಟಯಾಂ ಆಶ್ವೀನ ಪ್ರತಿಪತ್ ಪುಣ್ಯತಿಥೌ ಶ್ರೀಭಾರತಿರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀವೆಂಕಟೇಶ ಫ್ರೇರಣಯಾ ತತ್ಪ್ರೀತ್ಯರ್ಥಂ ಶ್ರೀ -ಭೂ -ದುರ್ಗಾ ಬ್ರಹ್ಮಾ ,ಪ್ರಾಣ ,ಸರಸ್ವತಿ , ಭಾರತೀ ಶೇಷ ಗರುಡಾದಿ ಸಹಿತಸ್ಯ ಶ್ರೀನಿವಾಸಸ್ಅದ್ಯ ಪ್ರಾತರಾರಭ್ಯ ಆಗಮಿ ದಶಮಿ ಪರ್ಯಂತಂ (ತ್ರಿರಾತ್ರೋತ್ಸವ ,ಪಂಚರಾತ್ರೋತ್ಸವ ,ಸಪ್ತ ರಾತ್ರೋತ್ಸವ) ನವರಾತ್ರೋತ್ಸವಾಖ್ಯಂ ಕರ್ಮಕರಿಷ್ಯಮಾಣಃ ಘೃತದೀಪಸಂಯೋಜನಂ ,(ಅಖಂಡದೀಪ ಸ್ಥಾಪನಂ) ತೈಲದೀಪ ಸಂಯೋಜನಂ ,ಪ್ರತಿದಿನಂ ಮಧ್ಯಾಹ್ನೇ ಮಹಾಪೂಜಾಂ ,ಸಾಯಾಹ್ನೇ ಸಚ್ಛಾಸ್ತ್ರಶ್ರವಣಂ ,ಶ್ರೀನಿವಾಸಕಲ್ಯಾಣ ಪಾರಯಣಂ ಚ ಕರಿಷ್ಯೇ | ಘಟಸ್ಥಾಪನಂ ಚ ಕರಿಷ್ಯೇ | ಎಂದು ಸಂಕಲ್ಪಮಾಡಿ ಮಂತ್ರಾಕ್ಷತೆ ನೀರು ಬಿಡುವುದು . ಘಟಸ್ಥಾಪನ ಸಂಪ್ರದಾಯವಿದ್ದವರು ಆಕಲಶೇಷುಧಾವತಿ , ಗೃಹವೈಪ್ರತಿಷ್ಠಾ ಸೂಕ್ತಂ ಮುಂತಾದ ಕಲಶಸ್ಥಾಪನ ಮತ್ತು ಪ್ರಾಣಪ್ರತಿಷ್ಠಾಪನ ಮಂತ್ರಗಳಿಂದ ಘಟಸ್ಥಾಪನೆಮಾಡಿ ಕುಲದೇವರನ್ನು ಸ್ಥಾಪಿಸಿ ನವರಾತ್ರಿ ಯಲ್ಲಿ ಪ್ರತಿನಿತ್ಯ ಷೋಡಶೋಪಚಾರದಿಂದ ಪೂಜಿಸಿ ನೈವೇದ್ಯ ಮಹಾನಿರಾಜನಾದಿಗಳನ್ನು ಮಾಡಬೇಕು. ದೀಪಸ್ಥಂಭಪೂಜಾ ಸ್ಥಂಭಾಗ್ರೇ ಸಪ್ತವಿಂಶತಿ ಕೃತ್ತಿಕಾನಕ್ಷತ್ರದೇವತಾಭ್ಯೋನಮಃ | ನಾಲೇ.ವಾಸುಕಿ ದೇವತಾಯೈನಮಃ |ಪಾದೇ ಚಂದ್ರಾರ್ಕಭ್ಯಾಂ ನಮಃ | ಎಂದು ದೀಪಸ್ಥಂಭವನ್ನು ಪೂಜಿಸಿ.ಮಂತ್ರಾಕ್ಷತೆ ಹಾಕಿ ದೀಪಸ್ಥಂಭಕ್ಕೆ ಶಾವಂತಿಕೆ ಹೂವಿನ ಹಾರವನ್ನು ಸುತ್ತಿ ಒಂದು ಎಣ್ಣೆ ಯ ದೀಪ ಇನ್ನೋಂದು ತುಪ್ಪದ ದೀಪವನ್ನು ಅಗ್ನಿ ನಾಗ್ನಿಃ ಸಮಿಧ್ಯತೆ ಎಂಬ ಮಂತ್ರದಿಂದ ಹಚ್ಚಬೇಕು ಈದೀಪಗಳನ್ನು ನಂದದಂತೆ ನೋಡಿ ಕೂಳ್ಳಬೇಕು .ಇದನ್ನೇ ಅಖಂಡದೀಪವೆನ್ನಲಾಗಿದೆ . ಅಖಂಡ ದೀಪಕಂ ದೇವ್ಯಾಃ ಪ್ರೀತಯೇ ನವರಾತ್ರಕಂ | ಉಜ್ವಲಯೇದ್ ಅಹೋರಾತ್ರಮೆಕಚಿತ್ತೋ ಧೃತವೃತಃ ।। ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
974 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#🙏ಶ್ರೀ ದುರ್ಗಾ ದೇವಿ🙏 ದುರ್ಗಾ ಚಾಲೀಸಾ ನಾಳೆಯಿಂದ ಗುಪ್ತ ನವರಾತ್ರಿ ಪ್ರಯುಕ್ತ ನಮೋ ನಮೋ ದುರ್ಗೆ ಸುಖ ಕರಣಿ ನಮೋ ನಮೋ ಅಂಬೆ ದುಃಖ ಹರಾಣಿ ಎಲ್ಲಾ ಸಂತೋಷಗಳನ್ನು ನೀಡುವವಳು, ಓ ದುರ್ಗಾದೇವಿ! ಓ ಅಂಬಾದೇವಿ! ಎಲ್ಲಾ ದುಃಖಗಳನ್ನು ಕೊನೆಗೊಳಿಸುವವಳು ನಿನಗೆ ನಾನು ನಮಸ್ಕರಿಸುತ್ತೇನೆ. ನಿರಾಕರ ಹೈ ಜ್ಯೋತಿ ತುಮ್ಹಾರಿ ತಿಹುನ್ ಲೋಕ್ ಫೈಲಿ ಉಜಯರಿ ನಿನ್ನ ಬೆಳಕಿನ ಪ್ರಕಾಶವು ಅಪರಿಮಿತ ಮತ್ತು ವ್ಯಾಪಕವಾಗಿದೆ ಮತ್ತು ಮೂರು ಲೋಕಗಳು (ಭೂಮಿ, ಸ್ವರ್ಗ ಮತ್ತು ನರಕ) ನಿನ್ನಿಂದ ಪ್ರಬುದ್ಧವಾಗಿವೆ. ಶಶಿ ಲಲಾತ್ ಮುಖ ಮಹಾ ವಿಶಾಲ ನೇತ್ರ ಲಾಲ್ ಭೃಕುಟೀ ವಿಕರಾಲಾ ನಿನ್ನ ಮುಖವು ಚಂದ್ರನಂತೆ ಮತ್ತು ಬಾಯಿ ತುಂಬಾ ದೊಡ್ಡದಾಗಿದೆ. ನಿನ್ನ ಕಣ್ಣುಗಳು ಭಯಾನಕ ಮುಖಭಂಗದೊಂದಿಗೆ ಕೆಂಪು ಹೊಳಪಿನೊಂದಿಗೆ ಹಾಸಿಗೆ ಹಿಡಿದಿವೆ. ರೂಪ ಮಾತು ಕೋ ಅಧಿಕ ಸುಹವ ದರಸ್ ಕರತ್ ಜನ್ ಅತಿ ಸುಖ ಪಾವೇ ಓ ತಾಯಿ! ನಿನ್ನ ನೋಟವು ಮೋಡಿಮಾಡುವಂತಿದೆ, ಅದರ ನೋಟವು ಭಕ್ತರ ಕಲ್ಯಾಣವನ್ನು ಖಚಿತಪಡಿಸುತ್ತದೆ. ತುಮ್ ಸಂಸಾರ್ ಶಕ್ತಿ ಲಯಾ ಕಿನಾ ಪಲಾನ್ ಹೇತು ಅನ್ನಾ ಧನ್ ದಿನಾ ಪ್ರಪಂಚದ ಎಲ್ಲಾ ಶಕ್ತಿಗಳು ನಿನ್ನಲ್ಲಿ ನೆಲೆಗೊಂಡಿವೆ ಮತ್ತು ಪ್ರಪಂಚದ ಉಳಿವಿಗಾಗಿ ಆಹಾರ ಮತ್ತು ಹಣವನ್ನು ಒದಗಿಸುವವಳು ನೀನೇ. ಅನ್ನಪೂರ್ಣ ಹುಯಿ ಜಗ್ ಪಲಾ ತುಮ್ಹಿ ಆದಿ ಸುಂದರಿ ಬಾಲಾ ಅನ್ನಪೂರ್ಣೆಯಂತೆ ನೀವು ಇಡೀ ವಿಶ್ವವನ್ನು ಪೋಷಿಸುತ್ತೀರಿ ಮತ್ತು ನೀವು ಕಾಲಾತೀತ ಬಾಲ ಸುಂದರಿ (ಅತೀ ಸೌಂದರ್ಯದ ಚಿಕ್ಕ ಹುಡುಗಿ) ಯಂತೆ ಕಾಣಿಸಿಕೊಳ್ಳುತ್ತೀರಿ. ಪ್ರಲಯ ಕಲಾ ಸಬ್ ನಾಶನ್ ಹರಿ ತುಮ್ ಗೌರಿ ಶಿವ-ಶಂಕರ್ ಪ್ಯಾರಿ ವಿಘಟನೆಯ ಸಮಯದಲ್ಲಿ ಎಲ್ಲವನ್ನೂ ನಾಶಮಾಡುವವಳು ನೀನೇ, ಓ ತಾಯಿಯೇ. ನೀನು ಶಿವನ ಪ್ರೀತಿಯ ಪತ್ನಿ, ಗೌರಿ (ಪಾರ್ವತಿ) ಶಿವ ಯೋಗಿ ತುಮ್ಹ್ರೇ ಗುಣ ಗವೇನ್ ಬ್ರಹ್ಮ ವಿಷ್ಣು ತುಮ್ಹೇನ್ ನಿತ್ ಧ್ಯಾನೇ ಶಿವ ಮತ್ತು ಎಲ್ಲಾ ಯೋಗಿಗಳು ಯಾವಾಗಲೂ ನಿನ್ನನ್ನು ಸ್ತುತಿಸುತ್ತಾರೆ, ಬ್ರಹ್ಮ, ವಿಷ್ಣು ಮತ್ತು ಇತರ ಎಲ್ಲಾ ದೇವರುಗಳು ಯಾವಾಗಲೂ ನಿನ್ನನ್ನು ಧ್ಯಾನಿಸುತ್ತಾರೆ. ರೂಪ್ ಸರಸ್ವತಿ ಕೋ ತುಮ್ ಧಾರಾ ದೇ ಸುಬುದ್ಧಿ ಋಷಿ ಮುನಿನಾ ಉಬಾರಾ ಋಷಿಗಳಿಗೆ ಜ್ಞಾನವನ್ನು ನೀಡಲು ಮತ್ತು ಅವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ನೀವು ಸರಸ್ವತಿ ದೇವಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತೀರಿ. ಧರ್ಯೋ ರೂಪ್ ನರಸಿಂಹ ಕೋ ಅಂಬಾ ಪ್ರಗತ್ ಭಯಿನ್ ಫಾರ್ ಕರ್ ಖಂಬಾ ಓ ತಾಯಿ ಅಂಬಾ, ಕಂಬವನ್ನು ಮುರಿದು ನಾರಿಷ್ಮ ರೂಪದಲ್ಲಿ ಕಾಣಿಸಿಕೊಂಡದ್ದು ನೀನೇ. ರಕ್ಷ ಕರಿ ಪ್ರಹ್ಲಾದ ಬಚಯೋ ಹಿರಣಕುಶ ಕೋ ಸ್ವರ್ಗ ಪಥಯೋ ಹೀಗೆ ನೀನು ಪ್ರಹ್ಲಾದನನ್ನು ರಕ್ಷಿಸಿ ಹಿರಣ್ಯಕಶ್ಯಪನೂ ನಿನ್ನ ಕೈಯಿಂದ ಹತನಾಗಿ ಸ್ವರ್ಗಕ್ಕೆ ಹೋದನು. ಲಕ್ಷ್ಮೀ ರೂಪ ಧರೋ ಜಗ್ ಮಹೀಂ ಶ್ರೀ ನಾರಾಯಣ ಅಂಗ ಸಂಹಹೀಂ ಲಕ್ಷ್ಮಿ ದೇವಿಯ ರೂಪದಲ್ಲಿ, ಓ ತಾಯಿ, ನೀವು ಈ ಜಗತ್ತಿನಲ್ಲಿ ಕಾಣಿಸಿಕೊಂಡು ಶ್ರೀ-ನಾರಾಯಣರ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತೀರಿ. ಕ್ಷೀರ ಸಿಂಧು ಮೈಂ ಕಾರಟ್ ವಿಲಾಸ ದಯಾ ಸಿಂಧು ದೀಜೆ ಮಾನ್ ಅಸ ಹಾಲಿನ ಸಮುದ್ರದ ಮೇಲೆ ವಾಸವಾಗಿರುವ ಓ ದೇವಿಯೇ, ಭಗವಾನ್ ವಿಷ್ಣುವಿನೊಂದಿಗೆ, ದಯವಿಟ್ಟು ನನ್ನ ಆಸೆಗಳನ್ನು ಪೂರೈಸು. ಹಿಂಗಲಜಾ ಮೈಂ ತುಮ್ಹಿನ್ ಭವಾನಿ ಮಹಿಮಾ ಅಮಿತ್ ನ ಜತ್ ಬಖಾನಿ ಓ ಭವಾನಿ, ಹಿಂಗಲಜಾದ ಪ್ರಸಿದ್ಧ ದೇವತೆ ಬೇರೆ ಯಾರೂ ಅಲ್ಲ ನೀವೇ ಹೊರತು ನೀವೇ. ಅಪರಿಮಿತ ನಿಮ್ಮ ವೈಭವ, ಧಿಕ್ಕರಿಸುವ ವಿವರಣೆ. ಮಾತಂಗಿ ಧೂಮಾವತಿ ಮಾತಾ ಭುವನೇಶ್ವರಿ ಬಾಗಲಾ ಸುಖದಾತಾ ನೀನೇ ಮಾತಂಗಿ ಮತ್ತು ಧೂಮಾವತಿ ಮಾತಾ. ಎಲ್ಲರಿಗೂ ಸಂತೋಷವನ್ನು ದಯಪಾಲಿಸಲು ಭುವನೇಶ್ವರಿ ಮತ್ತು ಬಗಲಾಮುಖಿ ದೇವಿಯಾಗಿ ಕಾಣಿಸಿಕೊಂಡಿರುವೆ. ಶ್ರೀ ಬೈರವ್ ತಾರ ಜಗ ತಾರೀನಿ ಚಿನ್ನ ಬಾಲ ಬವ್ ದುಃಖ ನಿವಾರಿಣಿ ಶ್ರೀ ಭೈರವಿ, ತ್ರಾದೇವಿ ಮತ್ತು ಛಿನಮಸ್ತಾ ದೇವಿಯ ರೂಪದಲ್ಲಿ ಕಾಣಿಸಿಕೊಂಡು ಜಗತ್ತನ್ನು ಉದ್ಧರಿಸುವ ಮತ್ತು ಅದರ ದುಃಖಗಳನ್ನು ಕೊನೆಗೊಳಿಸುವವನು ನೀನು. ಕೆಹಾರಿ ವಾಹನ್ ಸೋ ಭವಾನಿ ಲಾಂಗುರ್ ವೀರ್ ಚಲತ್ ಅಗವಾನಿ ನಿಮ್ಮ ಸಿಂಹ ವಾಹನದ ಮೇಲೆ ಆಕರ್ಷಕವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಓ ಭವಾನಿ ದೇವಿ, ಧೈರ್ಯಶಾಲಿ ಲಂಗೂರ್ (ಹನುಮಾನ್) ನಿಮ್ಮನ್ನು ಸ್ವಾಗತಿಸುತ್ತಾನೆ. ಕರ್ ಮೈ ಖಪ್ಪರ್ ಖಡಗ್ ವಿರಾಜೆ ಜಾಕೋ ದೇಖ್ ಕಲ್ ದಾರ್ ಭಜೆ ನೀವು ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಕಪೆಲ್ ಹಿಡಿದು ಕಾಳಿ ದೇವಿಯ ರೂಪದಲ್ಲಿ ಕಾಣಿಸಿಕೊಂಡಾಗ, ಸಮಯ ಕೂಡ ಭಯಭೀತರಾಗಿ ಓಡಿಹೋಗುತ್ತದೆ. ಸೋಹೆ ಅಸ್ತ್ರ ಔರ್ ತ್ರಿಶೂಲ ಜೇಸೆ ಉಥಾಟ ಶತ್ರು ಹಿಯಾ ಶೂಲ ನೀವು ಕೈಯಲ್ಲಿ ತ್ರಿಶೂಲದೊಂದಿಗೆ ಸುಸಜ್ಜಿತರಾಗಿರುವುದನ್ನು ನೋಡಿ, ಶತ್ರುಗಳ ಹೃದಯವು ಭಯದ ಕುಟುಕಿನಿಂದ ನೋವುಂಟುಮಾಡುತ್ತದೆ. ನಾಗರಕೋಟ್ ಮೈ ತುಮ್ಹಿ ವಿರಾಜತ್ ತಿಹುನ್ ಲೋಕ್ ಮೈ ದಂಕಾ ಬಜತ್ ನೀವು ಕಂಗಾರದ ನಾಗರಕೋಟ್‌ನಲ್ಲಿ ದೇವಿಯ ರೂಪದಲ್ಲಿಯೂ ವಿಶ್ರಾಂತಿ ಪಡೆಯುತ್ತೀರಿ. ಹೀಗೆ ನಿಮ್ಮ ಮಹಿಮೆಯ ಶಕ್ತಿಯಲ್ಲಿ ಮೂರು ಲೋಕಗಳು ನಡುಗುತ್ತವೆ. ಶುಂಭು ನಿಶುಂಭು ದನುಜ ತುಮ್ ಮಾರೆ ರಕ್ತ-ಬೀಜ ಶಂಖಾನ್ ಸಂಹಾರೆ ನೀವು ಶುಂಭು ಮತ್ತು ನಿಶುಂಭು ಮುಂತಾದ ರಾಕ್ಷಸರನ್ನು ಕೊಂದಿದ್ದೀರಿ ಮತ್ತು ಭಯಾನಕ ರಾಕ್ಷಸ ರಕ್ತಬೀಜನ ಸಾವಿರ ರೂಪಗಳನ್ನು ಪವಿತ್ರಗೊಳಿಸಿದ್ದೀರಿ. ಮಹಿಷಾಸುರ ನೃಪ ಅತಿ ಅಭಿಮಾನಿ ಜೇಹಿ ಅಘ ಭರ ಮಹಿ ಅಕುಲಾನಿ ದುರಹಂಕಾರಿ ಮಹಿಷಾಸುರನ ಪಾಪಗಳ ಭಾರವನ್ನು ಹೊತ್ತು ಭೂಮಿಯು ತೀವ್ರವಾಗಿ ಸಂಕಟಗೊಂಡಾಗ. ರೂಪ್ ಕರಲ್ ಕಾಳಿಕಾ ಧಾರಾ ಸೇನ್ ಸಹಿತಾ ತುಮ್ ತಿನ್ ಸಂಹಾರ ನೀನು ಕಾಳಿ ದೇವಿಯ ಘೋರ ರೂಪವನ್ನು ಧರಿಸಿ ಅವನ ಸೈನ್ಯದೊಂದಿಗೆ ಅವನನ್ನು ಸಂಹಾರ ಮಾಡಿದ. ಪರಿ ಗರ್ಹ ಸಂತನ್ ಪರ್ ಜಬ್ ಜಬ್ ಭಯೀ ಸಹಾಯಮಾತು ತುಮ್ ಟ್ಯಾಬ್ ಟ್ಯಾಬ್ ಹೀಗೆ ಉದಾತ್ತ ಸಂತರು ಸಂಕಷ್ಟಕ್ಕೆ ಒಳಗಾದಾಗಲೆಲ್ಲ ಅವರ ರಕ್ಷಣೆಗೆ ಬಂದವರು ಓ ತಾಯಿಯೇ. ಅಮರಪುರಿ ಅರು ಬಸವ ಲೋಕ ತವ ಮಹಿಮಾ ಸಬ್ ರಹೇನ್ ಅಶೋಕ, ಅಮರಪುರಿ (ದೈವಿಕ ಕ್ಷೇತ್ರ) ಸೇರಿದಂತೆ ಎಲ್ಲಾ ಕ್ಷೇತ್ರಗಳು ನಿಮ್ಮ ಕೃಪೆಯಿಂದ ದುಃಖರಹಿತವಾಗಿ ಮತ್ತು ಸಂತೋಷವಾಗಿ ಉಳಿದಿವೆ, ಓ ದೇವಿ! ಜ್ವಾಲಾ ಮೈಂ ಹೈ ಜ್ಯೋತಿ ತುಮ್ಹಾರಿ ತುಮ್ಹೇಂ ಸದಾ ಪೂಜಾನ್ ನಾರ್ ನಾರೀ ಶ್ರೀ ಜ್ವಾಲಾ ಜಿಯಲ್ಲಿ ಪ್ರಕಾಶಮಾನವಾಗಿ ಉರಿಯುತ್ತಿರುವ ನಿನ್ನ ಮಹಿಮೆಯ ಸಂಕೇತ ಅದು. ಎಲ್ಲಾ ಪುರುಷರು ಮತ್ತು ಮಹಿಳೆಯರು ನಿನ್ನನ್ನು ಯಾವಾಗಲೂ ಪೂಜಿಸುತ್ತಾರೆ, ಓ ತಾಯಿ! ಪ್ರೇಮ್ ಭಕ್ತಿ ಸೇ ಜೋ ಯಹ್ ಗವೇ ದುಃಖ-ದಾರಿದ್ರ ನಿಕಟ್ ನಹೀಂ ಅವೆ ಪ್ರೀತಿ ಮತ್ತು ಪ್ರಾಮಾಣಿಕತೆಯ ಭಕ್ತಿಯಿಂದ ನಿನ್ನ ಮಹಿಮೆಯನ್ನು ಹಾಡುವವನು ದುಃಖ ಮತ್ತು ಬಡತನವನ್ನು ಮೀರಿರುತ್ತಾನೆ. ಧ್ಯಾವ ತುಮ್ಹೆಂ ಜೋ ನರ ಮನ್ ಲೈ ಜನಮ್-ಮರನ್ ತಕೋ ಚುತಿ ಜೈ ನಿನ್ನ ರೂಪವನ್ನು ಏಕಾಗ್ರತೆಯಿಂದ ಧ್ಯಾನಿಸುವವನು ಜನನ ಮತ್ತು ಮರಣಗಳ ಚಕ್ರವನ್ನು ಮೀರಿ ಹೋಗುತ್ತಾನೆ. ಜೋಗಿ ಸುರ್-ಮುನಿ ಕಹತ್ ಪುಕಾರಿ ಜೋಗ್ ನ ಹೋ- ಬಿನ್ ಶಕ್ತಿ ತುಮ್ಹಾರಿ ಎಲ್ಲಾ ಯೋಗಿಗಳು, ದೇವರುಗಳು ಮತ್ತು ಋಷಿಗಳು ನಿಮ್ಮ ಅನುಗ್ರಹವಿಲ್ಲದೆ ದೇವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಘೋಷಿಸುತ್ತಾರೆ. ಶಂಕರ್ ಆಚರಾಜ್ ತಪ್ ಕೀನ್ಹೋನ್ ಕಾಮ್ ಕ್ರೋಧ ಜೀತ್ ಸಬ್ ಲೀನ್ಹೋನ್ ಶಂಕರಾಚಾರ್ಯರು ಒಮ್ಮೆ ಆಚರಾಜ್ ಎಂಬ ವಿಶೇಷ ತಪಸ್ಸನ್ನು ಮಾಡಿದ್ದರು ಮತ್ತು ಅದರ ಪುಣ್ಯದಿಂದ ಅವರು ತಮ್ಮ ಕೋಪ ಮತ್ತು ಆಸೆಯನ್ನು ನಿಗ್ರಹಿಸಿಕೊಂಡಿದ್ದರು. ನಿಸಿದಿನ್ ಧ್ಯಾನ್ ಧರೋ ಶಂಕರ್ ಕೋ ಕಹು ಕಲ್ ನಹೀಂ ಸುಮಿರೋ ತುಮ್ ಕೋ ಅವರು ಭಗವಾನ್ ಶಂಕರನನ್ನು ಪೂಜಿಸಿದರು ಮತ್ತು ಒಂದು ಕ್ಷಣವೂ ತನ್ನ ಮನಸ್ಸನ್ನು ನಿಮ್ಮ ಮೇಲೆ ಕೇಂದ್ರೀಕರಿಸಲಿಲ್ಲ. ಶಕ್ತಿ ರೂಪ್ ಕಾ ಮರಮ್ ನಾ ಆಯೋ ಶಕ್ತಿ ಗೇ ತಬ್ ಮನ್ ಪಚ್ತಯೋ ನಿನ್ನ ಅಪಾರ ಮಹಿಮೆಯನ್ನು ಅವನು ಅರಿತುಕೊಳ್ಳದ ಕಾರಣ, ಅವನ ಎಲ್ಲಾ ಶಕ್ತಿಗಳು ಕ್ಷೀಣಿಸಿದವು ಮತ್ತು ಇದುವರೆಗೆ ಪಶ್ಚಾತ್ತಾಪ ಪಡುತ್ತಿದ್ದನು. ಶರ್ನಾಗತ್ ಹುಯಿ ಕೀರ್ತಿ ಬಖಾನಿ ಜೈ ಜೈ ಜೈ ಜಗದಂಬ ಭವಾನಿ ಆಗ ನಿನ್ನನ್ನು ಆಶ್ರಯಿಸಿ ನಿನ್ನ ಮಹಿಮೆಯನ್ನು ಸ್ತುತಿಸಿ ಜಯ ಜಯ ಜಯ ಎಂದು ನಿನ್ನನ್ನು ಹಾಡಿ ಓ ಜಗದಂಬಾ ಭವಾನಿ. ಭಯೀ ಪ್ರಸನ್ನ ಆದಿ ಜಗದಂಬಾ ದಯೀ ಶಕ್ತಿ ನಹೀಂ ಕೀನ್ ವಿಲಂಬ ನಂತರ, ಓ ಆದಿ ದೇವತೆಗಳಾದ ಜಗದಂಬಾ ಜೀ, ನೀವು ಪ್ರಾಯಶ್ಚಿತ್ತ ಹೊಂದಿದ್ದೀರಿ ಮತ್ತು ಸ್ವಲ್ಪ ಸಮಯದಲ್ಲೇ ನೀವು ಅವನ ಕಳೆದುಹೋದ ಶಕ್ತಿಯನ್ನು ಅವನಿಗೆ ದಯಪಾಲಿಸಿದ್ದೀರಿ. ಮೋಕೋನ್ ಮಾತು ಕಷ್ಟ ಅತಿ ಘೇರೋ ತುಮ್ ಬಿನ್ ಕೌನ್ ಹರೇ ದುಖ್ ಮೇರೋ ಓ ತಾಯಿ! ತೀವ್ರ ವಾತ್ಸಲ್ಯಗಳು ನನ್ನನ್ನು ಸಂಕಟಪಡಿಸುತ್ತವೆ ಮತ್ತು ನಿಮ್ಮ ಗೌರವಾನ್ವಿತ ಸ್ವಯಂ ಹೊರತುಪಡಿಸಿ ಯಾರೂ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ದಯವಿಟ್ಟು ನನ್ನ ಸಂಕಟಗಳನ್ನು ಕೊನೆಗಾಣಿಸು. ಆಶಾ ತೃಷ್ಣಾ ನಿಪತ್ ಸಾತವೇನ್ ಮೋಹ್ ಮಡದಿಕ್ ಸಬ್ ಬಿನ್ಸಾವೆನ್ ಭರವಸೆಗಳು ಮತ್ತು ಹಂಬಲಗಳು ನನ್ನನ್ನು ಎಂದಿಗೂ ಹಿಂಸಿಸುತ್ತವೆ. ಎಲ್ಲಾ ರೀತಿಯ ಭಾವೋದ್ರೇಕಗಳು ಮತ್ತು ಕಾಮಗಳು ನನ್ನ ಹೃದಯವನ್ನು ಎಂದಿಗೂ ಹಿಂಸಿಸುತ್ತವೆ. ಶತ್ರು ನಾಶ ಕೀಜೆ ಮಹಾರಾಣಿ ಸುಮಿರೋನ್ ಏಕಚಿತ ತುಮ್ಹೇನ್ ಭವಾನಿ ಓ ದೇವೀ ಭವಾನಿ! ನಾನು ನಿನ್ನನ್ನು ಮಾತ್ರ ಧ್ಯಾನಿಸುತ್ತೇನೆ ದಯವಿಟ್ಟು ನನ್ನ ಶತ್ರುಗಳನ್ನು ಕೊಲ್ಲು ಓ ರಾಣಿ! ಕರೋ ಕೃಪಾ ಹೇ ಮಾತು ದಯಾಲ ರಿದ್ಧಿ-ಸಿದ್ಧಿ ದೇ ಕರಹು ನಿಹಾಲಾ ಓ ದಯಾಮಯ ಮಾತೆ! ನಿನ್ನ ಅನುಗ್ರಹವನ್ನು ನನಗೆ ತೋರಿಸಿ ಮತ್ತು ನನಗೆ ಎಲ್ಲಾ ರೀತಿಯ ಸಂಪತ್ತು ಮತ್ತು ಅಧಿಕಾರಗಳನ್ನು ದಯಪಾಲಿಸುವ ಮೂಲಕ ನನಗೆ ಸಂತೋಷವನ್ನುಂಟುಮಾಡು. ಜಬ್ ಲಗೀ ಜಿಯೋಂ ದಯಾ ಫಲ್ ಪಾವೂನ್ ತುಮ್ಹ್ರೋ ಯಶ್ ಮೈ ಸದಾ ಸುನಾವೂನ್ ಓ ತಾಯಿ! ನಾನು ಬದುಕಿರುವವರೆಗೂ ನಿನ್ನ ಕೃಪೆಯ ಭಂಡಾರವಾಗಿರಲಿ, ನಿನ್ನ ಮಹಿಮೆಯ ಸಾಧನೆಗಳನ್ನು ಎಲ್ಲರಿಗೂ ತಿಳಿಸುತ್ತಿರಲಿ. ದುರ್ಗಾ ಚಾಲೀಸಾ ಜೋ ಗವೇ ಸಬ್ ಸುಖ್ ಭೋಗ್ ಪರಮಪದ್ ಪವೇ ಈ ರೀತಿಯಾಗಿ, ಈ ದುರ್ಗಾ ಚಾಲೀಸಾವನ್ನು ಹಾಡುವವನು ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಾನೆ ಮತ್ತು ಕೊನೆಯಲ್ಲಿ ಅತ್ಯುನ್ನತ ಸ್ಥಿತಿಯನ್ನು ಪಡೆಯುತ್ತಾನೆ. 'ದೇವಿದಾಸ್' ಶರಣ್ ನಿಜ ಜಾನಿ ಕರಹು ಕೃಪಾ ಜಗದಂಬ್ ಭವಾನಿ 'ದೇವಿದಾಸ' ನಿನ್ನ ಆಶ್ರಯವನ್ನು ಹುಡುಕಿದ್ದಾರೆಂದು ಭಾವಿಸಿ, ಓ ಭವಾನಿ ನನಗೆ ನಿನ್ನ ಅನುಗ್ರಹವನ್ನು ನೀಡು ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
1.3K ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 #ಆಧ್ಯಾತ್ಮ #varahi amma ಶ್ರೀ ವಾರಾಹಿ ಗುಪ್ತ ನವರಾತ್ರಿ ಪೂಜೆ:- ವರ್ಷ ಋತುವಿನ ಆರಂಭದ ಆಷಾಡ ಮಾಸದ ಈ ಕಾಲವನ್ನು ದಕ್ಷಿಣಾಯನ ಕಾಲ ಎಂದು ಕರೆಯುತ್ತಾರೆ. ಆಷಾಡ ಮಾಸವು ‘ಶಕ್ತಿ ದೇವತೆ’ ಆರಾಧನೆಗೆ ಶ್ರೇಷ್ಠವಾದ ಪರ್ವಕಾಲವಾಗಿದೆ. ಈ ಕಾಲದಲ್ಲಿ ದೇವತೆಗಳ ಆರಾಧನೆಗಳು ಜಾಸ್ತಿ ಇರುತ್ತದೆ. ಆಷಾಡ ಪಾಡ್ಯದಿಂದ ನವಮಿ ತನಕ “ಗುಪ್ತ ನವರಾತ್ರಿ”ಯ ಕಾಲ ಗುಪ್ತ ನವರಾತ್ರಿಯಲ್ಲಿ ಶಕ್ತಿ ದೇವತೆಯಾದ “ವಾರಾಹಿ” ದೇವಿಯನ್ನು ಆರಾಧನೆ ಮಾಡುತ್ತಾರೆ. ವಾರಾಹಿ ದೇವಿ ಯನ್ನು ಆರಾಧನೆ ಮಾಡುವುದರಿಂದ ಸದೃಢ ದೇಹಕ್ಕೆ ಅನ್ನ - ಮನಸ್ಸಿನ ಶಕ್ತಿ ಸಮೃದ್ಧಿಯಾಗಿರುತ್ತದೆ. ಕ್ಷುದ್ರ ಶಕ್ತಿಗಳು ನಿರ್ಮೂಲ ವಾಗಿ ಶಾರೀರಿಕವಾಗಿ ಬಲವೃದ್ಧಿ ಹೆಚ್ಚುತ್ತದೆ. ವಾರಾಹಿ ದೇವಿ ಭೂಮಿ ವಿವಾದ ಗಳನ್ನು ಬಗೆಹರಿಸುತ್ತಾಳೆ. ವಾರಾಹಿ (ನವರಾತ್ರಿ) ಆರಾಧನೆಯನ್ನು ರಾತ್ರಿ ಮಾಡಬೇಕು. ದೇವಿಯ ವ್ಯುತ್ಪತ್ತಿ ಕುರಿತು ಪುರಾಣಗಳಲ್ಲಿ ಹಲವು ಕಥೆಗಳಿವೆ. ಲಲಿತೋಪಖ್ಯಾನದಲ್ಲಿ ಭಂಡಾಸುರನನ್ನು ವಧಿಸಲು ದೇವತೆಗಳಿಂದ ಆಗದೆ ನಿಸ್ತೇಜರಾದರು. ದೇವತೆಗಳೆಲ್ಲ ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನು ಮಾಡಿದ ಮಹಾಯಾಗ ದಿಂದ “ಚಿದಗ್ನಿ - ಕುಂಡ- ಸಂಭೂತಾ- ದೇವಕಾರ್ಯ- ಸಮುದ್ಯತಾ” ದಿಂದ ಉದಿಸಿ ಬಂದವಳೇ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ದೇವತೆಗಳ ಕಾರ್ಯವನ್ನು ಪೂರೈಸಲು,‌ ದುಷ್ಟರಾಕ್ಷಸ ಸಂಹಾರ ಮಾಡಲು ಉದ್ಭವಿಸಿದಳು. ಲಲಿತಾ ದೇವಿ ಎಲ್ಲರ ದೇಹದಲ್ಲಿ ಶಕ್ತಿಯಾಗಿ ಇರುತ್ತಾಳೆ. ಶರೀರಕ್ಕೆ ಚೈತನ್ಯ ಶಕ್ತಿ ತುಂಬುವವಳು ಶ್ರೀ ಲಲಿತೆ, ಬುದ್ಧಿಶಕ್ತಿ ಕಾರಕ ಶ್ಯಾಮಲಾದೇವಿ, ಇಂದ್ರಿಯ ಶಕ್ತಿಗೆ ವಾರಾಹಿ ದೇವಿ. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ, ಸ್ವರೂಪಿಣಿಯರಾಗಿ ಈ ಮಾತೆಯರ ಅಂಶ ದೇಹದಲ್ಲಿ ಇರುತ್ತದೆ. ಭಂಡಾಸುರನನ್ನು ವಧಿಸಲು ಇಚ್ಛಾಶಕ್ತಿಯಾದ ಶ್ರೀ ಲಲಿತಾ ದೇವಿ ತನ್ನ ಸಹಾಯಕ್ಕಾಗಿ ಅವಳೊಳಗಿಂದ ಎರಡು ಶಕ್ತಿಗಳನ್ನು ಹೊರಗೆ ತರುತ್ತಾಳೆ. ಆ ಶಕ್ತಿ ದೇವತೆಗಳೇ ಶ್ಯಾಮಲಾದೇವಿ- ವಾರಾಹಿದೇವಿ. ಇವರು ಸಪ್ತಮಾತ್ರಿಕೆಯರಲ್ಲಿ ಪ್ರಮುಖರು. ಇಚ್ಛಾಶಕ್ತಿ ಮತ್ತು ಚೈತನ್ಯ ಶಕ್ತಿ ಆದ ಶ್ರೀ ಲಲಿತಾ ದೇವಿಯಿಂದ ಹೊರಬಂದ ಜ್ಞಾನ ಶಕ್ತಿ ಶ್ಯಾಮಲಾ ದೇವಿ. ಇವಳು ಮಹಾಕವಿ ಕಾಳಿದಾಸನಿಗೆ ಅನುಗ್ರಹ ಮಾಡಿದ “ಮಾತಂಗಿ” ದೇವಿ. ಲಲಿತಾದೇವಿ ತನ್ನ ಶ್ರೀಮನ್ನಗರ ಸಾಮ್ರಾಜ್ಯದ ಪ್ರಧಾನ ಮಂತ್ರಿ ಪದವಿ ಮುದ್ರಿಕೆಯನ್ನು ಶ್ಯಾಮಲ ದೇವಿಗೆ ಕೊಟ್ಟು, ಜೊತೆಗೆ ಏಳು ಆವರಣಗಳುಳ್ಳ ರಥವನ್ನು ( “ಗೇಯಚಕ್ರ - ರಥಾರೂಢ- ಸರ್ವಾಯುಧ -ಪರಿಷ್ಕೃತಾ- ಮಂತ್ರಿಣೀ- ಪರಿಸವಿತಾ”) ಅನುಗ್ರಹಿಸುತ್ತಾಳೆ.‌ ಶ್ರೀ ಲಲಿತೆ ಕ್ರಿಯಾಶಕ್ತಿ ವಾರಾಹಿ ದೇವಿಯನ್ನು ತನ್ನ ಸೇನಾ ದಂಡನಾಯಕಳನ್ನಾ ಗಿ ಮಾಡಿ, ಆಜ್ಞಾ ಚಕ್ರದಿಂದ ಐದು ಆವರಣಗಳ ರಥವನ್ನು, ಹಲ ( ನೇಗಿಲು) ಮತ್ತು ಮುಸಲ (ಒನಕೆ) ಎಂಬ ಆಯುಧಗಳನ್ನು “ಕಿರಿಚಕ್ರ- ರಥಾರೂಢ -ದಂಡ ನಾಥಾ- ಪುರಸ್ಕೃತಾ” ಈ ರೀತಿ ವಾರಾಹಿ ದೇವಿಯನ್ನು ಸ್ತುತಿ ಮಾಡುತ್ತಾರೆ. ನಂತರ ಶ್ಯಾಮಲ ದೇವಿ ಮತ್ತು ವಾರಾಹಿ ದೇವಿಯರು ಭಂಡಾಸುರನ ಪುತ್ರ ವಿಷಂಗ ( ಮಮಕಾರ) ಮಂತ್ರಿಯಾದ ವಿಶುಕ್ರ ನ( ಅಹಂಕಾರ) ಪ್ರಾಣಹರಣವನ್ನು ಮಾಡಿದರು. ಕಾಮ ಎಂಬ ಅವಿದ್ಯೆ ಗೆ ಮೂಲ ಶಕ್ತಿಯಾದ ಭಂಡಾ ಸುರನನ್ನು ಶ್ರೀ ಲಲಿತಾ ದೇವಿ ವಧಿಸಿದಳು. (“ಭಂಡಪುತ್ರ ವಧೋದ್ಯುಕ್ತ ಬಾಲಾ ವಿಕ್ರಮ ನಂದಿತಾ! ಮಂತ್ರಿಣ್ಯಂಭಾ ವಿರಚಿತ ವಿಷಂಗ ವಧ ತೋಷಿತಾ! ವಿಷುಕ್ರ ಪ್ರಾಣ ಹರಣ ವಾರಾಹಿ ವೀರ್ಯ ನಂದಿತಾ”) ಅವಿದ್ಯೆಯ ಮೂಲವಾದ ರಾಕ್ಷಸ ಭಂಡಾ ಸುರನನ್ನು ಲಲಿತಾದೇವಿ ವಧಿಸಿದಳು.‌ ಇಂಥ ಇಚ್ಚಾ ಶಕ್ತಿ ಲಲಿತೆಯಿಂದ ಕ್ರಿಯಾಶಕ್ತಿ ವಾರಾಹಿ ದೇವಿ ಉಗಮವಾಗಿದ್ದು. ಈಕೆಯನ್ನು ಆರಾಧಿಸುವುದು ಆಷಾಡ ಮಾಸ 9 ದಿನಗಳು ಗುಪ್ತನವರಾತ್ರಿ ಆದ್ದರಿಂದ ರಾತ್ರಿ ಸಮಯ ಆರಾಧನೆ ಮಾಡಬೇಕು. ಪಾಡ್ಯದ ಮೊದಲ ದಿನ ಸ್ನಾನ ಮಾಡಿ ವಸ್ತ್ರ ಧರಿಸಿ, ದೇವರ ಮುಂದೆ ನಿಂತು ಪ್ರಾರ್ಥಿಸಿ 9 ದಿನಗಳು ಗುಪ್ತ ನವರಾತ್ರಿ ಪೂಜೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ವ್ರತ ಸಂಕಲ್ಪ ಮಾಡಿದ ಮೇಲೆ ಹೊರಗಿನ ಆಹಾರ ಸೇವನೆ ಮಾಡಬಾರದು. ಸಾಯಂಕಾಲ ಮತ್ತೆ ಸ್ನಾನ ಮಾಡಿ ವಸ್ತ್ರ ಧರಿಸಿ ಪೂಜಾ ಸ್ಥಳ ವನ್ನು ಶುದ್ದಿ ಮಾಡಿ ರಂಗೋಲಿ ಬರೆದು, ವಾರಾಹಿ ದೇವಿಯ ವಿಗ್ರಹ ಅಥವಾ ಫೋಟೋ ಇದ್ದರೆ ಪೂಜೆ ಮಾಡಬೇಕು ಇಲ್ಲದಿದ್ದರೆ ಕಳಶವನ್ನು ಪ್ರತಿಷ್ಠಾಪಿಸಿ, ಅಥವಾ ಲಕ್ಷ್ಮಿ- ದುರ್ಗೆಯರ ಫೋಟೋ ಇಟ್ಟುಕೊಳ್ಳ ಬಹುದು ಪೂಜೆಗೆ ಸಲಕರಣೆಗಳು ಅರಿಶಿನ- ಕುಂಕುಮ- ಅಕ್ಷತೆ -ಹೂವು- ಹಣ್ಣು -ವೀಳ್ಯದೆಲೆ ಅಡಿಕೆ, ‌ ಗಂಧ, ಚಂದನ ಧೂಪ( ವಾರಾಹಿ ಮಾತೆಗೆ ಧೂಪ ಶ್ರೇಷ್ಠ) ದೀಪ ಮಂಗಳಾರತಿ, ಎಲ್ಲಾ ವ್ರತ -ಕತೆ ಪೂಜಾದಿಗಳನ್ನು ಮಾಡುವಂತೆ ಅನುಕೂಲಗಳನ್ನು ಜೋಡಿಸಿ ಕೊಂಡು ಪೂಜೆಗೆ ಕೊರಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ವಾರಾಹಿ ದೇವಿಗೆ ಗಂಧ ಚಂದನ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಹೂವು ಅಲಂಕಾರ ಮಾಡಿ, ಕುಂಕುಮಾರ್ಚನೆ, ಅಷ್ಟೋತ್ತರ, ಮಾಡಿಕೊಂಡು ಧೂಪ - ದೀಪ ತೋರಿಸಿ, ಸಿಹಿ ಪದಾರ್ಥ ನೈವೇದ್ಯ (9 ದಿನವೂ ಬೆಲ್ಲ ಏಲಕ್ಕಿ ಹಾಕಿದ ಪಾನಕ ನೈವೇದ್ಯ ಮಾಡಬೇಕು) ಮಂಗಳಾರತಿ ಮಾಡಿ ಪ್ರಾರ್ಥಿಸಿ ಕೊಂಡು ನಮಸ್ಕಾರ ಮಾಡಬೇಕು. ಎಂಟು ದಿನದ ಪೂಜೆ ನಂತರ ಒಂಬತ್ತನೇ ದಿನ ನೆರೆಹೊರೆಯವರನ್ನು ಅರಿಶಿನ ಕುಂಕುಮಕ್ಕೆ ಕರೆದು ಹೂವು ದಕ್ಷಿಣೆ ತಾಂಬೂಲಾದಿಗಳ ಸಹಿತ ಸತ್ಕರಿಸಬೇಕು. ಹತ್ತನೇ ದಿನ ಉದ್ಯಾಪನೆ ಮಾಡಿ ಒಬ್ಬ ಬ್ರಾಹ್ಮಣನಿಗೆ ದವಸ- ಧಾನ್ಯಗಳನ್ನು ತಾಂಬೂಲ ದಕ್ಷಿಣ ಸಹಿತ ಕೊಟ್ಟು ಆಶೀರ್ವಾದ ಪಡೆಯಬೇಕು. ಯಾರೂ ಸಿಗದಿದ್ದರೆ ದೇವಸ್ಥಾನದ ಅರ್ಚಕರಿಗೆ ಕೊಡಬಹುದು. ಇವೆಲ್ಲವೂ ವಾರಾಹಿ ದೇವಿಗೆ ಬಹಳ ಪ್ರಿಯವಾದ ಆರಾಧನೆ ಆಗಿದೆ. ಯಜ್ಞಸ್ವರೂಪ ನಾರಾಯಣನಿಂದ ಸ್ತ್ರೀ ರೂಪದ ತತ್ವ ‘ವಾರಾಹಿ ದೇವಿ’ ಭೂ ತತ್ವ ದೇವತೆಯಾಗಿ ಬಂದಳು. ಇವಳ ಕೈಯಲ್ಲಿ ಹಲ ಮತ್ತು ಮುಸಲವಿದೆ. ಇದರ ಸಂಕೇತ ಭೂಮಿ ಉಳುವುದಕ್ಕಾಗಿ ನೇಗಿಲು (ಹಲ) ಮತ್ತು ಬೆಳೆಯನ್ನು ಧಾನ್ಯ ಮಾಡಿಕೊಳ್ಳಲು ಒನಕೆ ( ಮುಸಲ) ಕೈಯಲ್ಲಿ ಹಿಡಿದಿದ್ದಾಳೆ. ಭೂ ತತ್ವವಾದ ವಾರಾಹಿ ದೇವಿಯನ್ನು ಭೂ ವಿವಾದ ಬಗೆಹರಿಸಲು, ಜಗಳ, ವ್ಯಾಪಾರಿ ಸಂಬಂಧ ತೊಂದರೆ, ಹಾಗೂ ಮಾಟ ಮಂತ್ರ ಪ್ರಯೋಗ ನಿಗ್ರಹಿಸಲು ಆರಾಧಿಸುತ್ತಾರೆ. ಈ ವ್ರತವನ್ನು ಮಾಡುವವರು 9 ದಿನಗಳು ಸಾತ್ವಿಕ ಆಹಾರ ಸೇವಿಸಬೇಕು. ಚಾಪೆ ಮೇಲೆ (ಒಬ್ಬರೇ) ಮಲಗಬೇಕು. ಅನವಶ್ಯಕವಾಗಿ ಮಾತನಾಡಬಾರದು. ಕೋಪ - ತಾಪಗಳು ಇರಬಾರದು. ಲಲಿತಾ ಸಹಸ್ರನಾಮ ಓದಬೇಕು. ಎಷ್ಟು ಸಾಧ್ಯವೋ ಅಷ್ಟು ಸಮಾಧಾನ ಚಿತ್ತದಿಂದ ಪೂಜೆಯನ್ನು ನೆರವೇರಿಸಿ ವಾರಾಹಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ವಾರಾಹಿ ತ್ವಮಶೇಷಜಂತುಷು ಪುನಃ ಪ್ರಾಣಾತ್ಮಿಕಾ ಸ್ಪಂದಸೇ ಶಕ್ತಿ ವ್ಯಾಪ್ತ ಚರಾಚರಾ ಖಲು ಯತಸ್ತ್ವಾಮೇತದಭ್ಯರ್ಥಯೇ! ತ್ವತ್ಪಾದಾಂಬುಜಸಂಗಿನೋ ಮಾಮಾ ಸಕೃತ್ಪಾಪಂ ಚಿಕಿರ್ಷಂತಿ ಯೇ ತೇಷಾ ಮಾ ಕುರು ಶಂಕರ ಪ್ರಿಯತಮೇ ದೇಹಾಂತರಾವಸ್ಥಿತಿಮ್ ಇತಿ ವಾರಾಹಿ ನಿಗ್ರಹಾಷ್ಟಕಂ ಸ್ತೋತ್ರ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ವಿಷ್ಣು ಪ್ರಿಯ 🦚💙
700 ವೀಕ್ಷಿಸಿದ್ದಾರೆ
3 ತಿಂಗಳ ಹಿಂದೆ
#ಆಷಾಢ ನವರಾತ್ರಿ 🙏 #🙏ಶ್ರೀ ದುರ್ಗಾ ದೇವಿ🙏 #ಆಧ್ಯಾತ್ಮ ನಾಳೆ ನವರಾತ್ರಿ ವಿಶೇಷ ಘಟಸ್ಥಾಪನೆ, ಅಂಣೆ ಹಾಗೂ ಮಾಲಾ ಬಂಧನ ನವರಾತ್ರಿಯಲ್ಲಿ ದೇವಿಯನ್ನು ಕಲಶದಲ್ಲಿ ಆವಾಹಿಸಿ ಪೂಜಿಸುವುದು ಪದ್ಧತಿ. ಇದಕ್ಕಾಗಿ ಮಣ್ಣಿನ ಅಥವಾ ತಾಮ್ರ/ಬೆಳ್ಳಿ ಯ ಕಲಶದಲ್ಲಿ ದೇವಿ ಆವಾಹನೆ ಮಾಡಲಾಗುತ್ತದೆ. ಒಂದು ಪ್ರತ್ಯೇಕ ಪಾತ್ರೆಯಲ್ಲಿ ಹೊಲ ಗದ್ದೆಯಿಂದ ತಂದ ಮಣ್ಣು ತುಂಬಿಸಿ ಸಪ್ತ ಧಾನ್ಯ ಅಥವಾ ಬರಿ ಗೋಧಿ, ಭತ್ತ, ಜವೆಗೋಧಿ ಅಥವಾ ಬರಿ ಗೋಧಿ ಬಿತ್ತಲಾಗುತ್ತದೆ. ನೀರು ಚಿಮುಕಿಸಿ ಒಂಭತ್ತು ದಿನಗಳಲ್ಲಿ ಮೊಳಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ದೇವಿ ಘಟವನ್ನು ಈ ಪಾತ್ರೆಯಲ್ಲಿ ಇರಿಸಲಾಗುತ್ತದೆ ಅಥವಾ ದೇವಿ ಘಟದ ಬಳಿ ಅಂಕುರಪಾತ್ರೆ ಇರಿಸಲಾಗುತ್ತದೆ. ಇದೇ ಅಂಕುರಾರ್ಪಣೆ ವಿಧಿ. ನದಿ ಸರೋವರ ಬಾವಿ ಇತ್ಯಾದಿ ಜಲಮೂಲದಿಂದ ತಂದ ನೀರು ಕಲಶದಲ್ಲಿ ತುಂಬಿಸಿ, ಅರಿಶಿನ ಕೊಂಬು, ಅಡಿಕೆ ಬೆಟ್ಟ, ಕುಂಕುಮ, ಗಂಧ, ಪುಷ್ಪ, ಪಂಚರತ್ನ ಅಥವಾ ಮುತ್ತು-ಹವಳ, ಪಂಚಪಲ್ಲವ,ಗರಿಕೆ, ಅಕ್ಷತೆ, ಚಿನ್ನ ಅಥವಾ ಬೆಳ್ಳಿ ನಾಣ್ಯ ಪ್ರತ್ಯೇಕ ವೇದ-ಪುರಾಣ ಮಂತ್ರಗಳೊಂದಿಗೆ ಕಲಶದಲ್ಲಿ ಹಾಕಲಾಗುತ್ತದೆ. ಈ ಕಲಶದ ಮೇಲೆ ಅಕ್ಕಿ ತುಂಬಿದ ಪಾತ್ರೆ ಇರಿಸ ಅದರ ಮೇಲೆ ದುರ್ಗೆಯ ಚಿಕ್ಕ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ . ಕೆಲವರು ಪಾತ್ರೆಯ ಬದಲಾಗಿ ಅರಿಶಿನ ಲೇಪಿತ ತುಂಬಿದ ತೆಂಗಿನಕಾಯಿ ಇಡಲಾಗುತ್ತದೆ. ಕೆಲವರು ಪೂರ್ಣಪಾತ್ರೆ ಅಥವಾ ಪೂರ್ಣಫಲದ ಬದಲಾಗಿ ಬರಿ ಸುಗಂಧಿತ ಹೂಗಳ ಮಾಲಿಕೆ ಇರಿಸುತ್ತಾರೆ. ಈ ಕಲಶಕ್ಕೆ ವಸ್ತ್ರ ಸೂತ್ರ ಸುತ್ತಲಾಗುತ್ತದೆ. ಕೆಲವು ಕುಟುಂಬಗಳಲ್ಲಿ ಈ ಕಲಶದ ತುದಿಗೆ ತಾಗುವಂತೆ ಮೇಲ್ಛಾವಣಿ ಅಥವಾ ಮಂಟಪದ ಮೇಲಿಂದ ಹೂಮಾಲೆಯನ್ನು ಕಟ್ಟಲಾಗುತ್ತದೆ. ಇನ್ನೂ ಕೆಲವರು ಮಾಲಿಕೆಗಳನ್ನು ಕಲಶಕ್ಕೆ ಕಟ್ಟುತ್ತಾರೆ. ಈ ವಿಧಿಯೇ ಮಾಲಾಬಂಧನ. ಈಗ ಶ್ರೀದೇವಿಯನ್ನು ಕಲಶದಲ್ಲಿ ಆವಾಹನೆ ಮಾಡಲಾಗುತ್ತದೆ. ಘಟಸ್ಥಾಪನೆಯ ವಿಧಿ ಪ್ರದೇಶದಿಂದ ಪ್ರದೇಶಕ್ಕೆ, ಕುಟುಂಬದಿಂದ ಕುಟುಂಬಕ್ಕೆ ಕುಲಾಚಾರ ರೀತ್ಯಾ ಬದಲಾಗುತ್ತದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
See other profiles for amazing content