ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಉಳ್ಳವರ ಮಕ್ಕಳಿಗಳಿಗೆ ಅಕಾಡೆಮಿಗಳಿವೆ, ಬಡವರ ಮಕ್ಕಳಿಗೆ ಮೈದಾನಗಳೂ ಇಲ್ಲ ಉಳ್ಳವರ ಮಕ್ಕಳು ಆಟ ಆಡಲು ಅಕಾಡಮಿಗಳಿದೆ, ಬಡವರ ಮಕ್ಕಳು ಆಟವಾಡಲು ಮೈದಾನಗಳೇ ಇಲ್ಲ ಬೆಂಗಳೂರು ನಗರದಲ್ಲಿ ಸಿಕ್ಕಸಿಕ್ಕ ಕಡೆಯಲ್ಲಿ ಸರ್ಕಾರಿ ಜಾಗ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಲಿ ಪ್ರದೇಶಗಳನ್ನು ತಮ್ಮ ಜೇಬು ತುಂಬಿಸಿಕೊಳ್ಳುವ ಸಲುವಾಗಿ ಉದ್ಯಾನವನಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಇಲ್ಲಿ ಒಂದಷ್ಟು ಆಟದ ಸಾಮಾನು ಮತ್ತು ಜಿಮ್ನಾಸ್ಟಿಕ್ ಉಪಕರಣಗಳು ಇವುಗಳನ್ನು ಅಳವಡಿಸಿ ಬಿಡುಗಡೆಯಾದ ಹಣದಲ್ಲಿ ಒಂದಷ್ಟನ್ನು ಖರ್ಚು ಮಾಡಿ ಉಳಿದ ಹಣವನ್ನು ತಮ್ಮ ಕಿಸೆಗಳಿಗೆ ತುಂಬಿಸಿಕೊಳ್ಳುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿರುತ್ತದೆ. ಇದರಿಂದಾಗಿ ಸಾಮಾನ್ಯ ಜನರ ಮಕ್ಕಳು ಆಟವಾಡಲು ಅನೇಕ ಬಡಾವಣೆಗಳಲ್ಲಿ ಆಟದ ಮೈದಾನಗಳ ಇಲ್ಲ. ಉಳ್ಳವರ ಮಕ್ಕಳಿಗಾಗಿ ಅನೇಕ ಅಕಾಡೆಮಿಗಳಿಗೆ ಮತ್ತು ತರಬೇತಿ ಸಂಸ್ಥೆಗಳಿಗೆ ಅಲ್ಲಿ ಅವರು ತಮ್ಮ ಮಕ್ಕಳನ್ನು ಆಟ ಆಡಲು ಸೇರಿಸಿ ತರಬೇತಿ ಕೊಡಿಸುತ್ತಾರೆ. ಆದರೆ ಸಾಮಾನ್ಯ ಜನರ ಮಕ್ಕಳು ಆಟ ಆಡಲು ಮೈದಾನಗಳು ಇಲ್ಲ, ಅಕಾಡೆಮಿಗಳನ್ನು ಸೇರಲು ಅವರ ಪೋಷಕರ ಜೇಬಿನಲ್ಲಿ ಹಣವಿಲ್ಲ. ಸದ್ಯದಲ್ಲಿಯೇ ನಡೆಯುವ ಜಿಬಿಎ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷದವರು ತಮ್ಮ ಪ್ರಣಾಳಿಕೆಗಳಲ್ಲಿ ಪ್ರತಿಯೊಂದು ವಾರ್ಡಿಗೆ ಕನಿಷ್ಠ ಒಂದು ಆಟದ ಮೈದಾನಗಳನ್ನು ಅಭಿವೃದ್ಧಿ ಪಡಿಸುವ ತೀರ್ಮಾನವನ್ನು ಮಾಡಿ ಅದರಂತೆ ನಡೆದುಕೊಳ್ಳಿ. ಸಾಮಾನ್ಯ ಜನರ ಮಕ್ಕಳು ಮತ್ತು ಬಡವರ ಮಕ್ಕಳು ರಸ್ತೆಗಳ ಮೇಲೆ ಆಟ ಆಡಬೇಕು ವಾಹನಗಳ ಓಡಾಟವಿರುತ್ತದೆ ಮತ್ತು ಮನೆಯವರ ಬೈಗುಳವು ಸಾಕಷ್ಟು ಈ ಮಕ್ಕಳಿಗೆ ಸಿಗುತ್ತದೆ. ಇದರಿಂದಾಗಿ ಇವರಿಗೆ ಆಟವಾಡಲು ಸಾಧ್ಯವಾಗುವುದಿಲ್ಲ. ಇರುವ ಹಲವಾರು ಮೈದಾನಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿರುವ ಮಕ್ಕಳಿಗೆ ತರಬೇತಿ ನೀಡಲು ಮೈದಾನಗಳನ್ನು ಗುತ್ತಿಗೆಗೆ ಪಡೆದುಕೊಂಡಿರುತ್ತಾರೆ. ಹೀಗಾಗಿ ಅಲ್ಲಿಯೂ ಸಾಮಾನ್ಯ ಮಕ್ಕಳಿಗೆ ಆಟ ಆಡಲು ಸ್ಥಳಗಳು ದೊರೆಯುವುದಿಲ್ಲ. ಹಲವಾರು ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಇನ್ನು ಬಡಾವಣೆಗಳಲ್ಲೂ ಆಟದ ಮೈದಾನಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಟದ ಮೈದಾನಗಳ ಕಡೆ ಗಮನವನ್ನು ಹರಿಸಬೇಕಾಗಿದೆ. ಹಿರಿಯ ನಾಗರಿಕರಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ಕಡೆಯಲ್ಲೂ ವಾಯು ವಿಹಾರಕ್ಕಾಗಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಸ್ಥಳೀಯ ಸಂಸ್ಥೆಗಳಿಗೆ ಬಾಳಿ ಬದುಕಬೇಕಾಗಿರುವ ಮುಂದಿನ ಪೀಳಿಗೆಯ ಆಸ್ತಿಗಳಾಗಿರುವ ಮಕ್ಕಳ ಬಗ್ಗೆಯೂ ಚಿಂತಿಸಬೇಕಾಗಿದೆ. - ಕೆ ಎಸ್ ನಾಗರಾಜ್, ಬೆಂಗಳೂರು #playgrounds #children #poor #ksnagaraj #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಉಳ್ಳವರ ಮಕ್ಕಳಿಗಳಿಗೆ ಅಕಾಡೆಮಿಗಳಿವೆ;, ಬಡವರ ಮಕ್ಕಳಿಗೆ ಮೈದಾನಗಳೂ ಇಲ್ಲ ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS ಉಳ್ಳವರ ಮಕ್ಕಳಿಗಳಿಗೆ ಅಕಾಡೆಮಿಗಳಿವೆ;, ಬಡವರ ಮಕ್ಕಳಿಗೆ ಮೈದಾನಗಳೂ ಇಲ್ಲ ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS - ShareChat