ಮರ್ಯಾದೆ ಕೊಟ್ಟರಷ್ಟೇ ಸಿಗುತ್ತದೆ: ಬಿಗ್ ಬಾಸ್ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್ ಗರಂ - AIN Kannada
ಬಿಗ್‌ಬಾಸ್ ಮನೆಯಲ್ಲಿ ಜಗಳ ಅನ್ನೋದು ಸಾಮಾನ್ಯವಾಗಿದೆ. ಆದರೆ ಈ ಬಾರಿಯಂತೂ ಹಾಸ್ಯ, ಗೆಳೆತನ, ಪ್ರೀತಿ—ಎಲ್ಲವೂ ಮರೆತು ಜಗಳವೇ ಮುಖ್ಯ ಸಂಚಿಕೆಯಾಗಿಬಿಟ್ಟಿದೆ. ಮನೆಯೊಳಗೆ ಸಣ್ಣ-ದೊಡ್ಡ ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಪರಸ್ಪರ ಏಕವಚನದಲ್ಲಿ ಮಾತನಾಡುತ್ತಿರುವುದು ವಾರಪೂರ್ತಿ ಗುದ್ದಾಟಕ್ಕೆ ಕಾರಣವಾಗಿತ್ತು. ಈ ಎಲ್ಲಾ ದೂರುಗಳು ವೀಕೆಂಡ್‌ನಲ್ಲಿ ಸುದೀಪ್ ಮುಂದೆ ಬಂದಾಗ, ಕಿಚ್ಚನ ಸಹನಶೀಲತೆ ಕೊನೆಗೂ ಮುರಿದು ಬಿದ್ದಿತು. “ಈ ಮನೆಯಲ್ಲಿ ಯಾರು ಯಾರೆಂದೂ ಏಕವಚನ ಬಳಸಿಲ್ಲ ಹೇಳಿ ನೋಡೋಣ?” ಎಂದು ಸುದೀಪ್ ನೇರ ಪ್ರಶ್ನೆ ಹಾರಿಸಿದರು. “ಮರ್ಯಾದೆ ಯಾವಾಗಲೂ ದ್ವಿಮುಖ—ನೀವು ಹೇಗೆ