ಚೆಸ್ ಚಾಂಪಿಯನ್ ಶಿಪ್ ಉದ್ಘಾಟನಾ ಕಾರ್ಯಕ್ರಮ: ಪರಿಷತ್ ಶಾಸಕ ಟಿ.ಎ.ಶರವಣ ಭಾಗಿ #ಚೆಸ್ ಚಾಂಪಿಯನ್ ಶಿಪ್ ಉದ್ಘಾಟನಾ ಕಾರ್ಯಕ್ರಮ: ಪರಿಷತ್ ಶಾಸಕ ಟಿ.ಎ.ಶರವಣ ಭಾಗಿ

ಚೆಸ್ ಚಾಂಪಿಯನ್ ಶಿಪ್ ಉದ್ಘಾಟನಾ ಕಾರ್ಯಕ್ರಮ: ಪರಿಷತ್ ಶಾಸಕ ಟಿ.ಎ.ಶರವಣ ಭಾಗಿ - Ain Kannada
ಬೆಂಗಳೂರು: ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ನಲ್ಲಿ ಗೋಲ್ಡನ್ ಔರಾ ಟ್ರಸ್ಟ್ ಆಯೋಜಿಸಿರುವ "ವಿಕಾನ್-ಕರ್ನಾಟಕ ಸ್ಟೇಟ್ ಅಮೆಚೂರ್ ಚೆಸ್ ಚಾಂಪಿಯನ್ ಶಿಪ್-2025"ನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ, ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಟಿ.ಎ.ಶರವಣ ಅವರು ಭಾಗವಹಿಸಿದರು. "ಚೆಸ್ ಎಂಬುದು ಬುದ್ಧಿಯನ್ನು ಚುರುಕುಗೊಳಿಸುವ ಒಂದು ಪ್ರಸಿದ್ಧ ಆಟವಾಗಿದೆ. ಭಾರತದ ಚೆಸ್ ಆಟಗಾರರು ಇತ್ತೀಚೆಗೆ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಪಂದ್ಯಾವಳಿಯ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಟುಗಳು ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.