ಅಪಘಾತದಲ್ಲಿ ಸತ್ತಂತೆ ಕನಸು ಬಿದ್ದರೆ ನಿಜವಾಗಿಯೂ ಆಕ್ಸಿಡೆಂಟ್ ಆಗುತ್ತಾ.?
ಭಯಾನಕ ಕನಸುಗಳು ಸಾಕಷ್ಟಿದ್ದರೂ ಸಾವಿನ ಕನಸು ಖಂಡಿತ ಎಂತವರ ಎದೆಯಲ್ಲಾದರೂ ನಡುಕ ಹುಟ್ಟಿಸುತ್ತೆ. ಅದರಲ್ಲೂ ಆಕ್ಸಿಡೆಂಟ್ ಆದಂತೆ ಅಥವಾ ನಮ್ಮಿಂದ ಯಾರಿಗೋ ಅಪಘಾತವಾದಂತೆ ಕನಸು ಬಿದ್ದರೆ ಅದನ್ನು ಅರಗಿಸಿಕೊಳ್ಳುವುದೇ ಕಷ್ಟವೆನ್ನಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ಅಪಘಾತದಲ್ಲಿ ಮರಣ ಹೊಂದಿದಂತೆ ಕನಸು ಬಿದ್ದರೆ ಏನಾಗುವುದು.? ನಿಮ್ಮಿಂದ ಬೇರೆಯಾರಾದರೂ ಅಪಘಾತದಲ್ಲಿ ಸತ್ತರೆ ಅದು ನಿಮಗೆ ಶುಭವೆನ್ನಬಹುದೇ.?