7 ವರ್ಷಗಳ ಬಳಿಕ ‘ಬೆಲ್ ಬಾಟಂ’ ನಿರ್ಮಾಪಕನ ಕಮ್‌ಬ್ಯಾಕ್! ‘ಹುಬ್ಬಳ್ಳಿ ಹಂಟರ್ಸ್’ ಮೂಲಕ ಹೊಸ ಸಿನಮಾ ಘೋಷಣೆ - AIN Kannada
ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ ‘ಬೆಲ್ ಬಾಟಂ’ 2019ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಜಯತೀರ್ಥ ನಿರ್ದೇಶನದ ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದವರು ಸಂತೋಷ್ ಕುಮಾರ್ ಕೆ.ಸಿ. ಆ ಸಿನಿಮಾದ ಯಶಸ್ಸಿನ ಬಳಿಕವೂ ಅವರು ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಇದೀಗ ಸುಮಾರು 7 ವರ್ಷಗಳ ಗ್ಯಾಪ್ ನಂತರ ಮತ್ತೆ ಸಿನಿಮಾ ನಿರ್ಮಾಣಕ್ಕೆ ಮರಳಿದ್ದಾರೆ. ಸಂತೋಷ್ ಕುಮಾರ್ ಅವರು ‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಘೋಷಿಸಿದ್ದು, ಆ ಸಿನಿಮಾಕ್ಕೆ