ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ: ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು! ನವೆಂಬರ್ ಕ್ರಾಂತಿಗೆ ಮುಹೂರ್ತ ಫಿಕ್ಸ್? - AIN Kannada
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎನ್ನುವ ವಾದದ ನಡುವೆ, ಅವರ ಆಪ್ತರು ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಲು ಮುಂದಾಗಿದ್ದಾರೆ. ಡಿಕೆ ಬ್ರದರ್ಸ್ ಮನೆಯಲ್ಲಿ ನಡೆದ ಸಭೆಯ ನಂತರ, ಒಕ್ಕಲಿಗ ಸಮುದಾಯದ ನಾಯಕರು ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಡಿಕೆಶಿ ಆಪ್ತರಿಂದ ದೆಹಲಿ ದಂಡಯಾತ್ರೆ ಕೈಗೊಂಡಿದ್ದು, ಸಿಎಂ ಬದಲಾವಣೆಯ ವಿಚಾರದಲ್ಲಿ ಹೈಕಮಾಂಡ್ ಮುಂದೆ ಒತ್ತಡ ಹೇರುವ