‘ದೇಶ ಕಾಯೋದು ಹೆಮ್ಮೆಯ ವಿಚಾರ’: ಹುತಾತ್ಮರಿಗೆ ಗೌರವ ಸಲ್ಲಿಸಿದ ಶಾರುಖ್ ಖಾನ #‘ದೇಶ ಕಾಯೋದು ಹೆಮ್ಮೆಯ ವಿಚಾರ’: ಹುತಾತ್ಮರಿಗೆ ಗೌರವ ಸಲ್ಲಿಸಿದ ಶಾರುಖ್ ಖಾನ

‘ದೇಶ ಕಾಯೋದು ಹೆಮ್ಮೆಯ ವಿಚಾರ’: ಹುತಾತ್ಮರಿಗೆ ಗೌರವ ಸಲ್ಲಿಸಿದ ಶಾರುಖ್ ಖಾನ - AIN Kannada
ಮುಂಬೈನಲ್ಲಿ ನವೆಂಬರ್ 22ರಂದು ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2025’ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಭಾವನಾತ್ಮಕ ಮತ್ತು ದೇಶಭಕ್ತಿ ತುಂಬಿದ ಭಾಷಣ ಮಾಡಿದ್ದಾರೆ. ದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಶಾರುಖ್, ಹುತಾತ್ಮರಿಗೆ ಗೌರವ ಸಲ್ಲಿಸಿ, ಭದ್ರತಾ ಪಡೆಗಳ ಶೌರ್ಯವನ್ನು ಮೆಚ್ಚಿದರು. “26/11 ದಾಳಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಇತ್ತೀಚಿನ ದೆಹಲಿ ಸ್ಫೋಟ—ಈ ಎಲ್ಲ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ನಾಗರಿಕರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ.
